• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23: ಭೌತಶಾಸ್ತ್ರದ ಪ್ರಮುಖ ಟಾಪಿಕ್‌ಗಳು

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಉನ್ನತ ಶಿಕ್ಷಣದಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಸೇರಿದಂತೆ ಹಲವಾರು ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕಾದರೆ ಭೌತಶಾಸ್ತ್ರದ ಅಂಕಗಳು ನಿರ್ಣಾಯಕವಾಗುತ್ತವೆ. ಹಾಗೆಯೇ ವಿದ್ಯಾರ್ಥಿಗಳು KCET, NEET, IIT-JEE ನಂತಹ ಪ್ರವೇಶ ಪರೀಕ್ಷೆಗಳಲ್ಲೂ ಭೌತಶಾಸ್ತ್ರದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ರ್‍ಯಾಂಕಿಂಗ್ ಪಡೆಯಲು ಸಾಧ್ಯ. 

ಪದವಿ ಪೂರ್ಣ ಶಿಕ್ಷಣ ಇಲಾಖೆಯು ನಿಗದಿಪಡಿಸಿರುವ ದ್ವಿತೀಯ ಪಿಯುಸಿ ಪಠ್ಯಕ್ರಮದ ಭೌತಶಾಸ್ತ್ರ ವಿಷಯದಲ್ಲಿ ಒಟ್ಟು 14 ಅಧ್ಯಾಯಗಳಿವೆ. ಇವುಗಳಲ್ಲಿ ಕೆಲವು ಅಧ್ಯಾಯಗಳಿಗೆ ಹೆಚ್ಚಿನ ವೇಟೇಜ್ ನೀಡಲಾಗಿದೆ. ಈ ಅಧ್ಯಾಯಗಳಿಂದ Weightage of Marks ಅಧಿಕ. ಹಾಗಾಗಿ ವಿದ್ಯಾರ್ಥಿಗಳು ಈ ಟಾಪಿಕ್‌ಗಳ ಮೇಲೆ ಹೆಚ್ಚು ಗಮನ ಹರಿಸಿದರೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಸಹಾಯವಾಗುತ್ತದೆ. ಹಾಗಂದ ಮಾತ್ರಕ್ಕೆ ವೇಟೇಜ್ ಕಡಿಮೆ ಇರುವ ಅಧ್ಯಾಯಗಳನ್ನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಕಡೆಗಣಿಸುವಂತಿಲ್ಲ. ಅವುಗಳಿಗೂ ಸಾಕಷ್ಟು ಸಮಯ ಕೊಟ್ಟು ಒಟ್ಟಾರೆ ಪಠ್ಯಕ್ರಮವನ್ನು ವಾರ್ಷಿಕ ಪರೀಕ್ಷೆಗೂ ಮುನ್ನ ಅಭ್ಯಾಸ ಮಾಡಿರಬೇಕು. ಆಗಷ್ಟೇ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ. 

