
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 20226ನೇ ತರಗತಿ ಪಠ್ಯಕ್ರಮ 2022-23: ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಉದ್ದೇಶವಾಗಿರಿಸಿಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯ ಪುಸ್ತಕ ಸಂಘವು ಉತ್ತಮ ಪಠ್ಯಕ್ರಮವನ್ನು ರೂಪಿಸುವ ಮತ್ತು ಪಠ್ಯಪುಸ್ತಕಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದೆ. ಪಠ್ಯಕ್ರಮವು ವಿವಿಧ ಅಂಶಗಳನ್ನು ಒಳಗೊಂಡಿರುವ ವಿಶಾಲ ಪರಿಕಲ್ಪನೆಯಾಗಿದ್ದರಿಂದ, ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅನಿವಾರ್ಯ ಎಂದು ಮನಗಂಡಿರುವ ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ಪಠ್ಯಕ್ರಮವನ್ನು ಪರಿಷ್ಕರಿಸಿ ಜಾರಿಗೊಳಿಸುತ್ತದೆ.
ಕಲಿಕೆ ಮತ್ತು ಶಿಕ್ಷಣದ ಹಂತಗಳಲ್ಲಿ ಮಕ್ಕಳ ಜ್ಞಾನಾತ್ಮಕ ಬೆಳವಣಿಗೆಯನ್ನು ಆಧರಿಸಿ ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ತರಗತಿಗೂ ಪಠ್ಯಕ್ರಮ ಮತ್ತು ಬೋಧನಕ್ರಮಗಳನ್ನು ರೂಪಿಸಲಾಗುತ್ತದೆ. ಶಿಕ್ಷಣದ ಆಧುನಿಕ ಪರಿಕಲ್ಪನೆಯಂತೆ ವಿದ್ಯಾರ್ಥಿಗಳ ಶಿಕ್ಷಣ ಹಂತದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವ ಉದ್ದೇಶದಿಂದಾಗಿ ಶಾಲಾ/ಕಾಲೇಜುಗಳ ಶಿಕ್ಷಣದಲ್ಲಿ ಸೂಕ್ತ ಶೈಕ್ಷಣಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿ ನೀಡಲಾಗುತ್ತಿದೆ. ಈ ಲೇಖನದಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿಯ 6ನೇ ತರಗತಿಯ ವಿಷಯವಾರು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಒದಗಿಸಲಾಗಿದೆ.
ಈ ಕೆಳಗಿನ ಕೋಷ್ಟಕದಲ್ಲಿ 6ನೇ ತರಗತಿಯ ವಿವಿಧ ವಿಷಯಗಳ ಪಠ್ಯಪುಸ್ತಕಗಳ ಲಿಂಕ್‌ಗಳನ್ನು ಪಟ್ಟಿ ಮಾಡಲಾಗಿದೆ.
ಕ್ರಮ ಸಂಖ್ಯೆ | ವಿಷಯ | ಲಿಂಕ್ |
---|---|---|
1. | ಇಂಗ್ಲಿಷ್ 1 | ಪ್ರಥಮ ಭಾಷೆ ಇಂಗ್ಲೀಷ್ |
2. | ಇಂಗ್ಲಿಷ್ 2 | ದ್ವಿತೀಯ ಭಾಷೆ ಇಂಗ್ಲೀಷ್ |
3. | ಇಂಗ್ಲಿಷ್ 3 | ತೃತೀಯ ಭಾಷೆ ಇಂಗ್ಲೀಷ್ |
4. | ಕನ್ನಡ 1 | ಪ್ರಥಮ ಭಾಷೆ ಕನ್ನಡ |
5. | ಕನ್ನಡ 2 | ದ್ವಿತೀಯ ಭಾಷೆ ಕನ್ನಡ |
6. | ಹಿಂದಿ 1 | ಪ್ರಥಮ ಭಾಷೆ ಹಿಂದಿ |
7. | ಹಿಂದಿ 3 | ತೃತೀಯ ಭಾಷೆ ಹಿಂದಿ |
8. | ಸಂಸ್ಕೃತ | ಸಂಸ್ಕೃತ |
9. | ಗಣಿತ ಭಾಗ 1 | ಗಣಿತ ಭಾಗ 1 |
10. | ಗಣಿತ ಭಾಗ 2 | ಗಣಿತ ಭಾಗ 2 |
11. | ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ ಲಿಂಕ್ |
12. | ವಿಜ್ಞಾನ | ವಿಜ್ಞಾನ |
13. | ಸಮಾಜ ವಿಜ್ಞಾನ 1 | ಸಮಾಜ ವಿಜ್ಞಾನ ಭಾಗ 1 |
14. | ಸಮಾಜ ವಿಜ್ಞಾನ 2 | ಸಮಾಜ ವಿಜ್ಞಾನ ಭಾಗ 2 |
ಕರ್ನಾಟಕ ಮಂಡಳಿಯ 6ನೇ ತರಗತಿ ಇಂಗ್ಲಿಷ್ ಪ್ರಥಮ ಭಾಷೆ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಇಂಗ್ಲಿಷ್ ಪ್ರಥಮ ಭಾಷೆ | ||
---|---|---|
ಘಟಕ | ಗದ್ಯ | ಪದ್ಯ |
1 | Dog Finds his Master | March |
2 | The Good Samaritan | Trees |
3 | Galileo | Spring |
4 | Friend in Need | Rain in Summer |
5 | Self-Reliance | Piping Down the Valleys Wild |
6 | True Height | Nature’s Friend |
7 | I Want to Quit the I.C.S. | The Comet and the Moon |
8 | The Gifts of Nature | The Ant and the Cricket |
9 | A Rose for the Princess | An August Midnight |
10 | The Touch | My Heart Leaps Up |
ಪೂರಕ ಓದು | ||
1 | The New Flower |
ಕರ್ನಾಟಕ ಮಂಡಳಿಯ 6ನೇ ತರಗತಿ ಇಂಗ್ಲಿಷ್ ದ್ವಿತೀಯ ಭಾಷೆ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಇಂಗ್ಲಿಷ್ ದ್ವಿತೀಯ ಭಾಷೆ | ||
---|---|---|
ಘಟಕ | ಗದ್ಯ | ಪದ್ಯ |
1 | The Lighthouse | The Rainbow |
2 | The Scholar’s Mother Tongue | Sympathy |
3 | How do Bees Make Honey? | Kindness to Animals |
4 | The King’s Ministers | All Things Bright and Beautiful |
5 | A Chat with a Grasshopper | The Fly |
6 | Where There is a Will, There is a Way | The Way to Succeed |
7 | Neerja Bhanot: Brave in Life, Brave in Death | My People |
8 | What I Want For you and Every Child- A Letter from Obama to His Daughters | A Sonnet for my Incomparable Mother |
ಪೂರಕ ಓದು | ||
1 | Ways of Learning | |
2 | Channapatna Toys | |
3 | Listening Passage |
ಕರ್ನಾಟಕ ಮಂಡಳಿಯ 6ನೇ ತರಗತಿ ಗಣಿತ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಗಣಿತ ಭಾಗ 1 | |
