
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿಯ ಪ್ರಮುಖ ಟಾಪಿಕ್ಗಳು
August 19, 20229ನೇ ತರಗತಿಯ ಪರೀಕ್ಷಾ ಮಾದರಿ: ಶಿಕ್ಷಣದ ಗುರಿ ಮಕ್ಕಳ ಪರಿಣಾಮಕಾರಿ ಬೆಳವಣಿಗೆಗೆ ಸಹಾಯ ಮಾಡುವುದು. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಪ್ರೌಢ ತರಗತಿಗಳಿಗೆ CCE (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ವಿನ್ಯಾಸವನ್ನು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಅಭಿವೃದ್ಧಿಪಡಿಸಿದೆ. ಇದನ್ನು 2009ರ ಶಿಕ್ಷಣ ಹಕ್ಕು ಕಾಯ್ದೆಯ ಭಾಗವಾಗಿ 6 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯೊಂದಿಗೆ ಜಾರಿಗೊಳಿಸಲಾಗಿದೆ. ನಿರಂತರ ಎಂದರೆ ಪ್ರತಿದಿನ, ತರಗತಿಯಲ್ಲಿ ಮತ್ತು ತರಗತಿಯ ನಂತರವೂ ಮೌಲ್ಯಮಾಪನ ಮಾಡಬೇಕು ಎಂಬುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿಯಮಿತವಾಗಿ ವಿಶ್ಲೇಷಣೆ ಮಾಡಬಹುದು. “ವ್ಯಾಪಕ” ಪದವು ಅರಿವಿನ, ಭಾವನಾತ್ಮಕ ಮತ್ತು ಕ್ರಿಯಾತ್ಮಕ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೌಲ್ಯಮಾಪನದ ವ್ಯಾಪ್ತಿಯನ್ನು ಸೂಚಿಸುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ವಿದ್ಯಾರ್ಥಿಗಳಿಗೂ ಸಹ CCE ಮಾದರಿಯು ಅನ್ವಯವಾಗುತ್ತದೆ. ಈ ಲೇಖನದಲ್ಲಿ 9ನೇ ತರಗತಿಯ ಪರೀಕ್ಷಾ ಮಾದರಿಯ ವಿವರವಾಗಿ ತಿಳಿದುಕೊಳ್ಳೋಣ.
CCE ಮಾದರಿಯು ಎರಡು ರೀತಿಯ ಪರೀಕ್ಷೆಗಳನ್ನು ಹೊಂದಿದೆ: ರೂಪಣಾತ್ಮಕ ಮತ್ತು ಸಂಕಲನಾತ್ಮಕ. ರೂಪಣಾತ್ಮಕ ಟೆಸ್ಟ್‌ಗಳಲ್ಲಿ ವಿದ್ಯಾರ್ಥಿಯ ತರಗತಿಯಲ್ಲಿನ ಪ್ರದರ್ಶನ, ಕ್ಲಾಸ್‌ವರ್ಕ್, ಹೋಮ್‌ವರ್ಕ್, ನಿಗದಿತ ಸಮಯದಲ್ಲಿ ಪ್ರಾಜೆಕ್ಟ್ ಸಲ್ಲಿಕೆ ಮತ್ತು ತರಗತಿಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಸೇರಿವೆ.
ಸಂಕಲನಾತ್ಮಕ ಟೆಸ್ಟ್‌ಗಳಲ್ಲಿ, ವಿದ್ಯಾರ್ಥಿಯ ಬುದ್ಧಿಶಕ್ತಿಯ ತಿಳಿವಳಿಕೆಯನ್ನು ನಿರ್ಣಯಿಸಲು ಮೂರು ಗಂಟೆಗಳ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ರೂಪಾಣಾತ್ಮಕ ಮೌಲ್ಯಮಾಪನವನ್ನು (ಒಂದು ಶೈಕ್ಷಣಿಕ ಅವಧಿಯಲ್ಲಿ ನಾಲ್ಕು ಬಾರಿ ನಡೆಸಲಾಗುತ್ತಿದ್ದು) ಒಟ್ಟು ಅಂಕಗಳ 40% ರಷ್ಟಕ್ಕೆ ಪರಿಗಣಿಸಲಾಗುತ್ತದೆ.
