
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ದ್ವಿತೀಯ ಪಿಯುಸಿ ಪ್ರವೇಶ ಪತ್ರ 2023: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು, ಕರ್ನಾಟಕ 2023 ರ ದ್ವಿತೀಯ ಪಿಯುಸಿ ಪ್ರವೇಶ ಪತ್ರಗಳನ್ನು ಮಾರ್ಚ್ 2023 ರಲ್ಲಿ ಬಿಡುಗಡೆ ಮಾಡಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು (PUE) ದ್ವಿತೀಯ ಪಿಯುಸಿ ಪರೀಕ್ಷೆ 2023ರ ಪ್ರವೇಶ ಪತ್ರಗಳನ್ನು ಸಾಮಾನ್ಯವಾಗಿ ಪರೀಕ್ಷೆ ಪ್ರಾರಂಭವಾಗುವ ದಿನಾಂಕಕ್ಕೂ ಸುಮಾರು ಎರಡು ವಾರಗಳ ಮೊದಲು ಬಿಡುಗಡೆ ಮಾಡಲಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ರೆಗ್ಯುಲರ್, ಪ್ರೈವೇಟ್ ಮತ್ತು ವೊಕೇಶನಲ್ ಸೇರಿದಂತೆ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಪಿಯುಇ ಅದನ್ನು ಬಿಡುಗಡೆ ಮಾಡಿದ ನಂತರ, ಆಯಾ ಪದವಿ ಪೂರ್ವ ಕಾಲೇಜಿಗೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕರ್ನಾಟಕ ದ್ವಿತೀಯ ಪಿಯುಸಿ ಪ್ರವೇಶ ಪತ್ರ 2023 ಅನ್ನು ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಿ, ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ವಿತರಿಸುತ್ತಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನೀಡಲಾದ ಈ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಹಾಜರುಪಡಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ.
ಪರೀಕ್ಷೆಯ ಹೆಸರು | ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023 |
---|---|
ರಾಜ್ಯ ಮಂಡಳಿ | ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ |
ವರ್ಗ | ದ್ವಿತೀಯ ಪಿಯುಸಿ |
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ 2023 | ಮಾರ್ಚ್ 2023 (ತಾತ್ಕಾಲಿಕ) |
ವಿಭಾಗ | ಪ್ರವೇಶ ಪತ್ರ |
ಕರ್ನಾಟಕ ದ್ವಿತೀಯ ಪಿಯುಸಿ ಹಾಲ್ ಟಿಕೆಟ್ 2023 | ಇನ್ನೂ ಬಿಡುಗಡೆಯಾಗಬೇಕಿದೆ |
ಅಧಿಕೃತ ವೆಬ್‌ಸೈಟ್ | ಲಿಂಕ್ |
ಪಿಯುಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ ನಂತರ, ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ವಿವರಗಳು ತಪ್ಪಾಗಿ ಕಂಡುಬಂದರೆ ಸಂಬಂಧಿಸಿದ ಕಾಲೇಜಿನ ಸಿಬ್ಬಂದಿಗಳನ್ನು ಸಂಪರ್ಕಿಸಿ.
ದ್ವಿತೀಯ ಪಿಯುಸಿ ಪ್ರವೇಶ ಪತ್ರದಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು-ಕರ್ನಾಟಕದ ಪಿಯುಇ ಖಚಿತಪಡಿಸಿದಂತೆ ದೋಷರಹಿತವಾಗಿದ್ದರೂ, ಕೆಲವು ವಿವರಗಳು ವ್ಯತ್ಯಾಸಗಳನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ, ಪಿಯುಸಿ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿದ ನಂತರ, ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು, ಮತ್ತು ದಾಖಲೆಯಲ್ಲಿ ನೀಡಲಾದ ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು. ಏನಾದರೂ ದೋಷಗಳು ಕಂಡುಬಂದಲ್ಲಿ, ಸಂಬಂಧಪಟ್ಟ ಕಾಲೇಜಿಗೆ ತಿಳಿಸಬೇಕು ಮತ್ತು ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಿಕೊಳ್ಳಬೇಕು.