---|---|
ಅಧ್ಯಾಯದ ಸಂಖ್ಯೆ | ಅಧ್ಯಾಯದ ಹೆಸರು |
ಅಧ್ಯಾಯ 1 | ಸಂಖ್ಯೆಗಳನ್ನು ತಿಳಿಯುವುದು |
ಅಧ್ಯಾಯ 2 | ಪೂರ್ಣ ಸಂಖ್ಯೆಗಳು |
ಅಧ್ಯಾಯ 3 | ಸಂಖ್ಯೆಗಳೊಂದಿಗೆ ಆಟ |
ಅಧ್ಯಾಯ 4 | ರೇಖಾಗಣಿತ ಮೂಲಭೂತ ಅಂಶಗಳು |
ಅಧ್ಯಾಯ 5 | ಪ್ರಾಥಮಿಕ ಆಕೃತಿಗಳ ತಿಳುವಳಿಕೆ |
ಅಧ್ಯಾಯ 6 | ಪೂರ್ಣಾಂಕಗಳು |
ಗಣಿತ ಭಾಗ 2 | |
ಅಧ್ಯಾಯ 7 | ಭಿನ್ನರಾಶಿಗಳು |
ಅಧ್ಯಾಯ 8 | ದಶಮಾಂಶಗಳು |
ಅಧ್ಯಾಯ 9 | ಅಂಕಿಅಂಶಗಳ (ದತ್ತಾಂಶಗಳ) ನಿರ್ವಹಣೆ |
ಅಧ್ಯಾಯ 10 | ಕ್ಷೇತ್ರ ಗಣಿತ |
ಅಧ್ಯಾಯ 11 | ಬೀಜಗಣಿತ |
ಅಧ್ಯಾಯ 12 | ಅನುಪಾತ ಮತ್ತು ಸಮಾನುಪಾತ |
ಅಧ್ಯಾಯ 13 | ಸಮಮಿತಿ |
ಅಧ್ಯಾಯ 14 | ಪ್ರಾಯೋಗಿಕ ರೇಖಾಗಣಿತ |
ಕರ್ನಾಟಕ ಮಂಡಳಿಯ 6ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ವಿಜ್ಞಾನ | |
---|---|
ಅಧ್ಯಾಯದ ಸಂಖ್ಯೆ | ಅಧ್ಯಾಯದ ಹೆಸರು |
ಅಧ್ಯಾಯ 1 | ಆಹಾರ: ಇದು ಎಲ್ಲಿಂದ ದೊರಕುತ್ತದೆ? |
ಅಧ್ಯಾಯ 2 | ಆಹಾರದ ಘಟಕಗಳು |
ಅಧ್ಯಾಯ 3 | ಎಳೆಯಿಂದ ಬಟ್ಟೆ |
ಅಧ್ಯಾಯ 4 | ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು |
ಅಧ್ಯಾಯ 5 | ಪದಾರ್ಥಗಳನ್ನು ಬೇರ್ಪಡಿಸುವಿಕೆ |
ಅಧ್ಯಾಯ 6 | ನಮ್ಮ ಸುತ್ತಲಿನ ಬದಲಾವಣೆಗಳು |
ಅಧ್ಯಾಯ 7 | |
ಅಧ್ಯಾಯ 8 | ದೇಹದ ಚಲನೆಗಳು |
ಅಧ್ಯಾಯ 9 | ಜೀವಿಗಳು-ಅವುಗಳ ಲಕ್ಷಣಗಳು ಮತ್ತು ಆವಾಸಗಳು |
ಅಧ್ಯಾಯ 10 | ಚಲನೆ ಮತ್ತು ದೂರಗಳ ಅಳತೆ |
ಅಧ್ಯಾಯ 11 | ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು |
ಅಧ್ಯಾಯ 12 | ವಿದ್ಯುಚ್ಛಕ್ತಿ ಮತ್ತು ಮಂಡಲಗಳು |
ಅಧ್ಯಾಯ 13 | ಕಾಂತಗಳೊಂದಿಗೆ ಆಟ |
ಅಧ್ಯಾಯ 14 | ನೀರು |
ಅಧ್ಯಾಯ 15 | ನಮ್ಮ ಸುತ್ತಲ ಗಾಳಿ |
ಅಧ್ಯಾಯ 16 | ಒಳಬರುವ ಕಸ, ಹೊರ ಹೋಗುವ ಕಸ |
ಕರ್ನಾಟಕ ಮಂಡಳಿಯ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಸಮಾಜ ವಿಜ್ಞಾನ ಭಾಗ 1 ಇತಿಹಾಸ |
|
---|---|
ಕ್ರಮ ಸಂಖ್ಯೆ | ಅಧ್ಯಾಯದ ಹೆಸರು |
1 | ಭಾರತ – ನಮ್ಮ ಹೆಮ್ಮೆ |
2 | ನಮ್ಮ ಹೆಮ್ಮೆಯ ರಾಜ್ಯ – ಕರ್ನಾಟಕ |
3 | ಮೌರ್ಯರು ಮತ್ತು ಕುಷಾಣರು |
4 | ಗುಪ್ತರು ಮತ್ತು ವರ್ಧನರು |
5 | ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು |
ಪೌರನೀತಿ | |
1 | ಪೌರ ಮತ್ತು ಪೌರತ್ವ |