ಸಂಕಲನಾತ್ಮಕ ಮೌಲ್ಯಮಾಪನ (ಮೂರು-ಗಂಟೆಗಳ ಲಿಖಿತ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗುತ್ತದೆ. SA-1 ಅನ್ನು FA-1 ಮತ್ತು FA-2 ನಂತರ ನಡೆಸಲಾಗುತ್ತದೆ, ಮತ್ತು SA-2 ಅನ್ನು FA-3 ಮತ್ತು FA-4 ರ ನಂತರ ನಡೆಸಲಾಗುತ್ತದೆ) ಇದನ್ನು ಒಟ್ಟು ಅಂಕಗಳ 60% ರಷ್ಟಕ್ಕೆ ಪರಿಗಣಿಸಲಾಗುತ್ತದೆ.
ನೈದಾನಿಕ ಅವಲೋಕನ ಮತ್ತು ಪ್ರಗತಿ ದಾಖಲು: ಪುಸ್ತುತ ಸಾಲಿನಲ್ಲಿ ನೈದಾನಿಕ ಲಿಖಿತ ಪರೀಕ್ಷೆ ಇರುವುದಿಲ್ಲ. ನೈದಾನಿಕ ಚರ್ಚೆ, ಓದು, ಬರಹದ ಮೂಲಕ ಮೊದಲ ವಾರದಲ್ಲಿ ಮಕ್ಕಳ ಪ್ರಗತಿಯನ್ನು ಗಮನಿಸಲಾಗುತ್ತದೆ. ಈ ನೈದಾನಿಕ ಅವಲೋಕನದ ಮೂಲಕ ಮಕ್ಕಳ ಪ್ರಗತಿಯನ್ನು ದಾಖಲಿಸಿಕೊಳ್ಳ್ಳಲಾಗುತ್ತದೆ. ಭಾಷೆ ಮತ್ತು ಗಣಿತದಲ್ಲಿ ಅವರ ಮೂಲಭೂತ ಕಲಿಕಾ ಪ್ರಗತಿಯ ಅವಲೋಕನಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಕಲಿಕಾ ನಷ್ಟ ಅಥವಾ ಅಂತರದ ಕಾರಣಕ್ಕಾಗಿಯೇ ಕಲಿಕಾ ಹಾಳೆಗಳನ್ನು ಮಾಡಲಾಗಿರುವುದರಿಂದ ನೈದಾನಿಕ ಅವಲೋಕನಕ್ಕಾಗಿ ಮೊದಲ ಒಂದು ವಾರ ಕಲಿಕೆಯ ಮೂಲಭೂತ ಅಂಶಗಳ ಪುನರ್‌ಮನನದ ಕೆಲಸ, ಮಕ್ಕಳ ಮನ ಗೆಲ್ಲುವ ಮತ್ತು ಮಾನಸಿಕ, ಭಾವನಾತ್ಮಕ ಸುರಕ್ಷತ ನೀಡುವ ಕೆಲಸ ನಿರ್ವಹಿಸಲಾಗುತ್ತದೆ.
ಮೊದಲನೇ FA -ಆಯಾ ತರಗತಿಗೆ ನಿಗದಿಗೊಳಿಸಿದ ವಿಷಯವಾರು LO (ಕಲಿಕಾ ಫಲಗಳ) ಶೇ25ರಷ್ಟನ್ನು ಪರಿಗಣಿಸಲಾಗುತ್ತದೆ.
