
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳು 2023: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯದ್ದಾಗಿದೆ (ಪಿಯುಬಿ). ರಾಜ್ಯಾದ್ಯಂತ ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ, ಜಿಲ್ಲಾವಾರು, ತಾಲೂಕುವಾರು ಪರೀಕ್ಷಾ ಕೇಂದ್ರಗಳ ಹಂಚಿಕೆಯನ್ನು ನಿರ್ವಹಿಸುವ ಹೊಣೆಯೂ ಇದರದ್ದೇ ಆಗಿದೆ. ಜತೆಗೆ, ಪರೀಕ್ಷಾ ಕೇಂದ್ರಗಳ ಕುರಿತಂತೆ ನಿಯಮಗಳನ್ನೂ ಕಾಲಕಾಲಕ್ಕೆ ತಕ್ಕಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ರೂಪಿಸುತ್ತದೆ.
ಸಾಮಾನ್ಯವಾಗಿ ವಾರ್ಷಿಕ ಪರೀಕ್ಷೆಗಿಂತ ಒಂದು ತಿಂಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಇಲಾಖೆ ಪ್ರಕಟಿಸುತ್ತದೆ. 2022- 23 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು 2023ರ ಏಪ್ರಿಲ್‌ನಿಂದ ಮೇ ತನಕ ನಡೆಯುವ ಸಾಧ್ಯತೆಯಿದೆ. ಹಾಗಾಗಿ ಈ ಬಾರಿ 2023ರ ಮಾರ್ಚ್ ವೇಳೆಗೆ ಪರೀಕ್ಷಾ ಕೇಂದ್ರಗಳ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ. ಈ ಲೇಖನದಲ್ಲಿ ನೀವು 2023ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೀರಿ.
1. ಎಲ್ಲಾ ದ್ವಿತೀಯ ಪಿಯುಸಿ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಕನಿಷ್ಠ 1 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕೆಂದು ಸಲಹೆ ನೀಡಲಾಗಿದೆ.
2. ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವೇಳೆ, ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ ಹಾಲ್ ಟಿಕೆಟ್ ಅನ್ನು ಹೊಂದಿರಬೇಕು. ಹಾಲ್ ಟಿಕೆಟ್ ರಹಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ.
3. ಪರೀಕ್ಷಾ ಕೇಂದ್ರಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆಯಾ ಶಿಕ್ಷಣಸಂಸ್ಥೆಗಳು ಸೂಚಿಸುವ ವಸ್ತ್ರಸಂಹಿತೆಯನ್ನು ಪಾಲಿಸುವುದು ತುಂಬಾ ಮುಖ್ಯ. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಅವರು ಪರಿಶೀಲಿಸುತ್ತಾರೆ.
4. ಮೊಬೈಲ್ ಫೋನ್‌ಗಳು, ಬ್ಲೂಟೂತ್ ಗ್ಯಾಜೆಟ್‌ಗಳಂತಹ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೆ ಪರೀಕ್ಷಾ ಕೇಂದ್ರದೊಳಕ್ಕೆ ಅವಕಾಶವಿಲ್ಲ. ಯಾವುದೇ ಅಭ್ಯರ್ಥಿ ಬಳಿ ಈ ಐಟಂಗಳು ಕಂಡುಬಂದರೆ ದಂಡನೆಗೆ ಗುರಿಪಡಿಸಲಾಗುತ್ತದೆ.
5. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತುಂಬಾ ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ, ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗುತ್ತದೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವಾಗ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವಿರುವಂತೆ ನೋಡಿಕೊಳ್ಳುತ್ತದೆ. ಸಾಕಷ್ಟು ಗಾಳಿ ಬೆಳಕಿನ ಸೌಲಭ್ಯವುಳ್ಳ ಕೊಠಡಿಗಳು, ಎಲ್ಲಾ ಅಭ್ಯರ್ಥಿಗಳಿಗೆ ಬೇಕಾದಷ್ಟು ಪೀಠೋಪಕರಣಗಳ ಲಭ್ಯತೆ, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯವಿರುವುದನ್ನು ಖಾತ್ರಿಪಡಿಸಿಕೊಂಡಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬಗ್ಗೆ ಭಯ ಬೇಡ. ಮೂಲಭೂತ ಸೌಲಭ್ಯಗಳಿರುತ್ತವೆಯೇ, ಇಲ್ಲವೇ ಎಂಬ ಚಿಂತೆಯೂ ಅನಗತ್ಯ. ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ತೆರಳಬಹುದು.
