• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023: ಪ್ರಮುಖ ದಿನಾಂಕಗಳು

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023: ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣವು ಅತ್ಯಂತ ಮಹತ್ವಪೂರ್ಣ ಘಟ್ಟವಾಗಿದೆ. ಪದವಿ ಪೂರ್ವ ಶಿಕ್ಷಣದ ಹಂತವು ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ ಹಾಗೂ ವಿದ್ಯಾರ್ಥಿಗಳು ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಗಳಿಂದಾಗಿ ಪದವಿ ಪೂರ್ವ ಶಿಕ್ಷಣಕ್ಕೆ ಇನ್ನಿಲ್ಲದ ಬೇಡಿಕೆ ಮತ್ತು ಪ್ರಾಮುಖ್ಯತೆ ಇದೆ.

ಪದವಿ ಪೂರ್ವ ಶಿಕ್ಷಣವನ್ನು ಬೋಧನೆ ಮಾಡುವ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನ ರಹಿತ ಕಾಲೇಜುಗಳು ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಮತ್ತು ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಮಂಡಳಿ ವ್ಯಾಪ್ತಿಗೆ ಒಳಪಟ್ಟಿವೆ. ಪ್ರತಿ ವರ್ಷವೂ ಮಂಡಳಿಯು ಪಿಯುಸಿ ತರಗತಿಗಳಿಗೆ ಪ್ರವೇಶ, ತರಗತಿಗಳ ಆರಂಭ, ಪರೀಕ್ಷೆ ಮತ್ತು ಫಲಿತಾಂಶ ಕುರಿತಾದ ಹಲವು ಅಧಿಸೂಚನೆಗಳನ್ನು ಹೊರಡಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳಿಗೂ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಆ ಕಾರಣಕ್ಕಾಗಿಯೇ, 2023ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

2022-23ನೇ ಸಾಲಿನ ದ್ವಿತೀಯ ಪಿಯುಸಿ ಶೈಕ್ಷಣಿಕ ಅವಧಿ: ಶೈಕ್ಷಣಿಕ ವೇಳಾಪಟ್ಟಿ

2022-23ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ಪೂರ್ವ ತರಗತಿಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ 2022-23: ಪ್ರಮುಖ ದಿನಾಂಕಗಳು

ದಂಡ ಶುಲ್ಕವಿಲ್ಲದೆ ದಾಖಲಾತಿ ಕೊನೆಯ ದಿನಾಂಕ (ಖಜಾನೆಗೆ ಶುಲ್ಕವನ್ನು ಮಾರನೆಯ ಕಾರ್ಯನಿರತ ದಿನಾಂಕದಂದು ಕಡ್ಡಾಯವಾಗಿ ಪಾವತಿಸುವುದು) ವಿಳಂಬ ದಾಖಲಾತಿ ರೂ. 670/ (ರೂ.ಆರು ನೂರ ಎಪ್ಪತ್ತು ಮಾತ್ರ) ದಂಡ ಶುಲ್ಕದೊಂದಿಗೆ (ಎರಡೂ ದಿನಗಳು ಸೇರಿವೆ) (ಖಜಾನೆಗೆ ಶುಲ್ಕವನ್ನು ಮಾರನೇಯ ಕಾರ್ಯನಿರತ ದಿನಾಂಕದಂದು ಕಡ್ಡಾಯವಾಗಿ ಪಾವತಿಸುವುದು).

16.06.2022 ರಿಂದ 22.06.2022

ವಿಶೇಷ ದಂಡ ಶುಲ್ಕ ರೂ.2890/ (ರೂ 2220/- ಎರಡು ಸಾವಿರದ ಎರಡು ನೂರ ಇಪ್ಪತ್ತು + ರೂ. 670/-ಆರು ನೂರ ಎಪ್ಪತ್ತು ಮಾತ್ರ) ಎರಡೂ ದಿನಗಳು ಸೇರಿವೆ (ಖಜಾನೆಗೆ ಶುಲ್ಕವನ್ನು ಮಾರನೇಯ ಕಾರ್ಯನಿರತ ದಿನಾ೦ಕದ೦ದ ಕಡ್ಡಾಯವಾಗಿ ಪಾವತಿಸುವುದು).