ಕಲಿಕಾ ಹಾಳಗಳು ಮೌಲ್ಯಾಂಕನದ ಆಕರಗಳಾಗಿ ಬಳಸುವಂತೆ ತಯಾರಿಸಲಾಗಿದೆ. ಹಾಗೆಯೇ ಕೃತಿಸಂಪುಟಕ್ಕೆ ಅವುಗಳನ್ನು ನೇರವಾಗಿ ಸಂಗ್ರಹಿಸುವಂತೆಯೂ ತಯಾರಿಸಲಾಗಿದೆ. ಅವುಗಳನ್ನು ಸಂಗ್ರಹಿಸಿ, ಅವಲೋಕಿಸಿ 15 ಅಂಕಗಳಿಗೆ ದತ್ತಾಂಶಗಳನ್ನು ಕ್ರೋಢೀಕರಿಸಲಾಗುತ್ತದೆ. ಮಕ್ಕಳ ಪ್ರಗತಿಗೆ ಆಧಾರಾಂಶಗಳು ಕಲಿಕಾ ಚಟುವಟಿಕಗಳು ಹಾಳೆಗಳು ಆಗಿರುತ್ತವೆ. 9ನೇ ತರಗತಿಗೆ ಅಗತ್ಯವೆನಿಸಿದಲ್ಲಿ ಪುಟ್ಟ ಲಿಖಿತ ಪರೀಕ್ಷೆಯನ್ನೂ ರೂವಣಾತ್ಮಕ ಮೌಲ್ಯಾಂಕನದ ಭಾಗವಾಗಿ ಮಾಡಲಾಗುತ್ತದೆ.
ಮೊದಲನೇ FAಮಾದರಿಯಲ್ಲಿಯೇ ಎರಡನೇ FA – ಆಯಾ ತರಗತಿಗೆ ನಿಗದಿಗೊಳಿಸಿದ, ವಿಷಯವಾರು LO (ಕಲಿಕಾ ಫಲಗಳ) ಶೇ25ರಷ್ಟನ್ನು ಪರಿಗಣಿಸಲಾಗುತ್ತದೆ. ಕಲಿಕಾ ಹಾಳಗಳು ಮೌಲ್ಯಾಂಕನದ ಆಕರಗಳಾಗಿ ಬಳಸುವಂತೆ ತಯಾರಿಸಲಾಗಿದೆ. ಹಾಗೆಯೇ ಕೃತಿಸಂಪುಟಕ್ಕೆ ಅವುಗಳನ್ನು ನೇರ ಸಂಗ್ರಹಿಸುವಂತೆಯೂ ತಯಾರಿಸಲಾಗಿದೆ. ಅವುಗಳನ್ನು ಸಂಗ್ರಹಿಸಿ, ಅವಲೋಕಿಸಿ 15 ಅಂಕಗಳಿಗೆ ದತ್ತಾಂಶಗಳನ್ನು ಕ್ರೋಢೀಕರಿಸಿರಿ. ಅಗತ್ಯವನಿಸಿದಲ್ಲಿ ಪುಟ್ಟ ಲಿಖಿತ ಪರೀಕ್ಷೆಯನ್ನು ರೂಪಣಾತ್ಮಕ ಮೌಲ್ಯಾಂಕನದ ಭಾಗವಾಗಿ ಮಾಡಲಾಗುತ್ತದೆ.
ಈ ವರ್ಷ ಕಲಿಕಾ ಹಾಳಗಳಲ್ಲಿ ನಿಗದಿಪಡಿಸಿದ ಒಟ್ಟು ಕಲಿವಿನ ಫಲದ ಸಂಖ್ಯೆಗಳ ಶೇ 50 ರಷ್ಟ ಕಲಿಕಾಫಲಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯ ಪ್ರಶ್ನೆಗಳು ಸಾಮರ್ಥ್ಯ/ಕಲಿಕಾಫಲಗಳ ಗಳಿಕೆ ಪರೀಕ್ಷಿಸು ವಂತಿರುತ್ತವೆಯೇ ಹೂರತು ವಿಷಯ/ಘಟಕ ಅಂಶವನ್ನಲ್ಲ.
