• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ 2022-23: ಮಾದರಿ ಉತ್ತರಗಳು

img-icon

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ 2022-23: ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮುಕ್ತಾಯವಾದ ಬಳಿಕ ವಿದ್ಯಾರ್ಥಿಗಳಿಗೆ ಎದುರಾಗುವ ಪ್ರಶ್ನೆ ತಾವು ಬರೆದ ಉತ್ತರಗಳು ಸರಿಯಾಗಿವೆಯೇ ಅಥವಾ ತಪ್ಪಾಗಿವೆಯೇ ಎಂಬುದು. ಮುಖ್ಯವಾಗಿ ಉತ್ತರ ಪತ್ರಿಕೆಯಲ್ಲಿ ಯಾವ ಮುಖ್ಯಾಂಶ ಇದ್ದರೆ ಆ ಪ್ರಶ್ನೆಗೆ  ಸಂಪೂರ್ಣ ಅಂಕಗಳು ದೊರೆಯುತ್ತವೆ ಎಂಬುದು ಗೊತ್ತಾಗಬೇಕಾದರೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬಿಡುಗಡೆ ಮಾಡುವ ಮಾದರಿ ಉತ್ತರಗಳನ್ನು (Key Answers) ಪರಿಶೀಲಿಸಬೇಕು. ಆಗ ವಿದ್ಯಾರ್ಥಿಗಳಿಗೆ ತಾವು ಎಷ್ಟು ಅಂಕಗಳನ್ನು ಪಡೆಯಬಹುದು, ಯಾವ ಶ್ರೇಣಿ ದೊರೆಯುತ್ತದೆ ಎಂಬುದು ಗೊತ್ತಾಗುತ್ತದೆ.   

ಎಸ್‌ಎಸ್‌ಎಲ್‌ಸಿ ಮಾದರಿ ಉತ್ತರಗಳು 2022-23

ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮುಗಿದ ಬಳಿಕ ಉತ್ತರ ಪತ್ರಿಕೆಗಳ ಮಾದರಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಿದೆ. ಮೌಲ್ಯಮಾಪನಕ್ಕೆ ಅನುಕೂಲವಾಗುವಂತೆ ಮಾದರಿ ಉತ್ತರಗಳನ್ನು ಸಿದ್ಧಪಡಿಸಲಾಗಿದೆ. ಈ ಮಾದರಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಮೂಲಕ ವಿದ್ಯಾರ್ಥಿಗಳು ಸರಿ ಉತ್ತರಗಳನ್ನು ಪರೀಕ್ಷಿಸಿಕೊಳ್ಳಬಹುದು.

ಉತ್ತರ ಪತ್ರಿಕೆಯನ್ನು ಡೌನ್‌ಲೋಡ್ ಮಾಡುವ ವಿಧಾನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಬೇಕು.

ಇತ್ತೀಚಿನ ಪ್ರಕಟಣೆಗಳ ಲಿಂಕ್ ಓಪನ್ ಆಗುತ್ತದೆ. 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಮಾದರಿ ಉತ್ತರಗಳ ಲಿಂಕ್ ಇಲ್ಲಿ ಕೆಳಗಿದೆ: 

ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಮಾದರಿ ಉತ್ತರಗಳ ಲಿಂಕ್

ಎಸ್‌ಎಸ್‌ಎಲ್‌ಸಿ 2021-22 ಫಲಿತಾಂಶದ ಹಿನ್ನೋಟ

ಮಾರ್ಚ್/ಏಪ್ರಿಲ್ 2022ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಯಂತೆ ದಿನಾಂಕ 28.03-2022 ರಿಂದ 11-04-2022 ರವರೆಗೆ ಒಟ್ಟು 3444 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಯಿತು. ಈ 2021-22ನೇ ಸಾಲಿನಲ್ಲಿ ಒಟ್ಟು 873859 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು  ಪರೀಕ್ಷೆಗೆ 853436 ಹಾಜರಾಗಿರುತ್ತಾರೆ.

ಲಿಂಗವಾರು ಫಲಿತಾಂಶ (ಶಾಲಾ ವಿದ್ಯಾರ್ಥಿಗಳು ಮಾತ್ರ)
ವರ್ಷ ಬಾಲಕರು ಬಾಲಕಿಯರು
ಹಾಜರಾದವರು ಉತ್ತೀರ್ಣರಾದವರು ಶೇಕಡಾವಾರು ಫಲಿತಾಂಶ ಹಾಜರಾದವರು ಉತ್ತೀರ್ಣರಾದವರು ಶೇಕಡಾವಾರು ಫಲಿತಾಂಶ
2021-22 408523 352752 86.34 398683 365131 92.44
2020-21 405927 405927 100 374668 374668 100
2019-20 373339 268636 71.95 365131 293971 80.51

ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ (ಶಾಲಾ ವಿದ್ಯಾರ್ಥಿಗಳು ಮಾತ್ರ)