2 | ಪ್ರಜಾಪ್ರಭುತ್ವ |
3 | ಸ್ಥಳೀಯ ಆಡಳಿತ |
4 | ನಮ್ಮ ಸಂವಿಧಾನ |
ಭೂಗೋಳ ವಿಜ್ಞಾನ | |
1 | ಗ್ಲೋಬ್ ಮತ್ತು ನಕಾಶೆಗಳು |
2 | ಭೂಮಿಯ ಸ್ವರೂಪ |
ಸಮಾಜ ವಿಜ್ಞಾನ ಭಾಗ 2 ಇತಿಹಾಸ |
|
---|---|
ಕ್ರಮ ಸಂಖ್ಯೆ | ಅಧ್ಯಾಯದ ಹೆಸರು |
01 | ಉತ್ತರ ಭಾರತದ ಕೆಲವು ರಾಜವಂಶಗಳು |
02 | ದಿಲ್ಲಿ ಸುಲ್ತಾನರು |
03 | ಭಾರತೀಯ ವೈಚಾರಿಕತೆ ಹಾಗೂ ಭಕ್ತಿಪಂಥ |
04 | ವಿಜಯನಗರ ಸಾಮ್ರಾಜ್ಯ ಹಾಗೂ ಬಹುಮನಿ ರಾಜ್ಯ |
05 | ಮೊಘಲರು ಹಾಗೂ ಮರಾಠರು |
ಪೌರನೀತಿ | |
06 | ರಾಜ್ಯ ನಿರ್ದೇಶಕ ತತ್ವಗಳು |
07 | ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು |
08 | ರಾಷ್ಟ್ರೀಯ ಭಾವೈಕ್ಯ |
09 | ರಾಷ್ಟ್ರೀಯ ಚಿಹ್ನೆಗಳು |
ಭೂಗೋಳ ವಿಜ್ಞಾನ | |
10 | ಏಷ್ಯಾ |
11 | ಯೂರೋಪ್ |
12 | ಆಫ್ರಿಕ |
ಕರ್ನಾಟಕ ಮಂಡಳಿಯ 6ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪ್ರಕಾರ, ಪಠ್ಯಕ್ರಮವು ಈ ಕೆಳಗಿನ ಅಧ್ಯಾಯಗಳನ್ನು ಒಳಗೊಂಡಿದೆ:
ಕರ್ನಾಟಕ ಮಂಡಳಿ 6ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಕ್ರಮ | ||
---|---|---|
ಕ್ರ.ಸಂ | ಗದ್ಯಭಾಗ | ಕೃತಿಕಾರರ ಹೆಸರು |
1 | ದೊಡ್ಡವರ ದಾರಿ | ಬೆ.ಗೋ. ರಮೇಶ್ |
2 | ಗಂಧರ್ವಸೇನ! | ಸಮಿತಿ ರಚನೆ |
3 | ಕೃಷ್ಣ – ಸುಧಾಮ (ನಾಟಕ) | ವಿ.ಎಸ್. ಶಿರಹಟ್ಟಿಮಠ |
4 | ಡಾ. ರಾಜಕುಮಾರ್ | ದೊಡ್ಡಹುಲ್ಲೂರು ರುಕ್ಕೋಜಿರಾವ್ |
5 | ಧನ್ಯವಾದ ಹೇಳಿದ ಕೊಕ್ಕರೆ | ಡಾ. ಅನುಪಮಾ ನಿರಂಜನ |
6 | ಸಿದ್ಧಾರೂಢರ ಜಾತ್ರೆ | ಸಮಿತಿ ರಚನೆ |
7 | ಯಾಣ ಕುರಿತೊಂದು ಪತ್ರ | ಸಮಿತಿ ರಚನೆ |
8 | ಕರ್ನಾಟಕ ಏಕೀಕರಣ | ಸಮಿತಿ ರಚನೆ |
ಪದ್ಯಭಾಗ | ||
1 | ಬೇಸಿಗೆ | ಬಿ. ಆರ್. ಲಕ್ಷ್ಮಣರಾವ್ |
2 | ಮಂಗಳ ಗ್ರಹದಲ್ಲಿ ಪುಟ್ಟಿ | ಸಿ.ಎಂ. ಗೋವಿಂದರೆಡ್ಡಿ |
3 | ನಮ್ಮದೇನಿದೆ? | ನಿರ್ಮಲಾ ಸುರತ್ಕಲ್ |
4 | ಕಂಬಳಿಹುಳು ಮತ್ತು ಚಿಟ್ಟೆ | ಎನ್. ಶ್ರೀನಿವಾಸ ಉಡುಪ |
5 | ಹೊಸಬಾಳು | ಬಿ.ಎಸ್. ಕುರ್ಕಾಲ್ |
6 | ಗಂಗವ್ವ ತಾಯಿ | ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ |
7 | ಹೃದಯ ವಚನಗಳು | ಅಮೃತ ಸೋಮೇಶ್ವರ |
8 | ಕಿತ್ತೂರ ಕೇಸರಿ | ಪ.ಗು. ಸಿದ್ಧಾಪುರ |
ಪೂರಕ ಪಾಠಗಳು | ||
1 | ನಾಟ್ಯಕಲಾ ದುರಂಧರ ಮಹಮ್ಮದ್ ಪೀರ್ | ಸಮಿತಿ ರಚನೆ |
2 | ಅವ್ವ | ಲಲಿತಾ. ಕೆ. ಹೊಸಪ್ಯಾಟಿ |
