• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 25-08-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2022-23

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2022-23: ಕರ್ನಾಟಕದಲ್ಲಿ ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪ್ರಿ-ಯೂನಿವರ್ಸಿಟಿ ಕೋರ್ಸ್ (PUC) ಅಂದರೆ ಪದವಿಪೂರ್ವ ಶಿಕ್ಷಣ ಎಂದು ಕರೆಯಲಾಗುತ್ತದೆ. ಪದವಿ ಪೂರ್ವ ಕೋರ್ಸ್‌ 2 ವರ್ಷಗಳ ಅವಧಿಯದ್ದಾಗಿದ್ದು, ಮೊದಲ ವರ್ಷವನ್ನು ಪ್ರಥಮ ಪಿಯುಸಿ ಎಂದೂ, ಎರಡನೇ ವರ್ಷವನ್ನು ದ್ವಿತೀಯ ಪಿಯುಸಿ ಎಂದೂ ಕರೆಯಲಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು 2 ನೇ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ನಿರ್ಣಾಯಕವಾಗಿದೆ. 

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು, ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತದೆ. ಅಲ್ಲದೆ, ಈ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯಲು ಹೊಂದಿರಬೇಕಾದ ಅರ್ಹತೆಗಳು, ಶುಲ್ಕ ವಿವರ, ನೋಂದಣಿ ಸೇರಿದಂತೆ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಇಲಾಖೆಯೇ ನಿರ್ಧರಿಸುತ್ತದೆ. ಅದರ ಒಂದು ನೋಟ ಇಲ್ಲಿದೆ.

ಈ ಲೇಖನದಲ್ಲಿ ನಾವು ವಿದ್ಯಾರ್ಥಿ ಜೀವನದ ಮಹತ್ವದ ಹಂತವಾದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರವೇಶಕ್ಕೆ ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ. ಮೊದಲು ದ್ವಿತೀಯ ಪಿಯುಸಿ ಪ್ರವೇಶಕ್ಕೆ ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ನೋಡೋಣ.

