• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ: ವಿಶ್ಲೇಷಣೆ

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ: ಪದವಿ ಪೂರ್ವ ಶಿಕ್ಷಣವು ಒಬ್ಬ ವಿದ್ಯಾರ್ಥಿಯ ಜೀವನದ ಅತ್ಯಂತ ಮಹತ್ವಪೂರ್ಣ ಘಟ್ಟವಾಗಿದೆ. ಪದವಿ ಪೂರ್ವ ಶಿಕ್ಷಣದ ಹಂತವು ಉನ್ನತ ಶಿಕ್ಷಣಕ್ಕೆ ಸೂಕ್ತವಾದ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯವಾಗಿರುತ್ತದೆ ಹಾಗೂ ವಿದ್ಯಾರ್ಥಿಗಳು ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಗಳಿಂದಾಗಿ ಪದವಿ ಪೂರ್ವ ಶಿಕ್ಷಣಕ್ಕೆ ಇನ್ನಿಲ್ಲದ ಬೇಡಿಕೆ ಮತ್ತು ಪ್ರಾಮುಖ್ಯತೆ ಇದೆ.

ಪದವಿ ಪೂರ್ವ ಶಿಕ್ಷಣದ ಕೊನೆಯ, ಅಂದರೆ ದ್ವಿತೀಯ ವರ್ಷದ ಅಂತ್ಯದಲ್ಲಿ, ಪದವಿ ಪೂರ್ವ ಶಿಕ್ಷಣ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುತ್ತದೆ. ಪ್ರತಿ ಶೈಕ್ಷಣಿಕ ವರ್ಷದಂತೆ 2021-22ರ ಸಾಲಿನಲ್ಲೂ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಿತು. ಈ ವರ್ಷದ ಪರೀಕ್ಷೆಯನ್ನು ದಿನಾಂಕ 22-04-2022 ರಿಂದ 18-05-2011ರವಗೆ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಈ ಸಾಲಿನ ಪರೀಕ್ಷೆಗೆ ಒಟ್ಟು  6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆ 2021-22: ಹಾಜರಾದ ಮತ್ತು ತೇರ್ಗಡೆಯಾದವರ ವಿವರ

ದ್ವಿತೀಯ ಪಿಯುಸಿ ಪರೀಕ್ಷೆ 2021-22: ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಪ್ರತಿ ವರ್ಷ 5.5-6.5 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. 2017 ರಲ್ಲಿ 5,43,443 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದಾಗ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. 2021 ರಲ್ಲಿ, 6,66,497 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಎಲ್ಲರೂ ಯಶಸ್ವಿಯಾಗಿದ್ದಾರೆ ಎಂದು ಘೋಷಿಸಲಾಯಿತು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ 6,83,563 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.61.88 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಿಂದಿನ ವರ್ಷಗಳಲ್ಲಿ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ತ್ವರಿತ ಹೋಲಿಕೆ ಇಲ್ಲಿದೆ.

ಶೈಕ್ಷಣಿಕ ವರ್ಷಹಾಜರಾದ ಒಟ್ಟು ವಿದ್ಯಾರ್ಥಿಗಳು
20226,84,255
20216,66,497
20205,56,267
20196,71,653
20186,85,713
20175,43,443
20166,45,933

ಒಟ್ಟಾರೆ ಶೇಕಡಾವಾರು ಉತ್ತೀರ್ಣತೆ 

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಪ್ರತಿ ವರ್ಷ ಸುಮಾರು 60% ರಷ್ಟು ಉತ್ತೀರ್ಣತೆ ದಾಖಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಬಾಲಕರಿಗಿಂತ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. 2022 ರಲ್ಲಿ, ಒಟ್ಟಾರೆ ಉತ್ತೀರ್ಣತೆಯ ಶೇಕಡಾವಾರು 61.88% ಆಗಿತ್ತು. 68.72% ಬಾಲಕಿಯರು ಮತ್ತು 55.22% ಬಾಲಕರು ತಮ್ಮ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದರು.