3 | ಗಾಢ ಕತ್ತಲು ಮತ್ತು ಗುಮ್ಮಗಳು | ವಿಜಯಶ್ರೀ ಹಾಲಾಡಿ |
4 | ಹುಚ್ಚು ಹುರುಳು | ಬೀಚಿ |
5 | ಇರುವೆಯ ಪಯಣ | ಡಾ. ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ |
ವಿಜ್ಞಾನದಲ್ಲಿ, ವಿದ್ಯಾರ್ಥಿಗಳು ಈ ಕೆಳಗಿನ ಪ್ರಯೋಗಗಳು ಮತ್ತು ಮಾದರಿಗಳನ್ನು ಮಾಡಬಹುದು:
ಅಧ್ಯಾಯ | ಪ್ರಯೋಗಗಳು |
---|---|
ಆಹಾರ: ಇದು ಎಲ್ಲಿಂದ ದೊರಕುತ್ತದೆ? | ವಿದ್ಯಾರ್ಥಿಗಳು ಉದ್ದು, ಕಡಲೆ ಇತ್ಯಾದಿ ಬೀಜಗಳ ಮೊಳಕೆಯೊಡೆಯುವ ಪ್ರಯೋಗವನ್ನು ಮಾಡಬಹುದು. ಭಾರತದ ವಿವಿಧ ಪ್ರದೇಶಗಳ ಪ್ರಾಣಿಗಳ ಆಹಾರ ಪದ್ಧತಿ ಮತ್ತು ಆಹಾರ ಸಂಸ್ಕೃತಿಯ ಪಟ್ಟಿಯನ್ನು ಸಿದ್ಧಪಡಿಸುವುದು. |
ಆಹಾರದ ಘಟಕಗಳು | ಭಾರತದ ವಿವಿಧ ಪ್ರದೇಶಗಳ ಆಹಾರದ ವೈವಿಧ್ಯತೆಯನ್ನು ಅಧ್ಯಯನ ಮಾಡುವುದು. ದೇಶದ ವಿವಿಧ ಭಾಗಗಳ ಆಹಾರ ವೈವಿಧ್ಯತೆಯ ಸಮತೋಲಿತ ಆಹಾರದ ಮೆನುವನ್ನು ಸಿದ್ಧಪಡಿಸುವುದು. ಆಹಾರ ಘಟಕಗಳ ಆಧಾರದಿಂದ ಆಹಾರವನ್ನು ವರ್ಗೀಕರಿಸುವುದು. ಪಿಷ್ಟ, ಸಕ್ಕರೆ, ಪ್ರೋಟೀನ್ ಮತ್ತು ಕೊಬ್ಬಿನ ಇರುವಿಕೆಯ ಟೆಸ್ಟ್ ಮಾಡುವುದು. |
ಎಳೆಯಿಂದ ಬಟ್ಟೆ | ವಿವಿಧ ರೀತಿಯ ಬಟ್ಟೆಗಳನ್ನು ವಿಂಗಡಿಸಲು ಸರಳವಾದ ಚಟುವಟಿಕೆಗಳನ್ನು ಮಾಡಬಹುದು. ಸ್ಥಳೀಯವಾಗಿ ಲಭ್ಯವಿರುವ ಸಸ್ಯದ ನಾರುಗಳ (ತೆಂಗಿನಕಾಯಿ, ರೇಷ್ಮೆ ಹತ್ತಿ, ಇತ್ಯಾದಿ) ಮಾಹಿತಿಯನ್ನು ಸಂಗ್ರಹಿಸಲು ಕ್ಷೇತ್ರ ಸಮೀಕ್ಷೆ. |
ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು | ವಸ್ತುಗಳ ಗುಣಗಳ ಆಧಾರದ ಮೇಲೆ ಅವುಗಳನ್ನು ಗುಂಪು ಮಾಡುವ ಪ್ರಯೋಗವನ್ನು ಮಾಡಬಹುದು. ಉದಾ: ಒರಟುತನ, ಹೊಳಪು, ಪಾರದರ್ಶಕತೆ, ಕರಗುವಿಕೆ, ಮುಳುಗುವಿಕೆ / ತೇಲುವಿಕೆ (ಪೂರ್ವ ಜ್ಞಾನವನ್ನು ಬಳಸಿಕೊಂಡು). ಸುಡುವಿಕೆ, ಹಿಗ್ಗುವಿಕೆ ಅಥವಾ ಸಂಕೋಚನ, ಸ್ಥಿತಿಯ ಬದಲಾವಣೆಯಂತಹ ಪರಿಣಾಮಗಳನ್ನು ಹೈಲೈಟ್ ಮಾಡಲು ಗಾಳಿ, ಮೇಣ, ಕಾಗದ, ಲೋಹ, ನೀರನ್ನು ಬಿಸಿ ಮಾಡುವ ಪ್ರಯೋಗಗಳು. ಸಾಮಾನ್ಯವಾಗಿ ಲಭ್ಯವಿರುವ ದ್ರವ್ಯಗಳ ಕರಗುವಿಕೆಯನ್ನು ಪರೀಕ್ಷಿಸುವ ಪ್ರಯೋಗಗಳು. ಕರಗುವಿಕೆಯ ಆಧಾರದ ಮೇಲೆ ತಾಪ ಮತ್ತು ತಂಪಾಗಿಸುವಿಕೆಯ ಪರಿಣಾಮದ ಪ್ರಯೋಗಗಳು. ಪ್ರಮಾಣಿತವಲ್ಲದ ಘಟಕಗಳನ್ನು (ಉದಾ. ಚಮಚ, ಕಾಗದದ ಕೋನ್) ಬಳಸಿಕೊಂಡು ವಿವಿಧ ಪದಾರ್ಥಗಳ ಕರಗುವಿಕೆಗಳ ಹೋಲಿಕೆ. |
ಪದಾರ್ಥಗಳನ್ನು ಬೇರ್ಪಡಿಸುವಿಕೆ | ಬಸಿಯುವಿಕೆ, ಸೋಸುವಿಕೆ ಮೇಲೆ ಪ್ರಯೋಗಗಳನ್ನು ನಡೆಸಬಹುದು. ಉಪ್ಪು ಮತ್ತು ಮರಳಿನ ಮಿಶ್ರಣವನ್ನು ಬೇರ್ಪಡಿಸುವುದು. |
