
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ 2022-23ರ ಪರೀಕ್ಷಾ ಮಾದರಿ
August 19, 20229ನೇ ತರಗತಿ ಪಠ್ಯಕ್ರಮ 2022-23: ಸಾರ್ವಜನಿಕ ಶಿಕ್ಷಣ ಇಲಾಖೆಯು ರೂಪಿಸಿರುವ 9ನೇ ತರಗತಿ ಪಠ್ಯಕ್ರಮವು 2005ರ ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ರಚಿಸಲಾಗಿದೆ. ವಿಜ್ಞಾನ ಮತ್ತು ಗಣಿತದ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕವನ್ನು ಯಥಾವತ್ತಾಗಿ ಕನ್ನಡ ಭಾಷೆಗೆ ಅನುವಾದ ಮಾಡಿ 2017-18ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯ ಪುಸ್ತಕ ಸಂಘವು ಸಮಾಜ ವಿಜ್ಞಾನ ಪಠ್ಯವನ್ನು 2022-23 ನೇ ಸಾಲಿನಲ್ಲಿ ಪರಿಷ್ಕರಿಸಿದೆ. NCF-2005ರ ಪಠ್ಯಕ್ರಮದ ಎಲ್ಲ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಒಂಬತ್ತನೇ ತರಗತಿಯ ಪಠ್ಯಕ್ರಮವನ್ನು ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸುಧಾರಣೆ ಹಾಗೂ ಅಭಿವೃದ್ಧಿಗಳನ್ನು ಗಮನದಲ್ಲಿರಿಸಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳೂ ಸಹ ರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕವಾಗಿ ಹಾಗೂ ಸ್ಪರ್ಧಾತ್ಮಕವಾಗಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ತಮ್ಮ ಸಾಧನೆಯನ್ನು ಮಾಡಲು ಸಹಕಾರಿಯಾಗಲಿ ಎಂಬುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಆಶಯವಾಗಿದೆ.
ಕ್ರಮ ಸಂಖ್ಯೆ | ವಿಷಯ | ಪಿಡಿಎಫ್ ಲಿಂಕ್ |
---|---|---|
1 | ಕನ್ನಡ (ಪ್ರಥಮ ಭಾಷೆ) | ಕನ್ನಡ – I ಲಿಂಕ್ |
2 | ಕನ್ನಡ (ದ್ವಿತೀಯ ಭಾಷೆ) | ಕನ್ನಡ -II ಲಿಂಕ್ |
3 | ಇಂಗ್ಲಿಷ್(ದ್ವಿತೀಯ ಭಾಷೆ) | ಇಂಗ್ಲಿಷ್ ಲಿಂಕ್ |
4 | ಹಿಂದಿ (ತೃತೀಯ ಭಾಷೆ) | ಹಿಂದಿ ಲಿಂಕ್ |
5 | ಗಣಿತ ಭಾಗ 1 | ಗಣಿತ ಭಾಗ 1 ಲಿಂಕ್ |
6 | ಗಣಿತ ಭಾಗ 2 | ಗಣಿತ ಭಾಗ 2 ಲಿಂಕ್ |
7 | ವಿಜ್ಞಾನ ಭಾಗ 1 | ವಿಜ್ಞಾನ ಭಾಗ 1 ಲಿಂಕ್ |
8 | ವಿಜ್ಞಾನ ಭಾಗ 2 | ವಿಜ್ಞಾನ ಭಾಗ 2 ಲಿಂಕ್ |
9 | ಸಮಾಜ ವಿಜ್ಞಾನ ಭಾಗ 1 | ಸಮಾಜ ವಿಜ್ಞಾನ ಭಾಗ 1 ಲಿಂಕ್ |
10 | ಸಮಾಜವಿಜ್ಞಾನ ಭಾಗ 2 | ಸಮಾಜವಿಜ್ಞಾನ ಭಾಗ 2 ಲಿಂಕ್ |
7 | ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ ಲಿಂಕ್ |
9ನೇ ತರಗತಿಯ ಗಣಿತ ಪುಸ್ತಕದಲ್ಲಿ ಅಂತರ್ಗತ ವಿಧಾನ (Integrated Approach), ರಚನಾತ್ಮಕ ವಿಧಾನ (Constructive Approach) ಹಾಗೂ ಸುರುಳಿಯಾಕಾರದ ವಿಧಾನ (Spiral Approach) ಗಳನ್ನು ಅಳವಡಿಸಲಾಗಿದೆ.
ಪಠ್ಯಪುಸ್ತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಚನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಪಠ್ಯವಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಜೀವನ ಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ ನೂತನ ಪಠ್ಯವನ್ನು ಪರೀಕ್ಷಾ ದೃಷ್ಟಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವಂತೆ ಅಳವಡಿಸಲಾಗಿದೆ.
