
ಎಸ್‌ಎಸ್‌ಎಲ್‌ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್ಗಳು
August 19, 2022ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ 2023: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಒಂದು ಮಹತ್ವದ ಘಟ್ಟ. ಈ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಉನ್ನತ ಶಿಕ್ಷಣಕ್ಕೆ ನಿರ್ಣಾಯಕವಾಗಿರುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಪರೀಕ್ಷೆಗೆ ಉತ್ತಮ ತಯಾರಿ ನಡೆಸುವುದು ಅಗತ್ಯ. ಹಾಗಾದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್ ನಲ್ಲಿ ಹಾಗೂ ಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ. ಅದಲ್ಲದೆ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.
ಹಂತ 1 : ಅಧಿಕೃತ ವೆಬ್‌ಸೈಟ್ ಲಿಂಕ್ ಮತ್ತು ವೆಬ್ ಪುಟಕ್ಕೆ ಭೇಟಿ ನೀಡಿ
ಹಂತ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3: ಅಭ್ಯರ್ಥಿಗಳ ರೋಲ್ ನಂಬರ್ ಮತ್ತು ಇತರೆ ಮಾಹಿತಿ ನಮೂದಿಸಿ
ಹಂತ 4: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುತ್ತದೆ ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಒಬ್ಬ ವಿದ್ಯಾರ್ಥಿಗೆ ಪರಿಣಾಮಕಾರಿ ಅಧ್ಯಯನ ಯೋಜನೆ ಮತ್ತು ಸೂಕ್ತ ಸಮಯ ನಿರ್ವಹಣೆಯ ಅಗತ್ಯವಿದೆ. ಅದೇ ರೀತಿ ನಿಮಗೆ ಸಹಾಯಕವಾಗುವ ಕೆಲವು ಸಲಹೆಗಳು ಇಲ್ಲಿವೆ.
ಶೈಕ್ಷಣಿಕ ವರ್ಷ 2021-2022ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ದಾಖಲೆ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದು ಶೇ.85.63ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಇನ್ನೊಂದು ಗಮನಿಸತಬೇಕಾದ ಸಂಗತಿ ಎಂದರೆ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶೇ. 100ರಷ್ಟು ಅಂಕ ಗಳಿಸಿದ್ದಾರೆ. ಈ ಹಿಂದಿನ ಫಲಿತಾಂಶಗಳನ್ನು ಗಮನಿಸಿದರೆ 625 ಅಂಕಗಳನ್ನು ಪಡೆಯುವವರ ಸಂಖ್ಯೆ ಹತ್ತರ ಆಸುಪಾಸಿನಲ್ಲಿರುತ್ತಿತ್ತು. ಹಾಗೆಯೇ 2020ರಲ್ಲಿ ಆರು ವಿದ್ಯಾರ್ಥಿಗಳು ಮಾತ್ರ 625 ಅಂಕ ಪಡೆದಿದ್ದರು. ಆದರೆ 2022ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕರ ಉತ್ತೀರ್ಣತೆ ಪ್ರಮಾಣ ಶೇ.81.39 ರಷ್ಟು ಹಾಗೂ ಬಾಲಕಿಯರ ಉತ್ತೀರ್ಣತೆ ಪ್ರಮಾಣ ಶೇ.90.29 ಆಗಿದೆ. ಹಾಗಾಗಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ಒಟ್ಟು 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 7,30,81 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ (2020-21 ಹೊರತುಪಡಿಸಿ) ಈ ಬಾರಿಯ ಶೇಕಡವಾರು ಫಲಿತಾಂಶ ಅತ್ಯಧಿಕವಾಗಿದೆ.
ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.20ರಷ್ಟು ಕಠಿಣ ಪ್ರಶ್ನೆಗಳು ಇರುತ್ತಿದ್ದವು. ಆದರೆ ಈ ಬಾರಿ ಶೇ.10ರಷ್ಟು ಕಠಿಣ ಪ್ರಶ್ನೆಗಳನ್ನು ನೀಡಲಾಗಿತ್ತು. ಉತ್ತಮ ಫಲಿತಾಂಶಕ್ಕೆ ಈ ಅಂಶವೇ ಕಾರಣವಾಗಿದೆ. 2020-21ನೇ ಸಾಲಿನಲ್ಲಿ ಕೋವಿಡ್ ಕಾರಣ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗಿತ್ತು. ಖಾಸಗಿ ವಿದ್ಯಾರ್ಥಿಯೊಬ್ಬರ ಹೆಸರಿನಲ್ಲಿ ಬೇರೊಬ್ಬರು ಹಾಜರಾಗಿದ್ದ ಕಾರಣ ಆ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿತ್ತು.
ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕನ್ನಡ, ಆಂಗ್ಲ, ತಮಿಳು, ತೆಲುಗು, ಮರಾಠಿ, ಉರ್ದು ಹಾಗೂ ಹಿಂದಿ ಈ ಏಳು (07) ಮಾಧ್ಯಮಗಳಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಯಾವುದಾದರೊಂದು ಮಾಧ್ಯಮವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆಯನ್ನು ಬರೆಯಬಹುದು. ಈ ಬಾರಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ದಾಖಲೆ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಾಧ್ಯಮವಾರು ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಬಹುದು.
ಮಾಧ್ಯಮವಾರು ಉತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶ | |
---|---|
ಕನ್ನಡ | 4,03361 |
ಇಂಗ್ಲಿಷ್ | 2,92,526 |
ಉರ್ದು | 16,259 |
ಮರಾಠಿ | 8881 |
ತೆಲುಗು | 160 |
ಮಾಧ್ಯಮವಾರು ಫಲಿತಾಂಶ (ಶಾಲಾ ವಿದ್ಯಾರ್ಥಿಗಳು ಮಾತ್ರ) | ||||||||||
---|---|---|---|---|---|---|---|---|---|---|
ಕ್ರ.ಸಂ | ಮಾಧ್ಯಮ | 2022 | 2021 | 2020 | ||||||
ಹಾಜರಾದವರು | ಉತ್ತೀರ್ಣರಾದವರು | ಶೇಕಡಾವಾರು ಫಲಿತಾಂಶ | ಹಾಜರಾದವರು | ಉತ್ತೀರ್ಣರಾದವರು | ಶೇಕಡಾವಾರು ಫಲಿತಾಂಶ | ಹಾಜರಾದವರು | ಉತ್ತೀರ್ಣರಾದವರು | ಶೇಕಡಾವಾರು ಫಲಿತಾಂಶ | ||
1 | ಕನ್ನಡ | 460192 | 403361 | 87.65 | 456432 | 456432 | 100 | 427189 | 303944 | 71.15 |
2 | ಇಂಗ್ಲಿಷ್ | 314939 | 292526 | 92.88 | 291108 | 291108 | 100 | 279193 | 239214 | 85.68 |
3 | ಉರ್ದು | 21368 | 16259 | 76.09 | 22024 | 22024 | 100 | 21022 | 12786 | 60.82 |
ಒಟ್ಟಾರೆ ಫಲಿತಾಂಶ | |||
---|---|---|---|
ವರ್ಷ | ಹಾಜರಾದವರು | ಉತ್ತೀರ್ಣರಾದವರು | ಶೇಕಡಾವಾರು ಫಲಿತಾಂಶ |
2021-22 | 853436 | 730881 | 85.63 |
871501 | 871500 | 99.99 | |
2019-20 | 811057 | 811057 | 72.42 |
ವರ್ಷ | ಗಂಡು | ಹೆಣ್ಣು | ||||
---|---|---|---|---|---|---|
