
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಿಯುಸಿಯಲ್ಲಿ ಲಭ್ಯವಿರುವ ವಿವಿಧ ಸಂಯೋಜನೆಗಳ ಮಾಹಿತಿ
August 19, 2022ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ಪರೀಕ್ಷಾ ಮಾದರಿ 2022-23: ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಸಿದ್ಧರಾಗಲು ಪಿಯುಸಿ ಪಠ್ಯಕ್ರಮ 2023 ಮತ್ತು ಪರೀಕ್ಷಾ ಮಾದರಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಕರ್ನಾಟಕ ಪಿಯುಸಿ ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯ ತಿಳಿವಳಿಕೆಯೊಂದಿಗೆ ತಮಗಾಗಿ ವಿದ್ಯಾರ್ಥಿಗಳು ಸುಲಭವಾಗಿ ಅಧ್ಯಯನ ಯೋಜನೆಯನ್ನು ಹಾಕಿಕೊಳ್ಳಬಹುದು. ಅವರು ಪ್ರತಿ ವಿಷಯದ ಓದಿಗೆ ಅಗತ್ಯವಾದ ಸಮಯವನ್ನು ಸಹ ಲೆಕ್ಕಾಚಾರ ಮಾಡಿಕೊಳ್ಳಬಹುದು.
ಮಾರ್ಚ್ 2023 ರಲ್ಲಿ ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳವರೆಗೆ ತುಂಬಾ ಸಮಯ ಲಭ್ಯವಿದೆ. ಈ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ತಮ್ಮ ಅಧ್ಯಯನವನ್ನು ಯೋಜಿಸಬೇಕು. ವಿದ್ಯಾರ್ಥಿಗಳ ಅಭ್ಯಾಸದ ಯೋಜನೆಗೆ ಸಹಕಾರಿಯಾಗುವ ವಿಷಯವಾರು ಪ್ರಥಮ ಪಿಯುಸಿ ಪಠ್ಯಕ್ರಮ ಮತ್ತು ಮಾರ್ಕಿಂಗ್ ಸ್ಕೀಮ್ ಅನ್ನು ಈ ಲೇಖನದಲ್ಲಿ ನೀಡಲಾಗಿದೆ.
ವಿಷಯಗಳು | ಪ್ರತಿ ವಿಷಯಕ್ಕೆ ಅಂಕಗಳು | ಸಮಯದ ಅವಧಿ (ಗಂಟೆಗಳಲ್ಲಿ) |
---|---|---|
ಜೀವಶಾಸ್ತ್ರ ರಸಾಯನಶಾಸ್ತ್ರ ಗಣಕ ವಿಜ್ಞಾನ ಎಲೆಕ್ಟ್ರಾನಿಕ್ಸ್ ಗೃಹ ವಿಜ್ಞಾನ ಭೌತಶಾಸ್ತ್ರ | 70 ಅಂಕಗಳು | 3 ಗಂಟೆ 15 ನಿಮಿಷಗಳು |
2022-23ರ ಪರೀಕ್ಷೆಯ ಮಾದರಿಯನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಮಾದರಿಯ ಕುರಿತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ:
ಪರೀಕ್ಷೆಯ ವಿಧಾನ | ಆಫ್ಲೈನ್ ಪರೀಕ್ಷೆ |
---|---|
ಪರೀಕ್ಷೆಯ ಅವಧಿ | 3 ಗಂಟೆಗಳು |
ಪ್ರಶ್ನೆಗಳ ವಿಧಗಳು | ಅತಿ ಸಣ್ಣ ಉತ್ತರದ ಪ್ರಶ್ನೆಗಳು (VSA) (ತಲಾ 1 ಅಂಕ) ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು-I (SA-I) (ತಲಾ 2 ಅಂಕಗಳು) ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು-II (SA-II) (ತಲಾ 3 ಅಂಕಗಳು) ದೀರ್ಘ ಉತ್ತರ ಮಾದರಿಯ ಪ್ರಶ್ನೆಗಳು (LA) (ತಲಾ 5 ಅಂಕಗಳು) |