ನಿತ್ಯ ಜೀವನದಲ್ಲಿ ಗಣಿತವು ಎಲ್ಲಾ ಹಂತಗಳಲ್ಲೂ ಯಶಸ್ಸಿಗೆ ಅತ್ಯವಶ್ಯಕವಾಗಿದೆ. ರಾಷ್ಟ್ರೀಯ ಪಠ್ಯಕ್ರಮ-2005ರಂತೆ ಗಣಿತವು ಕೆಲವು ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ಸಿದ್ಧಾಂತಗಳನ್ನು ನಿರೂಪಿಸಿ, ಪ್ರಮೇಯಗಳನ್ನು ಸಾಧಿಸಿ, ಲೆಕ್ಕಗಳನ್ನು ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಜೊತೆಗೆ ಗಣಿತವನ್ನು ಜೀವನದ ಸಕಲ ಕ್ಷೇತ್ರಗಳಲ್ಲೂ ಬಳಸುವ ಸಾಮರ್ಥ್ಯವನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸುವಂತೆ ಮಾಡಬೇಕು. ಅದು ಸಹಕಾರಿ ಕಲಿಕೆಗೂ ಪೂರಕವಾಗಿರಬೇಕು ಎಂಬ ಉದ್ದೇಶ.
9ನೇ ತರಗತಿಯಲ್ಲಿ, ವಿದ್ಯಾರ್ಥಿಗಳು ಗಣಿತದ ವಿವಿಧ ಕ್ಷೇತ್ರಗಳಾದ ಸಂಖ್ಯಾ ಪದ್ಧತಿ, ಯೂಕ್ಲಿಡ್‌ನ ರೇಖಾಗಣಿತ, ರೇಖೆಗಳು ಮತ್ತು ಕೋನಗಳು, ಬಹುಪದೋಕ್ತಿಗಳು, ತ್ರಿಕೋನಗಳು, ರಚನೆಗಳು, ಚತುರ್ಭುಜಗಳು, ನಿರ್ದೇಶಾಂಕ ರೇಖಾಗಣಿತ, ರೇಖಾತ್ಮಕ ಸಮೀಕರಣಗಳು, ಸಮಾಂತರ ಚತುರ್ಭುಜಗಳು, ತ್ರಿಕೋನಗಳು ಮತ್ತು ವೃತ್ತಗಳು ಮುಂತಾದ ಆಕೃತಿಗಳ ವಿಸ್ತೀರ್ಣಗಳನ್ನು ಕಲಿಯುತ್ತಾರೆ.
ಭಾಗ-1 | ||
---|---|---|
ಕ್ರಮಸಂಖ್ಯೆ | ಟಾಪಿಕ್ | ಉಪ-ಟಾಪಿಕ್ |
1 | ಸಂಖ್ಯಾ ಪದ್ಧತಿ | 1.1 ಪೀಠಿಕೆ 1.2 ಅಭಾಗಲಬ್ಧ ಸಂಖ್ಯೆಗಳು 1.3 ವಾಸ್ತವ ಸಂಖ್ಯೆಗಳು ಮತ್ತು ಅವುಗಳ ದಶಮಾಂಶ ವಿಸ್ತರಣೆ 1.4 ಸಂಖ್ಯಾರೇಖೆಯ ಮೇಲೆ ವಾಸ್ತವ ಸಂಖ್ಯೆಗಳನ್ನು ಗುರುತಿಸುವುದು 1.5 ವಾಸ್ತವ ಸಂಖ್ಯೆಗಳ ಮೇಲಿನ ಕ್ರಿಯೆಗಳು 1.6 ವಾಸ್ತವ ಸಂಖ್ಯೆಗಳಿಗೆ ಘಾತಾಂಕಗಳ ನಿಯಮಗಳು 1.7 ಸಾರಾಂಶ |
2 | ಯೂಕ್ಲಿಡ್‌ನ ರೇಖಾಗಣಿತದ ಪ್ರಸ್ತಾವನೆ | 2.1 ಪೀಠಿಕೆ 2.2 ಯೂಕ್ಲಿಡನ ವ್ಯಾಖ್ಯೆಗಳು, ಸ್ವಯಂಸಿದ್ಧಗಳು ಮತ್ತು ಆಧಾರ ಪ್ರತಿಜ್ಞೆಗಳು 2.3 ಯೂಕ್ಲಿಡನ 5ನೆಯ ಆಧಾರ ಪ್ರತಿಜ್ಞೆಯ ಸಮಾನ ರೂಪಾಂತರಗಳು 2.4 ಸಾರಾಂಶ |
3 | ರೇಖೆಗಳು ಮತ್ತು ಕೋನಗಳು | 3.1 ಪೀಠಿಕೆ 3.2 ಮೂಲಪದಗಳು ಮತ್ತು ವ್ಯಾಖ್ಯೆಗಳು 3.3 ಛೇದಿಸುವ ರೇಖೆಗಳು ಮತ್ತು ಛೇದಿಸದ ರೇಖೆಗಳು 3.4 ಜೋಡಿ ಕೋನಗಳು 3.5 ಸಮಾಂತರ ರೇಖೆಗಳು ಮತ್ತು ಛೇದಕ 3.6 ಒಂದೇ ರೇಖೆಗೆ ಸಮಾಂತರವಾಗಿರುವ ರೇಖೆಗಳು 3.7 ತ್ರಿಭುಜದ ಕೋನಗಳ ಮೊತ್ತದ ಗುಣಲಕ್ಷಣ 3.8 ಸಾರಾಂಶ |
