• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 06-09-2022

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ

img-icon

ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪದವಿ ಪೂರ್ವ ಶಿಕ್ಷಣ ಇಲಾಖೆಯು ವಾರ್ಷಿಕ ಮತ್ತು ಮಧ್ಯ-ವಾರ್ಷಿಕ ಪರೀಕ್ಷೆಗಳೆರಡಕ್ಕೂ ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪರೀಕ್ಷೆಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್‌ನಿಂದ ಮೇ ತಿಂಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷಾ ವೇಳಾಪಟ್ಟಿಯನ್ನು ಸಾಮಾನ್ಯವಾಗಿ ಪರೀಕ್ಷೆ ಪ್ರಾರಂಭವಾಗುವ ಕೆಲವು ವಾರಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ. 

ಎಲ್ಲಾ ಖಾಸಗಿ ಮತ್ತು ರೆಗ್ಯುಲರ್ ವಿದ್ಯಾರ್ಥಿಗಳು ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2023 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಸುಲಭವಾಗಿ ನೋಡಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಪರೀಕ್ಷೆಗೆ ಹಾಜರಾಗಲಿರುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ರೀತಿಯಲ್ಲಿ ತಮ್ಮ ಅಧ್ಯಯನವನ್ನು ಯೋಜಿಸಿಕೊಳ್ಳಲು ಸೂಚಿಸಲಾಗಿದೆ.

ಈ ಲೇಖನದಲ್ಲಿ, ನಾವು ಕರ್ನಾಟಕ ಪದವಿಪೂರ್ವ ಪರೀಕ್ಷೆ ಡೇಟ್ ಶೀಟ್ 2023 ರ ಜೊತೆಗೆ ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ಮತ್ತು ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಗಳನ್ನು ಒಳಗೊಂಡಿರುವ ಅಧಿಕೃತ ಪಿಡಿಎಫ್ ಅನ್ನು ಒದಗಿಸಲಿದ್ದೇವೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಪುಟದಿಂದ ದ್ವಿತೀಯ ಪಿಯುಸಿ 2ನೇ ವರ್ಷದ ಪರೀಕ್ಷಾ ವೇಳಾಪಟ್ಟಿ 2023 ಅನ್ನು ಪರಿಶೀಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ಕರ್ನಾಟಕ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದುವರೆಯಿರಿ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ(Time Table) 2023 ಮುಖ್ಯಾಂಶಗಳು

ಮಂಡಳಿಯ ಹೆಸರುಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ
ಪರೀಕ್ಷೆಯ ವಿಧದ್ವಿತೀಯ ಪಿಯುಸಿ
ವೇಳಾಪಟ್ಟಿ ಬಿಡುಗಡೆ ದಿನಾಂಕಮಾರ್ಚ್‌ 2023ರ ಮೊದಲ ವಾರ (ನಿರೀಕ್ಷಿತ)
ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕಏಪ್ರಿಲ್‌ 3ನೇ ವಾರದಿಂದ 2023ರ ಮೇ 1ನೇ ವಾರ (ನಿರೀಕ್ಷಿತ)
ವಾರ್ಷಿಕ ಪರೀಕ್ಷೆ2023-24
ವೇಳಾಪಟ್ಟಿ ಸ್ಥಿತಿನಿರೀಕ್ಷಿಸಲಾಗಿದೆ
ಅಧಿಕೃತ ವೆಬ್‌ಸೈಟ್ವೆಬ್‌ಸೈಟ್ ಲಿಂಕ್‌

ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ ಸುಮಾರು 6,80,563ಕ್ಕೂ ಅಧಿಕ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಜರಾಗುತ್ತಾರೆ. ಕಲೆ, ವಾಣಿಜ್ಯ, ವಿಜ್ಞಾನ ಸಂಯೋಜನೆ ಸೇರಿ 2022ರಲ್ಲಿ ಶೇ.61.88ರಷ್ಟು ಫಲಿತಾಂಶ ಬಂದಿದೆ. ಈ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಇದನ್ನೂ, ಪರಿಶೀಲಿಸಿ:

ಕರ್ನಾಟಕ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಗಳುಕರ್ನಾಟಕ ಪ್ರಥಮ ಪಿಯುಸಿ ಪ್ರಶ್ನೆ ಪತ್ರಿಕೆಗಳು

ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ಪ್ರಮುಖ ದಿನಾಂಕಗಳು(Important Dates)

ಮಧ್ಯವಾರ್ಷಿಕ ಪರೀಕ್ಷೆ:

ಪರೀಕ್ಷೆ ದಿನಾಂಕಗಳು (ನಿರೀಕ್ಷಿತ)ವಿಷಯಗಳು (ಬೆಳಗ್ಗೆ)ವಿಷಯಗಳು (ಮಧ್ಯಾಹ್ನ)
ಡಿಸೆಂಬರ್ 2023 ರ ಮೊದಲ ವಾರಇತಿಹಾಸ, ಭೌತಶಾಸ್ತ್ರ
ಡಿಸೆಂಬರ್ 2023 ರ ಎರಡನೇ ವಾರಕನ್ನಡಫ್ರೆಂಚ್, ಅರೇಬಿಕ್, ಮರಾಠಿ, ತಮಿಳು, ತೆಲುಗು, ಮಲಯಾಳಂ
ನವೆಂಬರ್ 2023 ರ ಎರಡನೇ ವಾರಅರ್ಥಶಾಸ್ತ್ರ, ರಸಾಯನಶಾಸ್ತ್ರ
ಡಿಸೆಂಬರ್ 2023 ರ ಎರಡನೇ ವಾರಸಂಖ್ಯಾಶಾಸ್ತ್ರ
ಡಿಸೆಂಬರ್ 2023 ಮೂರನೇ ವಾರಸಮಾಜಶಾಸ್ತ್ರ, ಗಣಿತಶಾಸ್ತ್ರಮೂಲ ಗಣಿತ
ಡಿಸೆಂಬರ್ 2023 ಮೂರನೇ ವಾರಹಿಂದಿಸಂಸ್ಕೃತ, ಉರ್ದು
ಡಿಸೆಂಬರ್ 2023 ಮೂರನೇ ವಾರಇಂಗ್ಲಿಷ್
ಡಿಸೆಂಬರ್ 2023 ಮೂರನೇ ವಾರಭೂಗರ್ಭಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಜೀವಶಾಸ್ತ್ರ, ರಾಜಕೀಯ ವಿಜ್ಞಾನಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಡಿಸೆಂಬರ್ 2023 ರ ಕೊನೆಯ ವಾರಲೆಕ್ಕಶಾಸ್ತ್ರ, ಗೃಹ ವಿಜ್ಞಾನ, ಶಿಕ್ಷಣ
ಡಿಸೆಂಬರ್ 2023 ರ ಕೊನೆಯ ವಾರವ್ಯವಹಾರ ಅಧ್ಯಯನಗಳು, ತರ್ಕಶಾಸ್ತ್ರಐಚ್ಛಿಕ ಕನ್ನಡ
ಡಿಸೆಂಬರ್ 2023 ರ ಕೊನೆಯ ವಾರಭೂಗೋಳ, ಮನಃಶಾಸ್ತ್ರಆಟೋಮೊಬೈಲ್, ರಿಟೇಲ್, ಮಾಹಿತಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಯೋಗಕ್ಷೇಮ

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ (Final Exam) ವೇಳಾಪಟ್ಟಿ 2023

