ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿಯ ಪ್ರಮುಖ ಟಾಪಿಕ್‌ಗಳು
9ನೇ ತರಗತಿಯ ಪ್ರಮುಖ ಟಾಪಿಕ್‌ಗಳು: ಒಂಬತ್ತನೇ ತರಗತಿಯು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವವಾದ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಉನ್ನತ ಅಭ್ಯಾಸಕ್ಕೆ ಸಹಕಾರಿಯಾಗಿರುವ ಹಲವು ಹೊಸ ಟಾಪಿಕ್‌ಗಳನ್ನು ಕಲಿಯುತ್ತಾರೆ. ಇದರ ಜೊತೆಗೆ, ಹತ್ತನೇ ತರಗತಿಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಯನ್ನು ಎದುರಿಸಬೇಕಿರುವ ವಿದ್ಯಾರ್ಥಿಗಳಿಗೆ ಒಂಬತ್ತನೇ ತರಗತಿಯ ಜ್ಞಾನವು ಭದ್ರ ಬುನಾದಿಯಾಗಬಲ್ಲದು.
ಈ ಕಾರಣಕ್ಕಾಗಿಯೇ ಒಂಬತ್ತನೇ ತರಗತಿಯ ಪರೀಕ್ಷೆಗಳು ಪ್ರಾಮುಖ್ಯತೆ ಪಡೆಯುತ್ತವೆ. ಒಂಬತ್ತನೇ ತರಗತಿಯ ಕೋರ್ ವಿಷಯಗಳಾದ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನದ ಮೇಲೆ ವಿದ್ಯಾರ್ಥಿಗಳು ಹೆಚ್ಚು ಗಮನ ನೀಡಿದರೆ ಉತ್ತಮ ಅಂಕಗಳನ್ನು ಗಳಿಸಬಹುದು. ಹಾಗೆಯೇ ಮುಂದಿನ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇದು ಅನುಕೂಲಕರವಾಗುತ್ತದೆ. ಹಾಗಾಗಿ ಇಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಗಮನ ಹರಿಸಬೇಕಾದ ಟಾಪಿಕ್‌ಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
9ನೇ ತರಗತಿ ವಿಜ್ಞಾನ ವಿಷಯ: ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಟಾಪಿಕ್‌ಗಳು
ಗೊಬ್ಬರದ ತಯಾರಿಕೆಯ ವಿಧಾನವನ್ನು ಮತ್ತು ಗೊಬ್ಬರದ ಬಳಕೆಯಿಂದ ಬೆಳೆಗಳ ಉತ್ತಮ ಇಳುವರಿಯನ್ನು ಪರೀಕ್ಷಿಸುವುದು
ಪರಿಸರದಲ್ಲಿನ ಜೈವಿಕ ಮತ್ತು ಅಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ಉದಾಹರಣೆಗಳನ್ನು ನೀಡುವುದು ಹಾಗೂ ಇಂತಹ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯನ್ನು ಸಮರ್ಥಿಸುವುದು
