• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023: ನೋಂದಣಿ ಶುಲ್ಕ, ಪ್ರಕ್ರಿಯೆ

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023: ಪದವಿ ಪೂರ್ವ ಶಿಕ್ಷಣ ಇಲಾಖೆಯ (DPUE) ರೆಗ್ಯುಲರ್ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಅರ್ಜಿ ನಮೂನೆಗಾಗಿ ಅಧಿಸೂಚನೆಯನ್ನು ಪ್ರಕಟಿಸುತ್ತದೆ. ಅಲ್ಲದೆ, ನೋಂದಣಿ ಪ್ರಕ್ರಿಯೆಯು ಸಾಮಾನ್ಯವಾಗಿ ಒಂದು ತಿಂಗಳವರೆಗೆ ನಡೆಯಲಿದೆ. DPUE ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಏಪ್ರಿಲ್‌ನಿಂದ ಮೇ ತಿಂಗಳವರೆಗೆ ನಿರ್ವಹಿಸುತ್ತದೆ.

ಇದಷ್ಟೇ ಅಲ್ಲದೆ,  ವಿದ್ಯಾರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಮೂದಿಸಿದ ಕೊನೆಯ ದಿನಾಂಕಕ್ಕೂ ಮೊದಲು ಶಾಲಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023 ಮುಖ್ಯಾಂಶಗಳು

ದ್ವಿತೀಯ ಪಿಯುಸಿ ಪರೀಕ್ಷೆ 2023 ರ ಪ್ರಮುಖ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ:

ಮಂಡಳಿ ಹೆಸರುಪದವಿ ಪೂರ್ವ ಶಿಕ್ಷಣ ಮಂಡಳಿ, ಕರ್ನಾಟಕ
ವರ್ಗಪದವಿ ಪೂರ್ವ ಶಿಕ್ಷಣ ಮಂಡಳಿ ಪಿಯುಸಿ ನೋಂದಣಿ 2023
ಅಧಿಕೃತ ವೆಬ್‌ಸೈಟ್‌ಲಿಂಕ್

ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023ರ ವಿವರಗಳು

ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ನಿಯಂತ್ರಿಸುವ ಪ್ರಾಧಿಕಾರವಾಗಿದೆ. ಇದು ಅಧ್ಯಯನದ ಕೋರ್ಸ್‌ಗಳನ್ನು ರೂಪಿಸುವುದು, ಪರೀಕ್ಷೆಗಳನ್ನು ನಡೆಸುವುದು, ಪಠ್ಯಕ್ರಮವನ್ನು ಪರಿಚಯಿಸುವುದು, ಕಾಲೇಜುಗಳಿಗೆ ಮಾನ್ಯತೆ ನೀಡುವುದು ಮತ್ತು ಅದರ ವ್ಯಾಪ್ತಿಯಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಬೆಂಬಲವನ್ನು ಒದಗಿಸುವಂತಹ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಮಂಡಳಿಯು ತಮ್ಮ ಅಧಿಕೃತ ಪೋರ್ಟಲ್ ಲಿಂಕ್‌ನಲ್ಲಿ ಕರ್ನಾಟಕ 2nd PUC ಅರ್ಜಿ ನಮೂನೆ 2023 ಅನ್ನು ಬಿಡುಗಡೆ ಮಾಡುತ್ತದೆ.

ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023 ಪ್ರಕ್ರಿಯೆ

ವಿದ್ಯಾರ್ಥಿಗಳು ಕಾಲೇಜು ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಕಾಲೇಜುಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಕರ್ನಾಟಕ ದ್ವಿತೀಯ ಪಿಯುಸಿ ಅರ್ಜಿ ನಮೂನೆಯನ್ನು ಲಾಗ್ ಇನ್ ಮಾಡಿ ಪೂರ್ಣಗೊಳಿಸುತ್ತವೆ. ಇದರ ಜೊತೆಗೆ, ನೋಂದಣಿ ಸಮಯದಲ್ಲಿ ಹೆಸರು, ಪೋಷಕರ ಹೆಸರು, ಜನ್ಮ ದಿನಾಂಕ, ಶಾಶ್ವತ ವಿಳಾಸ, ಪಾಸ್‌ಪೋರ್ಟ್ ಫೋಟೋ ಮತ್ತು ಡಿಜಿಟಲ್ ಸಹಿ ಮುಂತಾದ ವಿವರಗಳನ್ನು ಒದಗಿಸಬೇಕು. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು ಮತ್ತು ಮುಂದಿನ ಬಳಕೆಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. ಅಭ್ಯರ್ಥಿಗಳು ಆಫ್‌ಲೈನ್ ಶುಲ್ಕ ಪಾವತಿಗಾಗಿ ಕರ್ನಾಟಕ ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023ಕ್ಕಾಗಿ ನೀಡಿರುವ ಹಂತಗಳನ್ನು ಅನುಸರಿಸಬೇಕು. ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಅಭ್ಯರ್ಥಿಗಳು ಕರ್ನಾಟಕ 2 ನೇ ಪಿಯುಸಿ ನೋಂದಣಿ ಸಂಖ್ಯೆಯನ್ನು ಸ್ವೀಕರಿಸುತ್ತಾರೆ.

ದ್ವಿತೀಯ ಪಿಯುಸಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ಹಂತಗಳು

ಕಾಲೇಜು ಸಿಬ್ಬಂದಿಯು ಕರ್ನಾಟಕ ದ್ವಿತೀಯ ಪಿಯುಸಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಬಹುದು:

  • ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • “PUC II ನೋಂದಣಿ 2023″ ಮೇಲೆ ಕ್ಲಿಕ್ ಮಾಡಿ.
  • ನೋಂದಣಿ ಅರ್ಜಿಯ ಪಿಡಿಎಫ್ ಪರದೆಯ ಮೇಲೆ ಕಾಣಿಸುತ್ತದೆ.
  • ನೋಂದಣಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ದ್ವಿತೀಯ ಪಿಯುಸಿ ಅರ್ಜಿ ನಮೂನೆ – ಆಫ್‌ಲೈನ್ ಪಾವತಿ

ದ್ವಿತೀಯ ಪಿಯುಸಿ ಅರ್ಜಿ ನಮೂನೆಯ ಆಫ್‌ಲೈನ್ ಪಾವತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಹಂತಗಳನ್ನು ಅನುಸರಿಸಬೇಕು.
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್

ಹಂತ 2: “ಸುದ್ದಿ” ವಿಭಾಗದ ಅಡಿಯಲ್ಲಿ ಮುಖಪುಟದಲ್ಲಿ “ಜನರೇಟ್ ಚಲನ್” ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ವಿದ್ಯಾರ್ಥಿಗಳು ಚಲನ್ ಜನರೇಟ್ ಮಾಡಲು ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಬೇಕು.

ಹಂತ 4: ” ಜನರೇಟ್ ಚಲನ್ ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಹಂತ 5: ವಿದ್ಯಾರ್ಥಿಗಳು ಚಲನ್ ಒದಗಿಸುವ ಮೂಲಕ ತಮ್ಮ ಸಂಬಂಧಿತ ಬ್ಯಾಂಕ್‌ನಿಂದ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ದ್ವಿತೀಯ ಪಿಯುಸಿ ಅರ್ಜಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ದ್ವಿತೀಯ ಪಿಯುಸಿ ಅರ್ಜಿ ನಮೂನೆಯ ಆನ್‌ಲೈನ್ ಪಾವತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಹಂತಗಳನ್ನು ಅನುಸರಿಸಬೇಕು.