ವರ್ಷವಾರು ಫಲಿತಾಂಶಗಳ ವಿವರವಾದ ಹೋಲಿಕೆಯನ್ನು ಕೆಳಗೆ ನೀಡಲಾಗಿದೆ:

ಶೈಕ್ಷಣಿಕ ವರ್ಷಒಟ್ಟು ಉತ್ತೀರ್ಣತೆ ಪ್ರಮಾಣ %ಬಾಲಕರ % ಉತ್ತೀರ್ಣತೆಬಾಲಕಿಯರ % ಉತ್ತೀರ್ಣತೆ
202261.8855.2268.72
2021100100100
202069.254.7368.73
201961.7355.2968.24
201859.5652.367.11
201752.3844.7460.28
201657.250.0264.78

ದ್ವಿತೀಯ ಪಿಯು ಪರೀಕ್ಷಾ ಮಾದರಿ ವಿವರಗಳು – ಸ್ಕೋರಿಂಗ್ ಮಾದರಿ 

ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2021-22 ನೇ ಸಾಲಿನ ಪರೀಕ್ಷೆಯ ಮಾದರಿಯ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಪರೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಥಿಯರಿಟಿಕಲ್ ಆಗಿದ್ದರೆ, ಇನ್ನೊಂದು ಪ್ರಾಯೋಗಿಕ ಪರೀಕ್ಷೆ. ಭಾಷೆ ಮತ್ತು ಶೈಕ್ಷಣಿಕ ವಿಷಯಗಳು ಕ್ರಮವಾಗಿ 100 ಅಥವಾ 70 ಅಂಕಗಳಿಗೆ ಥಿಯರಿ ಪರೀಕ್ಷೆಗಳನ್ನು ಹೊಂದಿದ್ದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯಗಳು ತಲಾ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಹೊಂದಿರುತ್ತವೆ. ವಿದ್ಯಾರ್ಥಿಗಳು ಕೆಳಗೆ ನೀಡಲಾದ ಮಾಹಿತಿಯಿಂದ ಸಂಪೂರ್ಣ ಪರೀಕ್ಷೆಯ ಮಾದರಿಯನ್ನು ಪರಿಶೀಲಿಸಬಹುದು:

ಪರೀಕ್ಷೆಯ ವಿಧಾನಆಫ್‌ಲೈನ್ ಪರೀಕ್ಷೆ
ಪರೀಕ್ಷೆಯ ಅವಧಿ3 ಗಂಟೆಗಳು
ಪ್ರಶ್ನೆಗಳ ವಿಧಗಳುಅತಿ ಸಣ್ಣ ಉತ್ತರದ ಪ್ರಶ್ನೆಗಳು (VSA) (ಪ್ರತಿಯೊಂದಕ್ಕೆ 1 ಅಂಕ)
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು-I (SA-I) (ಪ್ರತಿಯೊಂದಕ್ಕೆ 2 ಅಂಕಗಳು)
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು-II (SA-II) (ಪ್ರತಿಯೊಂದಕ್ಕೆ 3 ಅಂಕಗಳು)
ದೀರ್ಘ ಉತ್ತರ ಮಾದರಿಯ ಪ್ರಶ್ನೆಗಳು(LA) (ಪ್ರತಿಯೊಂದಕ್ಕೆ 5 ಅಂಕಗಳು)
ಪ್ರಶ್ನೆಯ ಮಾಧ್ಯಮಶೈಕ್ಷಣಿಕ ವಿಷಯಗಳಿಗೆ ಇಂಗ್ಲಿಷ್ ಅಥವಾ ಕನ್ನಡ
ಭಾಷಾ ಪತ್ರಿಕೆ
ಇಂಗ್ಲಿಷ್ ಪತ್ರಿಕೆ
ಭಾಷಾ ಪತ್ರಿಕೆಗೆ ಗರಿಷ್ಠ ಅಂಕಗಳು100 ಅಂಕಗಳು
ಥಿಯರಿಗೆ ಗರಿಷ್ಠ ಅಂಕಗಳು70 ಅಂಕಗಳು
ಪ್ರಾಕ್ಟಿಕಲ್ಸ್‌ಗೆ ಗರಿಷ್ಠ ಅಂಕಗಳು30 ಅಂಕಗಳು