ದಿನಾಂಕ (ನಿರೀಕ್ಷಿತ)ವಿಷಯಗಳು
ಏಪ್ರಿಲ್ 2023 ರ ಕೊನೆಯ ವಾರತರ್ಕಶಾಸ್ತ್ರ, ವ್ಯವಹಾರ ಅಧ್ಯಯನಗಳು
ಏಪ್ರಿಲ್ 2023 ರ ಕೊನೆಯ ವಾರಗಣಿತ, ಶಿಕ್ಷಣ ಶಾಸ್ತ್ರ, ಹಿಂದಿ
ಏಪ್ರಿಲ್ 2023 ರ ಕೊನೆಯ ವಾರಅರ್ಥಶಾಸ್ತ್ರ
ಏಪ್ರಿಲ್ 2023 ರ ಕೊನೆಯ ವಾರಮೂಲ ಗಣಿತ, ಮನಃಶಾಸ್ತ್ರ, ಹಿಂದೂಸ್ತಾನಿ ಸಂಗೀತ, ರಸಾಯನಶಾಸ್ತ್ರ
ಏಪ್ರಿಲ್ 2023 ರ ಕೊನೆಯ ವಾರಫ್ರೆಂಚ್, ಸಂಸ್ಕೃತ, ಉರ್ದು, ಮರಾಠಿ, ಮಲಯಾಳಂ, ತೆಲುಗು, ತಮಿಳು
ಏಪ್ರಿಲ್ 2023 ರ ಕೊನೆಯ ವಾರಕನ್ನಡ, ಅರೇಬಿಕ್
ಮೇ 2023 ರ ಮೊದಲ ವಾರಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 2023 ರ ಮೊದಲ ವಾರಆಟೋಮೊಬೈಲ್, ರಿಟೇಲ್, ಮಾಹಿತಿ ತಂತ್ರಜ್ಞಾನ ಹೆಲ್ತ್‌ಕೇರ್, ಬ್ಯೂಟಿ ಮತ್ತು ವೆಲ್‌ನೆಸ್
ಮೇ 2023 ರ ಮೊದಲ ವಾರಇಂಗ್ಲಿಷ್
ಮೇ 2023 ರ ಎರಡನೇ ವಾರಇತಿಹಾಸ, ಭೌತಶಾಸ್ತ್ರ
ಮೇ 2023 ರ ಎರಡನೇ ವಾರರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 2023 ರ ಎರಡನೇ ವಾರಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
ಮೇ 2023 ರ ಮೂರನೇ ವಾರಐಚ್ಛಿಕ ಕನ್ನಡ, ಗೃಹ ವಿಜ್ಞಾನ, ಅಕೌಂಟೆನ್ಸಿ, ಭೂಗರ್ಭಶಾಸ್ತ್ರ
ಮೇ 2023 ರ ಮೂರನೇ ವಾರಹಿಂದಿ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2023 ಡೌನ್‌ಲೋಡ್ (Download) ಮಾಡುವ ವಿಧಾನ

ವಿದ್ಯಾರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ 2023 ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್ಲೋಡ್ ಮಾಡಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು:

1ನೇ ಹಂತ: ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ವೆಬ್‌ಸೈಟ್ ಲಿಂಕ್‌

2ನೇ ಹಂತ: ಸೇವೆಗಳು ಮತ್ತು ಯೋಜನೆಗಳು ಅಡಿಯಲ್ಲಿನ ‘ಪರೀಕ್ಷೆ’ ಬಟನ್‌ ಮೇಲೆ ಕ್ಲಿಕ್ ಮಾಡಿ.

3ನೇ ಹಂತ: ವಿವಿಧ ಪರೀಕ್ಷೆಗೆ ಸಂಬಂಧಿಸಿದ ಲಿಂಕ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ದ್ವಿತೀಯ ಪಿಯುಸಿಗಾಗಿ  ‘2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ’ ಬಟನ್‌ ಮೇಲೆ ಕ್ಲಿಕ್ ಮಾಡಿ.

4ನೇ ಹಂತ: ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ 2023 ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಭವಿಷ್ಯದ ಪರಾಮರ್ಶನಕ್ಕಾಗಿ ಕರ್ನಾಟಕ ಪಿಯುಸಿ ವೇಳಾಪಟ್ಟಿ 2023ರ ಪ್ರಿಂಟ್‌ಔಟ್‌ಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಪ್ರವೇಶ ಪತ್ರ 2023 ನಲ್ಲಿ ಏನೆಲ್ಲಾ ವಿವರಗಳು ಇರುತ್ತವೆ?

ಈ ಕೆಳಗಿನ ವಿವರಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2023ರ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿರುತ್ತದೆ:

