
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ಪರೀಕ್ಷಾ ಮಾದರಿ 2022-23
August 24, 2022ಎಸ್ಎಸ್ಎಲ್ಸಿ ಮುಗಿದ ಬಳಿಕ ಯಾವ ಕೋರ್ಸ್‌ಗೆ ಸೇರಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಉಂಟಾಗುವುದು ಸಹಜ. ಇಲ್ಲಿಂದ ಪ್ರೌಢ ಶಿಕ್ಷಣ ಮುಗಿದು ಕಾಲೇಜು ಹಂತ ಆರಂಭವಾಗುತ್ತದೆ. ಒಂದು ಕಡೆ ಪಿಯುಸಿ, ಇನ್ನೊಂದು ಕಡೆ ಡಿಪ್ಲೊಮಾದಂತಹ ತಾಂತ್ರಿಕ ಶಿಕ್ಷಣದ ಕೋರ್ಸ್‌ಗಳ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿವೆ. ಪದವಿ ಪೂರ್ವ ಶಿಕ್ಷಣಕ್ಕೆ ಪ್ರವೇಶಿಸೋಣ ಎಂದರೆ ಅಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಂತಹ ಹಲವಾರು ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಲಭ್ಯ.
ಅದರಲ್ಲೂ ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಇಲ್ಲಿ ಇಂಗ್ಲಿಷ್ ಮಾಧ್ಯಮ ತೆಗೆದುಕೊಂಡರೆ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಪಿಯುಸಿ ವಿಜ್ಞಾನ ವಿಭಾಗವನ್ನೂ ಕನ್ನಡಲ್ಲೇ ಬರೆಯಬಹುದು. ಇದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡ ಮಾಧ್ಯಮದಲ್ಲಿ ಪಠ್ಯಪುಸ್ತಕಗಳನ್ನೂ ಹೊರತಂದಿದೆ. ಅಷ್ಟೇ ಅಲ್ಲದೆ Embibe ಫ್ಲ್ಯಾಟ್‌ಫಾಮ್‌ನಲ್ಲೂ ಕನ್ನಡದಲ್ಲೇ ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ್ರದ ಕಂಟೆಂಟ್ ಲಭ್ಯ. ವಿಡಿಯೋಗಳನ್ನು ವೀಕ್ಷಿಸುತ್ತಾ ಗಹನವಾಗಿರುವ ಪರಿಕಲ್ಪನೆಗಳನ್ನು ಸುಲಲಿತವಾಗಿ ಅರ್ಥೈಸಿಕೊಳ್ಳಬಹುದು.
ಪ್ರಥಮ ಪಿಯುಸಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲಗಳು ಕಾಡುವುದು ಸಹಜ. ವಿಜ್ಞಾನ ವಿಭಾಗಕ್ಕೆ ಸೇರಿದರೆ ಯಾವ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ವಾಣಿಜ್ಯ, ಕಲಾ ವಿಭಾಗದಲ್ಲಿ ಏನೆಲ್ಲಾ ಸಂಯೋಜನೆಗಳಿವೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಸಿದ್ದೇವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಮುಂದಿನ ವೃತ್ತಿ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಂಡು ವಿಭಾಗ ಹಾಗೂ ಸಂಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಎಸ್ಎಸ್‌ಎಲ್‌ಸಿಯಲ್ಲಿ ವಿಜ್ಞಾನ, ಗಣಿತ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರೆ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮುಂದೆ ಇಂಜಿನಿಯರಿಂಗ್, ವೈದ್ಯಕೀಯ, ಅರೆವೈದ್ಯಕೀಯ, ದಂತವೈದ್ಯಕೀಯ, ಕೃಷಿ ವಿಜ್ಞಾನ, ಮೈಕ್ರೋಬಯಾಲಜಿಯಂತಹ ಕೋರ್ಸ್‌ಗಳು ಅವರ ಮುಂದಿರುತ್ತವೆ.