ದ್ವಿತೀಯ ಪಿಯುಸಿ ಪರೀಕ್ಷಾ ಮಾದರಿ ವಿವರಗಳು: ಗಣಿತ

ದ್ವಿತೀಯ ಪಿಯುಸಿ ಕರ್ನಾಟಕ ರಾಜ್ಯ ಮಂಡಳಿಯ ಗಣಿತ ಪರೀಕ್ಷೆಯ ಮಾದರಿಯನ್ನು ವಿವರವಾಗಿ, ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ, ಅಂಕಗಳು ಮತ್ತು ಇತರ ವಿವರಗಳೊಂದಿಗೆ ಕೆಳಗೆ ನೀಡಲಾಗಿದೆ.

ಪರೀಕ್ಷೆಯ ಅವಧಿ3 ಗಂಟೆಗಳು
ಥಿಯರಿ ಅಂಕಗಳು100 ಅಂಕಗಳು
ಪ್ರಶ್ನೆಗಳ ಒಟ್ಟು ಸಂಖ್ಯೆ50
ಅತಿ ಸಣ್ಣ ಉತ್ತರದ (VSA) ಪ್ರಶ್ನೆಗಳು (ಪ್ರತಿಯೊಂದಕ್ಕೆ 1 ಅಂಕ)10 ಕ್ಕೆ 10
ಸಣ್ಣ ಉತ್ತರದ (SA-1) ಪ್ರಶ್ನೆಗಳು (ಪ್ರತಿಯೊಂದಕ್ಕೆ 2 ಅಂಕಗಳು)14 ರಲ್ಲಿ 10
ಸಣ್ಣ ಉತ್ತರದ (SA-2) ಪ್ರಶ್ನೆಗಳು (ಪ್ರತಿಯೊಂದಕ್ಕೆ 3 ಅಂಕಗಳು)14 ರಲ್ಲಿ 10
ದೀರ್ಘ ಉತ್ತರದ (LA-1) ಪ್ರಶ್ನೆಗಳು (ಪ್ರತಿಯೊಂದಕ್ಕೆ 5 ಅಂಕಗಳು)10 ರಲ್ಲಿ 6
ದೀರ್ಘ ಉತ್ತರದ (LA-2) ಪ್ರಶ್ನೆಗಳು (10 ಅಂಕ= 6+4)2 ರಲ್ಲಿ 1

ದ್ವಿತೀಯ ಪಿಯುಸಿ ಪರೀಕ್ಷಾ ಮಾದರಿ ವಿವರಗಳು: ಭೌತಶಾಸ್ತ್ರ

ದ್ವಿತೀಯ ಪಿಯುಸಿ ಕರ್ನಾಟಕ ರಾಜ್ಯ ಮಂಡಳಿಯ ಭೌತಶಾಸ್ತ್ರದ ಪರೀಕ್ಷೆಯ ಮಾದರಿಯನ್ನು ವಿವರವಾಗಿ, ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ, ಅಂಕಗಳು ಮತ್ತು ಇತರ ವಿವರಗಳೊಂದಿಗೆ ಕೆಳಗೆ ನೀಡಲಾಗಿದೆ.