ದ್ವಿತೀಯ ಪಿಯುಸಿ ಪ್ರವೇಶ ಪತ್ರದಲ್ಲಿ ಈ ಕೆಳಗಿನ ಪರೀಕ್ಷಾ ಸೂಚನೆಗಳನ್ನು ನಮೂದಿಸಲಾಗುವುದು:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆಯುವ ವಿದ್ಯಾರ್ಥಿಗಳ ಕರಡು ಪ್ರವೇಶಪತ್ರಗಳನ್ನು (Draft Freshers Admission Ticket) PUC online Portal ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಕರಡು ಪ್ರವೇಶ ಪತ್ರಗಳನ್ನು ಪ್ರತಿಯೊಂದು ಕಾಲೇಜಿನ ಪ್ರಾಂಶುಪಾಲರು ಡೌನ್‌ಲೋಡ್ ಮಾಡಿಕೊಂಡು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ವಿತರಿಸಿ, ಕರಡು ಪ್ರವೇಶ ಪತ್ರ ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡು ವಿದ್ಯಾರ್ಥಿಯಿಂದ ಸಹಿ ಪಡೆದು ಸರಿಯಿರುವ Admission Ticket ಗಳನ್ನು ಕಾಲೇಜಿನಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ.
ಕರಡು ಪ್ರವೇಶ ಪತ್ರಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ನ್ಯೂನತೆಗಳಿದ್ದಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರು ಅಥವಾ ಸಿಬ್ಬಂದಿಗಳು ನೇರವಾಗಿ ಕೇಂದ್ರ ಕಛೇರಿಯ ಗಣಕ ವಿಭಾಗಕ್ಕೆ ವ್ಯತ್ಯಾಸಗಳಿರುವ ವಿಷಯಗಳ ದಾಖಲೆ ಪತ್ರಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
ಕೆಳಕಂಡ ವಿಷಯಗಳಲ್ಲಿ ನ್ಯೂನತೆ/ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು
1. ಕರ್ನಾಟಕ ದ್ವಿತೀಯ ಪಿಯುಸಿ ಹಾಲ್ ಟಿಕೆಟ್ 2023
2. ಉತ್ತಮ ಬಾಲ್ ಪಾಯಿಂಟ್ ಪೆನ್ನುಗಳು (ನೀಲಿ / ಕಪ್ಪು)
1.ಪರೀಕ್ಷೆಯನ್ನು ಬರೆಯಬೇಕಾದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಯ ಸಮಯದಲ್ಲಿ ಕೊಠಡಿಗೆ ಅನುಮತಿಸಲಾಗುತ್ತದೆ.
2. ಪರೀಕ್ಷೆ ಪ್ರಾರಂಭವಾಗುವ ಕೆಲವು ನಿಮಿಷಗಳ ಮೊದಲು ನಿಮ್ಮನ್ನು ಪರೀಕ್ಷಾ ಕೊಠಡಿಯ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ನೀವು ನಿಗದಿಪಡಿಸಿದ ಸೀಟಿನಲ್ಲಿ ನೇರವಾಗಿ ಹೋಗಿ ಮತ್ತು ನಿಮ್ಮ ಪಿಯುಸಿ ಹಾಲ್ ಟಿಕೆಟ್ 2023 ಅನ್ನು ನಿಮ್ಮ ಮೇಜಿನ ಮೇಲೆ ಇರಿಸಿ.
3. ಪರೀಕ್ಷೆ ಪ್ರಾರಂಭವಾಗುವ ಕೆಲವು ನಿಮಿಷಗಳ ಮೊದಲು ಮೇಲ್ಚಿಚಾರಕರಿಗೆ ಉತ್ತರ ಕೈಪಿಡಿ / ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ.