1. ಪರೀಕ್ಷೆಯ ದಿನಾಂಕ

2. ಪರೀಕ್ಷೆಯ ದಿನ

3. ವಿಷಯ ಸಂಕೇತಗಳ ಪಟ್ಟಿ

4. ವಿಷಯಗಳ ಪಟ್ಟಿ

5. ಸೆಷನ್‌ಗಳು ಮತ್ತು ಪರೀಕ್ಷೆ ಸಮಯ

ಪರೀಕ್ಷೆ ಪೂರ್ಣಗೊಂಡ ನಂತರ, ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ 2023ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಹಿಂದಿನ ವರ್ಷದ ಅಂಕಿಅಂಶಗಳ ಪ್ರಕಾರ, ಮಂಡಳಿಯು ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಘೋಷಿಸುತ್ತದೆ. ವಿದ್ಯಾರ್ಥಿಗಳು ಅಧಿಕೃತ ಪ್ರಕಟಣೆಯ ನಂತರ ಮುಖ್ಯ ವೆಬ್‌ಸೈಟ್‌ನಿಂದ ತಮ್ಮ ಪರೀಕ್ಷೆ ಫಲಿತಾಂಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಗೆ ಸಲಹೆಗಳು(Tips for preparation)

  • ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಸಿದ್ಧತೆಯ ಸಮಯದಲ್ಲಿ ಕೆಲವು ಮುಖ್ಯ ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಆ ಅಂಶಗಳು ಅವರಿಗೆ ಉತ್ತಮ ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ. ಅವುಗಳೆಂದರೆ:
  • ವಿದ್ಯಾರ್ಥಿಗಳು ನಿಯಮಿತವಾಗಿ ಅಧ್ಯಯನ ಮಾಡಬೇಕು. ಇದರಿಂದಾಗಿ ಅವರು ಯಾವ ಟಾಪಿಕ್‌ಗಳಲ್ಲಿ ದುರ್ಬಲರಾಗಿದ್ದಾರೆ ಎಂಬುದನ್ನು ಗುರುತಿಸಲು ಅವರಿಗೆ ಸಾಧ್ಯವಾಗುತ್ತದೆ. ಜೊತೆಗೆ, ಅವರು ಈ ಟಾಪಿಕ್‌ಗಳನ್ನು ಗಮನವಿಟ್ಟು ಕಲಿಯುವ ಮೂಲಕ ಅದನ್ನು ಮನದಟ್ಟು ಮಾಡಿಕೊಳ್ಳಬಹುದು.
  • ಪರೀಕ್ಷಾ ಸಿದ್ಧತೆಯಲ್ಲಿ ಪಠ್ಯಪುಸ್ತಕಗಳನ್ನು ಅನುಸರಿಸುವುದು ತುಂಬಾ ಪ್ರಯೋಜನಕಾರಿ.
  • ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಶ್ರಮವಹಿಸಬೇಕು.
  • ಸಮಯ ನಿರ್ವಹಣೆಯು ವಿದ್ಯಾರ್ಥಿಯ ಗುರಿಯ ಸಾಧನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ.
  • ಪ್ರಮುಖ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ಮಾಡಿ. ಪುನರವಲೋಕನ ಸಮಯದಲ್ಲಿ ಈ ಟಿಪ್ಪಣಿಗಳು ನಿಮಗೆ ಸಹಾಯ ಮಾಡುತ್ತವೆ.
  • ಸಂಖ್ಯಾತ್ಮಕ ಪ್ರಶ್ನೆಗಳು ಮತ್ತು ಗಣಿತಶಾಸ್ತ್ರದಲ್ಲಿ, ಪ್ರಶ್ನೆಗಳನ್ನು ನಿಖರವಾಗಿ ಪರಿಹರಿಸಲು ಪ್ರಯತ್ನಿಸಿ.
  • ಅಧ್ಯಯನದ ಸಮಯದ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ನಿಮ್ಮ ಅಂಕ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ (Supplementary Examination) 2023

2023ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ 01/08/2023ರಿಂದ ಪ್ರಾರಂಭವಾಗಲಿದೆ. ಏಪ್ರಿಲ್/ಮೇ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಗೂ ಹಿಂದಿನ ಸಾಲಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ ಅನುತ್ತೀರ್ಣ ಅರ್ಜಿ ಪಡೆದು ಅಥವಾ ಹಿಂದಿನ ಎಂ.ಸಿ.ಎ (Marks Card Cum Application)ಗಳ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸ್ವೀಕರಿಸಿ ಇಲಾಖೆಯ ಸ್ಯಾಟ್ಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಭರ್ತಿ ಮಾಡಲಾಗುತ್ತದೆ.