9ನೇ ತರಗತಿಗೆ ಹತ್ತನೆಯ ತರಗತಿಯ ಮಾದರಿಯಲ್ಲಿ ವೈಟೇಜ್ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯಲ್ಲಿ ಎರಡು ಹಂತದ ಪ್ರಶ್ನೆಪತ್ರಿಕೆ ತಯಾರಿಸಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲು ಚುರುಕಾಗಿ ಕಲಿಕಾ ಫಲಗಳನ್ನು ಗಳಿಸಿದ ಮಕ್ಕಳಿಗೆ ಅನ್ವಯಿಸುವ ಪ್ರಶ್ನೆ ಪತ್ರಿಕೆ, ನಂತರದ ಹಂತದಲ್ಲಿ ಕಲಿಕಾ ಫಲನಗಳನ್ನು ಗಳಿಸಲು ಸಮಸ್ಯೆಯಾದ ತೀರ ಹಿಂದುಳಿದ ಮಕ್ಕಳಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಯಲ್ಲಿ ಮೌಲ್ಯಾಂಕನ ಮಾಡಿ ಅವರ ಮಾನಸಿಕ ಸುರಕ್ಷತೆಯನ್ನು ಕಾಪಾಡಲಾಗುತ್ತದೆ.
ರೂಪಣಾತ್ಮಕ ಮೌಲ್ಯಾಂಕನ -1ರಲ್ಲಿ ಹೇಳಿದಂತೆ ಕ್ರಮವಹಿಸಲಾಗುತ್ತದೆ.
ರೂಪಣಾತ್ಮಕ ಮೌಲ್ಯಾಂಕನ -2 ರಲ್ಲಿ ಹೇಳಿದಂತ ಕ್ರಮವಹಿಸಲಾಗುತ್ತದೆ.
ಈ ವರ್ಷ ಕಲಿಕಾ ಹಾಳಗಳಲ್ಲಿ ನಿಗದಿಪಡಿಸಿದ ಒಟ್ಟು ಕಲಿವಿನ ಫಲದ ಸಂಖ್ಯೆಗಳ ಶೇ 50 ರಷ್ಟು ಕಲಿಕಾ ಫಲಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ (ಮೊದಲ ಸ.ಮೌ ಅಡಿ ಶೇ 50 ರಪರೀಕ್ಷೆಯಾಗಿರುತ್ತದೆ) ಲಿಖಿತ ಪರೀಕ್ಷೆಯ ಪ್ರಶ್ನೆಗಳು ಸಾಮರ್ಥ್ಯ/ ಕಲಿಕಾಫಲಗಳ ಗಳಿಕ ಪರೀಕ್ಷಿಸುವಂತಿರರುತ್ತವೆಯೇ ಹೊರತು ವಿಷಯ/ ಘಟಕಾಂಶವನ್ನಲ್ಲ. 9ನೇ ತರಗತಿಗೆ ಹತ್ತನೇ ತರಗತಿಯ ಮಾದರಿಯಲ್ಲಿ ವೈಟೇಜ್ ನೀಡಿ ಪರೀಕ್ಷೆ ನಡೆಸಲಾಗುತ್ತದೆ.