ನಮ್ಮ ಸುತ್ತಲಿನ ಬದಲಾವಣೆಗಳು | ವಸ್ತುಗಳನ್ನು ಮರಳಿ ನೈಜ ಸ್ಥಿತಿಗೆ ತರಲಾಗದ ಬದಲಾವಣೆಗಳ ಚರ್ಚೆ- ಬೆಳೆಯುವುದು, ಮೊಗ್ಗು ಹಣ್ಣಾಗುವ ಪ್ರಕ್ರಿಯೆ, ಹಾಲು ಮೊಸರು ಮಾಡುವುದು. |
ಸಸ್ಯಗಳನ್ನು ತಿಳಿಯುವುದು | ಕಾಂಡದಿಂದ ವಹನವನ್ನು ತೋರಿಸಲು ಪ್ರಯೋಗ, ಬೇರುಗಳಿಂದ ಆಧಾರವನ್ನು ತೋರಿಸಲು ಚಟುವಟಿಕೆ, ಬೇರುಗಳಿಂದ ನೀರು ಮತ್ತು ಲವಣಗಳನ್ನು ಹೀರಿಕೊಳ್ಳುವಿಕೆ. ಯಾವುದೇ ಹೂವಿನ ಅಧ್ಯಯನ, ಭಾಗಗಳ ಸಂಖ್ಯೆಯನ್ನು ಎಣಿಸುವುದು, ಭಾಗಗಳ ಹೆಸರುಗಳು, ಅಂಡಾಣುಗಳನ್ನು ವೀಕ್ಷಿಸಲು ಅಂಡಾಶಯದ ವಿಭಾಗಗಳನ್ನು ಕತ್ತರಿಸುವುದು. |
ದೇಹದ ಚಲನೆಗಳು | X- ಕಿರಣಗಳನ್ನು ಅಧ್ಯಯನ ಮಾಡುವ ಚಟುವಟಿಕೆಗಳು, ಕೀಲುಗಳು ಯಾವ ದಿಕ್ಕಿನಲ್ಲಿ ಬಾಗುತ್ತವೆ, ಪಕ್ಕೆಲುಬುಗಳು, ಬೆನ್ನೆಲುಬು ಇತ್ಯಾದಿಗಳ ಚಲನೆಯನ್ನು ಅನುಭವಿಸುವುದು. ಇತರ ಪ್ರಾಣಿಗಳಲ್ಲಿನ ಚಲನೆ ಮತ್ತು ಅಸ್ಥಿಪಂಜರದ ವ್ಯವಸ್ಥೆಯ ವೀಕ್ಷಣೆ/ಚರ್ಚೆ. |
ಜೀವಿಗಳು-ಅವುಗಳ ಲಕ್ಷಣಗಳು ಮತ್ತು ಆವಾಸಗಳು | ವಿವಿಧ ಎಲೆಗಳು, ಶುಷ್ಕ ಸಸ್ಯಗಳ ಮಾದರಿಗಳನ್ನು ಸಿದ್ಧಪಡಿಸುವುದು; ಸಸ್ಯಗಳು ಮತ್ತು ಪ್ರಾಣಿಗಳಲ್ಲಿನ ಮಾರ್ಪಾಡುಗಳನ್ನು ಅಧ್ಯಯನ ಮಾಡುವುದು; ವಿವಿಧ ಪರಿಸರ ಅಂಶಗಳು (ನೀರಿನ ಲಭ್ಯತೆ, ತಾಪಮಾನ) ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಗಮನಿಸುವುದು; |
ಚಲನೆ ಮತ್ತು ದೂರಗಳ ಅಳತೆ | ಉದ್ದ ಮತ್ತು ದೂರವನ್ನು ಅಳೆಯುವುದು. ವಿವಿಧ ರೀತಿಯ ಚಲನೆಗಳ ಗುರುತಿಸುವಿಕೆ ಮತ್ತು ಅವುಗಳ ವ್ಯತ್ಯಾಸ. ಒಂದಕ್ಕಿಂತ ಹೆಚ್ಚು ರೀತಿಯ ಚಲನೆಯನ್ನು ಹೊಂದಿರುವ ವಸ್ತುಗಳನ್ನು ಪ್ರದರ್ಶಿಸುವುದು (ಸ್ಕ್ರೂ ಚಲನೆ, ಬೈಸಿಕಲ್ ಚಕ್ರ, ಫ್ಯಾನ್, ಬುಗರಿ ಇತ್ಯಾದಿ) |
ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು | ಕೆಲವು ವಸ್ತುಗಳು (ವಾಹಕಗಳು) ವಿದ್ಯುತ್ ಹರಿಯಲು ಅನುವು ಮಾಡುವುದು ಮತ್ತು ಕೆಲವು (ನಿರೋಧಕಗಳು) ವಿದ್ಯುತ್ ಹರಿವನ್ನು ಅನುವುಮಾಡುವುದಿಲ್ಲ ಎಂದು ತೋರಿಸಲು ಪ್ರಯೋಗ. ಸೂರ್ಯನ ಬೆಳಕಿನಲ್ಲಿ, ಮೇಣದಬತ್ತಿ ಮತ್ತು ಹಗಲಿನ ಬೆಳಕಿನಲ್ಲಿ ಕೈಗಳಿಂದ ನೆರಳನ್ನು ರೂಪಿಸಿ ಆಡುವುದು. ಸೂಜಿ ರಂಧ್ರ ಕ್ಯಾಮೆರಾವನ್ನು ಮಾಡುವುದು ಮತ್ತು ಸ್ಥಿರ ಮತ್ತು ಚಲಿಸುವ ವಸ್ತುಗಳನ್ನು ವೀಕ್ಷಿಸುವ ಪ್ರಯೋಗ. |