2022 2021 2020
ವಿಷಯ ಗರಿಷ್ಠ ಅಂಕಗಳು ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ ಅಂಕಗಳು ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ ಅಂಕಗಳು ವಿದ್ಯಾರ್ಥಿಗಳ ಸಂಖ್ಯೆ
ಪ್ರಥಮ ಭಾಷೆ 125 19125 125 25535 125 9069
ದ್ವಿತೀಯ ಭಾಷೆ 100 13458 100 36168 100 6059
ತೃತೀಯ ಭಾಷೆ 100 43126 100 36507 100 21818
ಗಣಿತ 100 13683 100 6285 100 1817
ವಿಜ್ಞಾನ 100 6592 100 3585 100 924
ಸಮಾಜ ವಿಜ್ಞಾನ 100 50782 100 9327 100 4250
ಮಾಧ್ಯಮವಾರು ಫಲಿತಾಂಶ (ಶಾಲಾ ವಿದ್ಯಾರ್ಥಿಗಳು ಮಾತ್ರ)
ಮಾಧ್ಯಮ 2022 2021 2020
ಹಾಜರಾದವರು ಉತ್ತೀರ್ಣರಾದವರು ಶೇಕಡಾವಾರು ಫಲಿತಾಂಶ ಹಾಜರಾದವರು ಉತ್ತೀರ್ಣರಾದವರು ಶೇಕಡಾವಾರು ಫಲಿತಾಂಶ ಹಾಜರಾದವರು ಉತ್ತೀರ್ಣರಾದವರು ಶೇಕಡಾವಾರು ಫಲಿತಾಂಶ
ಕನ್ನಡ 460192 403361 87.65 456432 456432 100 427189 303944 71.15
ಆಂಗ್ಲ 314939 292526 92.88 291108 291108 100 279193 239214 85.68
ಉರ್ದು 21368 16259 76.09 22024 22024 100 21022 12786 60.82
ಮರಾಠಿ 10298 8881 86.24 10592 10592 100 10618 6398 60.26
ತೆಲುಗು 199 160 80.40 212 212 100 207 134 64.73
ತಮಿಳು 78 39 50.00 87 87 100 126 76 60.32
ಹಿಂದಿ 132 105 79.55 140 140 100 115 55 47.83
ಒಟ್ಟು 807206 721331 89.36 780595 780595 100 738470 562607 76.18

ಎಸ್ಎಸ್ಎಲ್‌ಸಿ 2022-23 ರ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟ

2015–16ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ವಿನ್ಯಾಸ ಹಾಗೂ ನೀಲನಕ್ಷೆಯನ್ನು ಪರಿಷ್ಕರಿಸಿ ಕಠಿಣತೆಯ ಮಟ್ಟವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ. 2019-20ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸುಲಭ ಪ್ರಶ್ನೆಗಳುಸಾಧಾರಣ ಪ್ರಶ್ನೆಗಳುಕಠಿಣ ಪ್ರಶ್ನೆಗಳುಒಟ್ಟು
30%50%20%100%

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್-19 2ನೇ ಅಲೆಯು ರಾಜ್ಯವ್ಯಾಪಿಯಾಗಿ ವ್ಯಾಪಿಸಿದ್ದಂತಹ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಸರಳೀಕರಿಸಿ ಎರಡು ದಿನಗಳಲ್ಲಿ (ಒಂದು ದಿನ ಕೋರ್ ವಿಷಯಗಲು ಮತ್ತು ಮತ್ತೊಂದು ದಿನ ಭಾಷಾ ವಿಷಯಗಳು) MCQ (Multiple Choice Question) ಬಹು ಆಯ್ಕೆ ಪ್ರಶ್ನೆ ಆಧಾರಿತ ಪ್ರಶ್ನೆಪತ್ರಿಕೆಗಳನ್ನು ನೀಡಿ ಉತ್ತರಿಸಲು ಉತ್ತರ ಪತ್ರಿಕೆಯನ್ನು OMR (optical mark reader) ಗೆ ಪೂರಕವಾದ ವಿನ್ಯಾಸದಲ್ಲಿ ನೀಡಲಾಗಿರುತ್ತದೆ. 

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಶಾಲೆಗಳು ಭೌತಿಕವಾಗಿ 2 ರಿಂದ 3 ತಿಂಗಳು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೇಕಡಾ 20 ರಷ್ಟು ಪಠ್ಯವಸ್ತುವನ್ನು ಕಡಿತಗೊಳಿಸಲಾಗಿದ್ದ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿದ್ದಂತೆಯೇ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆಯನ್ನು ಮಾಡದೆ, ಪ್ರಶ್ನೆಪತ್ರಿಕೆಯ ಕಠಿಣತೆಯ ಮಟ್ಟವನ್ನು ಈ ಕೆಳಕಂಡಂತೆ ಕಡಿಮೆ ಮಾಡಿ ಆದೇಶಿಸಲಾಗಿರುತ್ತದೆ.