23.06.2022 ರಿಂದ 30.06.2022

ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ 2022-23

ದ್ವಿತೀಯ ಪಿಯುಸಿ ಪರೀಕ್ಷೆ 2023ರ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ (DPUE) ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷಾ ವೇಳಾಪಟ್ಟಿಯು ಪ್ರಕಟವಾಗುವ ಮೊದಲು ಪರಿಣಾಮಕಾರಿ ಅಧ್ಯಯನ ವೇಳಾಪಟ್ಟಿಯನ್ನು ರಚಿಸಲು, ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 2023ರ ನಿರೀಕ್ಷಿತ ವೇಳಾಪಟ್ಟಿಯನ್ನು ಪರಾಮರ್ಶಿಸಬಹುದು.

ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗಗಳಿಗೆ ದ್ವಿತೀಯ ಪಿಯುಸಿ ಕರ್ನಾಟಕ ರಾಜ್ಯ ಮಂಡಳಿಯ ವೇಳಾಪಟ್ಟಿ 2023 (ತಾತ್ಕಾಲಿಕ) ಹೀಗಿದೆ:

ಪರೀಕ್ಷೆಯ ತಾತ್ಕಾಲಿಕ ದಿನಾಂಕಗಳುವಿಷಯಗಳು
ಮಾರ್ಚ್ 1, 2023ಇತಿಹಾಸ
ಮಾರ್ಚ್ 2, 2023ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾರ್ಚ್ 5, 2023ಭೂಗೋಳಶಾಸ್ತ್ರ
ಮಾರ್ಚ್ 6, 2023ಮನಃಶಾಸ್ತ್ರ, ಮೂಲ ಗಣಿತ
ಮಾರ್ಚ್ 7, 2023ತರ್ಕಶಾಸ್ತ್ರ
ಮಾರ್ಚ್ 8, 2023ಕನ್ನಡ
ಮಾರ್ಚ್ 9, 2023ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಮಾರ್ಚ್ 11, 2023ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‍ನೆಸ್
ಮಾರ್ಚ್ 12, 2023ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 13, 2023ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್
ಮಾರ್ಚ್ 14, 2023ಅರ್ಥಶಾಸ್ತ್ರ
ಮಾರ್ಚ್ 15, 2023ಗೃಹ ವಿಜ್ಞಾನ
ಮಾರ್ಚ್ 17, 2023ವ್ಯವಹಾರ ಅಧ್ಯಯನ ಮತ್ತು ಭೌತವಿಜ್ಞಾನ
ಮಾರ್ಚ್ 18, 2023ಭೂಗರ್ಭ ವಿಜ್ಞಾನ
ಮಾರ್ಚ್ 19, 2023ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
ಮಾರ್ಚ್ 20, 2023ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಮಾರ್ಚ್ 21, 2023ಉರ್ದು, ಸಂಸ್ಕೃತ
ಮಾರ್ಚ್ 22, 2023ಸಂಖ್ಯಾಶಾಸ್ತ್ರ
ಮಾರ್ಚ್ 24, 2023ಐಚ್ಛಿಕ ಕನ್ನಡ
ಮಾರ್ಚ್ 25, 2023ಹಿಂದಿ
ಮಾರ್ಚ್ 26, 2023ಇಂಗ್ಲಿಷ್