  • ಅಧಿಕೃತ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ನೀಡಿ 
  • ನಂತರ karnataka-one ಬಟನ್ ಮೇಲೆ ಕ್ಲಿಕ್ ಮಾಡಿ
  • ತಾವು ದಾಖಲಿಸಿದ ಮಾಹಿತಿ Display ಆಗುತ್ತದೆ
  • ಬಳಿಕ “Pay Now” ಬಟನ್ ಕ್ಲಿಕ್ ಮಾಡಬೇಕು
  • Karnataka-one ಪುಟಲ್ಲಿ Continue for Payment ಆಯ್ಕೆ ಮಾಡಿ
  • ಇದರಲ್ಲಿ “Terms and conditions” ಕಡ್ಡಾಯವಾಗಿ ಓದಿ “Check Box” ಮೇಲೆ ಕ್ಲಿಕ್ ಮಾಡಿ.
  • “Continue for payment” ಕ್ಲಿಕ್ ಮಾಡಿ.
  • ನಂತರ “Pay Now” ಕ್ಲಿಕ್ ಮಾಡಿ.
  • “Processing” ಆಗುವವರೆಗೆ “Back button” ಅಥವಾ “Close Button” ಒತ್ತಬೇಡಿ.
  • “Cash Payment” ಅಥವಾ Online Payment ಮುಖಾಂತರ ಹಣ ಸಂದಾಯ ಮಾಡಿದ ನಂತರ ತಾವು ನಮೂದಿಸಿದ ಮೊಬೈಲ್ ಸಂಖೆಗೆ SMS ಬರುತ್ತದೆ.
  • SMS ಸಂದೇಶ ಬಾರದಿದ್ದಲ್ಲಿ ನೀವು ಹಣ ಸಂದಾಯ ಮಾಡಿದ ಬ್ಯಾಂಕನ್ನು ಕೂಡಲೇ ಸಂಪರ್ಕಿಸಿ.

ಮರು-ಮೌಲ್ಯಮಾಪನ ಮತ್ತು ಮರು-ಎಣಿಕೆಗಾಗಿ ದ್ವಿತೀಯ ಪಿಯುಸಿ ಅರ್ಜಿ ನಮೂನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ ಅರ್ಜಿ ನಮೂನೆ ಮತ್ತು ಮರು-ಎಣಿಕೆಗಾಗಿ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಬೇಕು.

ಮರು ಎಣಿಕೆಗಾಗಿ (Re-totalling) ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮ:

1. Answer Paper Scanned Copy ಯನ್ನು ಪಡೆದುಕೊಂಡು ಪರಿಶೀಲಿಸಿದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮಾತ್ರ ಮರು ಎಣಿಕೆಗಾಗಿ (Re-totalling) ಅರ್ಜಿ ಸಲ್ಲಿಸಬೇಕು.

2. (Re-totalling)ಗೆ ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸುವಂತಿಲ್ಲ.

4. ಮರು ಎಣಿಕೆ ಫಲಿತಾಂಶವನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

5. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವವರು ಮರು ಎಣಿಕೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. 

ಮರು ಮೌಲ್ಯಮಾಪನಕ್ಕಾಗಿ (Re-valuation)  ದ್ವಿತೀಯ ಪಿಯುಸಿ ಅರ್ಜಿ ನಮೂನೆ

ದ್ವಿತೀಯ ಪಿಯುಸಿ ಪರೀಕ್ಷೆ 2023ರ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಹಂತಗಳನ್ನು ಕೆಳಗೆ ನೀಡಲಾಗಿದೆ.

ಮರು ಮೌಲ್ಯಮಾಪನಕ್ಕಾಗಿ (Re-valuation) ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು

  1. Answer Paper Scanned Copy ಯನ್ನು ಪಡೆದುಕೊಂಡು ಪರಿಶೀಲಿಸಿದ ನಂತರವೇ ಮರು ಮೌಲ್ಯಮಾಪನಕ್ಕಾಗಿ (Re-valuation) ಅರ್ಜಿ ಸಲ್ಲಿಸಬೇಕು.
  2. Answer Paper Scanned Copy ಪಡೆಯಲು ಅನುಸರಿಸಿದ ಕ್ರಮವನ್ನೇ ಈ ಕಾರ್ಯಕ್ಕೂ ಅನುಸರಿಸುವುದು.
  3. ಮರು ಮೌಲ್ಯಮಾಪನ ಕಾರ್ಯ ಮುಗಿದ ನಂತರ ಫಲಿತಾಂಶವನ್ನು ಇಲಾಖಾ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
  4. ಮರು ಮೌಲ್ಯಮಾಪನ/ಮರು ಎಣಿಕೆಗೆ ಅರ್ಜಿ ಸಲ್ಲಿಸಿರುವ ಅನುತ್ತೀರ್ಣ ವಿದ್ಯಾರ್ಥಿಗಳು 2023ರ ಜೂನ್ ಪರೀಕ್ಷೆ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಪಾವತಿಸುವುದು. ಮರು ಮೌಲ್ಯಮಾಪನ/ಮರು ಎಣಿಕೆ ಫಲಿತಾಂಶಕ್ಕೆ ಕಾಯಬೇಕಾಗಿಲ್ಲ. 

