ಎಸ್ಎಸ್ಎಲ್ಸಿ ಬಳಿಕ ಮಾಡಬಹುದಾದ ಟಾಪ್ 5 ಕೋರ್ಸ್ಗಳು
August 19, 2022
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್‌ಗಳು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್/ಏಪ್ರಿಲ್ ತಿಂಗಳಿನಲ್ಲಿ ನಡೆಸಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಳಿಕ ಮೇ ತಿಂಗಳಿನಲ್ಲಿ ಫಲಿತಾಂಶವನ್ನು ಪ್ರಕಟಿಸಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಈ ಲೇಖನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022, 2021, 2020 ಹಾಗೂ 2019ರ ಟಾಪರ್‌ಗಳ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಫಲಿತಾಂಶದ ಅಂಕಿಅಂಶಗಳು, ಹಿಂದಿನ ವರ್ಷಗಳ ಫಲಿತಾಂಶ ವಿಶ್ಲೇಷಣೆ, ಮರು-ಮೌಲ್ಯಮಾಪನ ಪ್ರಕ್ರಿಯೆ ಮತ್ತು ವಿಭಾಗ ಪರೀಕ್ಷೆಗಳಂತಹ ಇತರ ವಿವರಗಳನ್ನು ಸಹ ನೋಡಬಹುದು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ) 2022ರ ಎಸ್‌ಎಸ್‌ಎಲ್‌ಸಿ (ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಫಲಿತಾಂಶವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದರೊಂದಿಗೆ ಮಂಡಳಿಯು ಎಸ್ಎಸ್ಎಲ್ಸಿ ಪರೀಕ್ಷೆ 2022ರ ಫಲಿತಾಂಶಗಳೊಂದಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ SSLC ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 11, 2022 ರವರೆಗೆ ಯಶಸ್ವಿಯಾಗಿ ನಡೆಯಿತು. ಪರೀಕ್ಷೆಯ ಸಮಯವನ್ನು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:45 ರವರೆಗೆ ನಡೆಸಲಾಯಿತು. ಈ ವರ್ಷ, ಕರ್ನಾಟಕದಾದ್ಯಂತ 15,387 ಶಾಲೆಗಳಿಂದ ಒಟ್ಟು 8,73,846 ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ SSLC ಫಲಿತಾಂಶ 2022
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 853436 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಬಾರಿಯ 2021-22ನೇ ಸಾಲಿನಲ್ಲಿ ಪರೀಕ್ಷೆಗೆ 873859 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ಈ ಬಾರಿ ದಾಖಲೆಯ 145 ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅವರ ಸಂಪೂರ್ಣ ಪಟ್ಟಿ ಇಲ್ಲಿದೆ.
| ಕ್ರ.ಸಂ | ವಿದ್ಯಾರ್ಥಿ ಹೆಸರು | ಸ್ಥಳ |
|---|---|---|
| 1 | ಅಮಿತ್ ಮಾದಾರ | ವಿಜಯಪುರ |
| 2 | ಭೂಮಿಕಾ ಬಿಆರ್ | ತುಮಕೂರು |