ಭೌತಶಾಸ್ತ್ರ ಪಠ್ಯಕ್ರಮದಲ್ಲಿ ವೇಟೇಜ್ ಆಧರಿಸಿದ ಪ್ರಮುಖ ಟಾಪಿಕ್‌ಗಳು

ದ್ವಿತೀಯ ಪಿಯುಸಿ ಭೌತಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಟಾಪಿಕ್‌ಗಳನ್ನು ಇಲ್ಲಿ ನೀಡಲಾಗಿದ್ದು, ಆಯಾ ಟಾಪಿಕ್‌ನ ವೇಟೇಜ್(weightage) ಆಧಾರದ ಮೇಲೆ ಅದನ್ನು ಪ್ರಮುಖ ಟಾಪಿಕ್ ಎಂದು ಪರಿಗಣಿಸಲಾಗಿದೆ. ಹಾಗೆಂದು ಉಳಿದ ಟಾಪಿಕ್‌ಗಳು ಪ್ರಮುಖ ಅಲ್ಲ ಎಂಬ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬರಬಾರದು. ಇಲ್ಲಿನ ಟಾಪಿಕ್‌ಗಳ ಕಡೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಉಳಿದ ಟಾಪಿಕ್‌ಗಳನ್ನೂ ಅಭ್ಯಾಸ ಮಾಡಬೇಕು. ಆಗಷ್ಟೇ ಪರಿಕಲ್ಪನೆಗಳು ಮತ್ತು ವಿಷಯಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನಂತರ, ಪ್ರತಿ ವರ್ಷ ಸುಮಾರು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 2 ವರ್ಷಗಳ ಪದವಿಪೂರ್ವ ಶಿಕ್ಷಣಕ್ಕೆ ದಾಖಲಾಗುತ್ತಾರೆ. ಕೋರ್ಸ್‌ಗಳನ್ನು ಮಾನವಶಾಸ್ತ್ರಗಳು (ಕಲೆಗಳು), ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಅಡಿಯಲ್ಲಿ ವಿಶಾಲವಾಗಿ ವರ್ಗೀಕರಿಸಲಾಗಿದೆ. ಪದವಿಪೂರ್ವ ಪಠ್ಯಕ್ರಮದಲ್ಲಿ ಒಟ್ಟು 23 ವಿಷಯಗಳು, 11 ಭಾಷೆಗಳು ಮತ್ತು 50 ಸಂಯೋಜನೆಗಳಿವೆ.

ಮಂಡಳಿ ಹೆಸರುಪದವಿ ಪೂರ್ವ ಶಿಕ್ಷಣ ಇಲಾಖೆ
ಪರೀಕ್ಷೆ ಹೆಸರುಕರ್ನಾಟಕ ಪದವಿ ಪೂರ್ವ ಪ್ರಮಾಣಪತ್ರ ಪರೀಕ್ಷೆ
ದಿನಾಂಕ ಶೀಟ್ ಹೆಸರುದ್ವಿತೀಯ ಪಿಯುಸಿ ವೇಳಾಪಟ್ಟಿ 2022 ಕರ್ನಾಟಕ ಮಂಡಳಿ
ವೇಳಾಪಟ್ಟಿ ಬಿಡುಗಡೆ ದಿನಾಂಕಜನವರಿ 2022 (ತಾತ್ಕಾಲಿಕ)
ಪ್ರಾಯೋಗಿಕ ಪರೀಕ್ಷೆಯ ದಿನಾಂಕಫೆಬ್ರವರಿ 2022 (ತಾತ್ಕಾಲಿಕ)
ಪೂರ್ವಸಿದ್ಧತಾ ಪರೀಕ್ಷೆಯ ದಿನಾಂಕಮಾರ್ಚ್ 2022ರ ಕೊನೆಯ ವಾರ (ತಾತ್ಕಾಲಿಕ)
ಥಿಯರಿ ಪರೀಕ್ಷೆಯ ದಿನಾಂಕಗಳುಏಪ್ರಿಲ್ 2022ರ ಮೊದಲ ವಾರ (ತಾತ್ಕಾಲಿಕ)

ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್

ಅಧಿಕೃತ ವೆಬ್‌ಸೈಟ್ ಲಿಂಕ್

ದ್ವಿತೀಯ ಪಿಯುಸಿ 2022-23ನೇ ಸಾಲಿನ ಭೌತಶಾಸ್ತ್ರ ಪಠ್ಯಕ್ರಮದ ಪ್ರಮುಖ ಟಾಪಿಕ್‌ಗಳು

ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಭೌತಶಾಸ್ತ್ರ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಟಾಪಿಕ್‌ಗಳ ವಿವರಗಳನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ. 

ಅಧ್ಯಾಯ 1:  ವಿದ್ಯುದಾವೇಶಗಳು ಮತ್ತು ಕ್ಷೇತ್ರಗಳು (10 ಗಂಟೆಗಳು – 12 ಅಂಕಗಳು)