ಪರೀಕ್ಷೆಯ ಅವಧಿ3 ಗಂಟೆಗಳು
ಪ್ರಾಯೋಗಿಕ ಅಂಕಗಳು30 ಅಂಕಗಳು
ಥಿಯರಿ ಅಂಕಗಳು70 ಅಂಕಗಳು
ಪ್ರಶ್ನೆಗಳ ಒಟ್ಟು ಸಂಖ್ಯೆ37 ರಲ್ಲಿ 27
ಅತಿ ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (VSA-1) (ಪ್ರತಿಯೊಂದಕ್ಕೆ 1 ಅಂಕ)10 (ಒಟ್ಟು 10ಕ್ಕೆ ಉತ್ತರಿಸಬೇಕು)
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-1) (ಪ್ರತಿಯೊಂದಕ್ಕೆ 2 ಅಂಕಗಳು)8 (ಯಾವುದೇ 5ಕ್ಕೆ ಉತ್ತರಿಸಬೇಕು)
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-2) (ಪ್ರತಿಯೊಂದಕ್ಕೆ 3 ಅಂಕಗಳು)8 ರಲ್ಲಿ 5
ದೀರ್ಘ ಉತ್ತರ (LA-1) (ಪ್ರತಿಯೊಂದಕ್ಕೆ 5 ಅಂಕಗಳು)3 ರಲ್ಲಿ 2
ದೀರ್ಘ ಉತ್ತರದ ಮಾದರಿ (LA-2) (ಪ್ರತಿಯೊಂದಕ್ಕೆ 5 ಅಂಕಗಳು)3 ರಲ್ಲಿ 2
ಸಂಖ್ಯಾತ್ಮಕ ಸಮಸ್ಯೆಗಳು (NP) (ಪ್ರತಿಯೊಂದಕ್ಕೆ 5 ಅಂಕಗಳು)5 ರಲ್ಲಿ 3

ವಿವಿಧ ಆಯಾಮಗಳಲ್ಲಿ ಪ್ರಶ್ನೆ ಪತ್ರಿಕೆಯ ಅಂಕಗಳ ವಿತರಣೆಯ ಪ್ರಾಮುಖ್ಯತೆಯು ಈ ಕೆಳಗಿನಂತಿರುತ್ತದೆ:

  • ವಿಷಯನಿಷ್ಠ ಪ್ರಾಮುಖ್ಯತೆ:
ಉದ್ದೇಶಪ್ರಾಮುಖ್ಯತೆ(%)ಅಂಕಗಳು
ಜ್ಞಾನ40%43

ಗ್ರಹಿಕೆ
30%31
ಅನ್ವಯ20%21
ಕೌಶಲ10%10
  • ವಿಷಯ ಘಟಕಗಳಿಗೆ ನೀಡಲಾದ ಪ್ರಾಮುಖ್ಯತೆ:
ಘಟಕ
ಸಂಖ್ಯೆ
ಅಧ್ಯಾಯ
ಸಂಖ್ಯೆ
ಟಾಪಿಕ್ ಗಂಟೆಗಳ ಸಂಖ್ಯೆ ಅಂಕಗಳು
1 1 ವಿದ್ಯುದಾವೇಶಗಳು ಮತ್ತು ಕ್ಷೇತ್ರಗಳು 9 8
2 2 ಸ್ಥಿರ ವಿದ್ಯುತ್ ವಿಭವ ಮತ್ತು ಧಾರಕತೆ 9 8
3 3 ವಿದ್ಯುತ್ ಪ್ರವಾಹ 15 13
4 4 ಚಲಿಸುವ ಆವೇಶಗಳು ಮತ್ತು ಕಾಂತತೆ 10 9
5 5 ಕಾಂತತ್ವ ಮತ್ತು ದ್ರವ್ಯ 8 7
5 6 ವಿದ್ಯುತ್ ಕಾಂತೀಯ ಪ್ರೇರಣೆ 7 6
6 7 ಪರ್ಯಾಯ ವಿದ್ಯುತ್ಪ್ರವಾಹ 7 8
6 8 ವಿದ್ಯುತ್ಕಾಂತೀಯ ತರಂಗಗಳು 2 2
7 9 ದ್ಯುತಿ ಕಿರಣ ವಿಜ್ಞಾನ ಮತ್ತು ದ್ಯುತಿ ಉಪಕರಣಗಳು 9 8
8 10 ತರಂಗ ದ್ಯುತಿ ವಿಜ್ಞಾನ 9 8
9 11 ವಿಕಿರಣ ಮತ್ತು ದ್ರವ್ಯದ ದ್ವೈತ ಸ್ವಭಾವ 6 5
9 12 ಪರಮಾಣುಗಳು 5 5
10 13 ನ್ಯೂಕ್ಲಿಯಸ್‍ಗಳು 7 6
10 14 ಅರೆವಾಹಕ ಎಲೆಕ್ಟ್ರಾನಿಕ್ಸ್ 12 10
10 15 ಸಂವಹನ ವ್ಯವಸ್ಥೆಗಳು 4 3
ಒಟ್ಟು 120 105