2023ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ (Exam Fee) ಪಾವತಿಸಲು ನಿಗದಿಪಡಿಸಿರುವ ದಿನಾಂಕಗಳು:

ದಂಡರಹಿತ: ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ 24/06/2023ವರೆಗೆ ದಂಡಸಹಿತ (ದಿನಕ್ಕೆ ರೂ.50 ರಂತೆ): 25/06/2022 ರಿಂದ 04/07/2023ವರೆಗೆ

2023ರಲ್ಲಿ ನಡೆಸಲಾಗುವ ಪೂರಕ ಪರೀಕ್ಷೆಗೆ ಪುನರಾರ್ತಿತ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕಗಳ ವಿವರ:

ಪರೀಕ್ಷಾ ಶುಲ್ಕ (ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತು ಪಡಿಸಿ)
ಒಂದು ವಿಷಯಕ್ಕೆ ರೂ.140
ಎರಡು ವಿಷಯಕ್ಕೆ ರೂ.270
ಮೂರು ಅಥವಾ ಹೆಚ್ಚಿನ ವಿಷಯಗಳು ರೂ.400
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಪಡೆಯಬೇಕಾದ ಅಂಕಪಟ್ಟಿ ಶುಲ್ಕ ರೂ.50
ಫಲಿತಾಂಶ ತಿರಸ್ಕರಣಾ ಶುಲ್ಕ
ಪ್ರಥಮ ಬಾರಿಗೆ ಒಂದು ವಿಷಯಕ್ಕೆ ರೂ.175
ದ್ವಿತೀಯ ಅಂದರೆ ಅಂತಿಮ ಬಾರಿಗೆ ಒಂದು ವಿಷಯಕ್ಕೆ ರೂ.350

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ರ ಬಗ್ಗೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಗ್ಗೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)  ಹಾಗೂ ಅವುಗಳಿಗೆ ಉತ್ತರಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರ. 1: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023 ರ ಪರೀಕ್ಷಾ ದಿನಾಂಕ ಯಾವುದು?

ಉತ್ತರ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 23 ರಿಂದ ಮೇ 18, 2023ರವರೆಗೆ ನಡೆಯಲಿವೆ (ದಿನಾಂಕ ಇನ್ನೂ ಪ್ರಕಟವಾಗಿಲ್ಲ). ವಿದ್ಯಾರ್ಥಿಗಳು ಈ ಲೇಖನದಿಂದ ವಿವರವಾದ ವೇಳಾಪಟ್ಟಿಯನ್ನು ಪಡೆಯಬಹುದು.

ಪ್ರ. 2: ಕರ್ನಾಟಕ ದ್ವಿತೀಯ ಪಿಯುಸಿ 2022-23 ರ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗುವ ವಿವರಗಳು ಯಾವುವು?

ಉತ್ತರ: ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಕೆಲವು ವಿವರಗಳು ಹೀಗಿವೆ:

(i) ಪರೀಕ್ಷೆಯ ದಿನಾಂಕ

(ii) ಪರೀಕ್ಷೆಯ ದಿನ

(iii) ವಿಷಯ ಸಂಕೇತಗಳ ಪಟ್ಟಿ

(iv) ವಿಷಯಗಳ ಪಟ್ಟಿ

(v) ಸೆಷನ್‌ಗಳು ಮತ್ತು ಪರೀಕ್ಷೆಯ ಸಮಯಗಳು

ಪ್ರ. 3: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ಅನ್ನು ನಾನು ಹೇಗೆ ಡೌನ್ಲೋಡ್ ಮಾಡಬಹುದು?

ಉತ್ತರ: ನೀವು ಪಿಯುಇ ಅಧಿಕೃತ ವೆಬ್‌ಸೈಟ್‌ ಲಿಂಕ್‌ ನಿಂದ ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್‌ಲೋಡ್‌ ಮಾಡಬಹುದು. ಅಲ್ಲದೆ, ನೀವು ಇದನ್ನು Embibeನಲ್ಲಿ ಸಹ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪ್ರ. 4: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ಯಾವಾಗ ಬಿಡುಗಡೆ ಮಾಡಲಾಗುತ್ತದೆ?