| 3 | ಪ್ರವೀಣ ನೀರಲಗಿ | ಹಾವೇರಿ |
| 4 | ಸಹನಾ ಮಹಾಂತೇಶ ರಾಯರ್ | ಬೆಳಗಾವಿ |
| 5 | ಐಶ್ವರ್ಯ ಲಕ್ಷ್ಮಣ ಕನಸೆ | ವಿಜಯಪುರ |
| 6 | ಆಕೃತಿ ಎಸ್ ಎಸ್ | ಚಿಕ್ಕಮಗಳೂರು |
| 7 | ಅರ್ಜುನ್ ಇ ನಾಯಕ್ | ಹಾಸನ |
| 8 | ಚಿರಾಗ್ ಮಹೇಶ್ ನಾಯ್ಕ್ | ಸಿರ್ಸಿ |
| 9 | ಏಕತಾ ಎಂ ಜಿ | ಮೈಸೂರು |
| 10 | ಗಾಯತ್ರಿ | ಉಡುಪಿ |
| 11 | ನಿಶಾ | ಉಡುಪಿ |
| 12 | ಪ್ರಗತಿ ಎಚ್ ಎನ್ | ಹಾಸನ |
| 13 | ಪುನೀತ್ ನಾಯ್ಕ | ಉಡುಪಿ |
| 14 | ರೋಶನ್ | ಮಂಗಳೂರು |
| 15 | ಸಾತ್ವಿಕ್ ಎಚ್ ಎಸ್ | ಮಂಗಳೂರು |
| 16 | ಶಂಭು ಶಿವಾನಂದ್ ಖಾನಾಯಿ | ಚಿಕ್ಕೋಡಿ |
| 17 | ಶಿವಲೀಲಾ ಶಿವಲಿಂಗಪ್ಪ ದುರ್ಗೆ | ವಿಜಯಪುರ |
| 18 | ಸಿಂಚನಾ ಕೆ ಎಂ | ಚಿತ್ರದುಗ್ರ |
| 19 | ಸ್ವಾತಿ ಗೌಡಪ್ಪ ಮಾಲೇದ್ | ವಿಜಯಪುರ |
| 20 | ವೈಷ್ಣವಿ ಶೆಟ್ಟಿ | ಉಡುಪಿ |
| 21 | ಯಶವಿತಾ ಟಿ.ಎಸ್ | ಹಾಸನ |
| 22 | ಕನ್ನಿಕಾಪರಮೇಶ್ವರಿ ರಾಮಚಂದ್ರ ಹೆಡ್ಗೆ | ಶಿರಸಿ |
| 23 | ಮಧು ಬಸವರಾಜ ಶೇತಸನದಿ | ಹಾವೇರಿ |
| 24 | ಸ್ವಾತಿ ಸುರೇಶ ತೊಲಗಿ | ಬೆಳಗಾವಿ |
| 25 | ವರ್ಷಾ ಅನಿಲ್ ಪಟೇಲ್ | ಚಿಕ್ಕೋಡಿ |
| 26 | ಆದಿತ್ಯ ಎ ಎಸ್ | ಬೆಂಗಳೂರು ದಕ್ಷಿಣ |
| 27 | ಚಾರುಕೀರ್ತಿ ಕೆ | ಮೈಸೂರು |
| 28 | ಮಹಾಲಕ್ಷ್ಮಿ ಸಿ | ಹಾಸನ |
| 29 | ಸುಜಯ್ ಬಿ | ಮಂಗಳೂರು |
| 30 | ಇಂದಿರಾ ಅರುಣ್ ನ್ಯಾಮಗೌಡರ್ | ಮಂಗಳೂರು |
| 31 | ಈರಯ್ಯ ಶ್ರೀಶೈಲ್ ಶೇಗುಣಸಿಮಠ | ಮಂಗಳೂರು |
| 32 | ಕಲ್ಮೇಶ್ವರ ಪುಂಡಲೀಕ ನಾಯಕ್ | ಮಂಗಳೂರು |
| 33 | ಶ್ರೇಯಾ ಆರ್ ಶೆಟ್ಟಿ | ಮಂಗಳೂರು |
| 34 | ಸುದೇಶ್ ದತ್ತಾತ್ರೇ ಕಿಲ್ಲೇದಾರ್ | ಮಂಗಳೂರು |
| 35 | ಅಭಯ್ ಶರ್ಮಾ ಕೆ | ಮಂಗಳೂರು |
| 36 | ಅಭಿಜ್ಞಾ ಬಿ | ಬೆಂಗಳೂರು ದಕ್ಷಿಣ |
| 37 | ಅಭಿಜ್ಞಾ ಆರ್ | ಮಂಗಳೂರು |
| 38 | ಅಭಿಷೇಕ್ ಗೌಡ ಕೆ | ಹಾಸನ |
| 39 | ಆದರ್ಶ ಬಸವರಾಜ ಹಾಲಭಾವಿ | ಬೆಳಗಾವಿ |
| 40 | ಅದಿತಿ ಬಿ ಎಸ್ | ಮೈಸೂರು |
| 41 | ಅಕ್ಷತಾ | ಉಡುಪಿ |
| 42 | ಅಮೋಘ್ ಎನ್ ಕೌಶಿಕ್ | ಬೆಳಗಾವಿ |
| 43 | ಅಮೃತಾ ಬಿ | ಬಳ್ಳಾರಿ |
| 44 | ಅಮೂಲ್ಯ ಎಂ ಎಸ್ | ಕೋಲಾರ |
| 45 | ಅನಘಾ ಎಂ ಮೂರ್ತಿ | ಬೆಂಗಳೂರು ಉತ್ತರ |
| 46 | ಅನನ್ಯ ಹೆಚ್ ಎನ್ | ಶಿವಮೊಗ್ಗ |
| 47 | ಅನೀಶಾ ಎನ್ ಭಾರದ್ವಾಜ್ | ಬೆಂಗಳೂರು ಉತ್ತರ |
| 48 | ಅನ್ನಪೂರ್ಣ ಎಚ್ ವಿ | ಚಿಕ್ಕಮಗಳೂರು |
| 49 | ಅಪೋರ್ವ ಎಚ್ ಎಸ್ | ಮಂಡ್ಯ |