4 | ಬಹುಪದೋಕ್ತಿಗಳು | 4.1 ಪೀಠಿಕೆ 4.2 ಒಂದು ಚರಾಕ್ಷರವುಳ್ಳ ಬಹುಪದೋಕ್ತಿಗಳು 4.3 ಒಂದು ಬಹುಪದೋಕ್ತಿಯ ಶೂನ್ಯತೆಗಳು 4.4 ಶೇಷ ಪ್ರಮೇಯ 4.5 ಬಹುಪದೋಕ್ತಿಗಳ ಅಪವರ್ತಿಸುವಿಕೆ 4.6 ಬೈಜಿಕ ನಿತ್ಯಸಮೀಕರಣಗಳು 4.7 ಸಾರಾಂಶ |
5 | ತ್ರಿಭುಜಗಳು | 5.1 ಪೀಠಿಕೆ 5.2 ತ್ರಿಭುಜಗಳ ಸರ್ವಸಮತೆ 5.3 ತ್ರಿಭುಜಗಳ ಸರ್ವಸಮತೆಗೆ ನಿಬಂಧನೆಗಳು 5.4 ತ್ರಿಭುಜದ ಕೆಲವು ಗುಣಲಕ್ಷಣಗಳು 5.5 ತ್ರಿಭುಜಗಳ ಸರ್ವಸಮತೆಗೆ ಇನ್ನೂ ಹೆಚ್ಚು ನಿಬಂಧನೆಗಳು 5.6 ತ್ರಿಭುಜಗಳಲ್ಲಿನ ಅಸಮಾನತೆ 5.7 ಸಾರಾಂಶ |
6 | ರಚನೆಗಳು | 6.1 ಪೀಠಿಕೆ 6.2 ಮೂಲಭೂತ ರಚನೆಗಳು 6.3 ಕೆಲವು ತ್ರಿಭುಜಗಳ ರಚನೆಗಳು 6.4 ಸಾರಾಂಶ |
7 | ಚತುರ್ಭುಜಗಳು | 7.1 ಪೀಠಿಕೆ 7.2 ಚತುರ್ಭುಜದ ಕೋನಗಳ ಮೊತ್ತದ ಗುಣಲಕ್ಷಣಗಳು 7.3 ಚತುರ್ಭುಜದ ವಿಧಗಳು 7.4 ಸಮಾಂತರ ಚತುರ್ಭುಜದ ಗುಣಲಕ್ಷಣಗಳು 7.5 ಒಂದು ಚತುರ್ಭುಜವು ಸಮಾಂತರ ಚತುರ್ಭುಜವಾಗಲು ಬೇಕಾಗಿರುವ ಮತ್ತೊಂದು ನಿಬಂಧನೆ 7.6 ಮಧ್ಯಬಿಂದು ಪ್ರಮೇಯ 7.7 ಸಾರಾಂಶ |
ಭಾಗ-2 | ||
8 | ಹೆರಾನ್‌ನ ಸೂತ್ರ | 8.1 ಪೀಠಿಕೆ 8.2 ತ್ರಿಭುಜದ ವಿಸ್ತೀರ್ಣ- ಹೆರಾನ್‌ನ ಸೂತ್ರ 8.3 ಚತುರ್ಭುಜಗಳ ವಿಸ್ತೀರ್ಣಗಳನ್ನು ಕಂಡುಹಿಡಿಯಲು ಹೆರಾನ್‌ನ ಸೂತ್ರದ ಅನ್ವಯ 8.4 ಸಾರಾಂಶ |
9 | ನಿರ್ದೇಶಾಂಕ ರೇಖಾಗಣಿತ | 9.1 ಪೀಠಿಕೆ 9.2 ಕಾರ್ಟಿಷಿಯನ್ ಪದ್ಧತಿ 9.3 ಒಂದು ಬಿಂದುವಿನ ನಿರ್ದೇಶಾಂಕಗಳನ್ನು ಕೊಟ್ಟಿರುವಾಗ ಸಮತಲದ ಮೇಲೆ ಆ ಬಿಂದುವನ್ನು ಗುರುತಿಸುವುದು. 9.4 ಸಾರಾಂಶ |
10 | ಎರಡು ಚರಾಕ್ಷರಗಳಿರುವ ರೇಖಾತ್ಮಕಸಮೀಕರಣಗಳು | 10.1 ಪೀಠಿಕೆ 10.2 ರೇಖಾತ್ಮಕ ಸಮೀಕರಣಗಳು: 10.3 ಒಂದು ರೇಖಾತ್ಮಕ ಸಮೀಕರಣದ ಪರಿಹಾರ 10.4 ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣದ ನಕ್ಷೆ 10.5 x – ಅಕ್ಷ ಮತ್ತು Y – ಅಕ್ಷಗಳಿಗೆ ಸಮಾಂತರವಾಗಿರುವ ರೇಖೆಗಳ ಸಮೀಕರಣಗಳು 10.6 ಸಾರಾಂಶ |