ಪ್ರಶ್ನೆ ಪತ್ರಿಕೆಯ ಮಾಧ್ಯಮ | ಶೈಕ್ಷಣಿಕ ವಿಷಯಗಳಿಗೆ ಇಂಗ್ಲಿಷ್ ಅಥವಾ ಕನ್ನಡ ಭಾಷಾ ಪತ್ರಿಕೆ ಇಂಗ್ಲಿಷ್ ಪತ್ರಿಕೆ |
ಭಾಷೆಗೆ ಗರಿಷ್ಠ ಅಂಕಗಳು | 100 ಅಂಕಗಳು |
ಥಿಯರಿಗೆ ಗರಿಷ್ಠ ಅಂಕಗಳು | 70 ಅಂಕಗಳು |
ಪ್ರಾಯೋಗಿಕ ಪರೀಕ್ಷೆಗೆ ಗರಿಷ್ಠ ಅಂಕಗಳು | 30 ಅಂಕಗಳು |
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪ್ರಥಮ ಪಿಯುಸಿ ಗಣಿತ ವಿಷಯದ ಪರೀಕ್ಷೆಗೆ ಸಂಬಂಧಿಸಿದ ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ ಮತ್ತು ಅಂಕಗಳು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ:
ಪರೀಕ್ಷೆಯ ಅವಧಿ | 3 ಗಂಟೆಗಳು |
---|---|
ಥಿಯರಿ ಅಂಕಗಳು | 100 ಅಂಕಗಳು |
ಪ್ರಶ್ನೆಗಳ ಒಟ್ಟು ಸಂಖ್ಯೆ | 50 |
ಅತಿ ಸಣ್ಣ ಉತ್ತರದ (VSA) ಪ್ರಶ್ನೆಗಳು (ಪ್ರತಿಯೊಂದಕ್ಕೂ 1 ಅಂಕ) | 10 (ಒಟ್ಟು 10ಕ್ಕೆ ಉತ್ತರಿಸಬೇಕು) |
ಸಣ್ಣ ಉತ್ತರದ (SA-1) ಪ್ರಶ್ನೆಗಳು (ಪ್ರತಿಯೊಂದಕ್ಕೂ 2 ಅಂಕಗಳು) | 14 (ಯಾವುದೇ 10ಕ್ಕೆ ಉತ್ತರಿಸಬೇಕು) |
ಸಣ್ಣ ಉತ್ತರದ (SA-2) ಪ್ರಶ್ನೆಗಳು (ಪ್ರತಿಯೊಂದಕ್ಕೂ 3 ಅಂಕಗಳು) | 14 ರಲ್ಲಿ 10 |
ದೀರ್ಘ ಉತ್ತರದ (LA-1) ಪ್ರಶ್ನೆಗಳು (ಪ್ರತಿಯೊಂದಕ್ಕೂ 5 ಅಂಕಗಳು) | 10 ರಲ್ಲಿ 6 |
ದೀರ್ಘ ಉತ್ತರದ (LA-2) ಪ್ರಶ್ನೆಗಳು (10 ಅಂಕಗಳು= 6+4) | 2 ರಲ್ಲಿ 1 |
ಪ್ರಥಮ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪ್ರಥಮ ಪಿಯುಸಿ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಸಂಬಂಧಿಸಿದ ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ ಮತ್ತು ಅಂಕಗಳು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ:
ಪರೀಕ್ಷೆಯ ಅವಧಿ | 3 ಗಂಟೆಗಳು |
---|---|
ಪ್ರಾಯೋಗಿಕ ಅಂಕಗಳು | 30 ಅಂಕಗಳು |
ಥಿಯರಿ ಅಂಕಗಳು | 70 ಅಂಕಗಳು |
ಪ್ರಶ್ನೆಗಳ ಒಟ್ಟು ಸಂಖ್ಯೆ | 37 ರಲ್ಲಿ 27 |
ಅತಿ ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (ಪ್ರತಿಯೊಂದಕ್ಕೆ 1 ಅಂಕ) | 10 ಕ್ಕೆ 10 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-1) (ಪ್ರತಿಯೊಂದಕ್ಕೆ 2 ಅಂಕಗಳು) | 8 ರಲ್ಲಿ 5 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-2) (ಪ್ರತಿಯೊಂದಕ್ಕೆ 3 ಅಂಕಗಳು) | 8 ರಲ್ಲಿ 5 |