| 50 | ಆತ್ಮೀಯ ಎಂ ಕಶ್ಯಪ್ | ಮಂಗಳೂರು |
| 51 | ಅವನಿ ಕೆ | ಬೆಂಗಳೂರು ದಕ್ಷಿಣ |
| 52 | ಬಿ ಜಯಶ್ರೀ | ಬೆಂಗಳೂರು ಉತ್ತರ |
| 53 | ಭೂಮಿಕಾ ಬಿ ಕೆ | ಹಾಸನ |
| 54 | ಭೂಮಿಕಾ ಸಿ ಆರ್ | ಶಿವಮೊಗ್ಗ |
| 55 | ಭುವನ್ ಕುಂಚುಮ್ ಆರ್ | ಚಿತ್ರದುರ್ಗ |
| 56 | ಸಿ ಎಸ್ ಕವನ | ಬಳ್ಳಾರಿ |
| 57 | ಚೈತನ್ಯ ಜೆ | ಬೆಂಗಳೂರು ಗ್ರಾಮಾಂತರ |
| 58 | ಚಂದು ಎಸ್ | ಬೆಂಗಳೂರು ಉತ್ತರ |
| 59 | ಚರಿತ ಎಂ ಗೌಡ | ಚಿಕ್ಕಮಗಳೂರು |
| 60 | ದೀಕ್ಷಾ ಪಾಂಡುರಂಗ ನಾಯಕ್ | ಉತ್ತರ ಕನ್ನಡ |
| 61 | ದೇವಿಕಾ ಜಿ | ಮೈಸೂರು |
| 62 | ಧನ್ಯಶ್ರೀ | ಮಂಗಳೂರು |
| 63 | ದಿಶಾ ಬಿ ಎಂ | ಮೈಸೂರು |
| 64 | ಜಿ ಹರ್ಷಿತಾ | ಚಿಕ್ಕಬಳ್ಳಾಪುರ |
| 65 | ಗಗನ್ ಕೆ ಎಂ | ಮಂಡ್ಯ |
| 66 | ಗಾನ ಸಿ ಶೇಖರ್ | ಬೆಂಗಳೂರು ಉತ್ತರ |
| 67 | ಹರ್ಷಿತಾ ಎಚ್ ಸಿ | ಹಾಸನ |
| 68 | ಹರ್ಷಿತಾ ಎಂ | ಬೆಂಗಳೂರು ದಕ್ಷಿಣ |
| 69 | ಹೇಮಂತ್ ಎಸ್ ಗೌಡ | ಬೆಂಗಳೂರು ಉತ್ತರ |
| 70 | ಇಂಚರ ಎಲ್ | ಹಾಸನ |
| 71 | ಜಯತಿ ಬಿ ಗೌಡ | ಚಿಕ್ಕಬಳ್ಳಾಪುರ |
| 72 | ಜ್ಞಾನವಿ ಎಚ್ ಡಿ | ಚಿಕ್ಕಮಗಳೂರು |
| 73 | ಕಲ್ಯಾಣ್ ಎಂ ಎಂ | ಹಾಸನ |
| 74 | ಕಾರ್ಣಿಕ ಎ | ಕೋಲಾರ |
| 75 | ಕಾರ್ತಿಕ್ ಭಟ್ | ಉತ್ತರ ಕನ್ನಡ |
| 76 | ಲಾವಣ್ಯ ಎಚ್ ಎನ್ | ಬೆಂಗಳೂರು ಉತ್ತರ |
| 77 | ಲಿಕಿತಾ ಎಚ್ ಡಿ | ಹಾಸನ |
| 78 | ಲಿಸಾ ಎಚ್ಸಿ | ಚಿಕ್ಕಬಳ್ಳಾಪುರ |
| 79 | ಮಧುರಾ ಎ | ಹಾಸನ |
| 80 | ಮಧುಶ್ರೀ | ಮಂಗಳೂರು |
| 81 | ಮಂಜುನಾಥ ಬಿ | ಬೆಂಗಳೂರು ಉತ್ತರ |
| 82 | ಮೇಘನಾ ವಿಷ್ಣು ಭಟ್ | ಉತ್ತರ ಕನ್ನಡ |
| 83 | ಮೊಹಮ್ಮದ್ ಆಶಿಕ್ ಎಸ್ | ಬೆಂಗಳೂರು ಉತ್ತರ |
| 84 | ಮೋಹಿತ್ ಎಚ್ | ಹಾಸನ |
| 85 | ಮೊನಿಶ್ ಗೌಡ ಎನ್ ಡಿ | ಬೆಂಗಳೂರು ದಕ್ಷಿಣ |
| 86 | ನಮ್ರತ್ ಜಿ ಪಿ | ಮಧುಗಿರಿ |
| 87 | ನಿತ್ಯ ಆರ್ | ಬೆಂಗಳೂರು ಉತ್ತರ |
| 88 | ನಿವೇದಿತಾ ಎಚ್ ವೈ | ಹಾಸನ |
| 89 | ಪಂಚಮಿ ಸಿ | ಶಿವಮೊಗ್ಗ |
| 90 | ಪಂಚಮಿ ಆರ್ | ಶಿವಮೊಗ್ಗ |
| 91 | ಪಣಿಕಾ ವೈ ಕೆ | ಕೋಲಾರ |
| 92 | ಪ್ರಜ್ಞಾ ಎಚ್ ಆರ್ | ಶಿವಮೊಗ್ಗ |
| 93 | ಪ್ರಕೃತಿ ಪಿ | ಬೆಂಗಳೂರು ಉತ್ತರ |
| 94 | ಪ್ರಣತಿ ಮೂರ್ತಿ | ಬೆಂಗಳೂರು ಉತ್ತರ |
| 95 | ಪ್ರತೀಕ್ಷಾ ದಯಾನಂದ | ಶಿವಮೊಗ್ಗ |
| 96 | ಪ್ರೀತಂ ರವಳಪ್ಪ ಪಣಸುಡಕರ್ | ಬೆಂಗಳೂರು ಉತ್ತರ |