ಒಂದು ವೇಳೆ ಸಮಾಜ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು ಆ ವಿಷಯಗಳಲ್ಲೇ ಆಸಕ್ತಿ ಇದ್ದರೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲೂ ಹಲವಾರು ಸಂಯೋಜನೆಗಳು ವಿದ್ಯಾರ್ಥಿಗಳಿಗೆ ಲಭ್ಯ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ವಾಣಿಜ್ಯ ವಿಭಾಗ ಗಣಿತ ಹಾಗೂ ಲೆಕ್ಕಶಾಸ್ತ್ರಗಳ ಸಂಯೋಜನೆಯಾಗಿದೆ. ಮುಂದೆ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ, ಬಿಝಿನೆಸ್ ಅಡ್ಮಿನಿಸ್ಟ್ರೇಷನ್, ಬ್ಯಾಂಕಿಂಗ್ ಕ್ಷೇತ್ರ ಮುಂತಾದ ವಾಣಿಜ್ಯಕ್ಕೆ ಸಂಬಂಧಿಸಿದ ವಿಸ್ತೃತವಾದ ಆಯ್ಕೆಗಳು ಇವೆ.
ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯನ್ನು ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ನಂತರದ ಮೊದಲ ಕಾರ್ಯನಿರತ ದಿನದಿಂದ ಪ್ರಾರಂಭಿಸಲಾಗುತ್ತದೆ. ಪದವಿ ಪೂರ್ವ ಶಿಕ್ಷಣದಲ್ಲಿ ಇರುವ ಸಂಯೋಜನೆಗಳು, ಭಾಷೆಗಳ ಕುರಿತು ವಿವರಗಳನ್ನು ಇಲ್ಲಿ ನೀಡಲಾಗಿದೆ.
ಇಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾದ ಭಾಷಾ ವಿಷಯಗಳು ಮತ್ತು ಅವುಗಳ ಸಂಕೇತ ಸಂಖ್ಯೆ ನೀಡಲಾಗಿದೆ. ಕೆಳಗಿನ ಪಟ್ಟಿಯಲ್ಲಿನ ಭಾಷಾ ವಿಷಯಗಳಲ್ಲಿ ಯಾವುದಾದರೂ ಎರಡನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲೆ ಈ ಮೂರು ವಿಭಾಗಗಳಿಗೆ ಇದು ಅನ್ವಯಿಸುತ್ತದೆ.
ಭಾಷಾ ವಿಷಯ | ಸಂಕೇತ ಸಂಖ್ಯೆ |
---|---|
ಕನ್ನಡ | 01 |
ಇಂಗ್ಲೀಷ್ | 02 |
ಹಿಂದಿ | 03 |
ತಮಿಳು | 04 |
ತೆಲುಗು | 05 |
ಮಲಯಾಳಂ | 06 |
ಮರಾಠಿ | 07 |
ಉರ್ದು | 08 |
ಸಂಸ್ಕೃತ | 09 |
ಅರೇಬಿಕ್ | 11 |
ಫ್ರೆಂಚ್ | 12 |
ಇಲ್ಲಿ ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳಬೇಕಾದ ಐಚ್ಛಿಕ ವಿಷಯಗಳು ಮತ್ತು ಅವುಗಳ ಸಂಕೇತ ಸಂಖ್ಯೆ ನೀಡಲಾಗಿದೆ. ಈ ಭಾಗವನ್ನು ವಿಜ್ಞಾನ, ವಾಣಿಜ್ಯ ಮತ್ತು ಕಲೆ ವಿಭಾಗದ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಆರಿಸಿಕೊಳ್ಳಬೇಕಾಗುತ್ತದೆ.