ಸಾಮಾನ್ಯ ದಿನಗಳಲ್ಲಿ, 9ನೇ ತರಗತಿಯಲ್ಲಿ ಅನುಸರಿಸಲಾಗುವ CCE ಮಾದರಿಯು ಕೆಳಗೆ ತೋರಿಸಿರುವಂತೆ ಇರುತ್ತದೆ:
ಸಂಖ್ಯೆ | CCE ಚಟುವಟಿಕೆಯ ಹೆಸರು | CCE ಚಟುವಟಿಕೆಯ ಕೋಡ್ | ಚಟುವಟಿಕೆ | ಅಂಕಗಳು |
---|---|---|---|---|
1 | ರೂಪಣಾತ್ಮಕ ಮೌಲ್ಯಮಾಪನ – 1 | FA1 | ಚಟುವಟಿಕೆ 1 + ಚಟುವಟಿಕೆ 2 + ಲಿಖಿತ ಪರೀಕ್ಷೆ | 15+15+20=50 |
2 | ರೂಪಣಾತ್ಮಕ ಮೌಲ್ಯಮಾಪನ -2 | FA2 | ಚಟುವಟಿಕೆ 1 + ಚಟುವಟಿಕೆ 2 + ಲಿಖಿತ ಪರೀಕ್ಷೆ | 15+15+20=50 ಅಂಕಗಳು |
3 | ಸಂಕಲನಾತ್ಮಕ ಮೌಲ್ಯಮಾಪನ -1 | SA1 | ಲಿಖಿತ ಪರೀಕ್ಷೆ | 80 ಅಂಕಗಳು |
4 | ರೂಪಣಾತ್ಮಕ ಮೌಲ್ಯಮಾಪನ – 3 | FA3 | ಚಟುವಟಿಕೆ 1 + ಚಟುವಟಿಕೆ 2 + ಲಿಖಿತ ಪರೀಕ್ಷೆ | 15+15+20=50 ಅಂಕಗಳು |
5 | ರೂಪಣಾತ್ಮಕ ಮೌಲ್ಯಮಾಪನ – 4 | FA4 | ಚಟುವಟಿಕೆ 1 + ಚಟುವಟಿಕೆ 2 + ಲಿಖಿತ ಪರೀಕ್ಷೆ | 15+15+20=50 ಅಂಕಗಳು |
6 | ಸಂಕಲನಾತ್ಮಕ ಮೌಲ್ಯಮಾಪನ – 2 | SA2 | ಲಿಖಿತ ಪರೀಕ್ಷೆ | 80 ಅಂಕಗಳು |
ಎರಡು ಸಂಕಲನಾತ್ಮಕ ಮೌಲ್ಯಮಾಪನಗಳಿವೆ ಎಂಬುದನ್ನು ಗಮನಿಸಿ- ಒಂದು ಮಧ್ಯ-ವರ್ಷದ ಸಂಕಲನಾತ್ಮಕ ಮೌಲ್ಯಮಾಪನ ಮತ್ತು ಇನ್ನೊಂದು ವರ್ಷಾಂತ್ಯದ ಸಂಕಲನಾತ್ಮಕ ಮೌಲ್ಯಮಾಪನ.
ಪ್ರಸಕ್ತ ಶೈಕ್ಷಣಿಕ ವರ್ಷ 2022-23ಕ್ಕೆ, ಕರ್ನಾಟಕ ರಾಜ್ಯ ಮಂಡಳಿಯ ಶಾಲೆಗಳ ವಿದ್ಯಾರ್ಥಿಗಳು 1 ರಿಂದ 10ನೇ ತರಗತಿಗಳಲ್ಲಿ ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳನ್ನು (FA) ಮತ್ತು ಎರಡು ಸಂಕಲನಾತ್ಮಕ ಪರೀಕ್ಷೆಯನ್ನು (SA) ತೆಗೆದುಕೊಳ್ಳುತ್ತಾರೆ. ಅಂತಿಮ ಪರೀಕ್ಷೆಗಳ ಅನುಪಸ್ಥಿತಿಯಲ್ಲಿ, ತಜ್ಞರು ಈ ಕ್ರಮವನ್ನು ಮೌಲ್ಯಮಾಪನದ ಹೆಚ್ಚು ವಿಶ್ವಾಸಾರ್ಹ ವಿಧಾನ ಎಂದು