4. ಎಚ್ಚರಿಕೆಯಿಂದ ಓದಿ ಮತ್ತು ಪ್ರಶ್ನೆ ಪತ್ರಿಕೆಯಲ್ಲಿ / ಉತ್ತರ ಕಿರುಪುಸ್ತಕ / ಹಾಳೆಯ ಮೇಲೆ ಮುದ್ರಿಸಲಾದ ಸೂಚನೆಗಳನ್ನು ಅನುಸರಿಸಿ.
5. ನೀವು ಪರೀಕ್ಷೆ ಬರೆಯಲು ಪ್ರಾರಂಭಿಸುವ ಮೊದಲು ಉತ್ತರ ಕಿರುಪುಸ್ತಕದ ಮುಂಭಾಗದಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
3. ಬಳಿಕ ನಿಮಗೆ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತದೆ, ವಿದ್ಯಾರ್ಥಿಗಳು ಎಲ್ಲಾ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಉತ್ತರಿಸಲು ಆರಂಭಿಸಬಹುದು.
1. ಅಭ್ಯರ್ಥಿಯು ತಮ್ಮ ಉತ್ತರ ಕಿರುಪುಸ್ತಕವನ್ನು ಪರಿಷ್ಕರಿಸಲು ಮತ್ತು ಪರಿಶೀಲಿಸಲು ಕೊನೆಯ 10 ನಿಮಿಷಗಳನ್ನು ಬಳಸಬೇಕು.
2. ಪರೀಕ್ಷೆಯ ಕೊನೆಯಲ್ಲಿ ನಿಮ್ಮ ಉತ್ತರ ಕಿರುಪುಸ್ತಕವನ್ನು ಸಲ್ಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳವುದು ನಿಮ್ಮ ಜವಾಬ್ದಾರಿ. ನೀವು ಪರೀಕ್ಷೆಗೆ ಹಾಜರಿರಾಗಿದ್ದು, ನಿಮ್ಮ ಉತ್ತರ ಪತ್ರಿಕೆಗಳು / ಕಿರುಹೊತ್ತಿಗೆಗಳನ್ನು ಸಲ್ಲಿಸದಿದ್ದರೆ, ನೀವು ಸಂಬಂಧಪಟ್ಟ ಪರೀಕ್ಷೆಯಲ್ಲಿ ಕುಳಿಕೊಂಡರೂ ಅನುತ್ತೀರ್ಣರಾಗಿದ್ದೀರಿ ಎಂದು ಪರಿಗಣಿಸಲಾಗುತ್ತದೆ.
3. ಪರೀಕ್ಷೆಯ ಮೇಲ್ಚಿಚಾರಕರು ಹೇಳುವವರೆಗೆ ಪರೀಕ್ಷಾ ಕೊಠಡಿಯಿಂದ ಹೊರಹೋಗಬೇಡಿ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಪ್ರವೇಶ ಪತ್ರ 2023ರ ಬಗ್ಗೆ ಪದೇಪದೇ ಕೇಳಲಾಗುವ ಕೆಲವು ಪ್ರಶ್ನೆಗಳನ್ನು ನಾವು ಉತ್ತರಗಳೊಂದಿಗೆ ಒದಗಿಸಿದ್ದೇವೆ. ದಯವಿಟ್ಟು ಒಮ್ಮೆ ಗಮನಿಸಿ:
ಪ್ರ. 1: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಾವಾಗ ನಡೆಸಲಾಗುತ್ತದೆ?
ಉತ್ತರ: ಕರ್ನಾಟಕದ ಪಿಯುಇ ಏಪ್ರಿಲ್‌ನಿಂದ ಮೇ ತಿಂಗಳಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಿದೆ. ಪಿಯುಇ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರ. 2: ಕರ್ನಾಟಕ ದ್ವಿತೀಯ ಪಿಯುಸಿ ಪ್ರವೇಶ ಪತ್ರ ಯಾವಾಗ ಬಿಡುಗಡೆಯಾಗಲಿದೆ?