ದ್ವಿತೀಯ ಪಿಯುಸಿ ಪ್ರವೇಶಕ್ಕೆ ಅಗತ್ಯವಾದ ಅರ್ಹತೆಗಳು

  • ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು,
  • ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಲ್ಪಟ್ಟ ವಿದ್ಯಾರ್ಥಿಗಳು,
  • ಪ್ರಥಮ ಪಿಯುಸಿಯನ್ನು ರಾಜ್ಯದಲ್ಲಿರುವ ಬೇರೆ ಬೇರೆ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಂದಿನ ವರ್ಷಗಳಲ್ಲಿ ಅಭ್ಯಾಸ ಮಾಡಿ ಉತ್ತೀರ್ಣರಾಗಿದ್ದು, ದ್ವಿತೀಯ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು,
  • 10ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾಗಿ ಅನಿವಾರ್ಯ ಕಾರಣದಿಂದ ವ್ಯಾಸಂಗವನ್ನು ಮುಂದುವರೆಸಲು ಸಾಧ್ಯವಾಗದ ರಾಜ್ಯದ/ ಹೊರರಾಜ್ಯದ ವಿದ್ಯಾರ್ಥಿಗಳು,
  • ಹೊರರಾಜ್ಯಗಳಲ್ಲಿ / ಹೊರದೇಶಗಳಲ್ಲಿ ತತ್ಸಮಾನವಾದ (CBSE ಪಟ್ಟಿಯಲ್ಲಿರುವ) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ನಿರ್ದೇಶನಾಲಯದಿಂದ ತಾತ್ಕಾಲಿಕ ಅರ್ಹತಾ ಪತ್ರ (Provisional Eligibility Certificate) ವನ್ನು ದಾಖಲಾತಿಗೆ ಮೊದಲು ಕಡ್ಡಾಯವಾಗಿ ಪಡೆದು, ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು. ಅಂತಹ ವಿದ್ಯಾರ್ಥಿಗಳು ತಾತ್ಕಾಲಿಕ ಅರ್ಹತಾ ಪತ್ರಕ್ಕೆ ನಿಗದಿತ ಅರ್ಜಿಯನ್ನು ತುಂಬಿ, ನಿಗದಿತ ಶುಲ್ಕ ಹಾಗೂ ದಿನಾಂಕದೊಳಗೆ, ಶುಲ್ಕ ಪಾವತಿಸಿದ ಮೂಲ ಚಲನ್ ಮತ್ತು ದೃಢೀಕೃತ ದಾಖಲೆಗಳನ್ನು (ವಲಸೆ ಪ್ರಮಾಣ ಪತ್ರ ಪಾಸ್‌ಪೋರ್ಟ್/ವೀಸಾ, ಬೊನೋಫೈಡ್ ಪ್ರಮಾಣ ಪತ್ರ ಇತ್ಯಾದಿಗಳು) ಲಗತ್ತಿಸಿ ನಿಗದಿತ ದಿನಾಂಕದೊಳಗೆ ಕೇಂದ್ರ ಕಛೇರಿಗೆ ಸಲ್ಲಿಸಿ ‘ತಾತ್ಕಾಲಿಕ ಅರ್ಹತಾ ಪತ್ರ’ವನ್ನು ಪಡೆದುಕೊಂಡ ವಿದ್ಯಾರ್ಥಿಗಳು,
  • CBSE/ICSE/OTHER STATE Boards ಸಂಸ್ಥೆಗಳಲ್ಲಿ 12ನೇ ತರಗತಿಯ ಪಠ್ಯಕ್ರಮದಲ್ಲಿ ಉತ್ತೀರ್ಣರಾಗಿದ್ದು,  ನಿರ್ದೇಶನಾಲಯದಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ದಾಖಲಾತಿಗೆ ಮೊದಲು ಕಡ್ಡಾಯವಾಗಿ ಪಡೆದಿರುವ ವಿದ್ಯಾರ್ಥಿಗಳು,
  • ಅರ್ಹತಾ ಪತ್ರಕ್ಕೆ ನಿಗದಿತ ಅರ್ಜಿಯನ್ನು ತುಂಬಿ ನಿಗದಿತ ಶುಲ್ಕ ಹಾಗೂ ದಿನಾಂಕದೊಳಗೆ ಶುಲ್ಕ ಪಾವತಿಸಿದ ಮೂಲ ಚಲನ್ ಮತ್ತು ದೃಢೀಕೃತ ದಾಖಲೆಗಳನ್ನು (ವಲಸೆ ಪ್ರಮಾಣಪತ್ರ, ಪಾಸ್‌ಪೇರ್ಟ್/ವೀಸಾ, 12ನೇ ತರಗತಿಯ ಅಂಕಪಟ್ಟಿ/ಬೋನಾಫೈಡ್ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ಕೇಂದ್ರ ಕಛೇರಿಗೆ ಸಲ್ಲಿಸಿ, ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಥಮ ಪಿಯುಸಿ ಪ್ರವೇಶಕ್ಕೆ ಅಗತ್ಯವಾದ ಅಂಶಗಳು