ಇದೇ ವೇಳೆ, ಪರೀಕ್ಷಾ ಕೇಂದ್ರಗಳು ಭದ್ರತಾ ದೃಷ್ಟಿಯಿಂದಲೂ ಸೂಕ್ತವಾಗಿರುವುದನ್ನು ಇಲಾಖೆ ಪರಿಗಣಿಸುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಒಂದು ಭದ್ರತೆಯುಳ್ಳ ಕೋಣೆ ಹಾಗೂ ಕಟ್ಟಡದ ಸುತ್ತಲೂ ಕಾಂಪೌಂಡ್ ಇರುವುದನ್ನು ಖಚಿತಪಡಿಸಲಾಗಿರುತ್ತದೆ.
ಪ್ರತಿಯೊಂದು ತಾತ್ವಿಕ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 500- ಗರಿಷ್ಠ 1000 ವಿದ್ಯಾರ್ಥಿಗಳಿರಬೇಕು. ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ 100 ವಿದ್ಯಾರ್ಥಿಗಳಿರುವಂತೆ ನಿಗದಿಪಡಿಸಲಾಗುತ್ತದೆ. ಗ್ರಾಮೀಣ ಭಾಗದ ಭೌಗೋಳಿಕ ಅಂಶಗಳನ್ನೂ ಪರಿಗಣಿಸಿ, ಆಯಾ ಕಾಲೇಜುಗಳಿಂದ ಪರೀಕ್ಷಾ ಕೇಂದ್ರ ತೀರಾ ದೂರವಿಲ್ಲದಂತೆಯೂ ಇಲಾಖೆ ನೋಡಿಕೊಳ್ಳುತ್ತದೆ. ಒಂದು ನಿರ್ದಿಷ್ಟ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟು ಒಂದೇ ಪರೀಕ್ಷಾ ಕೇಂದ್ರಕ್ಕೆ ಜೋಡಿಸಲು ಇಲಾಖೆ ಕ್ರಮವಹಿಸುತ್ತದೆ.
ಪರೀಕ್ಷಾ ಕೇಂದ್ರವಾಗಿರುವ ಕಾಲೇಜಿನಲ್ಲಿ ಆಯಾ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ ಎಂಬುದು ಇಲಾಖೆ ಮಾಡಿರುವ ನಿಯಮ. ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಹೊಸದಾಗಿ ಪರೀಕ್ಷಾ ಕೇಂದ್ರ ಮಂಜೂರು ಮಾಡಬೇಕೆಂದರೆ, ಆ ಕಾಲೇಜು ಕನಿಷ್ಠ ಐದು ಶೈಕ್ಷಣಿಕ ವರ್ಷಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಹೇಳಿದೆ.
2023ರ ದ್ವಿತೀಯ ಪಿಯುಸಿ ಪರೀಕ್ಷೆಗೆ ನೀವು ಇಲ್ಲಿ ತನಕ ಏಕಾಗ್ರತೆಯಿಂದ ಓದಿದ್ದೀರಿ, ಅಭ್ಯಾಸ ಮಾಡಿದ್ದೀರಿ, ಸಂಪೂರ್ಣ ಸಜ್ಜಾಗಿದ್ದೀರಿ. ಇದೀಗ ಪರೀಕ್ಷೆ ಬರೆಯುವ ಅಂತಿಮ ಘಟ್ಟದಲ್ಲಿದ್ದೀರಿ. ಪರೀಕ್ಷಾ ಕೇಂದ್ರದಲ್ಲೂ ನೀವು ಅಷ್ಟೇ ಜಾಣ್ಮೆಯಿಂದ ವರ್ತಿಸಿ. ಆಗ ಗೆಲುವು ನಿಮ್ಮದೇ. ಅದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆ ಹೇಗಿರಬೇಕೆಂಬ ಕುರಿತು ಕೆಲವೊಂದು ಟಿಪ್ಸ್ ಇಲ್ಲಿವೆ:
2023ರ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳನ್ನು ಈ ಕೆಳಗೆ ನೀಡಲಾಗಿದೆ:
ಪ್ರ. 1: 2023 ರ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ಪಟ್ಟಿ ಯಾವಾಗ ಪ್ರಕಟಗೊಳ್ಳಲಿದೆ?
ಉತ್ತರ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗಿಂತ ಒಂದು ತಿಂಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ. ಹಾಗಾಗಿ 2023ರ ಮಾರ್ಚ್ ವೇಳೆಗೆ ಪರೀಕ್ಷಾ ಕೇಂದ್ರಗಳ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಪ್ರ. 2: ದ್ವಿತೀಯ ಪಿಯುಸಿ ಅಭ್ಯರ್ಥಿಯು ತನ್ನ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಳ್ಳಬಹುದೇ?