  • ವಿದ್ಯುತ್ ಆವೇಶ
  • ವಾಹಕಗಳು ಮತ್ತು ಅವಾಹಕಗಳು
  • ಪ್ರೇರಣೆಯಿಂದ ಆವೇಶಗೊಳಿಸುವುದು
  • ವಿದ್ಯುದಾವೇಶದ ಮೂಲ ಗುಣಲಕ್ಷಣಗಳು
  • ಕೂಲಂಬ್ ನಿಯಮ
  • ಬಹು ಆವೇಶಗಳ ನಡುವಿನ ಬಲಗಳು
  • ವಿದ್ಯುತ್ ಕ್ಷೇತ್ರ
  • ವಿದ್ಯುತ್ ಕ್ಷೇತ್ರೀಯ ರೇಖೆಗಳು
  • ವಿದ್ಯುತ್ ಅಭಿವಾಹ
  • ವಿದ್ಯುತ್ ದ್ವಿದ್ರುವ
  • ಏಕೂರೂಪ ಬಾಹ್ಯ ಕ್ಷೇತ್ರದಲ್ಲಿರುವ ದ್ವಿಧ್ರುವ
  • ನಿರಂತರ ಆವೇಶದ ವಿತರಣೆ
  • ಗಾಸ್‍ನ ನಿಯಮ
  • ಗಾಸ್ಸ್‍ನ ನಿಯಮದ ಅನ್ವಯಿಕೆಗಳು
  • ಏಕರೂಪವಾಗಿ ವಿದ್ಯುದಾವೇಶಿತವಾದ ಅನಂತ ಉದ್ದದ ನೇರ ತಂತಿಯಿಂದ ಉಂಟಾಗುವ ವಿದ್ಯುತ್ ಕ್ಷೇತ್ರ
  • ಏಕರೂಪ ವಿದ್ಯುದಾವೇಶಿತವಾದ ಅನಂತ ಸಮತಲ ಫಲಕದಿಂದ ಉಂಟಾಗುವ ವಿದ್ಯುತ್ ಕ್ಷೇತ್ರ

ಕೂಲಂಬ್ ನಿಯಮ: ಎರಡು ಬಿಂದು ಆವೇಶಗಳಾದ Q1 ಮತ್ತು Q2 ನಡುವಿನ ಸ್ಥಾಯಿ ವಿದ್ಯುತ್ ಬಲವು ಆ ಆವೇಶಗಳ ಗುಣಲಬ್ಧಕ್ಕೆ Q1Q2 ಅನುಲೋಮಾನುಪಾತವಾಗಿಯೂ ಹಾಗೂ ಅವುಗಳ ನಡುವಿನ ಅಂತರದ r21 ವರ್ಗಕ್ಕೆ ವಿಲೋಮಾನುಪಾತವಾಗಿಯೂ ಇರುತ್ತದೆ.
Q1 ನಿಂದ Q2ಮೇಲಿನ ಬಲ F21 K (Q1Q2)r221 ಇಲ್ಲಿ  Q1 ನಿಂದ Q2 ದಿಶೆಯಲ್ಲಿ ಇರುವ ಏಕಮಾನ ಸದಿಶವಾಗಿರುತ್ತದೆ ಹಾಗೂ k = 140 ಅನುಪಾತಿಕೆಯ ಸ್ಥಿರಾಂಕವಾಗಿರುತ್ತದೆ. 

SI ಮಾನದಲ್ಲಿ ಆವೇಶದ ಮಾನ ಕೂಲಂಬ್ ಆಗಿದೆ. 0 ನ ಪ್ರಾಯೋಗಿಕ ಮೌಲ್ಯವು  0 =  8.854 × 10-12 C2 N-1M-2.        K ಸರಿ ಸುಮಾರು ಮೌಲ್ಯ k = 9 ×109 Nm2c-2

ಅಧ್ಯಾಯ 2: ಸ್ಥಿರ ವಿದ್ಯುತ್ ವಿಭವ ಮತ್ತು ಧಾರಕತೆ (9 ಗಂಟೆಗಳು – 10 ಅಂಕಗಳು)