ದ್ವಿತೀಯ ಪಿಯುಸಿ ಪ್ರವೇಶ ಪತ್ರ 2022 ನೆನಪಿಡಬೇಕಾದ ಪ್ರಮುಖ ಅಂಶಗಳು

  • ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಮೊದಲು ದಯವಿಟ್ಟು ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿ:
  • ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ ಪ್ರಮುಖ ವಿವರಗಳನ್ನು ಪ್ರವೇಶ ಪತ್ರ ಒಳಗೊಂಡಿರುತ್ತದೆ. ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ಪರೀಕ್ಷೆಯ ಅವಧಿ, ಪರೀಕ್ಷೆಯ ದಿನಾಂಕ ಮತ್ತು ಪರೀಕ್ಷೆ ಬರೆಯುತ್ತಿರುವ ವಿಷಯಗಳು ಇರುತ್ತವೆ.
  • ಪ್ರವೇಶಪತ್ರ ಕಳೆದು ಹೋದರೆ, ವಿದ್ಯಾರ್ಥಿಯು ತಮ್ಮ  ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಬೇಕು ಮತ್ತು ಖಾಸಗಿ ವಿದ್ಯಾರ್ಥಿಗಳು ನೇರವಾಗಿ ಮಂಡಳಿಯನ್ನು ಸಂಪರ್ಕಿಸಬಹುದು. ಹೊಸ ಪ್ರವೇಶಪತ್ರಕ್ಕೆ ಮರುವಿತರಣಾ ಶುಲ್ಕವಿರುತ್ತದೆ.
  • ಪ್ರವೇಶಪತ್ರದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ವಿದ್ಯಾರ್ಥಿಗಳು ಕೂಡಲೇ ಪರೀಕ್ಷಾ ವಿಭಾಗಕ್ಕೆ ಮಾಹಿತಿ ನೀಡಬೇಕು.
  • ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಅಥವಾ ಟಿಪ್ಪಣಿಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಬಾರದು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ದುಷ್ಕೃತ್ಯದಲ್ಲಿ ತೊಡಗಿರುವುದು ಕಂಡುಬಂದರೆ, ಅವರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ಪರೀಕ್ಷೆಗಳಿಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.
  • ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಪ್ರವೇಶಪತ್ರಕ್ಕೆ ಪ್ರಾಂಶುಪಾಲರ ಮೊಹರು ಮತ್ತು ಸಹಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆ 2023: ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಲು ಹಂತಗಳು  

ಕರ್ನಾಟಕ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2023 ಅನ್ನು ಪಿಡಿಎಫ್‌ ರೂಪದಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬೇಕು. 

ಹಂತ 1: ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023ರ ವೇಳಾಪಟ್ಟಿಯನ್ನು ಪಡೆಯಲು ಮುಖಪುಟದಲ್ಲಿ ‘ಪರೀಕ್ಷೆಗಳು’ ಲಿಂಕ್‌ಗೆ ಹೋಗಿ.

ಹಂತ 3: “ಕರ್ನಾಟಕ 2ನೇ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಕೋಷ್ಟಕ 2023” ಎಂದು ಹೇಳುವ ಲಿಂಕ್‌ಗೆ ಹೋಗಿ. 2023ರ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯು ನಿಮಗೆ ದೊರೆಯುತ್ತದೆ.

ಹಂತ 4: ಭವಿಷ್ಯದ ಬಳಕೆಗಾಗಿ ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2023 ಅನ್ನು ಸೇವ್ ಮಾಡಿ ಮತ್ತು ಮುದ್ರಿಸಿ ಇಟ್ಟುಕೊಳ್ಳಿ.

ಕರ್ನಾಟಕ ರಾಜ್ಯ ಮಂಡಳಿ ದ್ವಿತೀಯ ಪಿಯುಸಿ ವೇಳಾಪಟ್ಟಿ 2023ರಲ್ಲಿ ಉಲ್ಲೇಖಿಸಲಾದ ವಿವರಗಳು

ಈ ಕೆಳಗಿನ ವಿವರಗಳನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023ರಲ್ಲಿ ಉಲ್ಲೇಖಿಸಲಾಗಿದೆ.

  1. ವಿಷಯದ ಹೆಸರು
  2. ವಿಷಯ ಕೋಡ್
  3. ಪರೀಕ್ಷೆಯ ದಿನಾಂಕ
  4. ಪರೀಕ್ಷೆಯ ಸಮಯ
  5. ಪರೀಕ್ಷೆಯ ಸೂಚನೆಗಳು

ದ್ವಿತೀಯ ಪಿಯು ಫಲಿತಾಂಶ ದಿನಾಂಕ

2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಮೇ 2023ರಲ್ಲಿ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ದ್ವಿತೀಯ ಪಿಯುಸಿಗೆ ಕಾಲೇಜು ಬದಲಾವಣೆ: (SATS ಮೂಲಕ)