| 97 | ಪ್ರೀತಿ ಎಸ್ | ಚಿಕ್ಕಬಳ್ಳಾಪುರ |
| 98 | ಪ್ರೇರಣಾ ಬಿ | ಶಿವಮೊಗ್ಗ |
| 99 | ಪ್ರೇರಣಾ ಎಂ ಸಾಳುಂಕೆ | ಬೆಂಗಳೂರು ಉತ್ತರ |
| 100 | ಪುನೀತ ಬಿ ಬಿ | ಹಾಸನ |
| 101 | ಪೂರ್ವಿಕಾ ಎಸ್ | ಹಾಸನ |
| 102 | ರಕ್ಷಾ ಬಿ ಎಂ | ಚಿತ್ರದುರ್ಗ |
| 103 | ರಕ್ಷಿತ್ ಸುರೇಶ್ ಚಿನಿವಾರ್ | ವಿಜಯಪುರ |
| 104 | ರಕ್ಷಿತಾ ಎಸ್ ಎನ್ | ಶಿವಮೊಗ್ಗ |
| 105 | ರೋಹಿಣಿ ಗೌಡರ್ | ಬೆಳಗಾವಿ |
| 106 | ರುತು ಅಮೋಲ್ ತಲಾತಿ | ಬೆಂಗಳೂರು ದಕ್ಷಿಣ |
| 107 | ಎಸ್ ಬಿ ವಿದ್ಯಾಶ್ರೀ | ಬಳ್ಳಾರಿ |
| 108 | ಸಾಕ್ಷಿ ಪಾಟೀಲ್ | ಬೆಂಗಳೂರು ಉತ್ತರ |
| 109 | ಸಮೀಕ್ಷಾ ಎಸ್ | ಶಿವಮೊಗ್ಗ |
| 110 | ಸಂಸ್ಕೃತಿ ಪಿ ಕುಮಾರ್ | ಹಾಸನ |
| 111 | ಸಂಜನಾ ಸಿ ಎ | ಚಿತ್ರದುರ್ಗ |
| 112 | ಸಂಜನಾ ಪ್ರವೀಣ್ | ಬೆಂಗಳೂರು ಉತ್ತರ |
| 113 | ಶಾಮ ಎಸ್ ಶೆಟ್ಟಿ | ಚಿಕ್ಕಮಗಳೂರು |
| 114 | ಶರ್ಮೀನ್ ಎಂ ಶೇಖ್ | ಸಿರ್ಸಿ |
| 115 | ಶಿವಾನಂದ ಬಸಗೌಡ ಪಾಟೀಲ್ | ಧಾರವಾಡ |
| 116 | ಶ್ರಾವಣಿ ಜಿ ಆರ್ | ಬೆಂಗಳೂರು ಉತ್ತರ |
| 117 | ಶ್ರೀಜಾ ಹೆಬ್ಬಾರ್ | ಮಂಗಳೂರು |
| 118 | ಶ್ರೀಕಾಂತ ಬೆಳ್ಳೆ | ಕಲಬುರ್ಗಿ |
| 119 | ಶ್ರೇಯಾ ಸಿ ಜೆ | ಹಾಸನ |
| 120 | ಶ್ರೇಯಾ ದೇಸಾಯಿ | ವಿಜಯಪುರ |
| 121 | ಶ್ರೇಯಾ ಆರ್ | ಬೆಂಗಳೂರು ಉತ್ತರ |
| 122 | ಸ್ಪೂರ್ತಿ ಜಿ ಸಿ | ಹಾಸನ |
| 123 | ಶ್ರೀ ಲಕ್ಷ್ಮಿ ಎಂ | ಕೋಲಾರ |
| 124 | ಸೃಷ್ಟಿ ಜೆ | ಶಿವಮೊಗ್ಗ |
| 125 | ಸೃಷ್ಟಿ ಮಹೇಶ ಪತ್ತಾರ | ಚಿಕ್ಕೋಡಿ |
| 126 | ಸೃಷ್ಟಿ ವಿ ಆರ್ | ಚಿತ್ರದುರ್ಗ |
| 127 | ಸುಚರಿತ ಆರ್ | ಚಿಕ್ಕಮಗಳೂರು |
| 128 | ಸುಪ್ರಿಯಾ ಕೆ ಎಸ್ | ತುಮಕೂರು |
| 129 | ಸೂರಜ್ ಗೌಡ ಎಂ ಎನ್ | ಮಂಡ್ಯ |
| 130 | ಸುಶ್ಮಿತಾ | ಬೀದರ್ |
| 131 | ಸ್ವಸ್ತಿ | ಮಂಗಳೂರು |
| 132 | ತಸ್ನೀದ್ ಫಿರ್ದೋಸೆ ಹುಂಶಾಲ್ | ಹಾಸನ |
| 133 | ತೇಜಶ್ವಿನಿ ಚವ್ಹಾಣ | ಕೋಲಾರ |
| 134 | ತೃಪ್ತಿ ಕೆ ಸಿ | ಚಿಕ್ಕಬಳ್ಳಾಪುರ |
| 135 | ತುಷಾರ್ ಕೇಶವ್ ಶಾನಭಾಗ್ | ಸಿರ್ಸಿ |
| 136 | ವಿ ಅಕ್ಷತಾ ಕಾಮತ್ | ಮಂಗಳೂರು |
| 137 | ವಾಸವಿ ಎಸ್ ಪುರಾಣಿಕ್ | ಬೆಂಗಳೂರು ದಕ್ಷಿಣ |
| 138 | ವೀಕ್ಷಾ ವಿ ಶೆಟ್ಟಿ | ಮಂಗಳೂರು |
| 139 | ವಿಕಾಸ್ ಕೆ ಆರ್ | ಶಿವಮೊಗ್ಗ |
| 140 | ವಿಷ್ಣು ಪ್ರಿಯಾ ಆರ್ | ಬೆಂಗಳೂರು ಉತ್ತರ |
| 141 | ವಿವೇಕಾನಂದ ಮಹಾಂತೇಶ ಹೊನ್ನಾಳಿ | ಚಿಕ್ಕೋಡಿ |
