ಅನುಭವಾತ್ಮಕ ಶಿಕ್ಷಣ ಅಥವಾ ಕಲಿಕೆಯ ಕೈಗಳನ್ನು ಜಾನ್ ಡೀವಿ ಅವರು ಪ್ರಬಲವಾಗಿ ಬೆಂಬಲಿಸಿದ್ದರು. ಹಾಗಾಗಿ, ಅವರನ್ನು ಅನುಭವಾತ್ಮಕ ಶಿಕ್ಷಣದ ಆಧುನಿಕ ಜನಕ ಎಂದು ಪರಿಗಣಿಸಲಾಗಿದೆ. ಅನುಭವಾತ್ಮಕ ಶಿಕ್ಷಣವು ‘ಕೆಲಸ/ಕ್ರಿಯಾಚಟುವಟಿಕೆಗಳನ್ನು ಮಾಡುವ ಮೂಲಕ ಕಲಿಯುವುದು’ ಎಂದು ಪ್ರತಿಪಾದಿಸುವ ಒಂದು ಬೋಧನಾ ತತ್ವಶಾಸ್ತ್ರವಾಗಿದೆ. ಕಲಿಯುವವರು ಮತ್ತು ಶಿಕ್ಷಕರ ನಡುವಿನ ತಂಡದ ಮನೋಭಾವ/ಉತ್ಸಾಹ ಮತ್ತು ಪರಸ್ಪರ ಕ್ರಿಯೆಯನ್ನು ಬೆಂಬಲಿಸುವ ಪರಿಸರದಲ್ಲಿ ಜೀವಿಸುವಂತೆ ಕಲಿಕೆಯು ವಿದ್ಯಾರ್ಥಿಗಳನ್ನು ತೊಡಗಿಸಬೇಕಾಗುತ್ತದೆ. ಜ್ಞಾನವನ್ನು ಸಂಪಾದಿಸಲೆಂದು ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡು ಅಭಿವೃದ್ಧಿಪಡಿಸಲೆಂದು, ಇದು ವಿವಿಧ ಅಪ್ಲಿಕೇಶನ್ ಆಧಾರಿತ ಚಟುವಟಿಕೆಗಳನ್ನು ಪ್ರತಿಪಾದಿಸುತ್ತದೆ. ಇದಕ್ಕೆ ಈ ಕೆಳಗಿನವುಗಳು ಬೇಕಾಗುತ್ತವೆ:
- ಮಾರ್ಗದರ್ಶಿ ಅಭ್ಯಾಸ.
- ಸಂಶಯಗಳನ್ನು ತಿಳಿದುಕೊಳ್ಳುವುದು ಮತ್ತು ಚರ್ಚಿಸುವುದು.
- ಅಭ್ಯಾಸ (ಪರಿಣಾಮಕಾರಿ ಮತ್ತು ಸ್ವಾಧೀನಕಾರಿ).
- ವರದಿ/ಟಿಪ್ಪಣಿಗಳನ್ನು ಬರೆಯುವುದು.
- ಫಲಿತಾಂಶಗಳನ್ನು ಅನುಷ್ಠಾನಗೊಳಿಸುವುದು.
- ಸಂಶೋಧನೆ ಮತ್ತು ಅಭಿವೃದ್ಧಿ – ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರಚಿಸುವುದು ಮತ್ತು ಸುಧಾರಿಸುವುದು.
- ಅನುಕರಿಸಿದ ಅಥವಾ ಲೈವ್ ಸನ್ನಿವೇಶಗಳ ಮೂಲಕ ಮೌಲ್ಯಮಾಪನ ಅಂದರೆ ಪ್ರಾಯೋಗಿಕ ಮೌಲ್ಯಮಾಪನ ಮತ್ತು ಕಲಿಯುವವರು ಸಿದ್ಧಪಡಿಸಿದ ವರದಿಗಳು/ಟಿಪ್ಪಣಿಗಳ ಕುರಿತು ಚರ್ಚೆ.