ಪ್ರಥಮ ಪಿಯುಸಿಯನ್ನು ಒಂದು ಕಾಲೇಜಿನಲ್ಲಿ ಅಭ್ಯಸಿಸಿರುವ ಒಬ್ಬ ವಿದ್ಯಾರ್ಥಿಯು ದ್ವಿತೀಯ ಪಿಯುಸಿಗೆ ಇನ್ನೊಂದು ಕಾಲೇಜಿಗೆ ವರ್ಗಾವಣೆ ತೆಗೆದುಕೊಳ್ಳುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ:

1. ವಿದ್ಯಾರ್ಥಿಯು ನಿಯಮಾನುಸಾರ ಕಾಲೇಜು ಬದಲಾವಣೆ ಅರ್ಜಿ ಹಾಗೂ ಶುಲ್ಕ ಭರಿಸಿ ಅನುಮತಿ ಪಡೆಯಬೇಕು.

2. ಕಾಲೇಜು ಬದಲಾವಣೆ ಮಾಡಿಕೊಂಡ ವಿದ್ಯಾರ್ಥಿಯ ವಿವರವನ್ನು ಪ್ರಾಚಾರ್ಯರು ತಮ್ಮ Login ನಲ್ಲಿ ಕಾಲೇಜು ಬದಲಾವಣೆ Menu ಆಯ್ಕೆ ಮಾಡಿಕೊಂಡು ಸದರಿ ವಿದ್ಯಾರ್ಥಿಯ SATS ನಂಬರ್ ನಮೂದಿಸಿ ಅಗತ್ಯ ಮಾಹಿತಿ ಭರ್ತಿಮಾಡಿ ದಾಖಲು ಮಾಡಿಕೊಳ್ಳಲಾಗುತ್ತದೆ.

3. ದ್ವಿತೀಯ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಹಾಜರಾತಿ ಕೊರತೆಯಿಂದ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ಅಂತಹ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಮರುದಾಖಲಾತಿಯನ್ನು ಅದೇ ಕಾಲೇಜಿನಲ್ಲಿ ಪಡೆದಲ್ಲಿ ಇಲಾಖೆಯ ಅನುಮತಿ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಕಾಲೇಜು ಬದಲಾವಣೆ ಆಗಿದ್ದಲ್ಲಿ ಇಲಾಖೆಯಿಂದ ಅನುಮತಿ ಪಡೆದ ನಂತರವೇ ಪ್ರಾಚಾರ್ಯರು ವಿದ್ಯಾರ್ಥಿಯನ್ನು ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.

ಪಿಯುಸಿಯಲ್ಲಿ ಸಂಯೋಜನೆ ಬದಲಾವಣೆ

1. ಪ್ರಥಮ ಪಿಯುಸಿಯಲ್ಲಿ ಉತ್ತೀರ್ಣ/ಅನುತ್ತೀರ್ಣರಾದ ವಿದ್ಯಾರ್ಥಿಗಳು ಸಂಯೋಜನೆ ಬದಲಾವಣೆ ಬಯಸಿ ಪ್ರಥಮ ಪಿಯುಸಿಗೆ ಮರು ದಾಖಲಾತಿ ಬಯಸಿದಲ್ಲಿ ಸದರಿ ಸಂಯೋಜನೆ ಹೊಂದಿರುವ ಕಾಲೇಜಿನ ಪ್ರಾಚಾರ್ಯರರಿಂದ ಅನುಮತಿ ಪಡೆದು ನಿಗದಿತ ಶುಲ್ಕವನ್ನು ಪಾವತಿಸಿ ನಿಯಮಾನುಸಾರ ಮರು ದಾಖಲಾತಿ ಮಾಡಿಕೊಳ್ಳಬೇಕು.