ಉತ್ತರ: ಸಾಮಾನ್ಯವಾಗಿ, ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ 2023 ಅನ್ನು ಪರೀಕ್ಷೆ ಪ್ರಾರಂಭವಾಗುವ ಎರಡು ವಾರಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. ದ್ವಿತೀಯ ಪಿಯುಸಿ ಪ್ರವೇಶ ಪತ್ರದ ನಿರೀಕ್ಷಿತ ಬಿಡುಗಡೆ ದಿನಾಂಕ ಏಪ್ರಿಲ್ 2023 ಆಗಿದೆ. ಮೇಲಿನ ಪುಟದಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ನಾವು ನೇರ ಲಿಂಕ್ ಅನ್ನು ಒದಗಿಸಿದ್ದೇವೆ
ಪ್ರ. 3: ದ್ವಿತೀಯ ಪಿಯುಸಿ ಪ್ರವೇಶ ಪತ್ರವನ್ನು ನಾನು ಹೇಗೆ ಪಡೆಯಬಹುದು?
ಉತ್ತರ: ರೆಗ್ಯುಲರ್ ವಿದ್ಯಾರ್ಥಿಗಳಿಗೆ, ಶಾಲಾ ಅಧಿಕಾರಿಗಳು ಕರ್ನಾಟಕ ದ್ವಿತೀಯ ಪಿಯುಸಿ ಇಲಾಖೆಯ ಪರೀಕ್ಷೆಯ ಪ್ರವೇಶ ಪತ್ರವನ್ನು ವಿತರಿಸಲಿದ್ದಾರೆ. ಖಾಸಗಿ ವಿದ್ಯಾರ್ಥಿಗಳು ಸಹ ತಾವು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿರುವ ಕಾಲೇಜಿನಿಂದ ಪ್ರವೇಶ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯಬೇಕು.
ಪ್ರ. 4: ದ್ವಿತೀಯ ಪಿಯುಸಿ ಪ್ರವೇಶ ಪತ್ರದ ಹಾರ್ಡ್ ಕಾಪಿಯನ್ನು ವಿದ್ಯಾರ್ಥಿಗಳು ಒಯ್ಯಬೇಕೇ?
ಉತ್ತರ: ಹೌದು, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ/ ಕೇಂದ್ರವನ್ನು ಪ್ರವೇಶಿಸಲು ಕರ್ನಾಟಕ ದ್ವಿತೀಯ ಪಿಯುಸಿ ಪ್ರವೇಶ ಪತ್ರದ ಹಾರ್ಡ್ ಪ್ರತಿಯನ್ನು ತೆಗೆದುಕೊಂಡು ಹೋಗಬೇಕು. ಇದಲ್ಲದೆ, ಅವರು ಇತರ ಅಗತ್ಯ ದಾಖಲೆಗಳ ಪ್ರಿಂಟ್ ಔಟ್‌ಗಳನ್ನು ಸಹ ಪಡೆಯಬೇಕು.
ಪ್ರ. 5: ದ್ವಿತೀಯ ಪಿಯುಸಿ ಪ್ರವೇಶ ಪತ್ರ ಏನೆಲ್ಲ ವಿವರಗಳನ್ನು ಒಳಗೊಂಡಿದೆ?
ಉತ್ತರ: ಕರ್ನಾಟಕ ದ್ವಿತೀಯ ಪಿಯುಸಿ 2022 ಪರೀಕ್ಷೆಯ ಪರೀಕ್ಷಾ ಹಾಲ್ ಟಿಕೆಟ್‌ನಲ್ಲಿ ಪರೀಕ್ಷೆ ದಿನಾಂಕ, ಪರೀಕ್ಷಾ ಸ್ಥಳದ ವಿವರಗಳು, ಸಮಯ, ರೋಲ್ ಸಂಖ್ಯೆ, ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಹತ್ವದ ವಿವರಗಳನ್ನು ಒಳಗೊಂಡಿರುತ್ತದೆ.