ದೀರ್ಘ ಉತ್ತರ (LA-1) (ಪ್ರತಿಯೊಂದಕ್ಕೆ 5 ಅಂಕಗಳು) | 3 ರಲ್ಲಿ 2 |
ದೀರ್ಘ ಉತ್ತರ ಮಾದರಿ (LA-2) (ಪ್ರತಿಯೊಂದಕ್ಕೆ 5 ಅಂಕಗಳು) | 3 ರಲ್ಲಿ 2 |
ಸಂಖ್ಯಾತ್ಮಕ ಸಮಸ್ಯೆಗಳು (NP) (ಪ್ರತಿಯೊಂದಕ್ಕೆ 5 ಅಂಕಗಳು) | 5 ರಲ್ಲಿ 3 |
ಪ್ರಥಮ ಪಿಯುಸಿ ಭೌತಶಾಸ್ತ್ರದ ಮಾದರಿ ಪತ್ರಿಕೆ
ಪ್ರಶ್ನೆಗಳ ಮಟ್ಟ | ವೆಯಿಟೇಜ್ | ಅಂಕಗಳು |
---|---|---|
ಸುಲಭ | 40% | 56/140 |
ಸಾಮಾನ್ಯ | 40% | 56/140 |
ಕ್ಲಿಷ್ಟ | 20% | 28/140 |
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪ್ರಥಮ ಪಿಯುಸಿ ರಸಾಯನಶಾಸ್ತ್ರ ವಿಷಯದ ಪರೀಕ್ಷೆಗೆ ಸಂಬಂಧಿಸಿದ ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ ಮತ್ತು ಅಂಕಗಳು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ:
ಪರೀಕ್ಷೆ ಅವಧಿ | 3 ಗಂಟೆಗಳು |
---|---|
ಆಂತರಿಕ ಅಂಕಗಳು | 30 ಅಂಕಗಳು |
ಥಿಯರಿ ಅಂಕಗಳು | 70 ಅಂಕಗಳು |
ಪ್ರಶ್ನೆಗಳ ಒಟ್ಟು ಸಂಖ್ಯೆ | 36 ರಲ್ಲಿ 27 |
ಅತಿ ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (ಪ್ರತಿಯೊಂದಕ್ಕೆ 1 ಅಂಕ) | 10 ಕ್ಕೆ 10 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-1) (ಪ್ರತಿಯೊಂದಕ್ಕೆ 2 ಅಂಕಗಳು) | 8 ರಲ್ಲಿ 5 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-2) (ಪ್ರತಿಯೊಂದಕ್ಕೆ 3 ಅಂಕಗಳು) | 8 ರಲ್ಲಿ 5 |
ದೀರ್ಘ ಉತ್ತರ (LA-1) (ಪ್ರತಿಯೊಂದಕ್ಕೆ 5 ಅಂಕಗಳು) | 6 ರಲ್ಲಿ 4 |
ದೀರ್ಘ ಉತ್ತರ ಮಾದರಿ (LA-2) (ಪ್ರತಿಯೊಂದಕ್ಕೆ 5 ಅಂಕಗಳು) | 5 ರಲ್ಲಿ 3 |
1. ಪ್ರಶ್ನೆ ಪತ್ರಿಕೆಯು ನಾಲ್ಕು ಭಾಗಗಳನ್ನು ಹೊಂದಿದೆ: A, B, C ಮತ್ತು D. ಎಲ್ಲಾ ಭಾಗಗಳು ಕಡ್ಡಾಯವಾಗಿರುತ್ತವೆ.
2. (a). ಭಾಗ-A – 10 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಯು 1 ಅಂಕವನ್ನು ಹೊಂದಿರುತ್ತದೆ. ಭಾಗ A (I): ಹದಿನೈದು ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 01 ರಿಂದ 15), ಯಾವುದಾದರೂ 10ಕ್ಕೆ ಉತ್ತರಿಸಬೇಕು.