2. ಪ್ರಥಮ/ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ / ಕಲಾ ವಿಭಾಗದ (ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯ) ಯಾವುದೇ ಸಂಯೋಜನೆಯನ್ನು ತೆಗೆದುಕೊಂಡು ಅಧ್ಯಯನ ಮಾಡಿದ ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ ಒಂದು ವೇಳೆ ಕಾಲೇಜು ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ ತಾನು ಅಧ್ಯಯನ ಮಾಡಿದ ಒಂದು ವಿಷಯ ಮತ್ತು ಒಂದು ಭಾಷೆ ಪ್ರವೇಶ ಬಯಸಿದ ಕಾಲೇಜಿನಲ್ಲಿ ಬೋಧಿಸದಿದ್ದಲ್ಲಿ / ಲಭ್ಯವಿಲ್ಲದಿದ್ದಲ್ಲಿ ಆ ವಿಷಯ / ಭಾಷೆಯನ್ನು ಖಾಸಗಿಯಾಗಿ ಅಧ್ಯಯನ ಮಾಡಲು ಅವಕಾಶವಿದೆ. ಈ ಸಂಬಂಧ ಪ್ರತಿ ವಿಷಯ / ಭಾಷೆಗೆ ನಿಗದಿತ ಶುಲ್ಕವನ್ನು ಚಲನ್ ಮೂಲಕ ಪಾವತಿಸಬೇಕು. ಫ್ರೆಂಚ್ ಭಾಷೆ ಹಾಗೂ ಪ್ರಾಯೋಗಿಕ ವಿಷಯಗಳಿಗೆ ಖಾಸಗಿ ಅಧ್ಯಯನ ಮಾಡಲು ಅವಕಾಶವಿರುವುದಿಲ್ಲ.

ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಸಾಮಾನ್ಯವಾಗಿ ಕಾಲೇಜಿನ ಪ್ರಾರಂಭದ ಸಮಯ ಮತ್ತು ಕಾಲೇಜು ಮುಕ್ತಾಯ ಸಮಯ ಯಾವುದು?

ಉತ್ತರ: ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯಿಸುವಂತೆ ಕಾಲೇಜಿನ ಸಮಯವನ್ನು ಈಗ ನಿಗದಿಪಡಿಸಲಾಗಿದೆ. ಕಾಲೇಜು ಪ್ರಾರಂಭದ ಸಮಯ ಬೆಳಗ್ಗೆ 9.30 ರಿಂದ 10 ಗಂಟೆಯೊಳಗೆ ಮತ್ತು ಕಾಲೇಜು ಮುಕ್ತಾಯ ಸಮಯ ಮಧ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ. ಕಾಲೇಜಿನ ಒಂದು ದಿನದ ಕಾರ್ಯನಿರ್ವಹಣಾ ಅವಧಿ 6 ಗಂಟೆಗೆ ಕಡಿಮೆ ಇಲ್ಲದಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. 

ಪ್ರ. 2: ಪಿಯುಸಿ ಮರು ದಾಖಲಾತಿ (Re-Admission)ಗೆ ಅವಕಾಶ ಇದೆಯೇ?

ಉತ್ತರ: ಹೌದು. ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಅಧ್ಯಯನ ಅವಧಿ ಪೂರ್ಣಗೊಳಿಸಿರುವ ಆದರೆ, ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಅಥವಾ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಯು ಸಂಪೂರ್ಣವಾಗಿ ಬೇರೆ ವಿಷಯಗಳ ಸಂಯೋಜನೆಯನ್ನು ಅಧ್ಯಯನ ಮಾಡಲು ಬಯಸಿದಲ್ಲಿ ಕಡ್ಡಾಯವಾಗಿ ನಿರ್ದೇಶನಾಲಯದ ಅನುಮತಿ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗಿ ವ್ಯಾಸಂಗವನ್ನು ಮುಂದುವರೆಸಬಹುದಾಗಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ಪಡೆದು ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಲು ಅನರ್ಹರಾದ ವಿದ್ಯಾರ್ಥಿಗಳು ಅದೇ ಸಂಯೋಜನೆಯೊಂದಿಗೆ ಮತ್ತೆ ಪ್ರಥಮ/ದ್ವಿತೀಯ ಪಿಯುಸಿ ತರಗತಿಗಳಿಗೆ ಮರುದಾಖಲಾತಿ ಪಡೆಯಲು ಅವಕಾಶವಿರುತ್ತದೆ.

ಹಾಜರಾತಿ ಕೊರತೆ ಇದ್ದು ಒಂದು ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಯು ಮರು ದಾಖಲಾತಿ ಬಯಸಿದಲ್ಲಿ ಇಲಾಖೆಯ ಅನುಮತಿ ಪಡೆಯುವುದು ಅಗತ್ಯವಿರುವುದಿಲ್ಲ ಹಾಗೂ ಇಂತಹ ವಿದ್ಯಾರ್ಥಿಗಳಿಗೆ ದಾಖಲಾತಿ ಪಡೆಯಲು ಕಾಲೇಜಿನ ಪ್ರಾಚಾರ್ಯರು ಅನುವು ಮಾಡಿಕೊಡುತ್ತಾರೆ.