ಎಲ್ಲಾ ಪರಮಾಣುಗಳು ಅತಿ ಸಣ್ಣ ಘಟಕ ಕಣಗಳಾದ ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಿಂದಾಗಿರುತ್ತವೆ ಹಾಗೂ ಬೇರೆ ಬೇರೆ ಪರಮಾಣುಗಳು ಬೇರೆ ಬೇರೆ ಸಂಖ್ಯೆಯ ಘಟಕ ಕಣಗಳಿಂದ ಮಾಡಲ್ಪಟ್ಟಿರುತ್ತವೆ ಎಂಬುದನ್ನು ವಿವರಿಸುವುದು
ಸಾಮಾನ್ಯ ಸಂಯುಕ್ತಗಳ ರಾಸಾಯನಿಕ ಸಂಯೋಜನೆಯನ್ನು ರಾಸಾಯನಿಕ ಸಮೀಕರಣಗಳ ಸಹಾಯದಿಂದ ಅರ್ಥೈಸಿಕೊಳ್ಳುವುದು
ಕೋಶ ವಿಭಜನೆಯ (ಮೈಟಾಸಿಸ್ ಮತ್ತು ಮಿಯಾಸಿಸ್) ಪ್ರಕ್ರಿಯೆಯನ್ನು ಮತ್ತು ಕೋಶ ವಿಭಜನೆಯ ಮಹತ್ವವನ್ನು ಗುರುತಿಸುವುದು
ಪ್ರಕೃತಿಯಲ್ಲಿನ ಭೂ-ಜೈವಿಕ ಚಕ್ರಗಳಾದ ಜಲ ಚಕ್ರ, ಆಮ್ಲಜನಕ ಚಕ್ರ, ಇಂಗಾಲ ಚಕ್ರ ಹಾಗೂ ಸಾರಜನಕ ಚಕ್ರಗಳ ಮಹತ್ವನ್ನು ಮೌಲ್ಯೀಕರಿಸುವುದು
ಮಾನವನ ಹಾಗೂ ಸಸ್ಯಗಳಲ್ಲಿನ ಸಾಗಾಣಿಕೆ ವ್ಯೂಹಗಳ ಘಟಕಗಳಾದ ಹೃದಯ, ಕ್ಸೈಲಂ, ಫ್ಲೋಯಮ್ ಇವುಗಳ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ವಿವರಿಸುವುದು
ಸ್ಥಾನಪಲ್ಲಟ, ಕಾಲ, ವೇಗೋತ್ಕರ್ಷ, ವೇಗ ಮತ್ತು ನ್ಯೂಟನ್‌ನ ಚಲನೆಯ ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು
ಸ್ವತಂತ್ರವಾಗಿ ಪತನಗೊಳ್ಳುತ್ತಿರುವ ವಸ್ತುಗಳ ಮೇಲೆ ಭೂ ಗುರುತ್ವದ ಪರಿಣಾಮವನ್ನು ಪರೀಕ್ಷಿಸುವುದು.
ಸಾಮಾನ್ಯ ಸಾಂಕ್ರಾಮಿಕ ಕಾಯಿಲೆ ಹಾಗೂ ನ್ಯೂನತೆ ಕಾಯಿಲೆ ಮತ್ತು ಅವುಗಳ ವಿಧಗಳು, ಚಿಕಿತ್ಸೆ, ಹರಡುವ ವಿಧಾನ ಹಾಗೂ ತಡೆಗಟ್ಟುವ ಕ್ರಮಗಳನ್ನು ಗುರುತಿಸುವುದು.
9ನೇ ತರಗತಿ ಸಮಾಜ ವಿಜ್ಞಾನ: ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಟಾಪಿಕ್‌ಗಳು
ಕರ್ನಾಟಕದ ಭೂಪಟದಲ್ಲಿ ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶ, ಜಿಲ್ಲೆಗಳು, ನೆರೆ ರಾಜ್ಯಗಳು, ಭೌತಿಕ ಲಕ್ಷಣಗಳು ಮತ್ತು ಪ್ರಾಕೃತಿಕ ವಿಭಾಗಗಳು, ಕೈಗಾರಿಕಾ ಕ್ಷೇತ್ರಗಳು, ಸಾರಿಗೆಯ ವಿಧಗಳು, ಪ್ರಮುಖ ಪ್ರವಾಸಿ ಕೇಂದ್ರಗಳು, ಐತಿಹಾಸಿಕ ಸ್ಥಳಗಳು ಇತ್ಯಾದಿಗಳನ್ನು ಗುರುತಿಸುವುದು.
ಭಾರತದಲ್ಲಿ ಕರ್ನಾಟಕದ ಪ್ರಮುಖ ವೈಶಿಷ್ಟ್ಯಗಳಾದ ಪ್ರಾಕೃತಿಕ ವಿಭಾಗಗಳು, ಭೂಭಾಗಗಳು, ಮತ್ತು ನದಿಗಳು, ಹವಾಮಾನ, ಜೀವ ವೈವಿಧ್ಯತೆಯ ವಿಧಗಳು ಮತ್ತು ವನ್ಯಜೀವಿಗಳ ಬಗ್ಗೆ ವಿವರಿಸುವುದು.