  • ವಿದ್ಯುತ್ ವಿಭವ
  • ಬಿಂದು ಆವೇಶದ ಕಾರಣ ಉಂಟಾದ ವಿಭವ
  • ವಿದ್ಯುತ್ ದ್ವಿಧೃವದಿಂದ ಉಂಟಾದ ವಿಭವ
  • ಆವೇಶಗಳ ಸಮೂಹದಿಂದ ಉಂಟಾದ ವಿಭವ
  • ಸಮವಿಭವ ಮೇಲ್ಮೈಗಳು
  • ಆವೇಶ ವ್ಯವಸ್ಥೆಯ ವಿಭವಶಕ್ತಿ
  • ಬಾಹ್ಯ ಕ್ಷೇತ್ರದಲ್ಲಿ ವಿಭವ ಶಕ್ತಿ
  • ವಾಹಕಗಳ ಸ್ಥಿರವಿದ್ಯುತ್ 67
  • ಪರಾವೈದ್ಯುತ (ಅವಾಹಕಗಳು) ಮತ್ತು ಧ್ರುವೀಕರಣ
  • ಧಾರಕಗಳು ಮತ್ತು ಧಾರಕತೆ
  • ಸಮಾಂತರ ಫಲಕ ಧಾರಕ
  • ಧಾರಕತೆಯ ಮೇಲೆ ಪರಾವೈದ್ಯುತ್‍ನ ಪ್ರಭಾವ
  • ಧಾರಕಗಳ ಸಂಯೋಜನೆ
  • ಧಾರಕದಲ್ಲಿ ಸಂಗ್ರಹವಾದ ಶಕ್ತಿ

ಅಧ್ಯಾಯ 3: ವಿದ್ಯುತ್ ಪ್ರವಾಹ (15 ಗಂಟೆಗಳು – 17 ಅಂಕಗಳು):

  • ವಿದ್ಯುತ್ ಪ್ರವಾಹ
  • ವಾಹಕಗಳಲ್ಲಿ ವಿದ್ಯುತ್ ಪ್ರವಾಹಗಳು
  • ಓಮ್‍ನ ನಿಯಮ
  • ಎಲೆಕ್ಟ್ರಾನ್‍ಗಳ ಮಂದ ವೇಗ ಮತ್ತು ರೋಧತೆಯ ಮೂಲ
  • ಓಮ್‍ನ ನಿಯಮದ ಮಿತಿಗಳು
  • ವಿವಿಧ ವಸ್ತುಗಳ ರೋಧತೆ
  • ರೋಧತೆಯ ಉಷ್ಣತಾ ಅವಲಂಬನೆ
  • ವಿದ್ಯುತ್ ಶಕ್ತಿ, ಸಾಮಥ್ರ್ಯ
  • ರೋಧಕಗಳ ಸಂಯೋಜನೆ-ಶ್ರೇಣಿ ಮತ್ತು ಸಮಾಂತರ
  • ಕೋಶಗಳು, ವಿದ್ಯುಚ್ಛಾಲಕ ಬಲ (ವಿಚ್ಛಾಬ), ಆಂತರಿಕ ರೋಧ
  • ಶ್ರೇಣಿಯಲ್ಲಿ ಮತ್ತು ಸಮಾಂತರದಲ್ಲಿ ಕೋಶಗಳು
  • ಕಿರ್ಖಾಫನ ನಿಯಮಗಳು
  • ವ್ಹೀಟ್‍ಸ್ಟನ್ ಸೇತುವೆ
  • ಮೀಟರ್ ಬ್ರಿಡ್ಜ್
  • ಪೊಟೆಂಶಿಯಾ ಮೀಟರ್

ಅಧ್ಯಾಯ 4: ಚಲಿಸುವ ಆವೇಶಗಳು ಮತ್ತು ಕಾಂತತೆ (12 ಗಂಟೆಗಳು – 14 ಅಂಕಗಳು) 