ಉತ್ತರ: ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು 2023ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡುತ್ತದೆ. ವಿದ್ಯಾರ್ಥಿಗಳು ಈ ಪುಟದಲ್ಲಿ ವೇಳಾಪಟ್ಟಿಯನ್ನು ಪರಿಶೀಲಿಸಬಹುದು ಅಥವಾ ಅದನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಪ್ರ. 5: 2023ರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಯಾರು ನಿರ್ವಹಿಸುತ್ತಾರೆ?

ಉತ್ತರ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುತ್ತದೆ. 2022-23ರ ಶೈಕ್ಷಣಿಕ ಸಾಲಿನಲ್ಲಿಯೂ ಸಹ ಪ್ರಾಯೋಗಿಕ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಇಲಾಖೆಯ ನಿಯಮಗಳಿಗೆ ಅನುಸಾರವಾಗಿ ನಡೆಸುವ ಸಂಪೂರ್ಣ ಜವಾಬ್ದಾರಿ ಆಯಾ ಜಿಲ್ಲಾ ಉಪನಿರ್ದೇಶಕರದ್ದಾಗಿರುತ್ತದೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ (Practical) ಪರೀಕ್ಷೆಗಳನ್ನು ಸರ್ಕಾರಿ ಆದೇಶ ಸಂಖ್ಯೆ:ಇಡಿ 119 ಟಿಪಿಯು 97 ದಿನಾಂಕ 21-03-1997ರನ್ವಯ ನಡೆಸಬೇಕು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜಿನವರು ಆಯಾ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ತಾತ್ವಿಕ ಪರೀಕ್ಷೆಗೆ ಮೊದಲೇ ನಡೆಸಬೇಕು. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಒಬ್ಬರು ಬಾಹ್ಯ ಪರೀಕ್ಷಕರು ಮತ್ತು ಒಬ್ಬರು ಆಂತರಿಕ ಪರೀಕ್ಷಕರನ್ನು ಜಿಲ್ಲಾ ಉಪನಿರ್ದೇಶಕರುಗಳು ನೇಮಕ ಮಾಡುತ್ತಾರೆ.

ಪ್ರ. 6: ದ್ವಿತೀಯ ಪಿಯುಸಿ 2023 ಪ್ರಾಯೋಗಿಕ ಪರೀಕ್ಷೆಯ ನಿಯಮಗಳು ಯಾವುವು?

ಉತ್ತರ: ಪರೀಕ್ಷಕರು ಅನಾವಶ್ಯಕವಾಗಿ ವಿದ್ಯಾರ್ಥಿಗಳ ಜೊತೆ ಮಾತನಾಡಬಾರದು. ಪ್ರಾಯೋಗಿಕ ಪರೀಕ್ಷೆ ನಡೆಸುವ ಸಮಯದಲ್ಲಿ ಪ್ರಯೋಗಾಲಯದಲ್ಲಿ ಆಂತರಿಕ/ಬಾಹ್ಯ ಪರೀಕ್ಷಕರು ಮಾತ್ರ ಇರಬೇಕು. ಪರೀಕ್ಷಾ ಸಮಯದಲ್ಲಿ ಯಾವುದೇ ಕಾರಣಕ್ಕೂ ಪ್ರಯೋಗಾಲಯದ ಸಹಾಯಕರು ಮತ್ತು ಇತರ ಅನಧಿಕೃತ ವ್ಯಕ್ತಿಗಳಿಗೆ ಪ್ರಯೋಗಾಲಯದಲ್ಲಿ ಪ್ರವೇಶ ನಿಷಿದ್ಧ.

ಪ್ರ. 7: ಪ್ರಯೋಗ ಪರೀಕ್ಷೆಯ ಅಂಕಗಳನ್ನು ಅಲ್ಲಿಯೇ ತಿಳಿಸಲಾಗುತ್ತದೆಯೇ?

ಉತ್ತರ: ಇಲ್ಲ. ಪರೀಕ್ಷಕರು ಅಂಕಗಳನ್ನು ನೀಡಿದ ಬಳಿಕ ವಿದ್ಯಾರ್ಥಿಗಳಿಗೆ ಅದನ್ನು ಬಹಿರಂಗಪಡಿಸುವಂತಿಲ್ಲ. ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯ ವಿಷಯಗಳ ಉತ್ತರ ಪತ್ರಿಕೆಗಳ ಫೋಟೋ ಪ್ರತಿ ಕೊಡುವ ವ್ಯವಸ್ಥೆ ಹಾಗೂ ಮರು ಮೌಲ್ಯಮಾಪನ ಇರುವುದಿಲ್ಲ. 