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಮತ್ತು ಮರು-ಎಣಿಕೆ ಶುಲ್ಕ ವಿವರಗಳು

ವಿದ್ಯಾರ್ಥಿಗಳು ಮರು-ಮೌಲ್ಯಮಾಪನಕ್ಕಾಗಿ ಶುಲ್ಕವನ್ನು ಮತ್ತು ಕೆಳಗಿನ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪರಿಶೀಲಿಸಬಹುದು.

ಪ್ರಕ್ರಿಯೆಅರ್ಜಿ ಶುಲ್ಕ
ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಗಾಗಿರೂ. 630/-
ಮರು ಮೌಲ್ಯಮಾಪನ (ಪ್ರತಿ ವಿಷಯಕ್ಕೆ)ರೂ. 1670/-

ಆನ್‌ಲೈನ್‌ ಅಂಕಪಟ್ಟಿ ನೈಜತೆ ಪರಿಶೀಲನೆ ಪ್ರಕ್ರಿಯೆಯ ವಿವರಗಳು ಈ ಕೆಳಕಂಡಂತಿದೆ:

ಅರ್ಜಿದಾರರು ಅನುಸರಿಸಬೇಕಾದ ಕ್ರಮಗಳು:

  1. ಅಂಕಪಟ್ಟಿಯ ನೈಜತೆಯ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಲಿಂಕ್‌ ವೆಬ್‌ಸೈಟ್‌ನಲ್ಲಿ Requester details ಅನ್ನು ಕ್ಲಿಕ್ ಮಾಡಿ ಸೂಕ್ತ Organisation/department ನಮೂದಿಸಿದ ನಂತರ ಸದರಿ ಸಂಬಂಧಿಸಿದ ಮಾಹಿತಿಗಳನ್ನು ನಮೂದಿಸಬೇಕು.
    Generate OTP ಅನ್ನು ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕೃತವಾದ OTP ಅನ್ನು ನಮೂದಿಸಿ Validate ಮಾಡುವುದು.
  2. ಅರ್ಜಿದಾರರು ಸಂಬಂಧಪಟ್ಟ covering letter ಅನ್ನು PDF ನಮೂನೆಯಲ್ಲಿ(500KB to 1MB) ಅಪ್ಲೋಡ್ ಮಾಡಿದ ನಂತರ generate ಆಗುವ ಆಪ್ಲಿಕೇಶನ್ ನಂಬರ್ ಅನ್ನು ಮುಂದಿನ ಯಾವುದೇ ಮಾಹಿತಿಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
  3. SMS ಮುಖಾಂತರ ಬಂದಿರುವ ಆಪ್ಲಿಕೇಶನ್‌ ನಂಬರ್‌ನ್ನು ನಮೂದಿಸಿ “Click here to enter markscard details” ಅನ್ನು click ಮಾಡಿ, ಅಂಕಪಟ್ಟಿಗೆ ಸಂಬಂಧ ಮಾಹಿತಿಗಳನ್ನು ನಮೂದಿಸಿ.
  4. ಅಂಕಪಟ್ಟಿಯನ್ನು scan ಮಾಡಿ (PDF ನಮೂನೆಯಲ್ಲಿ 500KB to 1MB format ನಲ್ಲಿ) ಅಪ್ಲೋಡ್ ಮಾಡಿದ ನಂತರ “Save” ಬಟನ್‌ ಕ್ಲಿಕ್ ಮಾಡಿ..
  5. ಅರ್ಜಿದಾರರ ಮೊಬೈಲ್ ಸಂಖ್ಯೆಗೆ “your report is ready to download” ಎಂದು ಮೆಸೇಜ್ ಬಂದ ನಂತರ ಅರ್ಜಿದಾರರು ವರದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಂದುವೇಳೆ Reject ಆದ ಸಂದರ್ಭದಲ್ಲಿ Reject ಗೆ ನೀಡಿರುವ ಕಾರಣಾನುಸಾರ ದಾಖಲಾತಿಗಳನ್ನು ಮನಃ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
  6. ಪ್ರಕ್ರಿಯೆಯ ಪ್ರತೀ ಹಂತದಲ್ಲಿಯೂ ಎಸ್‌ಎಂಎಸ್‌ ಆಧಾರಿತ ಮಾಹಿತಿಯನ್ನು ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. 