ಪ್ರಥಮ ಪಿಯುಸಿ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಯು ಅದೇ ಸಂಯೋಜನೆಯಲ್ಲಿ ಒಂದು ಐಚ್ಛಿಕ ವಿಷಯದ ಬದಲಾವಣೆಯೊಂದಿಗೆ ಮರುದಾಖಲಾತಿ ಪಡೆಯಬಹುದು.

ಪ್ರ. 3: ಪರೀಕ್ಷೆಗೆ ಹಾಜರಾಗಲು ಕನಿಷ್ಠ ಹಾಜರಾತಿ ಎಷ್ಟು ಇರಬೇಕು?

ಉತ್ತರ: ಕರ್ನಾಟಕದ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನಿತ ಇತ್ಯಾದಿ) ನಿಯಮಗಳು 2006ರ ಉಪ ನಿಯಮ 12(1) ರನ್ವಯ ಒಬ್ಬ ವಿದ್ಯಾರ್ಥಿಯು ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡಾ 75 ರಷ್ಟು ಹಾಜರಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಂತಹ ವಿದ್ಯಾರ್ಥಿಯು ಮಾತ್ರ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಆರ್ಹನಾಗಿರುತ್ತಾನೆ.

ಪ್ರ. 4: ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆಯೇ?

ಉತ್ತರ: ಹೌದು. ಹಾಜರಾತಿ ಕೊರತೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ, ಸೆಪ್ಟೆಂಬರ್ 16, ಡಿಸೆಂಬರ್ 15 ಮತ್ತು ಜನವರಿ 27 ರಂದು ಪೋಷಕರ ಸಭೆಯನ್ನು ಕರೆದು ಖುದ್ದಾಗಿ ತಿಳಿಸಿ ಅವರಿಂದ ದೃಢೀಕರಣವನ್ನು ಪಡೆಯಲಾಗುತ್ತದೆ. ಜನವರಿ 27ರಂದು ಪ್ರಕಟಿಸುವ ಹಾಜರಾತಿ ಕೊರತೆಯ ಮಾಹಿತಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿ ಸ್ವೀಕೃತಿಯನ್ನು ಪಡೆಯಲಾಗುತ್ತದೆ, ಹಾಗೂ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ದೃಢೀಕರಣದೊಂದಿಗೆ ಸಹಾಯಕ ನಿರ್ದೇಶಕರು (ಪರೀಕ್ಷಾ ಶಾಖೆ), ಪದವಿ ಪೂರ್ವ ಶಿಕ್ಷಣ ಇಲಾಖೆ, ಮಲ್ಲೇಶ್ವರಂ, 18ನೇ ಕ್ರಾಸ್ ಇವರಿಗೆ ಕಡ್ಡಾಯವಾಗಿ ಜನವರಿ ತಿಂಗಳ ಮೊದಲನೇ ವಾರದಲ್ಲಿ ಕಳುಹಿಸಿಕೊಡಲಾಗುತ್ತದೆ.

ಪ್ರ. 5: ಆನ್‌ಲೈನ್‌ನಲ್ಲಿ ದ್ವಿತೀಯ ಪಿಯುಸಿ ಪ್ರವೇಶ ಪತ್ರಗಳು ಲಭ್ಯವೇ?

ಉತ್ತರ: ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ‘ಪ್ರವೇಶ ಪತ್ರ’ಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಿದೆ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಪಿಯು ಆನ್‌ಲೈನ್‌ ಪೋರ್ಟಲ್‌ನಲ್ಲಿ ತಮ್ಮ ‘ಲಾಗಿನ್‌ ಐಡಿ’ ಹಾಗೂ ಪಾಸ್‌ವರ್ಡ್‌ ಬಳಸಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸುತ್ತಾರೆ. 

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023: ಪ್ರಮುಖ ದಿನಾಂಕಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