(b) ಭಾಗ-B – 10 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಯು 2 ಅಂಕಗಳನ್ನು ಹೊಂದಿರುತ್ತದೆ. ಭಾಗ B (II): 10 ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 16 ರಿಂದ 25), ಯಾವುದಾದರೂ ಐದು ಉತ್ತರಿಸಬೇಕು..
(c) ಭಾಗ-C – 15 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಯು 3 ಅಂಕಗಳನ್ನು ಹೊಂದಿರುತ್ತದೆ. ಭಾಗ C (III): 10 ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 26 ರಿಂದ 35), ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಬೇಕು.
(d) ಭಾಗ-D – 35 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಯು 5 ಅಂಕಗಳನ್ನು ಹೊಂದಿರುತ್ತದೆ.
(i) (ಭಾಗ-IV) 25 ಅಂಕಗಳನ್ನು ಹೊಂದಿರುತ್ತದೆ: ಒಟ್ಟು ಹನ್ನೊಂದು ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 36 ರಿಂದ 41), ಯಾವುದಾದರೂ ಐದಕ್ಕೆ ಉತ್ತರಿಸಬೇಕು.
(ii) (ಭಾಗ-V) – 10 ಅಂಕಗಳನ್ನು ಹೊಂದಿದೆ: ಒಟ್ಟು ನಾಲ್ಕು ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 42 ರಿಂದ 50), ಯಾವುದಾದರೂ ಎರಡಕ್ಕೆ ಉತ್ತರಿಸಬೇಕು.
** ಯೂನಿಟ್ ಹಂಚಿಕೆಯಲ್ಲಿ ±1 ಮಾರ್ಕ್‌ನ ವ್ಯತ್ಯಾಸ ಇರುತ್ತದೆ.
ಜೀವಶಾಸ್ತ್ರ ಪರೀಕ್ಷೆಯ ಮಾದರಿಯನ್ನು ಕೆಳಗೆ ನೀಡಲಾಗಿದೆ:
ಪರೀಕ್ಷೆ ಅವಧಿ | 3 ಗಂಟೆಗಳು |
---|---|
ಆಂತರಿಕ ಅಂಕಗಳು | 30 ಅಂಕಗಳು |
ಥಿಯರಿ ಅಂಕಗಳು | 70 ಅಂಕಗಳು |
ಪ್ರಶ್ನೆಗಳ ಒಟ್ಟು ಸಂಖ್ಯೆ | 35 ರಲ್ಲಿ 27 |
ಅತಿ ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (ಪ್ರತಿಯೊಂದಕ್ಕೆ 1 ಅಂಕ) | 10 ಕ್ಕೆ 10 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-1) (ಪ್ರತಿಯೊಂದಕ್ಕೆ 2 ಅಂಕಗಳು) | 8 ರಲ್ಲಿ 5 |
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-2) (ಪ್ರತಿಯೊಂದಕ್ಕೆ 3 ಅಂಕಗಳು) | 8 ರಲ್ಲಿ 5 |
ದೀರ್ಘ ಉತ್ತರ (LA-1) (ಪ್ರತಿಯೊಂದಕ್ಕೆ 5 ಅಂಕಗಳು) | 6 ರಲ್ಲಿ 4 |
ದೀರ್ಘ ಉತ್ತರ ಮಾದರಿ (LA-2) (ಪ್ರತಿಯೊಂದಕ್ಕೆ 5 ಅಂಕಗಳು) | 5 ರಲ್ಲಿ 3 |