ಸುಲಭ ಪ್ರಶ್ನೆಗಳುಸಾಧಾರಣ ಪ್ರಶ್ನೆಗಳುಕಠಿಣ ಪ್ರಶ್ನೆಗಳುಒಟ್ಟು
40%50%10%100%

ಮುಂದುವರೆದು, 2022-23ನೇ ಶೈಕ್ಷಣಿಕ ವರ್ಷಕ್ಕೆ ದಿನಾಂಕ: 16.05.2022ರಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಭೌತಿಕವಾಗಿ ಪ್ರಾರಂಭಿಸಲಾಗಿರುವ ಹಿನ್ನೆಲೆಯಲ್ಲಿ ಮಂಡಳಿಯ ಕಾಯ್ದೆ-1966 ನಿಯಮ-37 ರನ್ವಯ, 2022-23ನೇ ಸಾಲಿನಿಂದ ಶಾಲಾ ವಿದ್ಯಾರ್ಥಿಗಳಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯು ಕಾರ್ಯ ನಿರ್ವಹಿಸಲು ನಿಗದಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಿರುವುದರಿಂದ ಯಥಾ ರೀತಿ ಮುಂದುವರೆಸಿ ಉಲ್ಲೇಖ-4ರ ದಿನಾಂಕ:30.06.2022 ರಂದು ಸುತ್ತೋಲೆ ಹೊರಡಿಸಲಾಗಿರುತ್ತದೆ.

2019-20ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೆ ಪ್ರಸಕ್ತ 2022-23ನೇ ಸಾಲಿನಿಂದ ಅದೇ ವರ್ಗೀಕರಣದಂತೆ ಯಥಾ ರೀತಿ ಮುಂದುವರಿಸಲಾಗಿದೆ. 

ಕರ್ನಾಟಕ ಎಸ್.ಎಸ್.ಎಲ್.ಸಿ ಮಾದರಿ ಉತ್ತರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಎಸ್.ಎಸ್.ಎಲ್.ಸಿ ಕೀ ಉತ್ತರಗಳಲ್ಲಿ ದೋಷಗಳಿದ್ದರೆ ಏನು ಮಾಡಬೇಕು?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡುವ ಕೀ ಉತ್ತರಗಳಲ್ಲಿ ದೋಷಗಳಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. 

ಪ್ರ. 2: SSLC ಪರೀಕ್ಷೆಯ ಮಾದರಿ ಉತ್ತರಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?

ಉತ್ತರ: ಸಾಮಾನ್ಯವಾಗಿ ಪರೀಕ್ಷೆ ಮುಗಿದ ಬಳಿಕ ವಾರದಲ್ಲಿ ಸರಿಯುತ್ತರಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಈ ಬಗ್ಗೆ ಪತ್ರಿಕೆಗಳಲ್ಲಿ ಹಾಗೂ ಅಧಿಕೃತ ಟ್ವಿಟರ್ ಖಾತೆಗಳಲ್ಲೂ ಮಾಹಿತಿ ನೀಡಲಾಗುತ್ತದೆ. 

ಪ್ರ. 3: ಕೀ ಉತ್ತರಗಳಲ್ಲಿ ದೋಷಗಳಿದ್ದರೆ ಆಕ್ಷೇಪಣೆ ಸಲ್ಲಿಸುವುದು ಹೇಗೆ?

ಉತ್ತರ: ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನೀಡಿ ಲಾಗಿನ್ ಆಗುವ ಮೂಲಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.

ಪ್ರ.4: ಎಸ್.ಎಸ್.ಎಲ್.ಸಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ನೇರ ಲಿಂಕ್ ಯಾವುದು?

ಉತ್ತರ: ಮಾದರಿ ಉತ್ತರಗಳು/ಕೀ ಉತ್ತರಗಳಲ್ಲಿ ದೋಷಗಳು ಕಂಡುಬಂದರೆ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಲು ನೇರ ಲಿಂಕ್ – Karnataka SSLC Exam 2022 Key Answers – ಲಿಂಕ್‌

ಪ್ರ. 5: 2022-23 ನೇ ಸಾಲಿನಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ?

ಉತ್ತರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗೆಯೇ ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ.

ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳು 2022-23 ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಎಸ್.ಎಸ್.ಎಲ್.ಸಿ  ಪರೀಕ್ಷೆ ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ಎಸ್‌ಎಸ್ಎಲ್‌ಸಿ ಲರ್ನ್ ನೋಡಿ. ನಿಮ್ಮ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾದ 3D ವಿಡಿಯೋಗಳನ್ನು ನೋಡುತ್ತಾ ಪಠ್ಯಗಳನ್ನು ಕಲಿಯಿರಿ. ಬಳಿಕ ಅಣಕು ಟೆಸ್ಟ್‌ ತೆಗೆದುಕೊಂಡು ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಿಕೊಳ್ಳಿ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ 202-23: ಮಾದರಿ ಉತ್ತರಗಳು ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ 2022-23: ಮಾದರಿ ಉತ್ತರಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