ಹಾಜರಾದವರು | ಉತ್ತೀರ್ಣರಾದ್ವರು | ಶೇಕಡಾವಾರು | ಹಾಜರಾದವರು | ಉತ್ತೀರ್ಣರಾದ್ವರು | ಶೇಕಡಾವಾರು | |
2021-22 | 408523 | 352752 | 86.34 | 398683 | 368579 | 92.44 |
2020-21 | 405927 | 405927 | 100 | 374668 | 374668 | 100 |
2019-20 | 373339 | 268636 | 71.95 | 365131 | 293971 | 80.51 |
2022 | 2021 | 2020 | ||||
---|---|---|---|---|---|---|
ವಿಷಯ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ |
ಪ್ರಥಮ ಭಾಷೆ | 125 | 19125 | 125 | 25535 | 125 | 9069 |
ದ್ವಿತೀಯ ಭಾಷೆ | 100 | 13458 | 100 | 36168 | 100 | 6059 |
ತೃತೀಯ ಭಾಷೆ | 100 | 43126 | 100 | 36507 | 100 | 21818 |
ಸರ್ಕಾರಿ | 5,717 |
ಅನುದಾನಿತ | 3,412 |
ಅನುದಾನರಹಿತ | 6258 |
ಒಟ್ಟು | 15,387 |
ಸರ್ಕಾರಿ | 3,76,685 |
ಅನುದಾನಿತ | 2,23,032 |
ಅನುದಾನರಹಿತ | 2,74,129 |
ಒಟ್ಟು | 8,73,846 |
ಸರ್ಕಾರಿ | 1,357 |
ಅನುದಾನಿತ | 1,109 |
ಅನುದಾನರಹಿತ | 978 |
ಒಟ್ಟು | 3,444 |
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ (ಶಾಲಾ ವಿದ್ಯಾರ್ಥಿಗಳು ಮಾತ್ರ) | ||||||
---|---|---|---|---|---|---|
2022 | 2021 | 2020 | ||||
ಗಳಿಸಿದ ಅಂಗಳು | ವಿದ್ಯಾರ್ಥಿಗಳ ಸಂಖ್ಯೆ | ಗಳಿಸಿದ ಅಂಗಳು | ವಿದ್ಯಾರ್ಥಿಗಳ ಸಂಖ್ಯೆ | ಗಳಿಸಿದ ಅಂಗಳು | ವಿದ್ಯಾರ್ಥಿಗಳ ಸಂಖ್ಯೆ | |
1 | 625 | 145 | 625 | 158 | 625 | 11 |
2 | 624 | 309 | 624 | 0 | 624 | 14 |
3 | 623 | 472 | 623 | 289 | 623 | 56 |
ಶಾಲಾ ವಿಧವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ (ಶಾಲಾ ವಿದ್ಯಾರ್ಥಿಗಳು ಮಾತ್ರ) | ||||
---|---|---|---|---|
2022 | ||||
ಗಳಿಸಿದ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ | |||
ಸರ್ಕಾರಿ | ಅನುದಾನಿತ | ಅನುದಾನರಹಿತ | ಒಟ್ಟು | |
625 | 21 | 8 | 116 | 145 |
624 | 48 | 24 | 237 | 309 |
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ (ಶಾಲಾ ವಿದ್ಯಾರ್ಥಿಗಳು ಮಾತ್ರ) | ||||||
---|---|---|---|---|---|---|
ವಿಷಯ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ | ಗರಿಷ್ಠ ಅಂಕಗಳು | ವಿದ್ಯಾರ್ಥಿಗಳ ಸಂಖ್ಯೆ |
ಪ್ರಥಮ ಭಾಷೆ | 125 | 19125 | 125 | 25535 | 125 | 9069 |
ದ್ವಿತೀಯ ಭಾಷೆ | 100 | 13458 | 100 | 36168 | 100 | 6059 |
ತೃತೀಯ ಭಾಷೆ | 100 | 43126 | 100 | 36507 | 100 | 21818 |
ಪ್ರ. 1: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾವಾರು ರ್‍ಯಾಂಕಿಂಗ್ ಪದ್ಧತಿ ಇದೆಯೇ?