ವಿದ್ಯುಚ್ಛಕ್ತಿ ಮತ್ತು ಮಂಡಲಗಳು | ವಿದ್ಯುತ್ ಪ್ರವಾಹವನ್ನು ತೋರಿಸಲು ಮತ್ತು ಮುಚ್ಚಿದ ಮತ್ತು ತೆರೆದ ಮಂಡಲಗಳನ್ನು ಗುರುತಿಸಲು ಬಲ್ಬ್, ವಿದ್ಯುತ್ ಕೋಶ, ಕೀ ಮತ್ತು ಸಂಪರ್ಕಿಸುವ ತಂತಿಯನ್ನು ಬಳಸುವ ಚಟುವಟಿಕೆ. ಸ್ವಿಚ್ ಮಾಡುವುದು. ಒಣ ವಿದ್ಯುತ್ ಕೋಶವನ್ನು ಬಿಚ್ಚಿ ನೋಡುವುದು. |
ಕಾಂತಗಳೊಂದಿಗೆ ಆಟ | ಕಾಂತವು ವಸ್ತುಗಳನ್ನು ಹೇಗೆ ಆಕರ್ಷಿಸುತ್ತದೆ ಎಂಬುದನ್ನು ಪ್ರದರ್ಶಿಸುವುದು. ಕಾಂತದ ಧ್ರುವಗಳನ್ನು ಪತ್ತೆಹಚ್ಚುವ ಚಟುವಟಿಕೆ; ಕಬ್ಬಿಣದ ರಜಗಳು ಮತ್ತು ಕಾಗದದೊಂದಿಗೆ ಚಟುವಟಿಕೆ. ಸ್ವತಂತ್ರವಾಗಿ ತೂಗುಬಿಟ್ಟ ದಂಡ ಕಾಂತ ಮತ್ತು ದಿಕ್ಸೂಚಿ ಸೂಜಿಯೊಂದಿಗೆ ಚಟುವಟಿಕೆಗಳು. ಧ್ರುವಗಳು ಹಿಮ್ಮೆಟ್ಟುವಂತೆ ಮತ್ತು ಭಿನ್ನವಾಗಿರುವ ಧ್ರುವಗಳು ಆಕರ್ಷಿಸುತ್ತವೆ ಎಂದು ತೋರಿಸಲು ಚಟುವಟಿಕೆಗಳು. |
ನೀರು | ತಣ್ಣೀರು ಹೊಂದಿರುವ ಗಾಜಿನ ಹೊರಭಾಗದಲ್ಲಿ ಸಾಂದ್ರೀಕರಣ; ಕುದಿಯುವ ನೀರಿನ ಚಟುವಟಿಕೆ ಮತ್ತು ಚಮಚದ ಮೇಲೆ ಆವಿಯ ಸಾಂದ್ರೀಕರಣ. ನೀರಿನ ಚಕ್ರದ ಸರಳ ಮಾದರಿಯನ್ನು ಸಿದ್ಧಪಡಿಸುವುದು. ಒಂದು ಕುಟುಂಬವು ಒಂದು ದಿನ, ಒಂದು ತಿಂಗಳು, ಒಂದು ವರ್ಷದಲ್ಲಿ ಬಳಸುವ ನೀರಿನ ಅಂದಾಜು. |
ನಮ್ಮ ಸುತ್ತಲ ಗಾಳಿ | ಗಾಳಿಯ ವಿವಿಧ ಘಟಕಗಳ ಬಗ್ಗೆ ಚರ್ಚೆಗಳನ್ನು ನಡೆಸಬಹುದು. |
ಒಳಬರುವ ಕಸ, ಹೊರ ಹೋಗುವ ಕಸ | ವಸ್ತುಗಳು ಮಣ್ಣಿನಲ್ಲಿ ಕೊಳೆಯುತ್ತವೆ ಎಂದು ತೋರಿಸುವ ಚಟುವಟಿಕೆ, ಇದು ಪ್ಲಾಸ್ಟಿಕ್‌ನಿಂದ ವಸ್ತುವನ್ನು ಮುಚ್ಚಿದಾಗ ಆಗುವ ಪರಿಣಾಮವನ್ನು ನೋಡುವುದು. ಮನೆಗಳಿಂದ ಘನ ತ್ಯಾಜ್ಯ ಉತ್ಪಾದನೆಯ ಸಮೀಕ್ಷೆ ಒಂದು ದಿನದಲ್ಲಿ, ಒಂದು ವರ್ಷದಲ್ಲಿ (ಮನೆ/ಗ್ರಾಮ/ವಸತಿ ಪ್ರದೇಶ ಇತ್ಯಾದಿ) ಸಂಗ್ರಹವಾದ ತ್ಯಾಜ್ಯದ ಅಂದಾಜು. |
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 6ನೇ ತರಗತಿಯ ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪಠ್ಯ ಪುಸ್ತಕ ಸಂಘದ ಈ ಅಧಿಕೃತ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ
ಹಂತ 1: ಕರ್ನಾಟಕ ಪಠ್ಯ ಪುಸ್ತಕ ಸಂಘದ ಲಿಂಕ್‌ಗೆ ಭೇಟಿ ನೀಡಿ.
ಹಂತ 2: ನಂತರ ತರಗತಿ, ವಿಷಯ ಮತ್ತು ಪಠ್ಯಪುಸ್ತಕದ ಮಾಧ್ಯಮವನ್ನು ಆಯ್ಕೆ ಮಾಡಿ.
ಹಂತ 3: ಬಳಿಕ full text download ಎಂಬ ಆಯ್ಕೆಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 4: full text download ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಪಠ್ಯ ಪುಸ್ತಕದ ಪಿಡಿಎಫ್ ತೆರೆದುಕೊಳ್ಳುತ್ತದೆ.