ದ್ವಿತೀಯ ಪಿಯುಸಿ ಪರೀಕ್ಷಾ ಮಾದರಿ ವಿವರಗಳು: ರಸಾಯನಶಾಸ್ತ್ರ

ದ್ವಿತೀಯ ಪಿಯುಸಿ ಕರ್ನಾಟಕ ರಾಜ್ಯ ಮಂಡಳಿಯ ರಸಾಯನಶಾಸ್ತ್ರದ ಪರೀಕ್ಷೆಯ ಮಾದರಿಯನ್ನು ವಿವರವಾಗಿ, ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ, ಅಂಕಗಳು ಮತ್ತು ಇತರ ವಿವರಗಳೊಂದಿಗೆ ಕೆಳಗೆ ನೀಡಲಾಗಿದೆ.

ಪರೀಕ್ಷೆಯ ಅವಧಿ3 ಗಂಟೆಗಳು
ಆಂತರಿಕ ಅಂಕಗಳು30 ಅಂಕಗಳು
ಥಿಯರಿ ಅಂಕಗಳು70 ಅಂಕಗಳು
ಪ್ರಶ್ನೆಗಳ ಒಟ್ಟು ಸಂಖ್ಯೆಒಟ್ಟು 36 ರಲ್ಲಿ 27
ಅತಿ ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (ತಲಾ 1 ಅಂಕ)10 ಕ್ಕೆ 10
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-1) (ತಲಾ 2 ಅಂಕಗಳು)8 ರಲ್ಲಿ 5
ಸಣ್ಣ ಉತ್ತರ ಮಾದರಿಯ ಪ್ರಶ್ನೆಗಳು (SA-2) (ತಲಾ 3 ಅಂಕಗಳು)ಒಟ್ಟು 8 ರಲ್ಲಿ 5
ದೀರ್ಘ ಉತ್ತರ (LA-1) (ತಲಾ 5 ಅಂಕಗಳು)ಒಟ್ಟು 5 ರಲ್ಲಿ 3
ದೀರ್ಘ ಉತ್ತರ ಪ್ರಕಾರ (LA-2) (ತಲಾ 5 ಅಂಕಗಳು)ಒಟ್ಟು 5 ರಲ್ಲಿ 4

ವಿವಿಧ ಆಯಾಮಗಳಲ್ಲಿ ಪ್ರಶ್ನೆ ಪತ್ರಿಕೆಯ ಅಂಕಗಳ ವಿತರಣೆಯ ಪ್ರಾಮುಖ್ಯತೆಯು ಈ ಕೆಳಗಿನಂತಿರುತ್ತದೆ:

  • ವಿಷಯನಿಷ್ಠ ಪ್ರಾಮುಖ್ಯತೆ:
ಉದ್ದೇಶಪ್ರಾಮುಖ್ಯತೆ(%)ಅಂಕಗಳು
ಜ್ಞಾನ40%42

ಗ್ರಹಿಕೆ
30%33
ಅನ್ವಯ15%15
ಕೌಶಲ15%15

ದ್ವಿತೀಯ ಪಿಯುಸಿ ಪರೀಕ್ಷಾ ಮಾದರಿ ವಿವರಗಳು: ಜೀವಶಾಸ್ತ್ರ

ದ್ವಿತೀಯ ಪಿಯುಸಿ ಕರ್ನಾಟಕ ರಾಜ್ಯ ಮಂಡಳಿಯ ಜೀವಶಾಸ್ತ್ರ ಪರೀಕ್ಷೆಯ ಮಾದರಿಯನ್ನು ವಿವರವಾಗಿ, ಒಟ್ಟು ಪ್ರಶ್ನೆಗಳ ಸಂಖ್ಯೆ, ಅವಧಿ, ಅಂಕಗಳು ಮತ್ತು ಇತರ ವಿವರಗಳೊಂದಿಗೆ ಕೆಳಗೆ ನೀಡಲಾಗಿದೆ.