ಸಂಪನ್ಮೂಲಗಳ ವಿವೇಚನಾಶೀಲ ಬಳಕೆ ಮತ್ತು ಅವುಗಳ ಸಮರ್ಥವಾದ ಅಭಿವೃದ್ಧಿಯ ಯೋಜನೆಯನ್ನು ರೂಪಿಸುವುದು
ಕರ್ನಾಟಕದಲ್ಲಿ ವಲಸೆ ಮತ್ತು ಜನಸಂಖ್ಯಾ ಬೆಳವಣಿಗೆಯಿಂದ ಉಂಟಾಗುವ ಬದಲಾವಣೆಯನ್ನು ವಿಮರ್ಶಿಸುವುದು
ಮಧ್ಯಕಾಲೀನ ಯುರೋಪಿನಲ್ಲಿ ಜಾರಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಯ ಗುಣಲಕ್ಷಣಗಳನ್ನು ವಿವರಿಸುವುದು
ಏಸುಕ್ರಿಸ್ತ, ಪ್ರವಾದಿ ಮೊಹಮದ್ ಮತ್ತು ಇತರೆ ಧಾರ್ಮಿಕ ಸುಧಾರಕರ (ಶಂಕರಾಚಾರ್ಯ, ರಾಮಾನುಜಾಚಾರ್ಯ, ಬಸವೇಶ್ವರ, ಮಧ್ವಾಚಾರ್ಯ) ಮತ್ತು ಸಂತರ ಬೋಧನೆಗಳ ಸಾರವನ್ನು ಪಟ್ಟಿ ಮಾಡುವುದು
ಮಧ್ಯಕಾಲೀನ ಯುಗದಲ್ಲಿ ಒಂದು ಸ್ಥಳದಲ್ಲಿ ಉಂಟಾದ ಐತಿಹಾಸಿಕ ಬೆಳವಣಿಗೆಗಳನ್ನು (ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ) ಮತ್ತೊಂದು ಸ್ಥಳದೊಂದಿಗೆ ಸಂಬಂಧೀಕರಿಸುವುದು
ಆಧುನಿಕ ಯುರೋಪ್‌ನಲ್ಲಿ ಪುನರುಜ್ಜಿವನದ ಅವಧಿಯಲ್ಲಿ ಉಂಟಾದ ಪ್ರಮುಖ ಬೆಳವಣಿಗೆಗಳನ್ನು (ವಿಜ್ಞಾನ, ತಂತ್ರಜ್ಞಾನ, ಕಲೆ, ಮುತ್ತು ಸಾಹಿತ್ಯ ಕ್ಷೇತ್ರಗಳಲ್ಲಿ) ವಿವರಿಸುವುದು.
ಕ್ರಾಂತಿ ಮತ್ತು ಏಕೀಕರಣ ಚಳುವಳಿಗಳ (ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ, ಫ್ರಾನ್ಸ್‌ನ ಕ್ರಾಂತಿ, ಏಕೀಕರಣ ಚಳುವಳಿಗಳು- ಇಟಲಿ, ಜರ್ಮನಿ) ಪ್ರಾಮುಖ್ಯತೆ ಮತ್ತು ಅವುಗಳಿಂದ ಉಂಟಾದ ಬದಲಾವಣೆಯನ್ನು ವಿವರಿಸುವುದು
ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಅಪಾಯಕಾರಿಯಾದ ನಿಲುವು ತೆಗೆದುಕೊಳ್ಳುತ್ತಿದ್ದರೆ ಅದನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು.