ನಿಗದಿತ ಸಂಯೋಜನೆಗಳ ಪಟ್ಟಿಯಲ್ಲಿರುವ ಯಾವುದಾದರೂ 4 ವಿಷಯಗಳ ಒಂದು ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ವಿಜ್ಞಾನ ಐಚ್ಛಿಕ ವಿಷಯ | ಸಂಕೇತ |
---|---|
ಭೌತಶಾಸ್ತ್ರ | 33 |
ರಸಾಯನಶಾಸ್ತ್ರ | 34 |
ಗಣಿತ | 35 |
ಜೀವಶಾಸ್ತ್ರ | 36 |
ಭೂಗರ್ಭಶಾಸ್ತ್ರ | 37 |
ಸಂಖ್ಯಾಶಾಸ್ತ್ರ | 31 |
ಎಲೆಕ್ಟ್ರಾನಿಕ್ಸ್ (ವಿದ್ಯುನ್ಮಾನ ವಿಜ್ಞಾನ) | 40 |
ಗಣಕ ವಿಜ್ಞಾನ | 41 |
ಗೃಹವಿಜ್ಞಾನ | 67 |
33 34 35 36
33 34 35 41
33 34 35 40
31 33 34 35
33 34 36 67
33 34 35 37
ಕಲೆ ಐಚ್ಛಿಕ ವಿಷಯ | ಸಂಕೇತ |
---|---|
ಐಚ್ಛಿಕ ಕನ್ನಡ | 16 |
ಇತಿಹಾಸ | 21 |
ಅರ್ಥಶಾಸ್ತ್ರ | 22 |
ತರ್ಕಶಾಸ್ತ್ರ | 23 |
ಭೂಗೋಳಶಾಸ್ತ್ರ | 24 |
ಕರ್ನಾಟಕ ಸಂಗೀತ | 25 |
ಹಿಂದೂಸ್ಥಾನಿ ಸಂಗೀತ | 26 |
ಗೃಹವಿಜ್ಞಾನ | 67 |
ಸಮಾಜಶಾಸ್ತ್ರ | 28 |
ರಾಜ್ಯಶಾಸ್ತ್ರ | 29 |
ಶಿಕ್ಷಣ | 52 |
ಮನಃಶಾಸ್ತ್ರ | 32 |
ಮೂಲಗಣಿತ | 75 |
ಗೃಹವಿಜ್ಞಾನ | 67 |
21 22 28 29
21 22 24 29
21 22 23 29
16 21 22 29
16 21 22 24
16 21 22 28
21 22 29 32
16 21 22 52
16 21 29 52
16 21 24 52
16 21 28 52
21 22 28 32
21 22 28 52
21 28 29 52
21 24 28 52
21 22 23 28
16 21 22 25
16 21 22 26
16 21 28 25
16 21 28 32
21 22 29 52
21 24 29 52
22 28 29 52
22 24 29 52
22 28 29 32
22 23 28 32
21 22 24 28
21 22 25 28
21 22 26 28
21 22 26 29
21 22 25 29
21 22 29 75
21 22 28 75
21 22 24 75
22 29 32 67
ವಾಣಿಜ್ಯ ಐಚ್ಛಿಕ ವಿಷಯ | ಸಂಕೇತ |
---|---|
ವ್ಯವಹಾರ ಅಧ್ಯಯನ | 27 |
ಇತಿಹಾಸ | 21 |
ಅರ್ಥಶಾಸ್ತ್ರ | 22 |
ಲೆಕ್ಕಶಾಸ್ತ್ರ | 30 |
ಗಣಕ ವಿಜ್ಞಾನ | 41 |
ಮೂಲಗಣಿತ | 75 |
ಗಣಕ ವಿಜ್ಞಾನ | 41 |
ಸಂಖ್ಯಾಶಾಸ್ತ್ರ | 31 |
ರಾಜ್ಯಶಾಸ್ತ್ರ | 29 |
ಸಮಾಜಶಾಸ್ತ್ರ | 28 |
21 22 27 30
22 24 27 30
22 27 30 41
22 27 30 31
27 30 31 75
27 30 31 41
22 27 29 30
22 27 30 75
22 27 28 30
NSQF ವಿಷಯ | ಮಾಹಿತಿ ತಂತ್ರಜ್ಞಾನ | ರೀಟೇಲ್ | ಆಟೋಮೊಬೈಲ್ | ಹೆಲ್ತ್ಕೇರ್ | ಬ್ಯೂಟಿ & ವೆಲ್‌ನೆಸ್ |
---|---|---|---|---|---|
ಸಂಕೇತ ಸಂಖ್ಯೆ | 61 | 62 | 63 | 64 | 65 |
NSQF ವಿಷಯಗಳು ಲಭ್ಯವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದಾದರೊಂದು NSQF ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ವ್ಯಾಸಂಗ ಮಾಡುತ್ತಿರುವ ಮಾಧ್ಯಮವನ್ನು ಹೊರತುಪಡಿಸಿ ಇನ್ನೊಂದು ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ವಿಜ್ಞಾನ ಸಂಯೋಜನೆಯ ವಿದ್ಯಾರ್ಥಿಗಳು ಆಂಗ್ಲಭಾಷೆಯನ್ನು ಹೊರತುಪಡಿಸಿ ಇನ್ನೊಂದು ಯಾವುದಾದರೂ ಭಾಷೆಯ ಬದಲಾದ NSQF ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಪಿಯುಸಿ ವಿದ್ಯಾರ್ಥಿಗಳು ಭಾಷೆ ಹಾಗೂ ಸಂಯೋಜನೆ ಆಯ್ಕೆ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಆ ಮಾರ್ಗಸೂಚಿಗಳು ಈ ಕೆಳಕಂಡಂತಿವೆ.