ಉತ್ತರ: ಕೋವಿಡ್ ಹಾಗೂ ಲಾಕ್‌ಡೌನ್ ಕಾರಣಕ್ಕಾಗಿ ಪರೀಕ್ಷಾ ಕೇಂದ್ರವನ್ನು ಬದಲಾಯಸಿಕೊಳ್ಳುವ ಅವಕಾಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಈ ಹಿಂದಿನ ವರ್ಷಗಳಲ್ಲಿ ಕಲ್ಪಿಸಿತ್ತು. ಆದರೆ ಈಗ ಅಂತಹ ಸಾರ್ವತ್ರಿಕ ಅವಕಾಶವಿಲ್ಲ. ತೀರಾ ಅನಿವಾರ್ಯ ಸಂದರ್ಭಗಳಲ್ಲಷ್ಟೇ ವಿಶೇಷ ಮನವಿ ಸಲ್ಲಿಸಬಹುದಾಗಿದೆ.
ಪ್ರ. 3: ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿರುತ್ತವೆಯೇ?
ಉತ್ತರ: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವಾಗ ಅಗತ್ಯ ಮೂಲಸೌಲಭ್ಯಗಳು ಲಭ್ಯವಿದೆಯೇ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪರಿಶೀಲಿಸುತ್ತದೆ. ಶೌಚಾಲಯ, ಕುಡಿಯುವ ನೀರು, ಪರೀಕ್ಷೆ ಬರೆಯಲು ಬೆಂಚ್-ಡೆಸ್ಕ್ ಹಾಗೂ ಉತ್ತಮ ಗಾಳಿ ಬೆಳಕಿನ ಕೊಠಡಿಗಳು. ಇವಿಷ್ಟು ಮೂಲಸೌಲಭ್ಯಗಳು ಇಲಾಖೆಯ ಪ್ರಾಥಮಿಕ ಮಾನದಂಡಗಳಾಗಿವೆ. ಈ ಸೌಲಭ್ಯವಿರುವ ಕಾಲೇಜುಗಳನ್ನೇ ಗುರುತಿಸಿ ಪರೀಕ್ಷಾ ಕೇಂದ್ರಗಳನ್ನಾಗಿ ಪ್ರಕಟಿಸಲಾಗುತ್ತದೆ.
ಪ್ರ. 4: ನಮ್ಮ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾಗಿದೆ. ಆದರೆ ನಾವ್ಯಾಕೆ ಅಲ್ಲಿ ಪರೀಕ್ಷೆ ಬರೆಯುವಂತಿಲ್ಲ?
ಉತ್ತರ: ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲ್ಪಟ್ಟ ಯಾವುದೇ ಕಾಲೇಜುಗಳಲ್ಲಿ ಆಯಾ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ ಎಂಬುದು ಪದವಿಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ನಿಯಮ. ಇದು ಭದ್ರತೆಯ ದೃಷ್ಟಿಯಿಂದ ರೂಪಿಸಿರುವ ನಿಯಮವಾಗಿದೆ. ಹಾಗಾಗಿ ನಿಮ್ಮ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದರೂ, ನೀವು ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
ಪ್ರ. 5: ದ್ವಿತೀಯ ಪಿಯುಸಿ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರದಲ್ಲಿ ನಾನು ಕುಳಿತುಕೊಳ್ಳುವ ಜಾಗ ಪ್ರತಿದಿನ ಒಂದೇ ಇರುತ್ತಾ?
ಉತ್ತರ: ಇಲ್ಲ, ದ್ವಿತೀಯ ಪಿಯುಸಿ ಪರೀಕ್ಷೆಯ ನಿಯಮದಂತೆ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಪ್ರತಿದಿನ ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಒಂದೇ ಇರುವಂತಿಲ್ಲ, ಪ್ರತಿನಿತ್ಯ ಬದಲಾಗಬೇಕು. ಪ್ರತಿದಿನವೂ ಭಿನ್ನ ಕೊಠಡಿ ಅಥವಾ ಭಿನ್ನ ಸ್ಥಳದಲ್ಲಿ ನೀವು ಪರೀಕ್ಷೆ ಬರೆಯಬೇಕಾಗುತ್ತದೆ.
ಈಗ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳು 2023 ರ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಕರ್ನಾಟಕ ಸಿಇಟಿ ಪರೀಕ್ಷೆಗಳು 2023 ಅನ್ನು ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ಉಚಿತ ಕೆಸಿಇಟಿ ಅಣಕು ಟೆಸ್ಟ್‌ಗಳು ಅನ್ನು ತೆಗೆದುಕೊಳ್ಳಬಹುದು. ಅಣಕು ಟೆಸ್ಟ್ ತೆಗೆದುಕೊಳ್ಳುವುದರಿಂದ ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.
ಜತೆಗೆ, JEE, NEET ನಂತಹ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಕೂಡಾ Embibe ನಲ್ಲಿ ಉಚಿತ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಅಣಕು ಟೆಸ್ಟ್‌ಗಳು ತೆಗೆದುಕೊಳ್ಳಬಹುದು.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳು 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳು 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.