9ನೇ ತರಗತಿ ಗಣಿತ: ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಟಾಪಿಕ್‌ಗಳು
ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳ ನಡುವಿನ ವ್ಯತ್ಯಾಸ, ಮತ್ತು ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳು ಹಾಗೂ ಪೂರ್ಣಾಂಕಗಳ ನಡುವಿನ ವ್ಯತ್ಯಾಸ ಅರಿಯುವುದು
ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳನ್ನು ಸಂಖ್ಯಾರೇಖೆಯ ಮೇಲೆ ಗುರುತಿಸುವುದು ಹಾಗೂ ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳನ್ನು ಹೊಂದಿದ ಸಮೀಕರಣಗಳನ್ನು ಬಿಡಿಸುವುದು
ವಿವಿಧ ಬಗೆಯ ಬಹುಪದೋಕ್ತಿಗಳನ್ನು ಹಾಗೂ ಅವುಗಳಲ್ಲಿನ ಪದಗಳು, ಸಹಾಪವರ್ತನಗಳು ಮತ್ತು ಘಾತಗಳನ್ನು ಗುರುತಿಸುವುದು
ಶೇಷ ಪ್ರಮೇಯವನ್ನು ಬಳಸಿ ಬಹುಪದೋಕ್ತಿಗಳ ಭಾಗಾಕಾರವನ್ನು ಮಾಡುವುದು ಮತ್ತು ಅಪವರ್ತನ ಪ್ರಮೇಯವನ್ನು ಬಳಸಿ ಬಹುಪದೋಕ್ತಿಗಳನ್ನು ಅಪವರ್ತಿಸುವುದು
2 ಬೀಜಪದಗಳಿರುವ ಸರಳ ಸಮೀಕರಣಗಳನ್ನು ಮಧ್ಯಪದ ಬಿಡಿಸುವ ವಿಧಾನ ಮತ್ತು ನಕ್ಷೆಯ ವಿಧಾನದಿಂದ ಬಿಡಿಸುವುದು, ಮತ್ತು ಇದನ್ನಾಧರಿಸಿದ ನಿಜಜೀವನದ ಸಮಸ್ಯೆಗಳನ್ನು ಬಿಡಿಸುವುದು
ಕಾರ್ಟೀಸಿಯನ್ ಸಮತಲದ ಮೇಲೆ ಬಿಂದುವನ್ನು ಗುರುತಿಸುವುದು ಮತ್ತು ದತ್ತ ಬಿಂದುವು ಸರಳರೇಖೆಯ ಮೇಲಿರುವುದನ್ನು ಪರಿಶೀಲಿಸುವುದು
ರೇಖೆ, ರೇಖಾಖಂಡ, ಕಿರಣ, ಕೋನಗಳು ಮತ್ತು ವೃತ್ತದಂತಹ ರೇಖಾಗಣಿತೀಯ ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವುದು. ಕೋನಗಳ, ತ್ರಿಭುಜಗಳ, ಚತುರ್ಭುಜಗಳ ಮತ್ತು ವೃತ್ತಗಳ ಭಾಗಗಳನ್ನು ಗುರುತಿಸುವುದು, ಹಾಗೂ ಗುಣಲಕ್ಷಣಗಳನ್ನು ಆಧರಿಸಿ ವಿವಿಧ ರೀತಿಯ ಕೋನ ಹಾಗೂ ತ್ರಿಭುಜಗಳನ್ನು ವರ್ಗೀಕರಿಸುವುದು
ವಿವಿಧ ರೇಖಾಗಣಿತೀಯ ಪರಿಕಲ್ಪನೆಗಳಿಗೆ ಸಂಬಂಧಿಸಿದ ಸ್ವಯಂಸಿದ್ಧಗಳು ಹಾಗೂ ಪ್ರಮೇಯಗಳನ್ನು ಸಾಧಿಸುವುದು ಮತ್ತು ಅನ್ವಯಿಸುವುದು
ದತ್ತಾಂಶಗಳನ್ನು ಬಳಸಿ ರೇಖೆಗಳಿಗೆ, ಕೋನಗಳಿಗೆ (60 ಡಿಗ್ರಿ, 90 ಡಿಗ್ರಿ, 45 ಡಿಗ್ರಿ) ಮತ್ತು ತ್ರಿಭುಜಗಳಿಗೆ ಕೋನಾರ್ಧಕಗಳನ್ನು ರಚಿಸುವುದು