ಉತ್ತರ: ಇಲ್ಲ. ಜಿಲ್ಲಾವಾರು ರ್‍ಯಾಂಕಿಂಗ್ ಪದ್ಧತಿಯನ್ನು ಕೈಬಿಡಲಾಗಿದೆ. ಜಿಲ್ಲೆಗಳ ನಡುವೆ ಸ್ಪರ್ಧೆ ಬೇಡ ಎಂಬ ಉದ್ದೇಶದಿಂದ ಈ ಪದ್ಧತಿ ಈಗಿಲ್ಲ.
ಪ್ರ. 2: ಫಲಿತಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳಿಗೆ ಗ್ರೇಡಿಂಗ್ ವ್ಯವಸ್ಥೆ ಇದೆಯೇ?
ಉತ್ತರ: ಹೌದು. ಗುಣಾತ್ಮಕ ಫಲಿತಾಂಶ ವಿಶ್ಲೇಷಣೆ ಆಧರಿಸಿ ಎ, ಬಿ, ಸಿ ಎಂದು ವಿಂಗಡಿಸಲಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಶೈಕ್ಷಣಿಕ ಜಿಲ್ಲೆಗಳು ಮಾತ್ರ ಬಿ ಗ್ರೇಡ್‌ನಲ್ಲಿದ್ದು ಉಳಿದೆಲ್ಲ 32 ಶೈಕ್ಷಣಿಕ ಜಿಲ್ಲೆಗಳು ಎ ಗ್ರೇಡ್‌ನಲ್ಲಿವೆ.
ಪ್ರ. 3: 2022ರಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಎಷ್ಟು?
ಉತ್ತರ: ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಪೈಕಿ 3,920 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಅದೇ ರೀತಿ 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಪ್ರ. 4: 2022ರಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
ಉತ್ತರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಏಳು ಮಾಧ್ಯಮಗಳಲ್ಲಿ ಬರೆಯುವ ಅವಕಾಶವನ್ನು ನೀಡಲಾಗಿದೆ. ಕನ್ನಡ ಮಾಧ್ಯಮದಲ್ಲಿ 4,03,361, ಇಂಗ್ಲಿಷ್-2,92,526, ಉರ್ದು-16,259, ಮರಾಠಿ-8881, ತೆಲುಗು-160, ತಮಿಳು-39, ಹಿಂದಿಯಲ್ಲಿ-105 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಪ್ರ. 5: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆಗಳನ್ನು ತಿಳಿಸಿ?
ಉತ್ತರ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅವರಿಗೆ ಫಲಿತಾಂಶವನ್ನು ಯಾವುದೇ ಗೊಂದಲ ಇಲ್ಲದಂತೆ ತಿಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿಯನ್ನು ಆರಂಭಿಸಿದೆ. ಸಹಾಯವಾಣಿ ಸಂಖ್ಯೆಗಳು-080-23310075, 080-23310076, 080-23562267, 080-23561271.
ಪ್ರ. 6. 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಯಾವಾಗ ಪ್ರಾರಂಭವಾಗಲಿದೆ?
ಉತ್ತರ: ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯು 2023ರ ಮಾರ್ಚ್/ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದ್ದು, ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಜನವರಿ 2023ರಲ್ಲಿ ಪ್ರಕಟಿಸಲಾಗುತ್ತದೆ.
ಪ್ರ. 7. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ 2023ರ ಫಲಿತಾಂಶವನ್ನು ಎಲ್ಲಿ ತಿಳಿಯಬಹುದು?
ಉತ್ತರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2023 ಅನ್ನು ಮಂಡಳಿಯು ಮೇ ತಿಂಗಳಿನಲ್ಲಿ ಪ್ರಕಟಿಸಲಿದ್ದು, ಶಾಲಾ ಮುಖ್ಯಸ್ಥರು ವೆಬ್‌ಸೈಟ್‌ಗೆ ಭೇಟಿ ನೀಡಿ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು ವೆಬ್‌ಸೈಟ್ ನಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪಡೆಯಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.