ಭಾಗ-ಎ ನಲ್ಲಿ ಒಟ್ಟು 15 ಪ್ರಶ್ನೆಗಳಲ್ಲಿ ಯಾವುದಾದರೂ 10 ಪ್ರಶ್ನೆಗಳಿಗೆ ತಲಾ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಬೇಕು. (10×1=10)
ಭಾಗ-ಬಿ ನಲ್ಲಿ 10 ಪ್ರಶ್ನೆಗಳಲ್ಲಿ ಯಾವುದಾದರೂ 5 ಪ್ರಶ್ನೆಗಳಿಗೆ ಅವಶ್ಯವಿದ್ದೆಡೆ ಪ್ರತಿಯೊಂದಕ್ಕೂ ತಲಾ 3-5 ವಾಕ್ಯಗಳಲ್ಲಿ ಉತ್ತರಿಸಬೇಕು. (5×2=10)
ಭಾಗ-ಸಿ ನಲ್ಲಿ 10 ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ ಅವಶ್ಯವಿದ್ದೆಡೆ ಪ್ರತಿಯೊಂದಕ್ಕೂ ತಲಾ 40 ರಿಂದ 80 ಪದಗಳಲ್ಲಿ ಉತ್ತರಿಸಬೇಕು. (5x3=15)
ಭಾಗ-ಡಿ ವಿಭಾಗ -1 ರಲ್ಲಿ ಒಟ್ಟು 8 ಪ್ರಶ್ನೆಗಳಲ್ಲಿ ಯಾವುದಾದರೂ 4 ಪ್ರಶ್ನೆಗಳಿಗೆ ಅವಶ್ಯವಿದ್ದೆಡೆ ಪ್ರತಿಯೊಂದಕ್ಕೂ ತಲಾ 200 ರಿಂದ 250 ಪದಗಳಲ್ಲಿ ಉತ್ತರಿಸಬೇಕು. (4×5=20)
ಭಾಗ-ಡಿ ವಿಭಾಗ-II ರಲ್ಲಿ ಒಟ್ಟು 7 ಪ್ರಶ್ನೆಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಅವಶ್ಯವಿದ್ದೆಡೆ ಪ್ರತಿಯೊಂದಕ್ಕೂ ತಲಾ 200 ರಿಂದ 250 ಪದಗಳಲ್ಲಿ ಉತ್ತರಿಸಬೇಕು. (3×5=15)
ಜೀವಶಾಸ್ತ್ರ ಮಾದರಿ ಪ್ರಶ್ನೆ ಪತ್ರಿಕೆ
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ 2022-23ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.
ವೇಳಾಪಟ್ಟಿಯ ಹೆಸರು | ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಥಮ ಪಿಯುಸಿ ಪರೀಕ್ಷಾ ವೇಳಾಪಟ್ಟಿ 2022-23 |
---|---|
ವೇಳಾಪಟ್ಟಿ ಬಿಡುಗಡೆ ದಿನಾಂಕ | ಜನವರಿ 2023 (ತಾತ್ಕಾಲಿಕವಾಗಿ) |
ಪ್ರಾಯೋಗಿಕ ಪರೀಕ್ಷೆಯ ದಿನಾಂಕ | ಜನವರಿ 2023ರ ಕೊನೆಯ ವಾರ (ತಾತ್ಕಾಲಿಕವಾಗಿ) |
ಪ್ರವೇಶ ಪತ್ರ ಬಿಡುಗಡೆ ದಿನಾಂಕ | ಫೆಬ್ರವರಿ 2023ರ ಎರಡನೇ ವಾರ (ತಾತ್ಕಾಲಿಕವಾಗಿ) |
ಥಿಯರಿ ಪರೀಕ್ಷೆಯ ದಿನಾಂಕಗಳು | ಫೆಬ್ರವರಿ 2023ರ ಕೊನೆಯ ವಾರ (ತಾತ್ಕಾಲಿಕವಾಗಿ) |
ಪ್ರ. 1: ಪ್ರಥಮ ಪಿಯುಸಿ ಕನ್ನಡದಲ್ಲಿ ಗಾದೆಮಾತು ವಿಸ್ತರಣೆ ಹಾಗೂ ಪತ್ರಲೇಖನಕ್ಕೆ ಎಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ?
ಉತ್ತರ: ಕನ್ನಡ ಭಾಷೆಯಲ್ಲಿ ಗಾದೆಮಾತು ವಿಸ್ತರಣೆ ಹಾಗೂ ಪತ್ರಲೇಖನಕ್ಕೆ ತಲಾ 4 ಅಂಗಳನ್ನು ನಿಗದಿಪಡಿಸಲಾಗಿದೆ.
ಪ್ರ. 2: ಪ್ರಥಮ ಪಿಯುಸಿಗೆ ಅಳವಡಿಸಿಕೊಂಡಿರುವ ಅಧಿಕೃತ ಪಠ್ಯಪುಸ್ತಕಗಳು ಯಾವುವು?