11 | ಸಮಾಂತರಚತುರ್ಭುಜಗಳು ಮತ್ತು ತ್ರಿಭುಜಗಳ ವಿಸ್ತೀರ್ಣಗಳು | 11.1 ಪೀಠಿಕೆ 11.2 ಒಂದೇ ಪಾದ ಹಾಗೂ ಒಂದೇ ಜೊತೆ ಸಮಾಂತರ ರೇಖೆಗಳ ನಡುವೆ ಇರುವ ಆಕೃತಿಗಳು 11.3 ಒಂದೇ ಪಾದ ಮತ್ತು ಒಂದೇ ಜೊತೆ ಸಮಾಂತರ ರೇಖೆಗಳ ನಡುವೆ ಇರುವ ಸಮಾಂತರ ಚತುರ್ಭುಜಗಳು: 11.4 ಒಂದೇ ಪಾದ ಮತ್ತು ಒಂದೇ ಜೊತೆ ಸಮಾಂತರ ರೇಖೆಗಳ ನಡುವೆ ಇರುವ ತ್ರಿಭುಜಗಳು 11.5 ಸಾರಾಂಶ |
12 | ವೃತ್ತಗಳು | 12.1 ಪೀಠಿಕೆ 12.2 ವೃತ್ತಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳು: ಒಂದು ಅವಲೋಕನ 12.3 ವೃತ್ತದ ಮೇಲಿನ ಒಂದು ಬಿಂದುವಿನಲ್ಲಿ ಜ್ಯಾದಿಂದ ಉಂಟಾದ ಕೋನ 12.4 ವೃತ್ತಕೇಂದ್ರದಿಂದ ಜ್ಯಾಕ್ಕೆ ಎಳೆದ ಲಂಬ 12.5 ಮೂರು ಬಿಂದುಗಳ ಮೂಲಕ ವೃತ್ತ 12.6 ಸಮನಾದ ಜ್ಯಾಗಳು ಮತ್ತು ಕೇಂದ್ರದಿಂದ ಅವುಗಳಿಗಿರುವ ದೂರ 12.7 ವೃತ್ತದ ಕಂಸದಿಂದ ಏರ್ಪಟ್ಟ ಕೋನ 12.8 ಚಕ್ರೀಯ ಚತುರ್ಭುಜಗಳು 12.9 ಸಾರಾಂಶ |
13 | ಮೇಲ್ಮೆ ವಿಸ್ತೀರ್ಣಗಳು ಮತ್ತು ಘನಫಲಗಳು | 13.1 ಪೀಠಿಕೆ 13.2 ಆಯತಘನ ಮತ್ತು ಘನದ ಮೇಲ್ಮೆ ವಿಸ್ತೀರ್ಣ 13.3 ನೇರ ವೃತ್ತಪಾದ ಸಿಲಿಂಡರ್‌ನ ಮೇಲ್ಮೆ ವಿಸ್ತೀರ್ಣ 13.4 ನೇರವೃತ್ತಪಾದ ಶಂಕುವಿನ ಮೇಲ್ಮೆ ವಿಸ್ತೀರ್ಣ ಒಂದು ಗೋಳದ ಮೇಲ್ಮೆ ವಿಸ್ತೀರ್ಣ 13.5 ಒಂದು ಆಯತಘನದ ಘನಫಲ 13.6 ಸಿಲಿಂಡರ್‌ನ ಘನಫಲ 13.7 ಒಂದು ನೇರವೃತ್ತಪಾದ ಶಂಕುವಿನ ಘನಫಲ 13.8 ಗೋಳದ ಘನಫಲ 13.9 ಸಾರಾಂಶ |
14 | ಸಂಖ್ಯಾಶಾಸ್ತ್ರ | 14.1 ಪೀಠಿಕೆ 14.2 ದತ್ತಾಂಶಗಳ ಸಂಗ್ರಹ 14.3 ದತ್ತಾಂಶಗಳ ಪ್ರಸ್ತುತಿ 14.4 ದತ್ತಾಂಶಗಳನ್ನು ನಕ್ಷೆಯಲ್ಲಿ ಪ್ರತಿನಿಧಿಸುವುದು 14.5 ಕೇಂದ್ರೀಯ ಪ್ರವೃತ್ತಿಯ ಅಳತೆಗಳು 14.6 ಸಾರಾಂಶ |
15 | ಸಂಭವನೀಯತೆ | 15.1 ಪೀಠಿಕೆ 15.2 ಸಂಭವನೀಯತೆ – ಒಂದು ಪ್ರಾಯೋಗಿಕ ಪದ್ಧತಿ 15.3 ಸಾರಾಂಶ |
