
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2023: ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ಬಳಿಕ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ 2023ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರವನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಲಿದೆ. ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮೇ 20(ತಾತ್ಕಾಲಿಕ)ರವರೆಗೆ ಅವಕಾಶ ನೀಡಲಾಗುವುದು. ಪದವಿ ಪೂರ್ವ ಶಿಕ್ಷಣ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು 2023ರ ಏಪ್ರಿಲ್‌ನಲ್ಲಿ ಆರಂಭವಾಗಿ ಮೇ 18, 2023 (ತಾತ್ಕಾಲಿಕ) ರಂದು ಮುಕ್ತಾಯವಾಗಲಿದೆ.
ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ಏಪ್ರಿಲ್ -ಮೇ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 2023ರ ಲಿಖಿತ ಪರೀಕ್ಷೆಯನ್ನು ನಡೆಸಲಿದೆ. ವಿದ್ಯಾರ್ಥಿಗಳ ಉಪಯೋಗಕ್ಕಾಗಿ 2023ರ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಮಾದರಿ ಉತ್ತರಗಳ ಪಿಡಿಎಫ್ ಅನ್ನು ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಿದೆ.
ಇದು ವಿದ್ಯಾರ್ಥಿಗಳಿಗೆ ತಾವು ಬರೆಯಲಿರುವ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾದರಿಯನ್ನು ತಿಳಿಸಲಿದ್ದು, ವಿದ್ಯಾರ್ಥಿಗಳು ಇದಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಬಹುದು. ಪ್ರತಿ ವಿದ್ಯಾರ್ಥಿಯು ಪರೀಕ್ಷೆಯ ಮೊದಲು ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಪರಿಹರಿಸಬೇಕು. ಮಾದರಿ ಪತ್ರಿಕೆಗಳನ್ನು ಪರಿಹರಿಸುವುದು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳು, ಪೇಪರ್ ಟೆಂಪ್ಲೇಟ್‌ಗಳು ಮತ್ತು ಹೆಚ್ಚಿನದನ್ನು ತಿಳಿಯಲು ಸಹಾಯ ಮಾಡುತ್ತದೆ. ಇಲಾಖೆಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾದರಿ ಪತ್ರಿಕೆಯನ್ನು ಸಿದ್ಧಪಡಿಸುತ್ತದೆ. ಆದರೆ, ಪ್ರಶ್ನೆ ಕೋಶ (Question Bank) ಪ್ರಶ್ನೆಗಳನ್ನು ಕರ್ನಾಟಕ ದ್ವಿತೀಯ ಪಿಯುಸಿ 2023ರ ಮುಖ್ಯ ಪರೀಕ್ಷೆಯಲ್ಲಿ ಸೇರಿಸಲಾಗುವುದೇ ಎಂಬುದು ಖಚಿತವಾಗಿಲ್ಲ.
Question Bankನಲ್ಲಿರುವ ಪ್ರಶ್ನೆಗಳನ್ನು ಪರಿಹರಿಸುವುದು ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ತಯಾರಾಗಲು ತಿಳುವಳಿಕೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ವಿದ್ಯಾರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ 2023 ಅನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ತಮ್ಮ ಪರೀಕ್ಷೆಯ ತಯಾರಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಹ ಪರಿಶೀಲಿಸಬಹುದು.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 2023ಕ್ಕೆ ಸಂಬಂಧಿಸಿದಂತೆ ಪ್ರತಿ ವಿಷಯದ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಿದ್ದು, ಈ ಪರೀಕ್ಷೆಗಳು ಮುಗಿದ ಬಳಿಕ ಮಾದರಿ ಉತ್ತರ 2023 ಅನ್ನು ಅಪ್‌ಲೋಡ್ ಮಾಡಲಿದೆ. ಮಾದರಿ ಉತ್ತರಗಳನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂಬುದನ್ನು ಇಲಾಖೆಯು ಪತ್ರಿಕಾ ಪ್ರಕಟನೆ ಅಥವಾ ವೆಬ್‌ಸೈಟ್‌ನಲ್ಲಿ ತಿಳಿಸಲಿದೆ. ನೀವು, ಮಾದರಿ ಉತ್ತರಗಳು (Key Answer) ಫೈಲ್ ಡೌನ್‌ಲೋಡ್ ಮಾಡಲು ಈ ಪುಟಕ್ಕೆ ಭೇಟಿ ನೀಡಬೇಕು.