| 142 | ವೆಂಕಟೇಶ ಯೋಹೇಶ್ ಡೊಂಗರೆ | ಬೆಳಗಾವಿ |
| 143 | ಯಲ್ಲಾಲಿಂಗ್ ಬಸಪ್ಪ ಸೂಳಿಭಾವಿ | ವಿಜಯಪುರ |
| 144 | ಯಶಸ್ವಿ ಅರ್ಸ್ ಎಂ | ಮೈಸೂರು |
| 145 | ಯುಕ್ತಾ ಬಿ | ಚಿತ್ರದುರ್ಗ |
ಇವರು ತುಮಕೂರಿನ ತಿಪಟೂರಿನ ನಳಂದ ಹೈಸ್ಕೂಲ್ ವಿದ್ಯಾರ್ಥಿನಿ. ಶಿಕ್ಷಕರ ಮತ್ತು ಪೋಷಕರ ಬೆಂಬಲದಿಂದಾಗಿ ನಾನು 625ಕ್ಕೆ 625 ಅಂಕ ಗಳಿಸುವಂತಾಯಿತು. ಬೆಳಗ್ಗೆ 5-8 ಶಾಲೆಯಿಂದ ಬರುವುದು 7 ಗಂಟೆ ಆಗುತ್ತಿತ್ತು. ಬಂದ ಬಳಿಕ ರಾತ್ರಿ 10 ಗಂಟೆವರೆಗೂ ಓದುತ್ತಿದ್ದೆ ಎಂದಿದ್ದಾರೆ.
ಭಾಷಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಬರಲು ಕಾರಣ ನನ್ನ ಶಿಕ್ಷಕರು. ವ್ಯಾಕರಣದ ಬಗ್ಗೆ ಅವರು ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ನಮ್ಮ ಶಾಲೆಯಲ್ಲಿ ಜನವರಿ ಹೊತ್ತಿಗೆ ಎಲ್ಲಾ ಸಿಲಬಸ್ ಮುಗಿಸಿ ಬಳಿಕ ರಿವಿಷನ್ ಮಾಡಿದ್ದರು. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡುತ್ತೇನೆ. ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರೀಕ ಸೇವೆಗಳಿಗೆ ಸಿದ್ಧರಾಗಬೇಕು ಎಂಬ ಕನಸನ್ನು ಕಂಡಿದ್ದಾರೆ ಸುಪ್ರಿಯಾ. ನಾನು ಯಾವುದೇ ಮನೆಪಾಠಕ್ಕೆ ಹೋಗಿಲ್ಲ, ಶಾಲೆಯಲ್ಲಿ ಮಾಡಿದ್ದನ್ನು ಓದಿಕೊಳ್ಳುತ್ತಿದ್ದೆ ಎಂದಿದ್ದಾರೆ. ಕೋವಿಡ್ ಸಮಯದಲ್ಲಿ ಆನ್‌ಲೈನ್ ತರಗತಿಗಳನ್ನು ಕೇಳುತ್ತಿದ್ದೆ.
ಈ ಸಲ ಪತ್ರಿಕೆಗಳೆಲ್ಲಾ ತುಂಬಾ ಸುಲಭ ಇತ್ತು. ಶಿಕ್ಷಕರು ತುಂಬಾ ಸಹಾಯ ಮಾಡಿದ್ದಾರೆ. ಕೋವಿಡ್ ಸಮಯದಲ್ಲೂ ಆನ್‌ಲೈನ್ ಕ್ಲಾಸಸ್ ಇತ್ತು ಹಾಗಾಗಿ ಸಮಸ್ಯೆ ಆಗಲಿಲ್ಲ.
ಪಿಸಿಎಂಬಿ ತೆಗೆದುಕೊಂಡು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದಿದ್ದೇನೆ ಎನ್ನುತ್ತಾರೆ. ಅಂದಿನ ಪಾಠವನ್ನು ಅಂದೇ ಮುಗಿಸಿಕೊಳ್ಳುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ರಿವಿಷನ್ ಅಷ್ಟೇ ಮಾಡ್ತಿದ್ದೆ. ಅಂದಂದಿನ ಪಾಠವನ್ನು ಅಂದೇ ಮುಗಿಸಿಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಮೈಸೂರಿನ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಇವರು. ಸರ್ಕಾರಿ ಶಾಲೆಯಲ್ಲಿ ಓದಿ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿ ಏಕ್ತಾ. ಓದುವಪರು ಎಲ್ಲಿದ್ದರೂ ಓದುತ್ತಾರೆ ಎಂದು ಅಮ್ಮ ಹೇಳುತ್ತಿದ್ದರು. ಸಾಧನೆ ಮಾಡುವ ಛಲ ಇದ್ದರೆ ಇಂಟರ್‌ನ್ಯಾಷನಲ್ ಸ್ಕೂಲ್ ಆದರೂ ಒಂದೇ ಸರ್ಕಾರಿ ಶಾಲೆ ಆದರೂ ಒಂದೇ ಎಂಬ ಅಮ್ಮನ ಮಾತುಗಳೇ ನನಗೆ ಸ್ಫೂರ್ತಿ ಎನ್ನುತ್ತಾರೆ.