ಪ್ರ. 6: ಪ್ರವೇಶ ಪತ್ರದಲ್ಲಿ ತಿದ್ದುಪಡಿಗಳಿದ್ದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿ?
ಉತ್ತರ: ವಿದ್ಯಾರ್ಥಿಗಳು ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿ, ತಿದ್ದುಪಡಿಗಳಿದ್ದಲ್ಲಿ ಕಚೇರಿಯ ಇ-ಮೇಲ್ ವಿಳಾಸ(ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗುತ್ತದೆ)ಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಕರಡು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಮುದ್ರಿಸಿಕೊಂಡು, ಅದರ ಮೇಲೆ ಅಗತ್ಯವಿರುವ ತಿದ್ದುಪಡಿಗಳನ್ನು ಕೆಂಪು ಶಾಯಿಯಿಂದ ಗುರುತು ಮಾಡಿ ಹಾಗೂ ತಿದ್ದುಪಡಿಗಳನ್ನು ಪ್ರಾಚಾರ್ಯರು ಮೊಹರು ಹಾಕಿ ದೃಢೀಕರಿಸುತ್ತಾರೆ.
ತಿದ್ದುಪಡಿ ಮಾಡಬೇಕಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳ ವಿವರಗಳನ್ನು ಕ್ರೋಢೀಕೃತಗೊಳಿಸಿ, ನಿಗದಿತ ನಮೂನೆಯಲ್ಲಿ ನಮೂದಿಸಿ ಪ್ರಾಂಶುಪಾಲರು ದೃಢೀಕರಿಸುತ್ತಾರೆ.
ಪ್ರ. 7: ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಪಡೆಯುವುದು ಹೇಗೆ?
ಪುನರಾವರ್ತಿತ (Repeaters) ಹಾಗೂ ಖಾಸಗಿ (Private) ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರು ಶುಲ್ಕದ ವಿವರಗಳನ್ನು ನಿಗದಿತ ನಮೂನೆಯಲ್ಲಿ ಹಾಗೂ ಸುತ್ತೋಲೆಯ ಪ್ರಕಾರ ಶುಲ್ಕ ಪಾವತಿಸಿರುವ ಬಗ್ಗೆ ಸಂಬಂಧಿಸಿದ ದಿನಾಂಕ, ಬ್ಯಾಂಕ್ ಖಾತೆ/ಖಜಾನೆ-2ರಲ್ಲಿ ಸರ್ಕಾರಕ್ಕೆ ಪಾವತಿಸಿರುವ ಚಲನ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ನ ದೃಢೀಕೃತ ಪ್ರತಿಯನ್ನು (ಶುಲ್ಕ ಪಾವತಿಸಿರುವ ಬಗ್ಗೆ ಪ್ರಾಂಶುಪಾಲರು ಹಾಗೂ ಜಿಲ್ಲಾ ಉಪನಿರ್ದೇಶಕರು ದೃಢೀಕರಿಸಬೇಕು) ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಿದ ನಂತರ ಆಲ್‌ಲೈನ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತದೆ.
ಪ್ರವೇಶ ಪತ್ರದಲ್ಲಿ ತಿದ್ದುಪಡಿ ಇದ್ದಲ್ಲಿ ಪ್ರಾಚಾರ್ಯರೇ ಖುದ್ದು ಕಾಲೇಜಿನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿ ದೃಢೀಕರಿಸುತ್ತಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರುವಂತೆ ಸೂಚಿಸುವಂತಿಲ್ಲ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪ್ರವೇಶ ಪತ್ರ 2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪ್ರವೇಶ ಪತ್ರ 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.