2022-23 ಶೈಕ್ಷಣಿಕ ವರ್ಷದಲ್ಲಿ ಗಣಿತ ವಿಷಯದ ಪಠ್ಯಕ್ರಮದ ರಚನೆ ಹೀಗಿದೆ:
ಘಟಕಗಳು
ಘಟಕದ ಹೆಸರು
ಅಂಕಗಳು
I
ಸಂಖ್ಯಾ ಪದ್ಧತಿ
10
II
ಬೀಜಗಣಿತ
20
III
ನಿರ್ದೇಶಾಂಕ ರೇಖಾಗಣಿತ
04
IV
ರೇಖಾಗಣಿತ
27
V
ಕ್ಷೇತ್ರಗಣಿತ
13
VI
ಸಂಖ್ಯಾಶಾಸ್ತ್ರ ಮತ್ತು ಸಂಭವನೀಯತೆ
06
–
ಒಟ್ಟು
80
–
ಆಂತರಿಕ ಮೌಲ್ಯಾಂಕನ
20
–
ಒಟ್ಟು ಮೊತ್ತ
100
ವಿನೂತನ ಕಾರ್ಯಕ್ರಮ ಕಲಿಕಾ ಚೇತರಿಕೆ:
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯುವಲ್ಲಿ ಅಡೆತಡೆಗಳಾಗಿ, ಎರಡು ವರ್ಷಗಳಲ್ಲಿ ಕಲಿಕಾನಷ್ಟವಾಗಿರುತ್ತದೆ. ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯತಂತ್ರಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆಗೆ ಪ್ರಯತ್ನಿಸಿದ್ದಾಗ್ಯೂ ಸಹ ನಿರೀಕ್ಷಿತ ಮಟ್ಟದ ಕಲಿಕೆ ಆಗದಿರುವುದನ್ನು ಹಲವು ಅಧ್ಯಯನಗಳು ತಿಳಿಸಿವೆ. ಈ ಕಲಿಕಾ ಅಂತರವನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತವಾಗಿದೆ.. ಸದರಿ ಕಲಿಕಾ ಅಂತರವನ್ನು ಸರಿಪಡಿಸುವ ನಿಟ್ಟಿನಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಕರ್ನಾಟಕ ಸರ್ಕಾರ ‘ಕಲಿಕಾ ಚೇತರಿಕೆ’ ಎಂಬ ವಿನೂತನ ಉಪಕ್ರಮವನ್ನು 2022-23ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಿದೆ.
9ನೇ ತರಗತಿ ವಿದ್ಯಾರ್ಥಿಗಳು ಗಮನವಿಡಬೇಕಾದ ಅಂಶಗಳು
ಇವುಗಳನ್ನು ಮಾಡಿ:
ಅಭ್ಯರ್ಥಿಗಳು ಪರೀಕ್ಷಾ ದಿನಾಂಕ ಮತ್ತು ಪರೀಕ್ಷೆಗೆ ಸಂಬಂಧಿಸಿರುವ ಇತರ ಮಾಹಿತಿಗಳನ್ನು ತಿಳಿದುಕೊಂಡಿರಬೇಕು.
ಟಾಪಿಕ್‌ಗಳ ಬಗ್ಗೆ ಸಂಪೂರ್ಣ ತಿಳಿವಳಿಕೆಯನ್ನು ಹೊಂದಿರುವುದು ಅವಶ್ಯಕ.
ಪ್ರಾರಂಭದಿಂದಲೂ ಅಧ್ಯಯನಕ್ಕಾಗಿ ಪ್ರತಿದಿನ 6-7 ಗಂಟೆಗಳನ್ನು ಮೀಸಲಾಗಿಡಬೇಕು.
ಪ್ರತಿ ಅಧ್ಯಾಯವನ್ನು ಓದಿ ಮುಗಿಸಿದ ನಂತರ ಪ್ರಶ್ನೆಗಳಿಗೆ ಉತ್ತರಿಸಿ.
ವಿಷಯಗಳ ಪುನರಾವರ್ತನೆಗೆ ಸಾಕಷ್ಟು ಸಮಯ ನೀಡಲು, ಕರ್ನಾಟಕ ರಾಜ್ಯ ಮಂಡಳಿಯ 9ನೇ ತರಗತಿಯ ಪಠ್ಯಕ್ರಮವನ್ನು ಆದಷ್ಟು ಬೇಗ ಅಧ್ಯಯನ ಮಾಡಲು ಪ್ರಯತ್ನಿಸಿ.