• ಪಿಯುಸಿ ವ್ಯಾಸಂಗ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾಗ-1ರಲ್ಲಿ 2 (ಎರಡು) ಭಾಷೆಗಳನ್ನು ಮತ್ತು ಭಾಗ-2 ರಲ್ಲಿ 4(ನಾಲ್ಕು) ಐಚ್ಛಿಕ ವಿಷಯಗಳ ಒಂದು ಸಂಯೋಜನೆಯನ್ನು ವ್ಯಾಸಂಗ ಮಾಡಬೇಕಾಗುತ್ತದೆ, ಎಸ್‌ಎಸ್‌ಎಲ್‌ಸಿಯನ್ನು ಅಂಗೀಕೃತ ಮಂಡಳಿಗಳು ನಡೆಸುವ ಪರೀಕ್ಷೆಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರಬೇಕು.
• ಪ್ರಥಮ ಹಾಗೂ ದ್ವಿತೀಯ ಪದವಿ ಪೂರ್ವ ತರಗತಿಗಳಿಗೆ NCERT ಯಿಂದ ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಜೀವಶಾಸ್ತ್ರ ಹಾಗೂ ವಾಣಿಜ್ಯ ವಿಷಯಗಳಾದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆ NCERT ಪಠ್ಯಪುಸ್ತಕಗಳನ್ನೇ ಅಧಿಕೃತ ಪಠ್ಯ ಪುಸ್ತಕಗಳನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಉಳಿದ ವಿಷಯಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊರತಂದಿರುವ ಪಠ್ಯ ಪುಸ್ತಕಗಳನ್ನೇ ಅಧಿಕೃತ ಮಸ್ತಕಗಳಾಗಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು,
ಸಿಬಿಎಸ್‌ಸಿ ಪಠ್ಯಕ್ರಮದ 10ನೇ ತರಗತಿಯಲ್ಲಿ ಬೇಸಿಕ್ ಮ್ಯಾಥ್ ವಿಷಯವನ್ನು ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಹಂತದ ಪ್ರಥಮ ಪಿಯುಸಿಯ ವಿಜ್ಞಾನ ಸಂಯೋಜನೆಯಲ್ಲಿ ಪದವಿ ಪೂರ್ವ ಇಲಾಖೆಯ ಸುತ್ತೋಲೆ ಸಂಖ್ಯೆ: ಪಪೂಶಿಣ/ಶೈಶಾ/ಬೇ.ಮ್ಯಾ..ದಾ/2020-21 ದಿನಾಂಕ 12.09.2020 ರಂತೆ ದಾಖಲಾತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
• ಫ್ರೆಂಚ್ ಭಾಷೆ (12), ಹಿಂದೂಸ್ಥಾನಿ ಸಂಗೀತ (26) ಮತ್ತು ಕರ್ನಾಟಕ ಸಂಗೀತ (25) ವಿಷಯಗಳಿಗೆ ಸಂಬಂಧಿಸಿದಂತೆ ಮೌಖಿಕ ಹಾಗೂ ತಾತ್ವಿಕ ಎರಡೂ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳು ಇರುವುದರಿಂದ, ಮೌಖಿಕ ಮತ್ತು ತಾತ್ವಿಕ ಎರಡೂ ಭಾಗಗಳಲ್ಲಿ ಒಂದೇ ಬಾರಿಗೆ ಉತ್ತೀರ್ಣರಾಗಬೇಕು.