ತೀರ್ಮಾನಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷದ ಮೌಲ್ಯಾಂಕನದ ಭಾಗವಾಗಿ 4 FAಗಳು, 2 SAಗಳನ್ನು ನಿರ್ವಹಿಸಲು ಕಾರ್ಯಸೂಚಿಯಲ್ಲಿ ನಿಗದಿಗೊಳಿಸಿದೆ. ಮೊದಲನೇ FA-ಆಯಾ ತರಗತಿಗೆ ನಿಗದಿಗೊಳಿಸಿದೆ. ವಿಷಯವಾರು LO (ಕಲಿಕಾ ಫಲಗಳ) ಶೇ.25ರಷ್ಟನ್ನು ಪರಿಗಣಿಸಲಾಗಿದೆ. ಇದೇ ರೀತಿ ಉಳಿದ FAಗಳಿಗೂ ಶೇಕಡಾ 25ರಷ್ಟು LO ಗಳನ್ನು ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕಲಿಕಾ ಹಾಳೆಗಳಲ್ಲಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಆಧರಿಸಿ ಗ್ರೇಡ್‌ಗಳನ್ನು ನಿರ್ಧರಿಸಿ ದಾಖಲಿಸಲಾಗುತ್ತದೆ. ಉದಾಹರಣೆಗೆ 8 ಚಟುವಟಿಕೆಗಳಲ್ಲಿ ಎಷ್ಟು ಶೇ ಚಟುವಟಿಕ ಪೂರ್ಣಗೊಂಡಿದೆ ಎಂಬುದನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಇದೇ ರೀತಿ 2, 3, 4ನೇ FAಗಳ ಗ್ರೇಡ್‌ಗಳನ್ನು ಕೂಡ ವಾರ್ಷಿಕ ಕಾರ್ಯಸೂಚಿಯಲ್ಲಿ ತಿಳಿಸಿರುವ ಸಮಯದಲ್ಲಿ ನಿರ್ಧರಿಸಿ ದಾಖಲಿಸಲಾಗುತ್ತದೆ.
ಶ್ರೇಣಿಗಳ ವ್ಯವಸ್ಥೆಯನ್ನು ಬಳಸಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿಗೆ ಅಳವಡಿಸಲಾಗಿರುವ ಶ್ರೇಣಿಗಳ ವ್ಯವಸ್ಥೆಯನ್ನು ಕೆಳಗೆ ನೀಡಲಾಗಿದೆ.
ಅಂಕಗಳ ವ್ಯಾಪ್ತಿ | ಶ್ರೇಣಿ |
---|---|
91 ರಿಂದ 100 | A1 |
81 ರಿಂದ 90 | A2 |
71 ರಿಂದ 80 | B1 |
61 ರಿಂದ 70 | B2 |
51 ರಿಂದ 60 | C1 |
41 ರಿಂದ 50 | C2 |
33 ರಿಂದ 40 | D |
32 ಮತ್ತು ಮತ್ತು ಅದಕ್ಕಿಂತ ಕಡಿಮೆ | E (ಪುನರಾವರ್ತನೆ ಅಗತ್ಯ ) |
ಸಂಖ್ಯೆ | CCE ಚಟುವಟಿಕೆ | ಮೌಲ್ಯಮಾಪನದ ದಿನಾಂಕ |
---|---|---|
1 | ರೂಪಣಾತ್ಮಕ ಮೌಲ್ಯಾಂಕನ – 1 (FA1) | 18/07/2022 ರಿಂದ 20/07/2022ವರೆಗೆ |