ಪ್ರ. 8: ದ್ವಿತೀಯ ಪಿಯುಸಿ 2023 ಪ್ರಾಯೋಗಿಕ ಪರೀಕ್ಷೆಗಳನ್ನು ಯಾವ ಸಮಯದಲ್ಲಿ ನಡೆಸಲಾಗುತ್ತದೆ?

ಉತ್ತರ: ಪ್ರಾಯೋಗಿಕ ಪರೀಕ್ಷೆ ನಡೆಸುವಾಗ ಪ್ರತಿ ದಿನ ಬೆಳಗ್ಗೆ 9 ರಿಂದ 11 ಗಂಟೆ, ಮಧ್ಯಾಹ್ನ 12 ರಿಂದ 2 ಗಂಟೆ ಮತ್ತು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೂರು ತಂಡಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. 

ಪ್ರಾಯೋಗಿಕ ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಯು PRACTICAL RECORD ಅನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇದರಲ್ಲಿ ಸಂಬಂಧಿಸಿದ ಉಪನ್ಯಾಸಕರ/ವಿಭಾಗದ ಮುಖ್ಯಸ್ಥರ/ಪ್ರಾಚಾರ್ಯರ ದೃಢೀಕರಣ ಪ್ರಮಾಣಪತ್ರ ಇರಬೇಕು. 

ಪ್ರ. 9: ಕರ್ನಾಟಕ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಗ್ಯಾಜೆಟ್‌ಗಳನ್ನು ಬಳಸಬಹುದೇ?

ಉತ್ತರ: ಪ್ರಾಯೋಗಿಕ ಪರೀಕ್ಷೆಯಲ್ಲಿ ಸರಳ ಕ್ಯಾಲ್ಕುಲೇಟರನ್ನು ಮಾತ್ರ ಉಪಯೋಗಿಸಲು ಅವಕಾಶ ನೀಡಲಾಗಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರಾಯೋಗಿಕ ಮ್ಯಾನ್ಯುಯಲ್, ಆಧುನಿಕ ಕ್ಯಾಲ್ಕುಲೇಟರ್ ಮತ್ತು ಮೊಬೈಲ್ ಫೋನ್ ಮುಂತಾದ ಇಲೆಕ್ಟ್ರಾನಿಕ್ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.     

ಪ್ರ. 10: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ 2023 ಆಫ್‌ಲೈನ್‌ನಲ್ಲಿ ಲಭ್ಯವಿದೆಯೇ?

ಉತ್ತರ: ಇಲ್ಲ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ 2023 ಅನ್ನು ಆನ್‌ಲೈನ್‌ನಲ್ಲಿ ಮಾತ್ರ ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಉಪಯೋಗಕ್ಕಾಗಿ ಅದರ ಪ್ರಿಂಟ್‌ಔಟ್‌ಗಳನ್ನು ತೆಗೆದುಕೊಳ್ಳಬಹುದು.

ನಾವು ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2023ಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಮಗೆ ಒದಗಿಸಿದ್ದೇವೆ. ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಸಿದ್ಧತೆಯ ಮೇಲೆ ಗಮನ ಹರಿಸಬೇಕು. Embibe ದ್ವಿತೀಯ ಪಿಯುಸಿ ಸಿದ್ಧತೆಯ ಬಗ್ಗೆ ತಜ್ಞರ ಸಲಹೆಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಕ್ಕಾಗಿ ಉಚಿತವಾಗಿ ದ್ವಿತೀಯ ಪಿಯುಸಿ ಪ್ರಾಕ್ಟೀಸ್ ಪ್ರಶ್ನೆಗಳನ್ನು Embibeನಲ್ಲಿ ಪರಿಹರಿಸಬಹುದು, ಇದು ಖಂಡಿತವಾಗಿಯೂ ನಿಮ್ಮ  ಬೋರ್ಡ್ ಪರೀಕ್ಷೆಗಳಲ್ಲಿ ಸಹಾಯ ಮಾಡುತ್ತದೆ.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2023ರ  ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