ಎನ್.ಎಸ್.ಕ್ಯೂ.ಎಫ್, ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಏಕಕಾಲದಲ್ಲೇ ತಾತ್ವಿಕ, ಪ್ರಾಯೋಗಿಕ ಮತ್ತು ಅಂತರಿಕ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳೊಂದಿಗೆ ಒಂದೇ ಬಾರಿಗೆ ಉತ್ತೀರ್ಣರಾಗಬೇಕು.
ಪ್ರ. 1: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿರುವ ಅಪರೂಪದ ಸಂಯೋಜನೆಗಳು ಯಾವುವು?
ಉತ್ತರ: ಪಿಸಿಎಂಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕವಿಜ್ಞಾನ), ಪಿಸಿಎಂಇ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸ್), ಪಿಸಿಎಂಎಸ್ (ಸಂಖ್ಯಾಶಾಸ್ತ್ರ), ಪಿಸಿಪಿಎಚ್ (ಗೃಹವಿಜ್ಞಾನ), ಪಿಸಿಎಂಜಿ (ಭೂಗರ್ಭಶಾಸ್ತ್ರ).
ಪ್ರ. 2: ಪದವಿ ಪೂರ್ವ ಶಿಕ್ಷಣ ಮಂಡಳಿ ನಿಗದಿಪಡಿಸದ ಸಂಯೋಜನೆ ಮತ್ತು ಭಾಷೆಗಳು ಪಿಯುಸಿಯಲ್ಲಿ ಲಭ್ಯವಿದೆಯೇ?
ಉತ್ತರ: ಇಲ್ಲ. ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಅನುಮತಿ ಪಡೆದ ಭಾಷೆ ಮತ್ತು ಸಂಯೋಜನೆಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ನಿಯಮಬದ್ಧವಲ್ಲದ ಸಂಯೋಜನೆಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವಂತಿಲ್ಲ.
ಪ್ರ. 3: ಪ್ರತಿ ಸಂಯೋಜನೆಯಲ್ಲಿ ಎಷ್ಟು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ?
ಉತ್ತರ: 2022-23ನೇ ಸಾಲಿನಲ್ಲಿ ಸಂಯೋಜನೆಯ ಪ್ರತಿ ವಿಭಾಗಕ್ಕೆ ನಿಗದಿತ ಪ್ರವೇಶಗಳ ಸಂಖ್ಯೆ 80 (ಎಂಬತ್ತು) ಮಾತ್ರ. ಇದನ್ನು ಮೀರಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಂತಿಲ್ಲ.
ಪ್ರ. 4: ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾಗಬಹುದೇ?
ಉತ್ತರ: ಇಲ್ಲ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಎಸ್ಎಸ್ಎಲ್‌ಸಿ ವಿವರಗಳನ್ನು ಗಣಕೀಕರಿಸಿ ತಾಳೆ ಮಾಡಲಾಗುತ್ತದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಲ್ಲಿ ದಾಖಲಾಗಿದ್ದರೆ ವಿದ್ಯಾರ್ಥಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ದಾಖಲಾತಿ ಮಾಡಿಕೊಂಡ ಕಾಲೇಜಿನ ಪ್ರಾಚಾರ್ಯರ ಮೇಲೆ ಮಂಡಳಿ ಶಿಸ್ತುಕ್ರಮ ಕೈಗೊಳ್ಳುತ್ತದೆ.
ಪ್ರ. 5: ಕಾಲೇಜಿನಲ್ಲಿ ಲಭ್ಯವಿರುವ ಸಂಯೋಜನೆಗಳು ಯಾವುದು ಎಂದು ತಿಳಿದುಕೊಳ್ಳುವುದು ಹೇಗೆ?
ಉತ್ತರ: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಿರುವ ಪ್ರತಿ ಸಂಯೋಜನೆಯ ವಿಭಾಗಗಳ ಸಂಖ್ಯೆ ಮತ್ತು ಭಾಷಾ ವಿಷಯಗಳ ಬಗ್ಗೆ ಆಯಾ ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ.
“ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಿಯುಸಿಯಲ್ಲಿ ಲಭ್ಯವಿರುವ ವಿವಿಧ ಸಂಯೋಜನೆಗಳು” ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಿಯುಸಿಯಲ್ಲಿ ಲಭ್ಯವಿರುವ ವಿವಿಧ ಸಂಯೋಜನೆಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.