ದ್ವಿತೀಯ ಪಿಯುಸಿ ಅರ್ಜಿ ನಮೂನೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಪ್ರಕಟಿತ ಫಲಿತಾಂಶದಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ವಿದ್ಯಾರ್ಥಿಗಳು ಏನು ಮಾಡಬೇಕು?

ಉತ್ತರ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಕಟಿತ ಫಲಿತಾಂಶದಲ್ಲಿ ಏನಾದರೂ ವ್ಯತ್ಯಾಸಗಳು ಇದ್ದಲ್ಲಿ ನಿಗದಿತ ದಿನಾಂಕದೊಳಗೆ ಪೂರಕ ದಾಖಲೆಗಳನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಪ್ರಾಂಶುಪಾಲರೇ ಖುದ್ದಾಗಿ ಸಲ್ಲಿಸುತ್ತಾರೆ. ಜಿಲ್ಲಾ ಉಪನಿರ್ದೇಶಕರುಗಳು ದಾಖಲೆಗಳನ್ನು ಕ್ರೋಢೀಕರಿಸಿ ಕೇಂದ್ರ ಕಛೇರಿಗೆ ನಿಗದಿತ ದಿನಾಂಕದೊಳಗೆ ತಲುಪಿಸುತ್ತಾರೆ.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು/ಪೋಷಕರನ್ನು ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೇಂದ್ರ ಕಛೇರಿಗೆ ಕಳುಹಿಸಬಾರದು. ಕಳುಹಿಸಿದಲ್ಲಿ ಮುಂದೆ ಸಂಭವಿಸಬಹುದಾದ ಆಗುಹೋಗುಗಗಳಿಗೆ ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿಸಲಾಗುತ್ತದೆ. 

ಪ್ರ. 2:  ಘೋಷಿತ ಫಲಿತಾಂಶದಲ್ಲಿ ಪಡೆದ ಅಂಕಗಳು ವಿದ್ಯಾರ್ಥಿಗಳಿಗೆ ತೃಪ್ತಿಕರವಾಗದಿದ್ದಲ್ಲಿ ವಿದ್ಯಾರ್ಥಿಗಳು ಏನು ಮಾಡಬಹುದು?

ಉತ್ತರ: ದ್ವಿತೀಯ ಪಿಯುಸಿ ಘೋಷಿತ ಫಲಿತಾಂಶದಲ್ಲಿ ಪಡೆದ ಅಂಕಗಳು ವಿದ್ಯಾರ್ಥಿಗಳಿಗೆ ತೃಪ್ತಿಕರವಾಗದಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ನಡೆಸುವ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ. ಈ ವಿದ್ಯಾರ್ಥಿಗಳು ಮಾತ್ರ ನಿಯಮಾನುಸಾರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರುಗಳ ಮೂಲಕ ಅರ್ಜಿಯನ್ನು ಸಲ್ಲಿಸಿವುದು ಹಾಗೂ ಸಂಬಂಧಪಟ್ಟ ಪ್ರಾಂಶುಪಾಲರು ನಿಗದಿತ ದಿನಾಂಕದಲ್ಲಿ ಇಲಾಖೆಯ ಪೋರ್ಟಲ್‌ನಲ್ಲಿ ಅಪ್ಡೇಟ್ ಮಾಡುತ್ತಾರೆ.

ಪ್ರ. 3: ವಿದ್ಯಾರ್ಥಿಗಳು ಫಲಿತಾಂಶವನ್ನು ತಿರಸ್ಕರಿಸಲು ಸಾಧ್ಯವಿದೆಯೇ?