ಅನುಭವಾತ್ಮಕ ಶಿಕ್ಷಣವು ಮಾನಸಿಕವಾಗಿ ಆಂತರಿಕವಾದ, ಸಾಮಾಜಿಕವಾಗಿ ಆಳವಾದ, ಕಾರ್ಯಾಚರಣೆಯಲ್ಲಿ ನೈಜವಾದ, ಸಮರ್ಥವಾಗಿ ಪುಷ್ಟೀಕರಿಸಿದ ಹಾಗೂ ವೇಗವರ್ಧಿತ ಕಲಿಕಾ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತದೆ. ಅನ್ವೇಷಿಸುವ ಸ್ವಾತಂತ್ರ್ಯದ ಜೊತೆಜೊತೆಯಲ್ಲಿ ಅವಿಸ್ಮರಣೀಯ ಕಲಿಕಾ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳು ಸಾಧನೆ, ನಿರಾಶೆ, ಅನುಭವ, ಅಪಾಯ ಮತ್ತು ದೌರ್ಬಲ್ಯಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಪಡೆಯಬಹುದಾದ ಫಲಿತಾಂಶಗಳನ್ನು ಸಂಪೂರ್ಣವಾಗಿ ನಿರೀಕ್ಷಿಸಲು ಆಗುವುದಿಲ್ಲ. ಈ ಶಿಕ್ಷಣಶಾಸ್ತ್ರವು ಸಿದ್ಧಾಂತಗಳು, ಪುಸ್ತಕಗಳು, ಸೀಮೆಸುಣ್ಣಗಳು ಮತ್ತು ಬೋರ್ಡ್ ಅಳಿಸುವ ಬಟ್ಟೆಗಳಿಗೂ ಮೀರಿದ ಜ್ಞಾನ-ಭಂಡಾರವನ್ನು ಸಂಪಾದಿಸಬೇಕೆಂಬ ಮಹದಾಸೆಯುಳ್ಳ ಕಲಿಕಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತದೆ. ಈ ಶಿಕ್ಷಣವು ನೈಜ-ಪ್ರಪಂಚದ ಸಮಸ್ಯೆಗಳನ್ನು ನಿಜವಾಗಿಯೂ ಪರಿಹರಿಸಬಲ್ಲ ತರ್ಕಬದ್ಧ ಮಾನವರನ್ನು ಅಥವಾ ನುರಿತ ತಜ್ಞರನ್ನು ಸೃಷ್ಟಿಸುವಂತಹ ಧ್ಯೇಯವನ್ನು ಹೊಂದಿದೆ.
ಅನುಭವಾತ್ಮಕ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು/ಮಕ್ಕಳು ಕೆಳಗೆ ಹೇಳಲಾದವುಗಳನ್ನು ಪಡೆದುಕೊಳ್ಳುತ್ತಾರೆ:
- ಜಗತ್ತಿನ ಬಗ್ಗೆ ಹೆಚ್ಚು ಸವಿಸ್ತಾರವಾದ ದೃಷ್ಟಿಕೋನ ಮತ್ತು ಸ್ಥಳೀಯ ವಲಯಗಳನ್ನು ಕುರಿತಂತೆ ಉತ್ಸಾಹ.
- ಅವರ ಸಾಮರ್ಥ್ಯಗಳು, ಆಸಕ್ತಿಗಳು ಮತ್ತು ಗುಣಗಳ ಕುರಿತು ವಿದ್ಯಾರ್ಥಿಗಳಿಗಿರುವ ಜ್ಞಾನ/ತಿಳುವಳಿಕೆ.
- ಸ್ಥಳೀಯ ಪ್ರದೇಶದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಸಂತೋಷ.
- ವಿವಿಧ ಸಂಘಗಳು ಮತ್ತು ವ್ಯಕ್ತಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸ್ವಾತಂತ್ರ್ಯ.
- ತಜ್ಞರ ಧನಾತ್ಮಕ ಅಭ್ಯಾಸಗಳು ಮತ್ತು ಸಾಮರ್ಥ್ಯಗಳ ವ್ಯಾಪ್ತಿಗಳು.