2 | ರೂಪಣಾತ್ಮಕ ಮೌಲ್ಯಮಾಪನ -2 (FA2) | 22/09/2022 ರಿಂದ 24/09/2022ವರೆಗೆ |
3 | ರೂಪಣಾತ್ಮಕ ಮೌಲ್ಯಾಂಕನ – 3 (FA3) | 26/12/2022 ರಿಂದ 28/12/2022ವರೆಗೆ |
4 | ರೂಪಣಾತ್ಮಕ ಮೌಲ್ಯಾಂಕನ – 4 (FA4) | 04/02/2023 ರಿಂದ 06/02/2023 ವರೆಗೆ |
5 | ಸಂಕಲನಾತ್ಮಕ ಮೌಲ್ಯಮಾಪನ – 1 (SA1) | 17/10/2022 ರಿಂದ 25/10/2022 ವರೆಗೆ |
6 | ಸಂಕಲನಾತ್ಮಕ ಮೌಲ್ಯಮಾಪನ – 2 (SA2) | 01/04/2023 ರಿಂದ 05/04/2023 ರವರೆಗೆ |
6 | ಫಲಿತಾಂಶ ಪ್ರಕಟಣೆ | ಸಮುದಾಯದತ್ತ ಶಾಲೆ ಕಾರ್ಯಕ್ರಮದ ದಿನದಂದು ಫಲಿತಾಂಶ ಪ್ರಕಟಿಸಲಾಗುವುದು |
ವಿದ್ಯಾಭ್ಯಾಸ, ನಿತ್ಯ ಶಾಲೆಗೆ ಹೋಗುವ ತರಾತುರಿ, ಅರ್ಧವಾರ್ಷಿಕ ಪರೀಕ್ಷೆಗಳಿಗೆ ತಯಾರಿ, ಜೊತೆಗೆ ತಮ್ಮ ಸಂತೋಷಕ್ಕಾಗಿ ಸಮಯವನ್ನು ಮೀಸಲಿಡುವದರಲ್ಲೇ ವಿದ್ಯಾರ್ಥಿ ಜೀವನದ ಬಹುಪಾಲು ಸಮಯ ಕಳೆದುಹೋಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿದಿನ ಈ ಕಠಿಣ ದಿನಚರಿಯನ್ನು ಅನುಸರಿಸಬೇಕಾಗುತ್ತದೆ. ಈ ದಿನಚರಿಯ ಪರಿಪಾಲನೆ ಮಾಡಲು ಒಮ್ಮೊಮ್ಮೆ ಬಹಳಷ್ಟು ಕಷ್ಟಕರವಾಗುತ್ತದೆ. ಆದಾಗ್ಯೂ, 9ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಲು ಒಂದು ನಿಗದಿತ ದಿನಚರಿಯನ್ನು ಅನುಸರಿಸುವುದು ಅತ್ಯಗತ್ಯ.
ಯಶಸ್ವಿ ವಿದ್ಯಾರ್ಥಿಗಳ ಅಭ್ಯಾಸಗಳನ್ನು ನೋಡಿದಾಗ, ತಮ್ಮ ಪೂರ್ಣ ದಿನವನ್ನು ಉತ್ತಮವಾಗಿ ನಿರ್ವಹಿಸುವುದು ಎಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ. ಹಾಗಾಗಿ, ವೇಳಾಪಟ್ಟಿಯನ್ನು ಸಿದ್ಧಪಡಿಸದೆ ಇಡೀ ದಿನವನ್ನು ಉತ್ತಮವಾಗಿ ನಿರ್ವಹಿಸುವುದು ಯಾವಾಗಲೂ ಸಾಧ್ಯವಿಲ್ಲ. ಆದ್ದರಿಂದ ವಾರದ ದಿನಗಳು ಮತ್ತು ವಾರಾಂತ್ಯದ ಅಧ್ಯಯನಕ್ಕಾಗಿ ಯೋಜಿತ ವೇಳಾಪಟ್ಟಿಯನ್ನು ತಯಾರಿಸಿ.
9ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಕಷ್ಟವೇನಲ್ಲ ಎಂಬುದು ಈಗ ನಿಮಗೆ ತಿಳಿದಿದೆ. ನೀವು ಈಗ ಮಾಡಬೇಕಾಗಿರುವುದು ನಿಮ್ಮಲ್ಲಿ ಕೆಲವು ಉತ್ತಮ ಅಧ್ಯಯನ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು. ಉದಾಹರಣೆಗೆ ವೇಳಾಪಟ್ಟಿಯ ಪ್ರಕಾರ ನಿಮ್ಮ ದಿನಗಳನ್ನು ಯೋಜಿಸುವುದು.
ಪ್ರಶ್ನೆ. 1: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿ ಪಠ್ಯಕ್ರಮವೇನು?
ಉತ್ತರ: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿಯ ಪಠ್ಯಕ್ರಮವು ಮೂರು ಭಾಷೆಗಳನ್ನು ಮತ್ತು ಮೂರು ಪ್ರಮುಖ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಇವುಗಳನ್ನು ಒಳಗೊಂಡಿದೆ. ಮಂಡಳಿಯ ವೆಬ್‌ಸೈಟ್‌ನಿಂದ ನೀವು ಪಠ್ಯಕ್ರಮವನ್ನು ಪಡೆದುಕೊಳ್ಳಬಹುದು.
ಪ್ರಶ್ನೆ. 2: KSEEB ನ ವಿಸ್ತೃತ ರೂಪವೇನು?
ಉತ್ತರ: KSEEB ಯ ವಿಸ್ತೃತ ರೂಪವು KARNATAKA SECONDARY EDUCATION EXAMINATION BOARD (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ). ಇದು 1966 ರಲ್ಲಿ ಸ್ಥಾಪನೆಗೊಂಡಿತು.
ಪ್ರಶ್ನೆ. 3: 9ನೇ ತರಗತಿಗೆ ಎಷ್ಟು ರೂಪಣಾತ್ಮಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ?
ಉತ್ತರ: ಕರ್ನಾಟಕ ರಾಜ್ಯ ಮಂಡಳಿಯು 1 ರಿಂದ 10ನೇ ತರಗತಿಗಳಿಗೆ CCE ಮಾದರಿಯನ್ನು ಅನುಸರಿಸುತ್ತದೆ. ಈ ಮಾದರಿಯ ಅನ್ವಯ 9ನೇ ತರಗತಿಗೆ ನಾಲ್ಕು ರೂಪಣಾತ್ಮಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ.
ಪ್ರಶ್ನೆ. 4: 2022-23ರ ಶೈಕ್ಷಣಿಕ ವರ್ಷಕ್ಕೆ ಎಷ್ಟು ಸಂಕಲನಾತ್ಮಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತಿದೆ?
ಉತ್ತರ: ಪ್ರಸಕ್ತ ಶೈಕ್ಷಣಿಕ ವರ್ಷ 2022-23 ಕ್ಕೆ, ಕರ್ನಾಟಕದ ರಾಜ್ಯ ಮಂಡಳಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಲ್ಕು ರೂಪಣಾತ್ಮಕ ಮತ್ತು ಒಂದು ಸಂಕಲನಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರಶ್ನೆ. 5: 9ನೇ ತರಗತಿ ಕರ್ನಾಟಕ ರಾಜ್ಯ ಮಂಡಳಿಯ ಫಲಿತಾಂಶ ದಿನಾಂಕ ಯಾವಾಗ?
ಉತ್ತರ: 9ನೇ ತರಗತಿಯ ಶೈಕ್ಷಣಿಕ ವರ್ಷದ ಅಂತಿಮ ಫಲಿತಾಂಶವನ್ನು ಮಾರ್ಚ್ ತಿಂಗಳಲ್ಲಿ ಪ್ರಕಟಿಸಲು ಪ್ರೌಢ ಶಿಕ್ಷಣ ಮಂಡಳಿ ದಿನಾಂಕವನ್ನು ನಿಗದಿಪಡಿಸುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿಯ ಪರೀಕ್ಷಾ ಮಾದರಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.