ಇವುಗಳನ್ನು ಮಾಡಬೇಡಿ:
ಸಿದ್ಧಾಂತಗಳು ಅಥವಾ ಪರಿಕಲ್ಪನೆಗಳನ್ನು ಕಲಿಯಲು ಕಂಠಪಾಠ ಮಾಡಬೇಡಿ. ಮೊದಲಿಗೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬರೆಯಿರಿ.
ಉರು ಹಚ್ಚುವುದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಾಯ ಮಾಡುವುದಿಲ್ಲ.
ಹೊಸ ವಿಷಯವನ್ನು ಕಲಿಯುವಾಗ, ಶಾರ್ಟ್‌ಕಟ್‌ಗಳನ್ನು ತಪ್ಪಿಸಿ ಮತ್ತು ಬದಲಿಗೆ ಅದನ್ನು ಅರ್ಥಮಾಡಿಕೊಳ್ಳುವ ಮೂಲಕ ಆಳವಾಗಿ ಕಲಿಯಲು ಪ್ರಯತ್ನಿಸಿ.
ಕರ್ನಾಟಕ ರಾಜ್ಯ ಮಂಡಳಿಯ 9ನೇ ತರಗತಿಯ ಶ್ರೇಣಿ ವ್ಯವಸ್ಥೆ
ಶ್ರೇಣಿಗಳ ವ್ಯವಸ್ಥೆಯನ್ನು ಬಳಸಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೌಲ್ಯಾಂಕನ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಮಂಡಳಿಯಿಂದ 9ನೇ ತರಗತಿಗೆ ಅಳವಡಿಸಲಾಗಿರುವ ಶ್ರೇಣಿಗಳ ವ್ಯವಸ್ಥೆಯನ್ನು ಕೆಳಗೆ ನೀಡಲಾಗಿದೆ.
ಅಂಕಗಳ ವ್ಯಾಪ್ತಿ
ಶ್ರೇಣಿ
91 ರಿಂದ 100
A1
81 ರಿಂದ 90
A2
71 ರಿಂದ 80
B1
61 ರಿಂದ 70
B2
51 ರಿಂದ 60
C1
41 ರಿಂದ 50
C2
33 ರಿಂದ 40
D
32 ಮತ್ತು ಮತ್ತು ಅದಕ್ಕಿಂತ ಕಡಿಮೆ
E (ಪುನರಾವರ್ತನೆ ಅಗತ್ಯ)
9ನೇ ತರಗತಿಯ ಪರೀಕ್ಷಾ ಕ್ಯಾಲೆಂಡರ್
ಸಂಖ್ಯೆ.
CCE ಚಟುವಟಿಕೆ
ಮೌಲ್ಯಮಾಪನದ ದಿನಾಂಕ
1
ರೂಪಣಾತ್ಮಕ ಮೌಲ್ಯಾಂಕನ – 1 (FA1)
18/07/2022 ರಿಂದ 20/07/2022ವರೆಗೆ
2
ರೂಪಣಾತ್ಮಕ ಮೌಲ್ಯಾಂಕನ -2 (FA2)
22/09/2022ರಿಂದ 24/09/2022ವರೆಗೆ
3
ರೂಪಣಾತ್ಮಕ ಮೌಲ್ಯಾಂಕನ – 3 (FA3)
26/12/2022 ರಿಂದ 28/12/2022ವರೆಗೆ
4
ರೂಪಣಾತ್ಮಕ ಮೌಲ್ಯಾಂಕನ – 4 (FA4)
047/02/2023 ರಿಂದ 06/02/2023 ವರೆಗೆ
5
ಸಂಕಲನಾತ್ಮಕ ಮೌಲ್ಯಾಂಕನ – (SA1)
17/10/2022 ರಿಂದ 25/10/2022 ವರೆಗೆ
6
ಸಂಕಲನಾತ್ಮಕ ಮೌಲ್ಯಾಂಕನ (SA2)
01-04-2023 ರಿಂದ 05-04-2023
6
ಫಲಿತಾಂಶ ಪ್ರಕಟಣೆ
30/04/2023
9ನೇ ತರಗತಿ ವಿದ್ಯಾರ್ಥಿಗಳು ಪದೇ ಪದೇ ಕೇಳುವ ಪ್ರಶ್ನೆಗಳು (FAQs)
ಪ್ರಶ್ನೆ. 1: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿ ಪಠ್ಯಕ್ರಮವೇನು?