ಪರೀಕ್ಷೆಯ ಅವಧಿ3 ಗಂಟೆಗಳು
ಆಂತರಿಕ ಅಂಕಗಳು30 ಗಂಟೆಗಳು
ಥಿಯರಿ ಅಂಕಗಳು70 ಗಂಟೆಗಳು
ಪ್ರಶ್ನೆಗಳ ಒಟ್ಟು ಸಂಖ್ಯೆಒಟ್ಟು 35 ರಲ್ಲಿ 27
ಅತಿ ಚಿಕ್ಕ ಉತ್ತರದ (VSA) ಪ್ರಶ್ನೆಗಳು (ಪ್ರತಿಯೊಂದಕ್ಕೆ 1 ಅಂಕ)ಒಟ್ಟು 10 ರಲ್ಲಿ 10
ಚಿಕ್ಕ ಉತ್ತರದ (SA-1) ಪ್ರಶ್ನೆಗಳು (ತಲಾ 2 ಅಂಕಗಳು)8 ರಲ್ಲಿ 5
ಸಣ್ಣ ಉತ್ತರ (SA-2) ಪ್ರಶ್ನೆಗಳು (ತಲಾ 3 ಅಂಕಗಳು)8 ರಲ್ಲಿ 5
ದೀರ್ಘ ಉತ್ತರ (LA-1) ಪ್ರಶ್ನೆಗಳು (ತಲಾ 5 ಅಂಕಗಳು)5 ರಲ್ಲಿ 4
ದೀರ್ಘ ಉತ್ತರ (LA-2) ಪ್ರಶ್ನೆಗಳು (5 ಅಂಕಗಳು)4 ರಲ್ಲಿ 3
  • ವಿಷಯನಿಷ್ಠ ಪ್ರಾಮುಖ್ಯತೆ:
ಉದ್ದೇಶಪ್ರಾಮುಖ್ಯತೆ(%)ಅಂಕಗಳು
ಜ್ಞಾನ40%42

ಗ್ರಹಿಕೆ
30%33
ಅನ್ವಯ15%15
ಕೌಶಲ15%15

ಹಿಂದಿನ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು

ಕ್ರಮ ಸಂಖ್ಯೆವಿಷಯಲಿಂಕ್
1ಭೌತಶಾಸ್ತ್ರಭೌತಶಾಸ್ತ್ರ-ಮಾದರಿ ಪ್ರಶ್ನೆ ಪತ್ರಿಕೆ ಲಿಂಕ್‌
2ಗಣಿತಗಣಿತ-ಮಾದರಿ ಪ್ರಶ್ನೆ ಪತ್ರಿಕೆ ಲಿಂಕ್‌
3ರಸಾಯನಶಾಸ್ತ್ರರಸಾಯನಶಾಸ್ತ್ರ-ಮಾದರಿ ಪ್ರಶ್ನೆ ಪತ್ರಿಕೆ ಲಿಂಕ್‌
4ಜೀವಶಾಸ್ತ್ರಜೀವಶಾಸ್ತ್ರ-ಮಾದರಿ ಪ್ರಶ್ನೆ ಪತ್ರಿಕೆ ಲಿಂಕ್‌