9ನೇ ತರಗತಿಯಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ವ್ಯಾಖ್ಯಾನಗಳು, ವಿವಿಧ ಭೌತಿಕ ನಿಯಮಗಳು, ವ್ಯುತ್ಪನ್ನಗಳು, ಸಂಖ್ಯಾಶಾಸ್ತ್ರ ಮತ್ತು ವಿಶ್ಲೇಷಣೆಗಳನ್ನು ಅಧ್ಯಯನ ಮಾಡುತ್ತಾರೆ. ಪಠ್ಯಕ್ರಮವು ಮುಖ್ಯವಾಗಿ – ವಸ್ತುವಿನ ಸ್ಥಿತಿಗಳು, ಪರಮಾಣುಗಳು ಮತ್ತು ಅಣುಗಳು, ಜೀವದ ಮೂಲಭೂತ ಘಟಕಗಳು, ಅಂಗಾಂಶಗಳು ಮತ್ತು ಅದರ ಪ್ರಕಾರಗಳು, ಜೀವಿಗಳಲ್ಲಿ ವೈವಿಧ್ಯತೆ, ಚಲನೆ, ಗುರುತ್ವ ಮತ್ತು ಚಲನೆಯ ನಿಯಮಗಳಂತಹ ವಿಷಯಗಳನ್ನು ಒಳಗೊಂಡಿದೆ.
ತಯಾರಿಕೆಯ ವಿಧಾನವನ್ನು ಮತ್ತು ಗೊಬ್ಬರದ ಬಳಕೆಯಿಂದ ಬೆಳೆಗಳ ಉತ್ತಮ ಇಳುವರಿಯನ್ನು ಪರೀಕ್ಷಿಸುವುದು
ಪರಿಸರದಲ್ಲಿನ ಜೈವಿಕ ಮತ್ತು ಅಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ಉದಾಹರಣೆಗಳನ್ನು ನೀಡುವುದು ಹಾಗೂ ಇಂತಹ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯನ್ನು ಸಮರ್ಥಿಸುವುದು
ಎಲ್ಲಾ ಪರಮಾಣುಗಳು ಅತಿ ಸಣ್ಣ ಘಟಕ ಕಣಗಳಾದ ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಿಂದಾಗಿರುತ್ತವೆ ಹಾಗೂ ಬೇರೆ ಬೇರೆ ಪರಮಾಣುಗಳು ಬೇರೆ ಬೇರೆ ಸಂಖ್ಯೆಯ ಘಟಕ ಕಣಗಳಿಂದ ಮಾಡಲ್ಪಟ್ಟಿರುತ್ತವೆ ಎಂಬುದನ್ನು ವಿವರಿಸುವುದು
ಸಾಮಾನ್ಯ ಸಂಯುಕ್ತಗಳ ರಾಸಾಯನಿಕ ಯೋಜನೆಯನ್ನು ರಾಸಾಯನಿಕ ಸಮೀಕರಣಗಳ ಸಹಾಯದಿಂದ ಅರ್ಥೈಸುವುದು
ಕೋಶ ವಿಭಜನೆಯ (ಮೈಟಾಸಿಸ್ ಮತ್ತು ಮಿಯಾಸಿಸ್) ಪ್ರಕ್ರಿಯೆಯನ್ನು ಮತ್ತು ಕೋಶ ವಿಭಜನೆಯ ತಾರ್ಕಿಕ ಮಹತ್ವವನ್ನು ಗುರುತಿಸುವುದು
ಪ್ರಕೃತಿಯಲ್ಲಿನ ಭೂ-ಜೈವಿಕ ಚಕ್ರ, ಆಮ್ಲಜನಕ ಚಕ್ರ, ಇಂಗಾಲ ಚಕ್ರ ಹಾಗೂ ಸಾರಜನಕ ಚಕ್ರಗಳ ಮಹತ್ವವನ್ನು ತಿಳಿಯುವುದು
ಮಾನವನ ಹಾಗೂ ಸಸ್ಯಗಳಲ್ಲಿನ ಸಾಗಾಣಿಕೆ ವ್ಯೂಹಗಳ ಘಟಕಗಳಾದ ಹೃದಯ, ಕ್ಸೈಲಂ, ಫ್ಲೋಯಮ್ ಇವುಗಳ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ವಿವರಿಸುವುದು
ಸ್ಥಾನಪಲ್ಲಟ, ಕಾಲ, ವೇಗೋತ್ಕರ್ಷ, ವೇಗ ಮತ್ತು ನ್ಯೂಟನ್‌ನ ಚಲನೆಯ ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು
ಸ್ವತಂತ್ರವಾಗಿ ಪತನಗೊಳ್ಳುತ್ತಿರುವ ವಸ್ತುಗಳ ಮೇಲೆ ಭೂ ಗುರುತ್ವದ ಪರಿಣಾಮವನ್ನು ಪರೀಕ್ಷಿಸುವುದು.