ಉತ್ತರ: ಪ್ರಥಮ ಹಾಗೂ ದ್ವಿತೀಯ ಪದವಿ ಪೂರ್ವ ತರಗತಿಗಳೆ NCERT ಯಿಂದ ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ವಾಣಿಜ್ಯ ವಿಷಯಗಳಾದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆ NCERT ಪಠ್ಯಪುಸ್ತಕಗಳನ್ನೇ ಅಧಿಕೃತ ಪಠ್ಯ ಪುಸ್ತಕಗಳನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಉಳಿದ ವಿಷಯಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊರತಂದಿರುವ ಪಠ್ಯ ಪುಸ್ತಕಗಳನ್ನೇ ಅಧಿಕೃತ ಪುಸ್ತಕಗಳನ್ನು ಅಳವಡಿಸಿಕೊಳ್ಳಲಾಗಿದೆ.
ಪ್ರ. 3: ವಿಜ್ಞಾನ ವಿಭಾಗದಲ್ಲಿ ಸಂಯೋಜನೆವಾರು ಯಾವೆಲ್ಲಾ ವಿಷಯಗಳಿವೆ?
ಉತ್ತರ: ಪಿಯುಸಿ ವ್ಯಾಸಂಗ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗ-1ರಲ್ಲಿ 2 (ಎರಡು) ಭಾಷೆಗಳನ್ನು ಮತ್ತು ಭಾಗ-2ರಲ್ಲಿ 4 (ನಾಲ್ಕು) ಐಚ್ಛಿಕ ವಿಷಯಗಳ ಒಂದು ಸಂಯೋಜನೆಯನ್ನು ವ್ಯಾಸಂಗ ಮಾಡಬೇಕಾಗುತ್ತದೆ. ವಿಜ್ಞಾನ ವಿಭಾಗದಲ್ಲಿ ಲಭ್ಯವಿರುವ ಸಂಯೋಜನೆಗಳು ಈ ರೀತಿ ಇವೆ. PCMB, PCMC, PCME, SPCM (ಸಂಖ್ಯಾಶಾಸ್ತ್ರ), PCBH (ಗೃಹ ವಿಜ್ಞಾನ) , PCMG (ಭೂಗರ್ಭಶಾಸ್ತ್ರ)
ಪ್ರ. 4: ಜೀವಶಾಸ್ತ್ರದಲ್ಲಿ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸದಿದ್ದರೆ ಅಂಕಗಳನ್ನು ನೀಡಲಾಗುತ್ತದೆಯೇ?
ಉತ್ತರ: ಪ್ರಥಮ ಪಿಯುಸಿ ಜೀವಶಾಸ್ತ್ರ ವಿಷಯದಲ್ಲಿ ಅಗತ್ಯವಿದ್ದೆಡೆ ಭಾಗಗಳನ್ನು ಗುರುತಿಸಿದ ಚಿತ್ರಗಳನ್ನು ಬಿಡಿಸಬೇಕು. ಭಾಗಗಳನ್ನು ಗುರುತಿಸದ ಚಿತ್ರಗಳಿಗೆ ಅಂಕಗಳನ್ನು ನೀಡಲಾಗುವುದಿಲ್ಲ.
ಪ್ರ. 5: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಐಚ್ಛಿಕ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಬಹುದೇ?
ಉತ್ತರ: ಹೌದು. ಇದಕ್ಕಾಗಿ ಪ್ರಥಮ ಪಿಯುಸಿ ದಾಖಲಾತಿ ಅರ್ಜಿಯಲ್ಲೇ ಮಾಧ್ಯಮವನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಯಾ ಕಾಲೇಜಿನ ಪ್ರಾಂಶುಪಾಲರ ಅನುಮತಿಯ ಮೇರೆಗೆ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಥಮ ಪಿಯುಸಿಗೆ ಸಂಬಂಧಿಸಿದಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪಠ್ಯವಸ್ತು Embibe ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಪಿಯುಸಿ ಪರೀಕ್ಷಾ ಮಾದರಿ 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.