ಟ್ಯೂಷನ್‌ಗೆ ಹೋಗುತ್ತಿರಲಿಲ್ಲ. ಅದೇ ಸಮಯವನ್ನು ಅಧ್ಯಯನಕ್ಕೆ ಉಪಯೋಗಿಸುತ್ತಿದ್ದೆ. ನನಗೆ ನನ್ನ ಅಪ್ಪ ಅಮ್ಮನೇ ಸ್ಫೂರ್ತಿ. ಸೈನ್ಸ್ ತೆಗೆದುಕೊಳ್ಳಬೇಕು ಎಂದಿದೆ. ಮುಂದೆ ಇಂಜಿನಿಯರಿಂಗ್ ಓದಬೇಕು ಎಂಬ ಆಸೆ ಇದೆ. NDA ಪರೀಕ್ಷೆಯಲ್ಲಿ ಪಾಸಾಗಿ ಡಿಫೆನ್ಸ್‌ನಲ್ಲಿ ಸೇವೆ ಸಲ್ಲಿಸಬೇಕು ಎಂದಿದ್ದೇನೆ ಎನ್ನುತ್ತಾರೆ ಏಕ್ತಾ.
2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು 21-06-2021 ರಿಂದ 05-07-2021 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ 19ರ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 19-07-2021 ಮತ್ತು 22-07-2021 ರಂದು ರಾಜ್ಯಾದ್ಯಂತ ನಡೆಸಲಾಯಿತು. ಕೋವಿಡ್ 19ರ ಹಿನ್ನೆಲೆಯಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಆದರೆ ನಮ್ಮ ರಾಜ್ಯದಲ್ಲಿ ಮಂಡಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒ.ಎಂ.ಆರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಾಯಿತು.
ಈ ಪರೀಕ್ಷೆಗೆ ಒಟ್ಟು 876506 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 871443 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. 5063 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗದೆ ಮುಂದಿನ ಪರೀಕ್ಷೆಗೆ ಹೊಸ ಅಭ್ಯರ್ಥಿಗಳಾಗಿ ಹಾಜರಾಗಲು ಅವಕಾಶ ಪಡೆದಿರುತ್ತಾರೆ.
625ಕ್ಕೆ 625 ಅಂಕ ಪಡೆದಿರುವ 157 ವಿದ್ಯಾರ್ಥಿಗಳು, 625ಕ್ಕೆ 623 ಅಂಕ ಪಡೆದಿರುವ 289 ವಿದ್ಯಾರ್ಥಿಗಳು, 625ಕ್ಕೆ 622 ಅಂಕ ಪಡೆದಿರುವ ಇಬ್ಬರು ವಿದ್ಯಾರ್ಥಿಗಳು, 625ಕ್ಕೆ 621 ಅಂಕ ಪಡೆದಿರುವ 449 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮಾರ್ಚ್ 27 ರಿಂದ ಏಪ್ರಿಲ್ 09 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ 19ರ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 25.06.2020 ರಿಂದ 04.07.2020ರ ವರೆಗೆ ರಾಜ್ಯಾದ್ಯಂತ ನಡೆಸಲಾಯಿತು.
ಈ ಪರೀಕ್ಷೆಗೆ ಒಟ್ಟು 811050 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. 18067 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗದೆ ಮುಂದಿನ ಪರೀಕ್ಷೆಗೆ ಹೊಸ ಅಭ್ಯರ್ಥಿಗಳಾಗಿ ಹಾಜರಾಗಲು ಅವಕಾಶ ಪಡೆದಿರುತ್ತಾರೆ.
| ವಿದ್ಯಾರ್ಥಿ | ಸ್ಥಳ |
|---|---|
| ಸನ್ನಿಧಿ ಮಹಾಬಲೇಶ್ವರ ಹೆಗಡೆ | ಶಿರಸಿ |
| ಚಿರಾಯು | ಬೆಂಗಳೂರು |
| ನಿಖಿಲೇಶ್ ಮುರಳಿ | ಬೆಂಗಳೂರು |
| ಧೀರಜ್ ರೆಡ್ಡಿ ಸಂಸದ | ಮಂಡ್ಯ |
| ಅನುಷ್ | ದಕ್ಷಿಣ ಕನ್ನಡ |
| ತನ್ಮಯಿ | ಚಿಕ್ಕಮಗಳೂರು |
ಮಾರ್ಚ್/ಏಪ್ರಿಲ್ 2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ದಿನಾಂಕ 21.03.2019 ರಿಂದ 04.04.2019ರ ವರೆಗೆ ರಾಜ್ಯಾದ್ಯಾಂತ ಒಟ್ಟು 2847 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 825468 ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ.