ಉತ್ತರ: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿಯ ಪಠ್ಯಕ್ರಮವು ಮೂರು ಭಾಷೆಗಳನ್ನು ಮತ್ತು ಮೂರು ಪ್ರಮುಖ ವಿಷಯಗಳು- ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ- ಇವುಗಳನ್ನು ಒಳಗೊಂಡಿರುತ್ತದೆ. ನೀವು ಈ ಪಠ್ಯಕ್ರಮವನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.
ಪ್ರಶ್ನೆ. 2: KSEEB ಯ ವಿಸ್ತೃತ ರೂಪವೇನು?
ಉತ್ತರ: KSEEB ಯ ವಿಸ್ತೃತ ರೂಪವು KARNATAKA SECONDARY EDUCATION EXAMINATION BOARD (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ). ಇದು 1966ರಲ್ಲಿ ಸ್ಥಾಪನೆಗೊಂಡಿತು.
ಪ್ರಶ್ನೆ. 3: 9ನೇ ತರಗತಿಗೆ ಎಷ್ಟು ರೂಪಣಾತ್ಮಕ ಮೌಲ್ಯಾಂಕನಗಳನ್ನು ನಡೆಸಲಾಗುತ್ತದೆ?
ಉತ್ತರ: ಕರ್ನಾಟಕ ರಾಜ್ಯ ಮಂಡಳಿಯು 1ರಿಂದ 10ನೇ ತರಗತಿಗಳಿಗೆ CCE ಮಾದರಿಯನ್ನು ಅನುಸರಿಸುತ್ತದೆ . 9ನೇ ತರಗತಿಗೆ ನಾಲ್ಕು ರೂಪಣಾತ್ಮಕ ಮೌಲ್ಯಾಂಕನಗಳನ್ನು ನಡೆಸಲಾಗುತ್ತದೆ.
ಪ್ರಶ್ನೆ. 4: 2022-23 ಶೈಕ್ಷಣಿಕ ವರ್ಷಕ್ಕೆ ಎಷ್ಟು ಸಂಕಲನಾತ್ಮಕ ಮೌಲ್ಯಾಂಕನಗಳನ್ನು ನಡೆಸಲಾಗುತ್ತಿದೆ?
ಉತ್ತರ: ಪ್ರಸಕ್ತ ಶೈಕ್ಷಣಿಕ ವರ್ಷ 2022-23ಕ್ಕೆ, ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಲ್ಕು ರೂಪಣಾತ್ಮಕ (SA) ಮತ್ತು ಎರಡು ಸಂಕಲನಾತ್ಮಕ ಪರೀಕ್ಷೆಯನ್ನು (FA) ನೀಡಲಾಗುತ್ತದೆ.
ಪ್ರಶ್ನೆ. 5: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿಯ ಫಲಿತಾಂಶ ದಿನಾಂಕ ಯಾವಾಗ?
ಉತ್ತರ: 9ನೇ ತರಗತಿಯ ಶೈಕ್ಷಣಿಕ ವರ್ಷದ ಅಂತಿಮ ಫಲಿತಾಂಶವನ್ನು ಏಪ್ರಿಲ್/ಮೇ ತಿಂಗಳಲ್ಲಿ ಪ್ರಕಟಿಸಲು KSEEB ದಿನಾಂಕವನ್ನು ನಿಗದಿಪಡಿಸುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ಪರೀಕ್ಷೆ 2022-2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿಯ ಪ್ರಮುಖ ಟಾಪಿಕ್‌ಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.
ಎಲ್ಲಾ ಲೇಖನಗಳನ್ನು ನೋಡಿ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ಪಠ್ಯಕ್ರಮ 2022-23: ಸಂಕ್ಷಿಪ್ತ ಮಾಹಿತಿ