ಸಾಮಾನ್ಯ ಸಾಂಕ್ರಾಮಿಕ ಕಾಯಿಲೆ ಹಾಗೂ ನ್ಯೂನತೆ ಕಾಯಿಲೆ ಮತ್ತು ಅವುಗಳ ವಿಧಗಳು, ಚಿಕಿತ್ಸೆ, ಹರಡುವ ವಿಧಾನ ಹಾಗೂ ತಡೆಗಟ್ಟುವ ಕ್ರಮಗಳನ್ನು ಗುರುತಿಸುವುದು.
ಅಧ್ಯಾಯದ ಸಂಖ್ಯೆ | ಅಧ್ಯಾಯದ ಹೆಸರು |
---|---|
1 | ನಮ್ಮ ಸುತ್ತಮುತ್ತಲಿನ ದ್ರವ್ಯಗಳು |
2 | ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ |
3 | ಪರಮಾಣುಗಳು ಮತ್ತು ಅಣುಗಳು |
4 | ಪರಮಾಣುವಿನ ರಚನೆ |
5 | ಜೀವದ ಮೂಲ ಘಟಕ |
6 | ಅಂಗಾಂಶಗಳು |
7 | ಜೀವಿಗಳಲ್ಲಿ ವೈವಿಧ್ಯತೆ |
8 | ಚಲನೆ |
9 | ಬಲ ಮತ್ತು ಚಲನೆಯ ನಿಯಮಗಳು |
10 | ಗುರುತ್ವ |
11 | ಕೆಲಸ ಮತ್ತು ಶಕ್ತಿ |
12 | ಶಬ್ದ |
13 | ನಾವೇಕೆ ಕಾಯಿಲೆ ಬೀಳುತ್ತೇವೆ |
14 | ನೈಸರ್ಗಿಕ ಸಂಪನ್ಮೂಲಗಳು |
15 | ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ |
ಭಾಗ-1 | ಭಾಗ-2 | |||
---|---|---|---|---|
ವಿಷಯ | ಸಂಖ್ಯೆ. | ಅಧ್ಯಾಯ | ಸಂಖ್ಯೆ. | ಅಧ್ಯಾಯ |
ಇತಿಹಾಸ | 1 | ಪಾಶ್ಚಾತ್ಯ ರಿಲಿಜನ್‌ಗಳು | 5 | ಅಹೋಮ್ ರಾಜಮನೆತನ, ಮೊಘಲರು ಮತ್ತು ಮರಾಠರು |
2 | 6 ರಿಂದ 14ನೇ ಶತಮಾನದ ಭಾರತ | 6 | ಭಕ್ತಿ ಪಂಥ | |
3 | ಭಾರತದ ಮತ ಪ್ರವರ್ತಕರು | 7 | ಆಧುನಿಕ ಯುರೋಪ್ | |
4 | ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ರಾಜ್ಯ | 8 | ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ | |
ರಾಜ್ಯಶಾಸ್ತ್ರ | 1 | ನಮ್ಮ ಸಂವಿಧಾನ | 4 | ಚುನಾವಣಾ ವ್ಯವಸ್ಥೆ |
2 | ಕೇಂದ್ರ ಸರ್ಕಾರ | 5 | ದೇಶದ ರಕ್ಷಣೆ | |
3 | ರಾಜ್ಯ ಸರ್ಕಾರ | 6 | ರಾಷ್ಟ್ರೀಯ ಭಾವೈಕ್ಯ | |
4 | ನ್ಯಾಯಾಂಗ | ರಾಷ್ಟ್ರೀಯ ಭಾವೈಕ್ಯತೆ | ||
ಸಮಾಜಶಾಸ್ತ್ರ | 1 | ಕುಟುಂಬ | 3 | ಸಮುದಾಯ |
2 | ಸಾಮಾಜಿಕ ಹಾಗೂ ಕುಟುಂಬ ಸಂಬಂಧಗಳು | |||
ಭೂಗೋಳ ವಿಜ್ಞಾನ | 1 | ನಮ್ಮ ರಾಜ್ಯ – ಕರ್ನಾಟಕ-ಪ್ರಾಕೃತಿಕ ವಿಭಾಗಗಳು | 5 | ಕರ್ನಾಟಕದ ಖನಿಜ ಸಂಪನ್ಮೂಲಗಳು |
2 | ಕರ್ನಾಟಕದ ಪ್ರಾಕೃತಿಕ ವೈಭವ | 6 | ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ | |
3 | ಕರ್ನಾಟಕದ ಜಲಸಂಪನ್ಮೂಲಗಳು | 7 | ಕರ್ನಾಟಕದ ಕೈಗಾರಿಕೆಗಳು | |
4 | ಕರ್ನಾಟಕದ ಭೂ ಸಂಪತ್ತು | 8 | ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು | |
ಅರ್ಥಶಾಸ್ತ್ರ | 1 | ಆರ್ಥಿಕ ರಚನೆ | 3 | ಹಣ ಮತ್ತು ಸಾಲ |
2 | ಭಾರತೀಯ ಅರ್ಥವ್ಯವಸ್ಥೆಯ ವಲಯಗಳು | 4 | ಶ್ರಮ ಮತ್ತು ಉದ್ಯೋಗ | |
ವ್ಯವಹಾರ ಅಧ್ಯಯನ | 1 | ವ್ಯವಹಾರ ನಿರ್ವಹಣೆ | 2 | ಮಾರುಕಟ್ಟೆ ನಿರ್ವಹಣೆ |
ಕನ್ನಡ | ||
---|---|---|
ಕ್ರ.ಸಂ | ಗದ್ಯಭಾಗ | ಕೃತಿಕಾರರ ಹೆಸರು |
1 | ರಾಮರಾಜ್ಯ | ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ |
2 | ಬೆಡಗಿನ ತಾಣ ಜಯಪುರ | ಶಿವರಾಮ ಕಾರಂತ |
3 | ನಾನು ಕಂಡಂತೆ ಡಾ|| ಬಿ.ಜಿ.ಎಲ್.ಸ್ವಾಮಿ | ಡಾ. ಎಸ್. ಎಲ್. ಭೈರಪ್ಪ |
4 | ಆದರ್ಶಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ | ಸಮಿತಿ ರಚನೆ |
5 | ಪ್ರಜಾನಿಷ್ಠೆ | ಸಾ. ಶಿ. ಮರುಳಯ್ಯ |
6 | ಜನಪದ ಕಲೆಗಳ ವೈಭವ | ಸಮಿತಿ ರಚನೆ |
7 | ಚೆನ್ನಭೈರಾದೇವಿ | ಡಾ. ಗಜಾನನ ಶರ್ಮ |
8ಹರಲೀಲೆ | ಹರಿಹರ | |
ಪದ್ಯ ಭಾಗ | ||
1 | ಹೊಸಹಾಡು | ಕಯ್ಯಾರ ಕಿಞ್ಞಣ್ಣ ರೈ |
2 | ಪಾರಿವಾಳ | ಸು. ರಂ. ಎಕ್ಕುಂಡಿ |
3 | ಸಿರಿಯನಿನ್ನೇನ ಬಣ್ಣಿಪೆನು | ರತ್ನಾಕರವರ್ಣಿ |
4 | ಬಲಿಯನಿತ್ತೊಡೆ ಮುನಿವೆಂ | ಜನ್ನ |
5 | ಹೇಮಂತ | ಡಾ. ಎಸ್. ವಿ. ಪರಮೇಶ್ವರ ಭಟ್ಟ |
6 | ತತ್ತ್ವಪದಗಳು | ಕಡಕೋಳ ಮಡಿವಾಳಪ್ಪ, ಶಿಶುನಾಳ ಷರೀಫ್ |
7 | ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು | ರಾಘವಾಂಕ |
8 | ಕನ್ನಡ ನಾಡು ನುಡಿ | ಶ್ರೀ ವಿಜಯ, ನಯಸೇನ, ನೇಮಿಚಂದ್ರ, |
9 | ಮಹಾಲಿಂಗರಂಗ | ಆಂಡಯ್ಯ |
ಪಠ್ಯ ಪೂರಕ ಅಧ್ಯಯನ | ||
1 | ಗುಣಸಾಗರಿ ಪಂಢರೀಬಾಯಿ | ಜಯಮಾಲಾ |
2 | ಹೊಳೆಬಾಗಿಲು | ಸುಶ್ರುತ ದೊಡ್ಡೇರಿ |
3 | ನನ್ನಾಸೆ | ಇಂದುಮತಿ ಲಮಾಣಿ |
4 | ಉರಿದ ಬದುಕು | ಶಾಂತರಸ |
5 | ಪುಟ್ಟಹಕ್ಕಿ | ಜಂಬಣ್ಣ ಅಮರಚಿಂತ |
ಪ್ರ. 1: 9ನೇ ತರಗತಿ 2022-23 ರ ಪಠ್ಯಕ್ರಮ ಯಾವುದು?