  • ಕಾಂತೀಯ ಬಲ
  • ಕಾಂತಕ್ಷೇತ್ರದಲ್ಲಿ ಚಲನೆ
  • ಸಂಯೋಜಿಸಿದ ವಿದ್ಯುತ್‍ಕ್ಷೇತ್ರ ಮತ್ತು ಕಾಂತಕ್ಷೇತ್ರಗಳಲ್ಲಿ ಚಲನೆ
  • ವಿದ್ಯುತ್ ಭಾಗಾಂಶದಿಂದಾದ ಕಾಂತಕ್ಷೇತ್ರ, ಬಯೋಟ್-ಸಾವರ್ಟ್ ನಿಯಮ
  • ವೃತ್ತಾಕಾರದ ವಿದ್ಯುತ್ಪ್ರವಾಹ ಹೊಂದಿರುವ ಕುಣಿಕೆಯ ಅಕ್ಷದ ಮೇಲಿನ ಕಾಂತಕ್ಷೇತ್ರ
  • ಆಂಪಿಯರ್‌ನ ವೃತ್ತೀಯ ನಿಯಮ (ಆಂಪಿಯರ್‌ನ ಸಕ್ರ್ಯೂಟಲ್ ನಿಯಮ)
  • ಉರುಳಿ ಸುರುಳಿ (ಸೊಲೆನೊಯ್ಡ್) ಮತ್ತು ಸುರುಳಿ ಬಳೆ (ಟೊರೊಯಿಡ್)
  • ಎರಡು ಸಮಾನಾಂತರ ವಿದ್ಯುತ್ಪ್ರವಾಹಗಳ ನಡುವಿನ ಬಲ – ಆಂಪಿಯರ್
  • ವಿದ್ಯುತ್ ಕುಣಿಕೆಯ ಮೇಲಿನ ಭ್ರಾಮಕ, ಕಾಂತೀಯ ದ್ವಿಧ್ರುವ
  • ಚಲಿಸುವ ಸುರುಳಿಯ ಗ್ಯಾಲ್ವನೋಮೀಟರ್

ಅಧ್ಯಾಯ 8: ದ್ಯುತಿ ಕಿರಣ ವಿಜ್ಞಾನ ಮತ್ತು ದ್ಯುತಿ ಉಪಕರಣಗಳು (10 ಗಂಟೆಗಳು – 12 ಅಂಕಗಳು)

  • ಗೋಳ ದರ್ಪಣದಲ್ಲಿ ಬೆಳಕಿನ ಪ್ರತಿಫಲನ, (ಪುನರಾವರ್ತನೆ) ದರ್ಪಣದ ಸಮೀಕರಣ
  • ವಕ್ರೀಭವನ
  • ಪೂರ್ಣಾಂತರಿಕ ಪ್ರತಿಫಲನ
  • ಗೋಳ ತಲದಲ್ಲಿ ಮತ್ತು ಮಸೂರಗಳಲ್ಲಿ ವಕ್ರೀಭವನ
  • ಪಟ್ಟಕದಲ್ಲಿ ಬೆಳಕಿನ ವಕ್ರೀಭವನ
  • ಸೂರ್ಯನ ಬೆಳಕಿನಿಂದಾಗುವ ಕೆಲವು ಸ್ವಾಭಾವಿಕ ಪರಿಣಾಮಗಳು
  • ಕಾಮನ ಬಿಲ್ಲು
  • ಬೆಳಕಿನ ಚದುರುವಿಕೆ – ಆಕಾಶದ ನೀಲಿ ಬಣ್ಣ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕೆಂಪು ಬಣ್ಣ
  • ಗೋಳ ದರ್ಪಣದಲ್ಲಿ ಬೆಳಕಿನ ಪ್ರತಿಫಲನ

ಅಧ್ಯಾಯ 9: ತರಂಗ ದ್ಯುತಿ ವಿಜ್ಞಾನ (10 ಗಂಟೆಗಳು – 12 ಅಂಕಗಳು)

  • ಹೈಗನ್‍ನ ತತ್ವ
  • ಹೈಗನ್ ತತ್ವ ಬಳಸಿ ಸಮತಲ ತರಂಗಗಳ ವಕ್ರೀಭವನ ಮತ್ತು ಪ್ರತಿಫಲನ
  • ತರಂಗಗಳ ಸಂಸಕ್ತ ಮತ್ತು ಅಸಂಸಕ್ತ ಸಂಕಲನ
  • ಬೆಳಕಿನ ತರಂಗಗಳ ವ್ಯತಿಕರಣ ಮತ್ತು ಯಂಗ್‍ನ ಪ್ರಯೋಗ
  • ವಿವರ್ತನೆ
  • ಏಕಸೀಳುಗಂಡಿ
  • ಏಕ ಸೀಳುಗಂಡಿಯ ವಿವರ್ತನೆಯ ವಿನ್ಯಾಸದ ಕಾಣುವಿಕೆ
  • ಸೂಕ್ಷ್ಮದರ್ಶಕದ ಮತ್ತು ಖಗೋಳ ದೂರದರ್ಶಕದ ಪೃಥಕ್ಕರಣ ಸಾಮರ್ಥ್ಯ
  • ದ್ಯುತಿ ಕಿರಣ ವಿಜ್ಞಾನದ ಕ್ರಮಬದ್ಧತೆ
  • ಧ್ರುವೀಕರಣ, ಸಮತಲ ಧ್ರುವೀಕೃತ ಬೆಳಕು, ಬ್ರೂಸ್ಟರ್‌ನ ನಿಯಮ, ಸಮತಲ ಧ್ರುವೀಕೃತ ಬೆಳಕು ಮತ್ತು ಪೋಲರಾಯ್ಡ್‌ಗಳ ಬಳಕೆ.