ವಿಷಯ | ಜೀವಶಾಸ್ತ್ರ |
---|---|
ಪರೀಕ್ಷೆ ದಿನಾಂಕ | 17/03/2023 (ತಾತ್ಕಾಲಿಕ) |
ಮಾದರಿ ಉತ್ತರ | ಇಲ್ಲಿ ಕ್ಲಿಕ್ ಮಾಡಿ |
ಭೌತಶಾಸ್ತ್ರ ವಿಷಯದ ಪರೀಕ್ಷೆಯನ್ನು ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಈ ಕೆಳಗೆ ತಿಳಿಸಲಾದ ಕರ್ನಾಟಕ PUE ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡುವ ಮೂಲಕ ನೀವು ಮಾದರಿ ಉತ್ತರಯನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
ವಿಷಯ | ಭೌತಶಾಸ್ತ್ರ |
---|---|
ಪರೀಕ್ಷೆ ದಿನಾಂಕ | 4/03/2023 (ತಾತ್ಕಾಲಿಕ) |
ಮಾದರಿ ಉತ್ತರ | ಇಲ್ಲಿ ಕ್ಲಿಕ್ ಮಾಡಿ |
ಗಣಿತ ಪರೀಕ್ಷೆಯನ್ನು ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು 2ನೇ ಪಿಯುಸಿ ಗಣಿತ ಉತ್ತರ ಪತ್ರಿಕೆಯನ್ನು ಈ ಪುಟದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿಷಯ | ಗಣಿತ |
---|---|
ಪರೀಕ್ಷೆ ದಿನಾಂಕ | 4/03/2023 (ತಾತ್ಕಾಲಿಕ) |
ಮಾದರಿ ಉತ್ತರ | ಇಲ್ಲಿ ಕ್ಲಿಕ್ ಮಾಡಿ |
ಇತರ ವಿಷಯಗಳ ಮಾದರಿ ಉತ್ತರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ಪುಟದಿಂದ ನೀವು PUC ಮಾದರಿ ಉತ್ತರಗಳು 2023 ಅನ್ನು PDF ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡುವ ಮಾದರಿ ಉತ್ತರಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಇದನ್ನು ಇಲಾಖೆಯ ಗಮನಕ್ಕೆ ತರಲು ಹಾಗೂ ಆಕ್ಷೇಪಣೆ ಸಲ್ಲಿಸಲೂ ಸಹ ಅವಕಾಶವಿದೆ.
ಸಂಸ್ಥೆಯ ಹೆಸರು | ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ |
---|---|
ಪರೀಕ್ಷೆ ಹೆಸರು | ದ್ವಿತೀಯ ಪಿಯುಸಿ |
ಅವಧಿ | ವಾರ್ಷಿಕ |
ಹಂತ | ರಾಜ್ಯ-ಮಟ್ಟ |
ಪರೀಕ್ಷೆ ದಿನಾಂಕ | 16 ಏಪ್ರಿಲ್ – 04 ಮೇ 2023 (ತಾತ್ಕಾಲಿಕ) |
ಮಾದರಿ ಉತ್ತರ ಮೋಡ್ | ಆನ್‌ಲೈನ್ |
ಮಾದರಿ ಉತ್ತರ ಬಿಡುಗಡೆ ದಿನಾಂಕ | ಆಯಾ ವಿಷಯಗಳ ಪರೀಕ್ಷೆ ಪೂರ್ಣಗೊಂಡ ಬಳಿಕ |
ವೆಬ್‌ಸೈಟ್ | ಲಿಂಕ್ |
ನಿಮ್ಮ ಪರೀಕ್ಷೆಯ ಮಾದರಿ ಉತ್ತರಗಳನ್ನು ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ನೀಡಲಾಗುತ್ತದೆ. ಪರೀಕ್ಷೆಯ ನಂತರ ಎಲ್ಲಾ ಅಭ್ಯರ್ಥಿಗಳು ತಮ್ಮ ಮಾದರಿ ಉತ್ತರಗಳನ್ನು ಒಮ್ಮೆ ಪರಿಶೀಲಿಸಬೇಕು. ಏಕೆಂದರೆ ಈ ಪರೀಕ್ಷೆಯಲ್ಲಿ ನೀವು ಎಷ್ಟು ಅಂಕಗಳನ್ನು ಪಡೆಯಬಹುದು ಎಂಬ ಕಲ್ಪನೆಯನ್ನು ಪಡೆಯಲು ಮಾದರಿ ಉತ್ತರಗಳು ನಿಮಗೆ ಸಹಾಯ ಮಾಡಲಿವೆ.
ಪ್ರತಿ ವರ್ಷ ದ್ವಿತೀಯ ಪಿಯು ಪರೀಕ್ಷೆ ಪೂರ್ಣಗೊಂಡ ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆಯು ಮಾದರಿ ಉತ್ತರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಬಿಡುಗಡೆ ಮಾಡುತ್ತದೆ. ಮಾದರಿ ಉತ್ತರಗಳನ್ನು ಎಂದು ಬಿಡುಗಡೆಯಾಗುತ್ತವೆ ಎಂಬ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಿದೆ.