ಈ ಸಲದ ಫಲಿತಾಂಶದಲ್ಲಿ ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದರೆ, 11 ವಿದ್ಯಾರ್ಥಿಗಳು 625 ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ. ಜತೆಗೆ, 19 ವಿದ್ಯಾರ್ಥಿಗಳು 625 ಕ್ಕೆ 623 ಅಂಕಗಳನ್ನು ಗಳಿಸಿದ್ದಾರೆ.
ಆನೇಕಲ್‌ನ ಸೆಂಟ್ ಫಿಲೋಮಿನಾ ಹೈ ಸ್ಕೂಲ್‌ನ ಡಿ. ಸೃಜನಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಲಬಾಗದ ಸಿವಿಎಸ್ ಕೆ ಹೈಸ್ಕೂಲ್ ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ 625 ಕ್ಕೆ 625 ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಟಾಪರ್‌ಗಳ ಪಟ್ಟಿಯನ್ನು ನೀವು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು:
2019ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಟಾಪರ್‌ಗಳ ಪಟ್ಟಿಯನ್ನು ನೀವು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು:
| ಶ್ರೇಣಿ | ಹೆಸರು | ಶೇಕಡಾವಾರು |
|---|---|---|
| 1 | ನಾಗಾಂಜಲಿ ಪರಮೇಶ್ವರ ನಾಯ್ಕ | 100% |
| 2 | ಡಿ ಸೃಜನಾ | 100% |
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ:
| ಪ್ರಮುಖ ಪ್ರಕ್ರಿಯೆಗಳು | ದಿನಾಂಕಗಳು |
|---|---|
| ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 10 ನೇ ತರಗತಿಯ ಫಲಿತಾಂಶ | ಮೇ 19, 2023 (ತಾತ್ಕಾಲಿಕ) |
| ಫಲಿತಾಂಶ ಮರು-ಮೌಲ್ಯಮಾಪನ ಪ್ರಕ್ರಿಯೆ | ಮೇ ಕಡೆಯ ವಾರ(ತಾತ್ಕಾಲಿಕ) |
| ಪೂರಕ ಪರೀಕ್ಷೆ | ಜೂನ್ / ಜುಲೈ (ತಾತ್ಕಾಲಿಕ) |
| ಪೂರಕ ಪರೀಕ್ಷೆಯ ಫಲಿತಾಂಶದ ಘೋಷಣೆ | ಜುಲೈ (ತಾತ್ಕಾಲಿಕ) |
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2022ರ ಫಲಿತಾಂಶ ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ:
* ತಮ್ಮ ಫಲಿತಾಂಶಗಳನ್ನು ಈ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಲಿಂಕ್.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ 2019ರ ಫಲಿತಾಂಶಕ್ಕೆ ಹೋಲಿಸಿದರೆ 2020ರಲ್ಲಿ ಒಟ್ಟಾರೆ ಉತ್ತೀರ್ಣದ ಶೇಕಡಾವಾರು ಇಳಿಕೆಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ವರ್ಷವಾರು ವಿಶ್ಲೇಷಣೆ ಕೆಳಕಂಡಂತಿದೆ:
| ವರ್ಷ | ಒಟ್ಟಾರೆ ಉತ್ತೀರ್ಣ ಶೇಕಡಾವಾರು |
|---|---|
| 2020 | 71.8% |
| 2019 | 73.7% |
| 2018 | 71.93% |
| 2017 | 67.87% |
| 2016 | 79.16% |
| 2015 | 81.82% |
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶ್ರೇಣಿಯನ್ನು ನೀಡುತ್ತದೆ. ಶೇ. ಗ್ರೇಡಿಂಗ್ ಪದ್ಧತಿಯ ಪ್ರಕಾರ, 562 ಮತ್ತು 625 ರ ನಡುವೆ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗೆ ಅತ್ಯುನ್ನತ ಶ್ರೇಣಿಯ A+ ಗ್ರೇಡ್ ನೀಡಲಾಗುತ್ತದೆ. 219-311 ನಡುವಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಕಡಿಮೆ ದರ್ಜೆಯ C ಗ್ರೇಡ್ ನೀಡಲಾಗುತ್ತದೆ. ಈ ಶ್ರೇಣಿ ವ್ಯವಸ್ಥೆಯನ್ನು ಕೆಳಗೆ ನೀಡಲಾಗಿದೆ:
| ಗ್ರೇಡ್ | ವಿದ್ಯಾರ್ಥಿಗಳ ಅಂಕಗಳ ಶ್ರೇಣಿ |
|---|---|
| A+ | 562-625 |
| A | 500-561 |
| B+ | 437-499 |
| B | 375-436 |
| C+ | 312-374 |
| C | 219-311 |
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಬಳಿಕ ವಿದ್ಯಾರ್ಥಿಗಳು ಫಲಿತಾಂಶದ ಪ್ರಿಂಟ್‌ಔಟ್ ತೆಗೆದುಕೊಂಡು ಪರಿಶೀಲಿಸಬೇಕು. ಈ ಪ್ರಿಂಟ್‌ಔಟ್ ತಾತ್ಕಾಲಿಕವಾಗಿದ್ದು, ಪ್ರವೇಶ ಉದ್ದೇಶಗಳಿಗಾಗಿ ಇದನ್ನು ಮಾನ್ಯ ಡಾಕ್ಯುಮೆಂಟ್ ಎಂದು ಪರಿಗಣಿಸಲಾಗುವುದಿಲ್ಲ.
ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ಮೂಲ ಅಂಕ ಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಿಯುಸಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಫಲಿತಾಂಶ ಪ್ರಕಟವಾದ ಬಳಿಕ ಮಂಡಳಿಯು ಅಂಕಪಟ್ಟಿಗಳನ್ನು ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳು/ಅಧ್ಯಯನ ಕೇಂದ್ರಗಳಿಂದ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.
ಪರೀಕ್ಷೆಗಳು ಅಥವಾ ಕೆಲವು ಪೇಪರ್‌ಗಳನ್ನು ತೆರವುಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ತಾವು ಪರೀಕ್ಷೆಗಳನ್ನು ಚೆನ್ನಾಗಿ ಬರೆದಿದ್ದೇವೆ ಮತ್ತು ಉತ್ತಮ ಅಂಕಗಳನ್ನು ಗಳಿಸಿರಬೇಕು ಎಂದು ಭಾವಿಸಬಹುದು. KSEEB ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಉತ್ತರ ಪತ್ರಿಕೆಗಳನ್ನು ಮರುಪರಿಶೀಲನೆ/ಮರುಮೌಲ್ಯಮಾಪನಕ್ಕಾಗಿ ಸಲ್ಲಿಸುವ ಆಯ್ಕೆಯನ್ನು ನೀಡುತ್ತದೆ. ತಮ್ಮ ಉತ್ತರ ಪತ್ರಿಕೆಗಳನ್ನು ಮರುಪರಿಶೀಲಿಸಲು ಬಯಸುವ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕದ ವಿವರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಗಳ ಮರು-ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ನಂತರ KSEEB ವಿದ್ಯಾರ್ಥಿಗಳಿಗೆ ವಿಭಾಗೀಯ/ಸುಧಾರಣಾ ಪರೀಕ್ಷೆಗಳನ್ನು ನಡೆಸುತ್ತದೆ. ವಿಭಾಗೀಯ/ಸುಧಾರಣಾ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪುನರಾವರ್ತಿಸದೆ SSLC ಪರೀಕ್ಷೆಗಳನ್ನು ತೆರವುಗೊಳಿಸಲು ಎರಡನೇ ಅವಕಾಶವನ್ನು ನೀಡುತ್ತದೆ. ವಾರ್ಷಿಕ ಪರೀಕ್ಷೆಗಳು ಅಥವಾ ಕೆಲವು ವಿಷಯಗಳಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ವಿಭಾಗೀಯ ಪರೀಕ್ಷೆಗಳಿಗೆ ಹಾಜರಾಗಬಹುದು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು (FAQs) ಕೆಳಗೆ ನೀಡಲಾಗಿದೆ:
ಪ್ರ. 1: ನಾನು ಕರ್ನಾಟಕ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಎಲ್ಲಿ ಪರಿಶೀಲಿಸಬಹುದು?
ಉತ್ತರ: ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ಪುಟದಲ್ಲಿ ಒದಗಿಸಲಾದ ಲಿಂಕ್‌ಗಳ ಮೂಲಕ ನೀವು ವೆಬ್‌ಸೈಟ್ ಅನ್ನು ಪ್ರವೇಶಿಸಬಹುದು.
ಪ್ರ. 2: ಕರ್ನಾಟಕ ಮಂಡಳಿಯು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡುತ್ತದೆ?
ಉತ್ತರ: ಕರ್ನಾಟಕ SSLC ಫಲಿತಾಂಶವನ್ನು 2023ರ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಪ್ರ. 3: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳಿಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
ಉತ್ತರ: ಪೂರಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್/ಏಪ್ರಿಲ್ ತಿಂಗಳ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಬಳಿಕ ಆರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಪ್ರ. 4: ನಾನು ಒಂದು ವಿಷಯದಲ್ಲಿ ಅನುತ್ತೀರ್ಣರಾದರೆ ಏನು ಮಾಡಬಹುದು?
ಉತ್ತರ: ನೀವು ಪೂರಕ ಪರೀಕ್ಷೆಗಳಿಗೆ ಹಾಜರಾಗಬಹುದು.
ಪ್ರ. 5: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಗ್ರೇಡಿಂಗ್ ವ್ಯವಸ್ಥೆ(ಶ್ರೇಣಿ ವ್ಯವಸ್ಥೆ)ಯನ್ನು ಅನುಸರಿಸುತ್ತದೆಯೇ?
ಉತ್ತರ: ಹೌದು. ಮಂಡಳಿಯು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶ್ರೇಣಿಗಳನ್ನು ನೀಡುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ʻಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟಾಪರ್‌ಗಳುʼ ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.