ಹಂತ 5: ಪಠ್ಯಪುಸ್ತಕವನ್ನು ಸೇವ್ ಅಥವಾ ಡೌನ್‌ಲೋಡ್ ಮಾಡಿಕೊಳ್ಳಲು ಪಿಡಿಎಫ್‌ನ ಎಡ ಭಾಗದಲ್ಲಿರುವ ಡೌನ್‌ಲೋಡ್ ಸಂಕೇತವನ್ನು ಆಯ್ಕೆ ಮಾಡಿ, ಸೇವ್ ಮಾಡಿಕೊಳ್ಳಿ.
ಕರ್ನಾಟಕ ಪಠ್ಯಪುಸ್ತಕ ಸಂಘವು 01.04.2006 ರಂದು ಸ್ಥಾಪನೆಯಾಯಿತು. ಈ ಸಂಘವು ಸರ್ಕಾರ ಅನುಮೋದಿಸಿದ ಶಾಲಾ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಒಂದು ಅಂಗ ಸಂಸ್ಥೆಯಾಗಿದೆ.
ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನುಕೂಲವಾಗಿದೆ. ಕರ್ನಾಟಕದಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿಗಳ ಸುಮಾರು 100 ಲಕ್ಷ ಮಕ್ಕಳಿಗೆ ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯನ್ನು ಈ ಸಂಘವು ನಿರ್ವಹಿಸುತ್ತಿದೆ.
ಪ್ರ. 1: ಕರ್ನಾಟಕ ರಾಜ್ಯ ಮಂಡಳಿಯ 6ನೇ ತರಗತಿಯ ಪಠ್ಯಪುಸ್ತಕವನ್ನು ಎಲ್ಲಿ ಪಡೆಯಬಹುದು?
ಉತ್ತರ: ಸಾಮಾನ್ಯವಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಯಾ ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗಿತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳು ಆನ್‌ಲೈನ್‌ನಲ್ಲಿ ಕೂಡ ಲಭ್ಯವಿದ್ದು, ವಿದ್ಯಾರ್ಥಿಗಳು ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಪ್ರ. 2: ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ ಇತರ ತರಗತಿಗಳ ಪಠ್ಯ ಪುಸ್ತಕಗಳೂ ಲಭ್ಯವಿವೆಯೇ?
ಉತ್ತರ: ಹೌದು. ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ 1 ರಿಂದ 10ನೇ ತರಗತಿಯವರೆಗಿನ ಇಂಗ್ಲೀಷ್ ಮತ್ತು ಕನ್ನಡ, ಎರಡೂ ಮಾಧ್ಯಮಗಳ ಪಠ್ಯಪುಸ್ತಕಗಳು ಕರ್ನಾಟಕ ಪಠ್ಯ ಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರ. 3: ಕರ್ನಾಟಕ ಶಿಕ್ಷಣ ಇಲಾಖೆಯು ಪ್ರತಿ ವರ್ಷವೂ ಪಠ್ಯವಸ್ತುಗಳನ್ನು ಪರಿಷ್ಕರಣೆಗೆ ಒಳಪಡಿಸುತ್ತದೆಯೇ?
ಉತ್ತರ: ಇಲ್ಲ. ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅನಿವಾರ್ಯವಾಗಿದೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾಬಿವೃದ್ಧಿಗೆ ಬುನಾದಿಯಾಗಿರುವುದರಿಂದ ಪಠ್ಯಕ್ರಮವನ್ನೂ ಸಹ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.
ಪ್ರ: 4: ಕರ್ನಾಟಕ ರಾಜ್ಯ 6ನೇ ತರಗತಿಯಲ್ಲಿ ಎಷ್ಟು ವಿಷಯಗಳಿವೆ?
ಉತ್ತರ: ಪಠ್ಯಕ್ರಮದ ಪ್ರಕಾರ, 6ನೇ ತರಗತಿಯು ಆರು ವಿಷಯಗಳನ್ನು ಹೊಂದಿದೆ, ಅದರಲ್ಲಿ ಮೂರು ಭಾಷಾ ವಿಷಯಗಳು ಮತ್ತು ಮೂರು ಕಡ್ಡಾಯ ಶೈಕ್ಷಣಿಕ ವಿಷಯಗಳಾಗಿವೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಇತರ ಭಾಷೆಯ ವಿಷಯವನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಮೂರು ಕಡ್ಡಾಯ ಶೈಕ್ಷಣಿಕ ವಿಷಯಗಳೆಂದರೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ.
ಪ್ರ. 5: ಪರೀಕ್ಷೆಯಲ್ಲಿ ಕರ್ನಾಟಕ 6ನೇ ತರಗತಿ ಪಠ್ಯಕ್ರಮವನ್ನು ಹೊರತುಪಡಿಸಿ ಪ್ರಶ್ನೆಗಳನ್ನು ಕೇಳಲಾಗುತ್ತದೆಯೇ?
ಉತ್ತರ: ಇಲ್ಲ, 6ನೇ ತರಗತಿಗೆ ನಿಗದಿಪಡಿಸಿದ ಪಠ್ಯಕ್ರಮದಿಂದಲೇ ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 6ನೇ ತರಗತಿ 2022-2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 6ನೇ ತರಗತಿ ಪಠ್ಯಕ್ರಮ 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.