- ಉನ್ನತ ನಾಯಕತ್ವದ ಸಾಮರ್ಥ್ಯಗಳು.
- ನಿರ್ಭಯತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳು.
- ಉಪಕ್ರಮಗಳನ್ನು ಕೈಗೆತ್ತಿಕೊಳ್ಳುವ ಸಾಮರ್ಥ್ಯ.
Embibe ಉತ್ಪನ್ನ/ಫೀಚರ್‌ಗಳು: ಬಹು ಕಂಟೆಂಟ್ ವಿಧಗಳು
Embibe ತನ್ನ ಶಿಕ್ಷಣಶಾಸ್ತ್ರದಲ್ಲಿ ಅನುಭವಾತ್ಮಕ ಶಿಕ್ಷಣವನ್ನು ಅಳವಡಿಸಿಕೊಂಡಿದೆ ಅಂದರೆ, ಕಲಿಕೆಯನ್ನು ಅತ್ಯಾಕರ್ಷಕ ಮತ್ತು ವಿನೋದಮಯವನ್ನಾಗಿ ಮಾಡುವುದು. ಭಾರವಾದ ಪುಸ್ತಕಗಳನ್ನು ಮತ್ತು ಅವುಗಳ ಸುದೀರ್ಘ ಪುಟಗಳನ್ನು ಮರೆತುಬಿಡಿ! ನಮ್ಮಲ್ಲಿ ಒಂದು ಸೆಟ್ ಇದ್ದು, ಅವು ಈ ಕೆಳಗಿನಂತಿವೆ :
- ‘ನೀವೇ ಮಾಡಿನೋಡಿ’ ವೀಡಿಯೋಗಳು.
- ಕೂಬೋ ವೀಡಿಯೊಗಳು.
- ಮಿಥ್ಯಾ ಪ್ರಯೋಗಶಾಲಾ ವೀಡಿಯೋಗಳು.
- ನಿಜ ಜೀವನದ’ ವೀಡಿಯೊಗಳು.
- ಸ್ಪೂಫ್‌ಗಳು ಅಥವಾ ಮೋಜು-ವಿನೋದದ ವೀಡಿಯೊಗಳು.
- ಪ್ರಯೋಗಗಳು.
- ಪರಿಹರಿಸಿದ ಉದಾಹರಣೆಗಳು.
ಕಲಿಕೆಯನ್ನು ಇನ್ನುಮುಂದೆ ಹಗುರವಾಗಿ ಪರಿಗಣಿಸಬೇಡಿ, ಏಕೆಂದರೆ ಅದು ಒಂದು ಅನುಭವ!
‘ನಿಮ್ಮದೇ ಟೆಸ್ಟ್ ಅನ್ನು ರಚಿಸಿ’ ಎನ್ನುವ ಫೀಚರ್ ಹೊಂದಿರುವ ಈ ಟೆಸ್ಟ್ ವಿಭಾಗವು ಈಗ ಮತ್ತಷ್ಟು ಸವಿಸ್ತಾರವಾಗಿದೆ. ಈಗ, ವಿದ್ಯಾರ್ಥಿಗಳು ಯಾವುದೇ ಅಧ್ಯಾಯದ ಅಥವಾ ವಿಷಯದ ಆಧಾರದ ಮೇಲೆ ತಮ್ಮದೇ ರೀತಿಯ ಟೆಸ್ಟ್ ಅನ್ನು ರಚಿಸಬಹುದು. ನಮ್ಮ ‘Solve With Us’ ಫೀಚರ್ ಅನ್ನು ಬಳಸಿಕೊಂಡು, ವಿದ್ಯಾರ್ಥಿಗಳು ಮಾರ್ಗದರ್ಶನದ ನೆರವಿನಿಂದ ಪ್ರಶ್ನೆಗಳನ್ನೂ ಕೂಡ ಪರಿಹರಿಸಬಹುದು.