  • ಕರ್ನಾಟಕ ಪ್ರೌಢಶಾಲಾ ಪರೀಕ್ಷೆ (10ನೇ ತರಗತಿ / ಎಸ್‌ಎಸ್‌ಎಲ್‌ಸಿ) ಅಥವಾ ಕರ್ನಾಟಕದ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಥಮ ವರ್ಷದ ಪಿಯುಸಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
  • ಆಯಾ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಯಿಂದ ಮೂಲ ವರ್ಗಾವಣೆ ಪತ್ರ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ಮೊದಲೇ ಅಚಾತುರ್ಯದಿಂದ ಮೂಲ ವರ್ಗಾವಣೆ ಪತ್ರವನ್ನು ಕಳೆದುಕೊಂಡಿದ್ದರೆ ಹತ್ತಿರದ ಪೋಲಿಸ್ ಠಾಣೆಗೆ ದೂರು ದಾಖಲಿಸಿ, ನಂತರ ಕಾಲೇಜುಗಳಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ, ದ್ವಿಪ್ರತಿ ವರ್ಗಾವಣೆ ಪತ್ರ ಪಡೆದಿರುವ ವಿದ್ಯಾರ್ಥಿಗೆ ಪ್ರಥಮ ಪಿಯುಸಿ ತರಗತಿಗೆ ಸಂಬಂಧಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೈಜತೆಯನ್ನು ಖಾತರಿಪಡಿಸಿಕೊಂಡು ನಿರ್ದೇಶನಾಲಯದ ಪೂರ್ವಾನುಮತಿ ಪಡೆದ ನಂತರ ವಿದ್ಯಾರ್ಥಿಯನ್ನು ದಾಖಲಾತಿ ಮಾಡಿಕೊಳ್ಳಬಹುದು.
  • IGCSE/Cambridge International ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ದೇಶನಾಲಯದಿಂದ ಅರ್ಹತಾ ಪತ್ರ ಪಡೆದ ನಂತರವೇ ದಾಖಲಾತಿ ಮಾಡಿಕೊಳ್ಳಬೇಕು. ಫಲಿತಾಂಶ ಪ್ರಕಟವಾದ ನಂತರ IGCSE Board ರವರು ನೀಡುವ ಅಧಿಕೃತ ಅಂಕಪಟ್ಟಿಯನ್ನು ಪಡೆದ ನಂತರವೇ ದಾಖಲಾತಿ ಮಾಡಿಕೊಳ್ಳಬೇಕು. 
  • ಇಲಾಖೆಯು ಆಯಾ ಕಾಲಕ್ಕೆ ಹೊರಡಿಸುವ ಸೂಚನೆಯ ಅನುಸಾರ ದಾಖಲಾತಿ ಮಾಡಿಕೊಳ್ಳುವುದು. ಕಾಲೇಜಿನ ಪ್ರಾಚಾರ್ಯರು ಯಾವುದೇ ಕಾರಣಕ್ಕೂ ಪರೀಕ್ಷಾ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮೊದಲು ಶಾಲೆಯವರು ನೀಡುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಬಾರದು. ಈ ರೀತಿ ದಾಖಲಾತಿ ಮಾಡಿಕೊಂಡಲ್ಲಿ ಪ್ರಾಚಾರ್ಯರೇ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಈ ರೀತಿಯ ದಾಖಲಾತಿಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಲಾಗುವುದು.
  • IGCSE/Cambridge International ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತರಗತಿಗೆ ದಾಖಲಾತಿಯನ್ನು ಪಡೆಯಲು ಮೇ ತಿಂಗಳು 2022ರಲ್ಲಿ 10ನೇ ತರಗತಿ ಪರೀಕ್ಷೆಯನ್ನು ಬರೆದು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
  • ವಲಸೆ ಪ್ರಮಾಣಪತ್ರ ಮತ್ತು ಅರ್ಹತಾ ಪ್ರಮಾಣಪತ್ರವನ್ನು ಕರ್ನಾಟಕ ರಾಜ್ಯದ ಹೊರಗಿನ ಅಭ್ಯರ್ಥಿಗಳು ಹಾಜರುಪಡಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಮೀಸಲಿಟ್ಟಿರುವ ರಿಯಾಯಿತಿಗಳು ಮತ್ತು ಸವಲತ್ತುಗಳನ್ನು ಪಡೆಯಲು ತಹಶೀಲ್ದಾರ್ ಸರಿಯಾಗಿ ಸಹಿ ಮಾಡಿದ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ಪ್ರಥಮ ಮತ್ತು ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿ

09.06.2022ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಸಿದ್ಧಪಡಿಸಿಕೊಂಡ ವೇಳಾಪಟ್ಟಿಯಂತೆ ತರಗತಿಗಳು ಪ್ರಾರಂಭ.
20.06.2022ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳ ಪ್ರಾರಂಭ
17.08.2022 ರಿಂದ 20.08.2022 ರವರೆಗೆಪ್ರಥಮ ಕಿರು ಪರೀಕ್ಷೆ (ಪ್ರಥಮ ಮತ್ತು ದ್ವಿತೀಯ ಪಿಯುಸಿ)
12.09.2022ಮೊದಲನೇ ಹಾಜರಾತಿ ಕೊರತೆ ಪಟ್ಟಿ ಪ್ರಕಟಣೆ, ಮಾಹಿತಿಯನ್ನು ಹೋಷಕರ ಗಮನಕ್ಕೆ ತರುವುದು.
16.09.2022ಪೋಷಕರ – ಉಪನ್ಯಾಸಕರ ಮೊದಲನೇ ಸಭೆ. (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು).
19.09.2022 ರಿಂದ 30.09.2022ಮಧ್ಯವಾರ್ಷಿಕ ಪರೀಕ್ಷೆ. (ಪ್ರಥಮ ಮತ್ತು ದ್ವಿತೀಯ ಪಿಯುಸಿ).
01.10.2022 ರಿಂದ 12.10.2022ಮಧ್ಯಂತರ ರಜೆ.
13.10.2022ಮಧ್ಯಂತರ ರಜೆಯ ನಂತರ ತರಗತಿಗಳ ಮನರಾರಂಭ.
10.12.2022ಎರಡನೇ ಹಾಜರಾತಿ ಕೊರತೆ ಪಟ್ಟಿ ಪಕಟಣೆ, ಮಾಹಿತಿಯನ್ನು ಪೋಷಕರ ಗಮನಕ್ಕೆ ತರುವುದು.
15.12.2022ಪೋಷಕರ – ಉಪನ್ಯಾಸಕರ ಎರಡನೇ ಸಭೆ. (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು).
19.12.2022 ರಿಂದ 22.12.2022ಎರಡನೇ ಕಿರು ಪರೀಕ್ಷೆ. (ಪ್ರಥಮ ಮತ್ತು ದ್ವಿತೀಯ ಪಿಯುಸಿ).
12.01.2023 ರಿಂದ 21.01.2023ಪ್ರಥಮ ಪಿಯುಸಿ ವಾರ್ಷಿಕ ಪ್ರಾಯೋಗಿಕ ಪರೀಕ್ಷೆಗಳು.
21.01.2023ಪ್ರಥಮ ಮತ್ತು ದ್ವಿತೀಯ ಪಿಯುಸಿ ಅಂತಿಮ ಹಾಜರಾತಿ ಕೊರತೆ ಪಟ್ಟಿ ಪ್ರಕಟಣೆ, ಮಾಹಿತಿಯನ್ನು ಕಡ್ಡಾಯವಾಗಿ ಅಂಚೆಮೂಲಕ ಪೋಷಕರ ಗಮನಕ್ಕೆ ತರುವುದು.
27.01.2023.ಪೋಷಕರ – ಉಪನ್ಯಾಸಕರ ಮೂರನೇ ಸಭೆ (ಹಾಜರಾತಿ ಕೊರತೆ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು).
23.01.2023 ರಿಂದ 04.02.2023ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಗಳು.
06.02.2023 ರಿಂದ 18.02.2023ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು,
20.02.2023 ರಿಂದ 04.03.2023 ರವರೆಗೆಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು.
20.03.2023 ರಿಂದ 15.04.2023 ರವರೆಗೆದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭ.
06.03.2023 ರಿಂದ 15.03.2023 ರವರೆಗೆಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ.
16.03.2023 ರಿಂದ 21.03.2023 ರವರೆಗೆಪ್ರಥಮ ಪಿಯುಸಿ ಫಲಿತಾಂಶ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ಅನುಮೋದನೆಗಾಗಿ ಸಲ್ಲಿಸುವುದು.
31.03.2023ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ. ಕೊನೆಯ ಕಾರ್ಯನಿರತ ದಿನ.
01.04.2023 ರಿಂದಬೇಸಿಗೆ ರಜೆ ಪ್ರಾರಂಭ.
ಮೇ ಮೊದಲನೆಯ ವಾರಪ್ರಥಮ ಪಿಯುಸಿ ಪೂರಕ ಪರೀಕ್ಷೆ,
ಮೇ ಮೂರನೇ ವಾರಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ.

ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ಭಾಷೆ/ವಿಷಯಗಳ ಬದಲಾವಣೆ

ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಯು ವಿಷಯ ಭಾಷೆಗಳ ಬದಲಾವಣೆಗೆ 2022 ಆಗಸ್ಟ್ ತಿಂಗಳ 10ನೇ ತಾರೀಖಿನೊಳಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ, ಬದಲಾವಣೆ ಬಯಸುವ ವಿಷಯಗಳಲ್ಲಿ ಕನಿಷ್ಠ ಶೇ.75 ರಷ್ಟು ಹಾಜರಾತಿ ದೊರಕುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಮಾತ್ರ ವಿಷಯ ಬದಲಾವಣೆಯನ್ನು ಪ್ರಾಚಾರ್ಯರ ಹಂತದಲ್ಲೇ ಮಾಡಿಕೊಳ್ಳತಕ್ಕದ್ದು, ಈ ವಿಚಾರವಾಗಿ ಯಾವುದೇ ವಿದ್ಯಾರ್ಥಿಯನ್ನು ನಿರ್ದೇಶನಾಲಕ್ಕೆ ಕಳುಹಿಸಬಾರದು.

ದ್ವಿತೀಯ ಪಿಯುಸಿ ಅರ್ಹತೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ವಲಸೆ ಪ್ರಮಾಣಪತ್ರ ಎಂದರೇನು? ಇದನ್ನು ಯಾರು ಸಲ್ಲಿಸಬೇಕು?

ಉತ್ತರ: ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳು ಮೂಲ ವಲಸೆ ಪ್ರಮಾಣಪತ್ರ (Original Migration Certificate) ಸಲ್ಲಿಸಬೇಕಾಗುತ್ತದೆ.

ಪ್ರ. 2: ತಾತ್ಕಾಲಿಕ ಅರ್ಹತಾ ಪತ್ರ ಯಾರಿಗೆ ನೀಡಲಾಗುತ್ತದೆ?

ಉತ್ತರ: ವಿದೇಶಗಳಲ್ಲಿ ಕರ್ನಾಟಕ ರಾಜ್ಯದ ಎಸ್ಎಸ್ಎಲ್‌ಸಿ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಇಲಾಖೆಯಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆಯದಿರುವ ವಿದ್ಯಾರ್ಥಿಗಳ ದಾಖಲಾತಿಯನು ರದ್ದುಪಡಿಸಲಾಗುತ್ತದೆ. 

ಪ್ರ. 3: ಎಸ್.ಎಸ್.ಎಲ್.ಸಿ ಮೂಲ ವರ್ಗಾವಣೆ ಪ್ರಮಾಣ ಪತ್ರ ಕಳೆದುಹೋಗಿದ್ದರೆ ಏನು ಮಾಡಬೇಕು?

ಉತ್ತರ: ಆಯಾ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಯಿಂದ ಮೂಲ ವರ್ಗಾವಣೆ ಪ್ರಮಾಣಪತ್ರ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ಮೊದಲೇ ಅಚಾತುರ್ಯದಿಂದ ಮೂಲ ವರ್ಗಾವಣೆ ಪತ್ರ ಕಳೆದುಕೊಂಡಿದ್ದರೆ, ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಂತರ ಕಾಲೇಜುಗಳಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಬೇಕು. ನಿರ್ದೇಶನಾಲಯದ ಪೂರ್ವಾನುಮತಿ ಪಡೆದು ನಂತರ ವಿದ್ಯಾರ್ಥಿಯನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ. 

ಪ್ರ. 4: ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ(ಎನ್ಐಒಎಸ್)ಯಿಂದ 10ನೇ ತರಗತಿ ಪಾಸಾದವರು ಪಿಯುಸಿ ಪ್ರವೇಶಕ್ಕೆ ಅರ್ಹರೇ?

ಉತ್ತರ: ಹೌದು. ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿಯನ್ನು ಎಸ್.ಎಸ್.ಎಲ್.ಸಿಗೆ ತತ್ಸಮಾನವಾದ ಅರ್ಹತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.

ಪ್ರ. 5: ತಾತ್ಕಾಲಿಕ ಅಂಕಪಟ್ಟಿ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆಯೇ?

ಉತ್ತರ: ಇಲ್ಲ. ಪರೀಕ್ಷಾ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲು ಶಾಲೆಯವರು ನೀಡುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳುವಂತಿಲ್ಲ.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2023ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ: ಅರ್ಹತೆ ಮತ್ತು ಪ್ರವೇಶ ಪ್ರಕ್ರಿಯೆ 2022-23” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