ದ್ವಿತೀಯ ಪಿಯು ಪರೀಕ್ಷಾ ಕ್ಯಾಲೆಂಡರ್

ಕರ್ನಾಟಕ ಪದವಿ ಪೂರ್ವ ಶಿಕ್ಷಣ (PUE) ಮಂಡಳಿ 2022-23ನೇ ಸಾಲಿನ 12ನೇ ತರಗತಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ದಿನಾಂಕ ಶೀಟ್ ಹೆಸರುಪದವಿಪೂರ್ವ ಮಂಡಳಿಯ 2022-23ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವೇಳಾಪಟ್ಟಿ
ವೇಳಾಪಟ್ಟಿ ಬಿಡುಗಡೆ ದಿನಾಂಕಜನವರಿ 2023 (ತಾತ್ಕಾಲಿಕ)
ಪ್ರಾಯೋಗಿಕ ಪರೀಕ್ಷೆಯ ದಿನಾಂಕಫೆಬ್ರವರಿ 2023 (ತಾತ್ಕಾಲಿಕ)
ಪೂರ್ವಸಿದ್ಧತಾ ಪರೀಕ್ಷೆಯ ದಿನಾಂಕಮಾರ್ಚ್ 2023ರ ಕೊನೆಯ ವಾರ (ತಾತ್ಕಾಲಿಕ)
ಪ್ರವೇಶ ಪತ್ರ ಬಿಡುಗಡೆ ದಿನಾಂಕಮಾರ್ಚ್ 2023ರ ಎರಡನೇ ವಾರ (ತಾತ್ಕಾಲಿಕ)
ಥಿಯರಿ ಪರೀಕ್ಷೆಯ ದಿನಾಂಕಗಳುಏಪ್ರಿಲ್ 2023ರ ಮೊದಲ ವಾರ (ತಾತ್ಕಾಲಿಕ)

ದ್ವಿತೀಯ ಪಿಯುಸಿ ಪರೀಕ್ಷೆ ವಿಶ್ಲೇಷಣೆಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ದ್ವಿತೀಯ ಪಿಯುಸಿ 2022ನೇ ಸಾಲಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ?

ಉತ್ತರ: 2022ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 2,98,102 ಇವರಲ್ಲಿ ತೇರ್ಗಡೆಯಾದವರು 1,53,164. ಅಂದರೆ ಶೇಕಡಾವಾರು 51.38 ಉತ್ತೀರ್ಣರಾಗಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 3,85,461. ಇದರಲ್ಲಿ ತೇರ್ಗಡೆಯಾದವರ ಸಂಖ್ಯೆ 2,69,802. ಇಂಗ್ಲಿಷ್ ಮಾಧ್ಯಮದಲ್ಲಿ ಶೇಕಡಾವಾರು 69.99 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರ. 2: ಈ ಬಾರಿ ಉನ್ನತ ಶ್ರೇಣಿಯಲ್ಲಿ (Distinction) ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ?

ಉತ್ತರ: ಉನ್ನತ ಶ್ರೇಣಿ (Distinction) – ಶೇಕಡ 85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರ ಸಂಖ್ಯೆ  91,106. 

ಪ್ರ. 3: ಜಿಲ್ಲಾವಾರು ಶೇಕಡಾ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ ಯಾವುದು?

ಉತ್ತರ: ಏಪ್ರಿಲ್/ಮೇ 2022ರಲ್ಲಿ ಶೇಕಡ 88.02 ಉತ್ತೀರ್ಣತೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 

ಪ್ರ. 4: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಉತ್ತರ: ಭೌತಶಾಸ್ತ್ರದಲ್ಲಿ 36, ರಸಾಯನಶಾಸ್ತ್ರದಲ್ಲಿ 2,917, ಗಣಿತಶಾಸ್ತ್ರದಲ್ಲಿ 14,210 ಹಾಗೂ ಜೀವಶಾಸ್ತ್ರದಲ್ಲಿ 2,106 ವಿದ್ಯಾರ್ಥಿಗಳು ನೂರಕ್ಕೆ ನೂರಷ್ಟು ಅಂಕ ಗಳಿಸಿದ್ದಾರೆ. 

ಪ್ರ. 5: ಮರು ಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಎಲ್ಲಿ ಪ್ರಕಟಿಸಲಾಗುತ್ತದೆ?

ಉತ್ತರ: ಮರು ಮೌಲ್ಯಮಾಪದ ಮತ್ತು ಮರು ಎಣೆಯ ಫಲಿತಾಂಶವನ್ನು ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. 

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2022-23: ವಿಶ್ಲೇಷಣೆ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