2021-22ನೇ ಸಾಲಿನಲ್ಲಿ ಮಾದರಿ ಉತ್ತರಗಳು ಪ್ರಕಟವಾಗುವ ಬಗ್ಗೆ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಣ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದ ಒಂದು ಪೋಸ್ಟ್ ನಿಮಗಾಗಿ…
ದ್ವಿತೀಯ ಪಿಯುಸಿ ಪರೀಕ್ಷೆ 2021-22ನೇ ಸಾಲಿನ ಪ್ರಶ್ನೆಪತ್ರಿಕೆ ಮತ್ತು ಮಾದರಿ ಉತ್ತರಗಳಿಗಾಗಿ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ
ಗಮನಿಸಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದ ನಂತರ
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿ ಉತ್ತರ 2023ರ ಎಲ್ಲಾ ವಿಷಯಗಳ ಪ್ರಮುಖ ಉತ್ತರಗಳ ಪಿಡಿಎಫ್ ಯಾವಾಗ ಮತ್ತು ಎಲ್ಲಿ ಲಭ್ಯವಾಗುತ್ತದೆ, ಮಾದರಿ ಉತ್ತರ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಮ್ಮ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ನೀವು ಇನ್ನೂ ಏನನ್ನಾದರೂ ತಿಳಿಯಲು ಬಯಸಿದರೆ, ಕಾಮೆಂಟ್ ವಿಭಾಗದಲ್ಲಿ ನಮಗೆ ಸಂದೇಶ ಕಳುಹಿಸಿ.
ಪಿಯು ಇಲಾಖೆಯ ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ ಮಾಡಿ |
Embibe ಮುಖಪುಟ | ಇಲ್ಲಿ ಕ್ಲಿಕ್ ಮಾಡಿ |
ದ್ವಿತೀಯ ಪಿಯುಸಿಗೆ ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಲು Embibeಗೆ ಟ್ಯೂನ್ ಮಾಡಿ.
ಪ್ರ. 1: ದ್ವಿತೀಯ ಪಿಯುಸಿ ಮಾದರಿ ಉತ್ತರಗಳನ್ನು ಎಲ್ಲಿ ಬಿಡುಗಡೆ ಮಾಡಲಾಗುತ್ತದೆ?
ಉತ್ತರ: ದ್ವಿತೀಯ ಪಿಯುಸಿ ಮಾದರಿ (ಕೀ) ಉತ್ತರಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಪ್ರ. 2: ಪಿಯು ಮಂಡಳಿಯು ಮಾದರಿ ಉತ್ತರಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ?
ಉತ್ತರ: ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಗಳು ಮುಗಿದ ಬಳಿಕ ಮಾದರಿ ಉತ್ತರಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಲಿದೆ. 38 ವಿಷಯಗಳ ಮಾದರಿ ಉತ್ತರಗಳನ್ನು ಬಿಡುಗಡೆ ಮಾಡಲಿದೆ.
ಪ್ರ. 3: ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ 2022ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಉತ್ತರ:
ಪ್ರ. 4: ಮಾದರಿ ಉತ್ತರಗಳು/ಉತ್ತರ ಕೀಲಿಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಏನು ಮಾಡಬೇಕು?
ಉತ್ತರ: ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡುವ ಮಾದರಿ ಉತ್ತರಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಇದನ್ನು ಇಲಾಖೆಯ ಗಮನಕ್ಕೆ ತರಲು ಹಾಗೂ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗುತ್ತದೆ.
ಪ್ರ. 5: ದ್ವಿತೀಯ ಪಿಯುಸಿ 2022-23ನೇ ಸಾಲಿಗೆ ಸಂಬಂಧಿಸಿದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ?
ಉತ್ತರ: ದ್ವಿತೀಯ ಪಿಯುಸಿ 2022-23ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಫೆಬ್ರವರಿ 2023ರಲ್ಲಿ ಪ್ರಕಟಿಸಲಾಗುತ್ತದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕೃತ ಖಾತೆಗಳಿಂದ ಮಾಹಿತಿ ಪಡೆಯಬಹುದು. ಅಪ್‌ಡೇಟ್‌ಗಾಗಿ Embibe ವೆಬ್‌ಸೈಟ್‌ಗೂ ಭೇಟಿ ನೀಡುತ್ತಿರಿ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2023 ಮಾದರಿ ಉತ್ತರಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.