ಅಧ್ಯಾಯ 14: ಅರೆವಾಹಕ ಎಲೆಕ್ಟ್ರಾನಿಕ್ಸ್: ಸಾಮಾಗ್ರಿಗಳು ಸಾಧನಗಳು ಮತ್ತು ಸರಳ ಮಂಡಲಗಳು (10 ಗಂಟೆಗಳು – 12 ಅಂಕಗಳು)

  • ವಾಹಕತೆ ಆಧಾರದ ಮೇಲೆ : ಲೋಹಗಳು, ವಾಹಕಗಳು ಮತ್ತು ಅರೆವಾಹಕಗಳ ವರ್ಗೀಕರಣ
  • ಅಂತಸ್ಥ ಅರೆವಾಹಕ
  • ಬಾಹ್ಯಸ್ಥ ಅರೆವಾಹಕ
  • p-n ಸಂಧಿ
  • ಅರೆವಾಹಕ ಡಯೋಡು
  • ಸಂಧಿ ಡಯೋಡಿನ ಒಂದು ಉಪಯೋಗ ದಿಷ್ಪಿಕಾರಕ
  • ವಿಶೇಷ ಉದ್ದೇಶದ p-n ಸಂಧಿ ಡಯೋಡುಗಳು
  • ಜೀನಾರ್ ಡಯೋಡು ಮತ್ತು ಅದರ ಗುಣಗಳು, ವೋಲ್ಟತೆಯ ನಿಯಂತ್ರಕವಾಗಿ ಜೀನಾರ್ ಡಯೋಡು
  • ಆಪ್ಟೋ ಎಲೆಕ್ಟ್ರಾನಿಕ್ ಸಂಧಿಯ ಸಾಧನಗಳು
  • ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಲಾಜಿಕ್ ಗೇಟುಗಳು

ದ್ವಿತೀಯ ಪಿಯುಸಿ ಪರೀಕ್ಷೆ 2023ರ ಭೌತಶಾಸ್ತ್ರ ಪರೀಕ್ಷೆಯ ಅಧ್ಯಾಯ ಮತ್ತು ಅಂಕಗಳ ಹಂಚಿಕೆ

ದ್ವಿತೀಯ ಪಿಯುಸಿ ಭೌತಶಾಸ್ತ್ರದ ಪ್ರಮುಖ ಟಾಪಿಕ್‌ಗಳಿಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ದ್ವಿತೀಯ ಪಿಯುಸಿ ಭೌತಶಾಸ್ತ್ರದ ಪ್ರಾಯೋಗಿಕ ಪರೀಕ್ಷೆಗೆ ಸಂಬಂಧಿಸಿದಂತೆ ಮೌಖಿಕ  ಪರೀಕ್ಷೆ ಇರುತ್ತದೆಯೇ?

ಉತ್ತರ: ಹೌದು. ಭೌತಶಾಸ್ತ್ರ ಪ್ರಯೋಗಗಳಿಗೆ ಸಂಬಂಧಿಸಿದಂತೆ ಮೌಖಿಕ ಪರೀಕ್ಷೆಗೆ 4 ಅಂಕಗಳು ನಿಗದಿಪಡಿಸಲಾಗಿದೆ. ಪ್ರಯೋಗ ಮಾಡಲು 20 ಅಂಕಗಳು, ಪ್ರಾಯೋಗಿಕ ರೆಕಾರ್ಡ್‌ಗೆ 6 ಅಂಕಗಳು. ಒಟ್ಟು 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತದೆ.

ಪ್ರ. 2: ಮೌಖಿಕ ಪರೀಕ್ಷೆಯಲ್ಲಿ (Viva-Voce) ಎಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ?