ಉತ್ತರ: ನೀವು Embibe ನಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ 9ನೇ ತರಗತಿಯ ಸಂಪೂರ್ಣ ಮತ್ತು ನವೀಕರಿಸಿದ ಪಠ್ಯಕ್ರಮವನ್ನು ಪಡೆಯಬಹುದು. ನೀವು ನಮ್ಮ ವೆಬ್‌ಸೈಟ್‌ನಿಂದ ಎಲ್ಲಾ ವಿಷಯಗಳಿಗೆ ತರಗತಿ 9ರ ಪಠ್ಯಕ್ರಮದ PDF ಅನ್ನು ಡೌನ್‌ಲೋಡ್ ಮಾಡಬಹುದು.
ಪ್ರ. 2: 9ನೇ ತರಗತಿಗೆ ನೋಂದಣಿ ಅರ್ಜಿ ಭರ್ತಿ ಮಾಡುವುದು ಹೇಗೆ?
ಉತ್ತರ: ಶಾಲಾ ಅಧಿಕಾರಿಗಳು 9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಂದಣಿ ಅರ್ಜಿಯನ್ನು ಭರ್ತಿ ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಸರಿಯಾದ ವಿವರಗಳನ್ನು ಒದಗಿಸಬೇಕು, ನೋಂದಣಿ ಶುಲ್ಕವನ್ನು ಪಾವತಿಸಬೇಕು ಮತ್ತು ನೋಂದಣಿ ಅರ್ಜಿಯಲ್ಲಿ ತುಂಬಿದ ವಿವರಗಳನ್ನು ಪರಿಶೀಲಿಸಬೇಕು. ಪಾವತಿ ಮತ್ತು ಪರಿಶೀಲನೆಯ ನಂತರ, ಶಾಲೆಗಳು ತಮ್ಮ ಎಲ್ಲಾ ವಿದ್ಯಾರ್ಥಿಗಳ ನೋಂದಣಿ ಅರ್ಜಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಗೆ ಸಲ್ಲಿಸುತ್ತವೆ.
ಪ್ರ. 3: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿಯಲ್ಲಿ ಎಷ್ಟು ವಿಷಯಗಳಿವೆ?
ಉತ್ತರ: ಪಠ್ಯಕ್ರಮದ ಪ್ರಕಾರ, 9ನೇ ತರಗತಿಯು ಐದು ಮುಖ್ಯ ವಿಷಯಗಳನ್ನು (ಕೋರ್ ವಿಷಯಗಳು) ಹೊಂದಿದೆ, ಅದರಲ್ಲಿ ಮೂರು ಭಾಷಾ ವಿಷಯಗಳು ಮತ್ತು ಮೂರು ಕಡ್ಡಾಯ ಶೈಕ್ಷಣಿಕ ವಿಷಯಗಳಾಗಿವೆ. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಇತರ ಭಾಷೆಯ ವಿಷಯವನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಮೂರು ಕಡ್ಡಾಯ ಶೈಕ್ಷಣಿಕ ವಿಷಯಗಳೆಂದರೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ. ಈ ಐದು ವಿಷಯಗಳ ಹೊರತಾಗಿ, ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಬಹುದು.
ಪ್ರ. 4: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯವನ್ನು ಪುನರ್ ಪರಿಷ್ಕರಿಸಲಾಗಿದೆಯೇ?
ಉತ್ತರ: ಹೌದು, ಇದು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯವನ್ನು ಪುನರ್ ಪರಿಷ್ಕರಿಸಲಾಗಿದೆ. ಪಾಶ್ಚಾತ್ಯ ರಿಲಿಜನ್‌ಗಳು, 6 ರಿಂದ 14ನೇ ಶತಮಾನದ ಭಾರತ, ಭಾರತದ ಮತ ಪ್ರವರ್ತಕರು, ನ್ಯಾಯಾಂಗ, ಕರ್ನಾಟಕದ ಪ್ರಾಕೃತಿಕ ವೈವಿಧ್ಯ, ಆರ್ಥಿಕ ರಚನೆ, ಭಾರತೀಯ ಅರ್ಥವ್ಯವಸ್ಥೆಯ ವಲಯಗಳು ಅಧ್ಯಾಯಗಳನ್ನು ಹೊಸದಾಗಿ ಸೇರಿಸಲಾಗಿದೆ.
ಪ್ರ. 5: 9ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗೆ ನಿಗದಿಪಡಿಸಿರುವ ಅಂಕಗಳು ಎಷ್ಟು?
ಉತ್ತರ: 9ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗೆ ಒಟ್ಟು 20 ಅಂಕಗಳನ್ನು ನಿಗದಿಪಡಿಸಲಾಗಿದೆ. ವಿಜ್ಞಾನ ವಿಷಯದ 15 ಘಟಕಗಳಿಂದ 13 ಪ್ರಶ್ನೆಗಳಿರುತ್ತವೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ಪಠ್ಯಕ್ರಮ 2022-23 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 9ನೇ ತರಗತಿ ಪಠ್ಯಕ್ರಮ 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.