ಉತ್ತರ: ದ್ವಿತೀಯ ಪಿಯುಸಿ ಘೋಷಿತ ಫಲಿತಾಂಶದಲ್ಲಿ ನೀಡಿರುವ ಅಂಕಗಳು ವಿದ್ಯಾರ್ಥಿಗಳಿಗೆ ತೃಪ್ತಿಕರವಾಗದೇ ಇದ್ದಲ್ಲಿ, ಫಲಿತಾಂಶವನ್ನು ತಿರಸ್ಕರಿಸಿ ಪರೀಕ್ಷೆಗೆ ಹಾಜರಾಗಲು ಇಚ್ಛಿಸುವ ಹೊಸ ವಿದ್ಯಾರ್ಥಿಗಳು (Freshers), ತಾವು ಇಚ್ಛಿಸುವ ವಿಷಯಗಳ ಫಲಿತಾಂಶವನ್ನು ತಿರಸ್ಕರಣೆ ಮಾಡಿ ಪರೀಕ್ಷೆಗೆ ಹಾಜರಾಗಲು ಶುಲ್ಕ ರಹಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಮಾರ್ಚ್-ಏಪ್ರಿಲ್‌ನಲ್ಲಿ ಪರೀಕ್ಷೆಗೆ ತೆಗೆದುಕೊಂಡಿದ್ದ ವಿಷಯಗಳ ಫಲಿತಾಂಶವನ್ನು ಮಾತ್ರ ತಿರಸ್ಕರಿಸಲು ಶುಲ್ಕರಹಿತವಾಗಿ ಅವಕಾಶ ನೀಡಲಾಗಿದೆ. 

ಫಲಿತಾಂಶ ಪ್ರಕಟಗೊಂಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿದ್ಯಾರ್ಥಿಗಳಿಗೆ ಹೊಸದಾಗಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಸ ಇರುವುದಿಲ್ಲ. 

ಪ್ರ. 4: ವಿದ್ಯಾರ್ಥಿಗಳು ವಲಸೆ ಪ್ರಮಾಣಪತ್ರ (Migration Certificate) ಪಡೆಯುವುದು ಹೇಗೆ?

ಉತ್ತರ: ವಲಸೆ ಪ್ರಮಾಣ ಪತ್ರದ ಮಾದರಿಯನ್ನು ಪದವಿ ಪೂರ್ಣ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಪಿಡಿಎಫ್ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ. ವಲಸೆ ಪ್ರಮಾಣ ಪತ್ರ ಪಡೆಯಲು ರೂ.480 ಶುಲ್ಕ ನಿಗದಿಪಡಿಸಲಾಗಿದೆ.
ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ವಲಸೆ ಪ್ರಮಾಣಪತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಪ್ರ. 5: ಆನ್‌ಲೈನ್‌ನಲ್ಲಿ ದ್ವಿತೀಯ ಪಿಯುಸಿ ಅಂಕಪಟ್ಟಿ ನೈಜತೆಯನ್ನು ಪರಿಶೀಲಿಸಬಹುದೇ?

ಉತ್ತರ: ಹೌದು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಾಲತಾಣ ಲಿಂಕ್‌

ಮೂಲಕ ನೇರವಾಗಿ ಅಂಕಪಟ್ಟಿ ನೈಜತೆ ಪ್ರಮಾಣ ಪತ್ರ ಬಯಸುವ ನೇಮಕಾತಿ/ಸಕ್ಷಮ ಪ್ರಾಧಿಕಾರವು ಅಥವಾ ವ್ಯಕ್ತಿಗಳು ಮನವಿಯನ್ನು ಸಲ್ಲಿಸಬಹುದಾಗಿದೆ. Covering letter ಮತ್ತು ಅಂಕಪಟ್ಟಿಯನ್ನು ಪಿಡಿಎಫ್‌ನಲ್ಲಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿದ ನಂತರ ಜಾಲತಾಣದಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ರವಾನಿಸಲಾಗುತ್ತದೆ. ಈ ಸಂದೇಶವನ್ನು ಸ್ವೀಕರಿಸಿದ ನಂತರ ಅರ್ಜಿ ಸಂಖ್ಯೆಯನ್ನು ನಮೂದಿಸಿ ನೈಜತೆಯ ಬಗ್ಗೆ ಸೃಜಿಸಲಾದ ಪ್ರಮಾಣಪತ್ರವನ್ನು ಪಡೆಯಬಹುದು. 

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅರ್ಜಿ ನಮೂನೆ 2023: ನೋಂದಣಿ ಶುಲ್ಕ, ಪ್ರಕ್ರಿಯೆ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