ಉತ್ತರ: ಮೌಖಿಕ ಪರೀಕ್ಷೆಯಲ್ಲಿ ನಾಲ್ಕು ಪ್ರಶ್ನೆಗಳಿರುತ್ತವೆ, ಪ್ರತಿಯೊಂದೂ ಒಂದು ಅಂಕವನ್ನು ಹೊಂದಿರುತ್ತದೆ. ಮೌಖಿಕ ಪರೀಕ್ಷೆಯ ಪ್ರಶ್ನೆಗಳು ಸರಳವಾಗಿರುತ್ತವೆ, ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತವೆ ಮತ್ತು ವಿದ್ಯಾರ್ಥಿಯ ಪ್ರಯೋಗಕ್ಕೆ ಸಂಬಂಧಿಸಿರುತ್ತವೆ.

ಪ್ರ. 3: ಭೌತಶಾಸ್ತ್ರದ ಪ್ರಾಯೋಗಿಕ ಪರೀಕ್ಷೆಯ ಕಾಲಾವಧಿ ಎಷ್ಟು?

ಉತ್ತರ: ಪ್ರಾಯೋಗಿಕ ಪರೀಕ್ಷೆಯ ಕಾಲಾವಧಿ 2 ಗಂಟೆಗಳು. ಗರಿಷ್ಠ ಅಂಕಗಳು 30 ಅಂಕಗಳು. ಪ್ರಾಯೋಗಿಕ ಪರೀಕ್ಷೆಯಲ್ಲಿ 10 ವಿಭಿನ್ನ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. 

ಪ್ರ. 4: ದ್ವಿತೀಯ ಪಿಯುಸಿ ಭೌತಶಾಸ್ತ್ರದಲ್ಲಿ 5 ಅಂಕದ ಎಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ?

ಉತ್ತರ: ದ್ವಿತೀಯ ಪಿಯುಸಿ ಭೌತಶಾಸ್ತ್ರದಲ್ಲಿ 5 ಅಂಕ ಒಟ್ಟು 15 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವುಗಳಲ್ಲಿ  8 ಪ್ರಶ್ನೆಗಳು ದೀರ್ಘ ಉತ್ತರ ಬಯಸುವಂತಹವು. ಇನ್ನುಳಿದ 7 ಪ್ರಶ್ನೆಗಳು ಸಂಖ್ಯಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿರುತ್ತವೆ.

ಪ್ರ. 5: ಐದು ಅಂಕದ ಪ್ರಶ್ನೆಗಳನ್ನು ಯಾವ ಅಧ್ಯಾಯಗಳಿಂದ ಕೇಳಲಾಗುತ್ತದೆ?

ಉತ್ತರ: ಐದು ಅಂಕದ ಪ್ರಶ್ನೆಗಳನ್ನು ಈ ಕೆಳಕಂಡ ಅಧ್ಯಾಯಗಳಿಂದ ಕೇಳಲಾಗುತ್ತದೆ.

  • ವಿದ್ಯುದಾವೇಶಗಳು ಮತ್ತು ಕ್ಷೇತ್ರಗಳು
  • ವಿದ್ಯುತ್ ಪ್ರವಾಹ
  • ಚಲಿಸುವ ಆವೇಶಗಳು ಮತ್ತು ಕಾಂತತೆ 
  • ಪರ್ಯಾಯಕ ವಿದ್ಯುತ್ಪ್ರವಾಹ
  • ದ್ಯುತಿ ಕಿರಣ ವಿಜ್ಞಾನ ಮತ್ತು ದ್ಯುತಿ ಉಪಕರಣಗಳು
  • ವಿಕಿರಣ ಮತ್ತು ದ್ರವ್ಯದ ದ್ವೈತ ಸ್ವಭಾವ
  • ಅರೆವಾಹಕ ಎಲೆಕ್ಟ್ರಾನಿಕ್ಸ್: ಸಾಮಾಗ್ರಿಗಳು ಸಾಧನಗಳು ಮತ್ತು ಸರಳ ಮಂಡಲಗಳು

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23: ಭೌತಶಾಸ್ತ್ರದ ಪ್ರಮುಖ ಟಾಪಿಕ್‌ಗಳು” ಒಂದು ಮಾಹಿತಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