• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 07-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ಸಿದ್ಧತಾ ಸಲಹೆಗಳು

img-icon

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತಾ ಸಲಹೆಗಳು: ನಾವು ಯಾವುದೇ ಕಾರ್ಯವನ್ನು ಅಥವಾ ಯೋಜನೆಯನ್ನು ಪೂರ್ವ ತಯಾರಿಯಿಲ್ಲದೆ ಪೂರ್ಣಗೊಳಿಸಲು ಅಥವಾ ಸಾಧಿಸಲು ಸಾಧ್ಯವಿಲ್ಲ. ಅಂತೆಯೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿಬೇಕೆಂದರೆ, ಆ ಗುರಿ ಮುಟ್ಟಲು ಸಾಕಷ್ಟು ಪೂರ್ವ ಸಿದ್ಧತೆಯ ಅಗತ್ಯವಿದೆ. 

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವದ ಅತಿ ಮುಖ್ಯ ಘಟ್ಟ. ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ತಮ್ಮ ಪರೀಕ್ಷಾ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ತರಗತಿಯ ವಿಷಯಗಳೊಂದಿಗೆ ಏಕಕಾಲದಲ್ಲಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು, ಪುನರವಲೋಕನಕ್ಕೆ ಸಾಕಷ್ಟು ಸಮಯವನ್ನು ಹೊಂದಿರುವುದು ಮತ್ತು ಇತರ ವಿಷಯಗಳಲ್ಲಿನ ಸಂಶಯಗಳನ್ನು ಉಪನ್ಯಾಸಕರೊಂದಿಗೆ ಚರ್ಚಿಸಿ, ಮನದಟ್ಟು ಮಾಡಿಕೊಳ್ಳುವುದು ವಿವಿಧ ರೀತಿಯಲ್ಲಿ ಪ್ರಯೋಜನವಾಗುತ್ತದೆ.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಏಪ್ರಿಲ್‌-ಮೇ ತಿಂಗಳಿನಲ್ಲಿ ನಡೆಸಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಉತ್ತಮವಾಗಿ ಬರೆಯಲು ಅಗತ್ಯವಾದ ಸಿದ್ಧತಾ ಸಲಹೆಗಳು ಮತ್ತು ತಂತ್ರಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ವಿಸ್ತೃತ ಅಧ್ಯಯನ ಯೋಜನೆ

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಈ ವಿವರವಾದ ಅಧ್ಯಯನ ಯೋಜನೆಯು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಪರೀಕ್ಷೆಗೆ ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಕೆಳಗಿನ ಅಂಶಗಳನ್ನು ಅನುಸರಿಸಬಹುದು.

ಟಿಪ್ಪಣಿ ಮಾಡಿಕೊಳ್ಳಿ

ಪ್ರತಿಯೊಂದು ವಿಷಯಕ್ಕೂ ಪ್ರಮುಖವಾದ ಎಲ್ಲಾ ಸೂತ್ರಗಳು, ವ್ಯಾಖ್ಯೆಗಳು ಮತ್ತು ಕೀ ಅಂಶಗಳ ಪಟ್ಟಿಯನ್ನು ಮಾಡಿಕೊಳ್ಳಿ. ಓದುವಾಗ ಮನಸ್ಸಿಗೆ ಬರುವ ಎಲ್ಲವನ್ನೂ ಟಿಪ್ಪಣಿ ಮಾಡಿಕೊಳ್ಳಬೇಡಿ. ಯಾವುದನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ತಿರಸ್ಕರಿಸಬೇಕು ಎಂಬುದನ್ನು ನೀವು ಪ್ರತ್ಯೇಕಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಪ್ರತಿ ವಿಷಯಕ್ಕೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಸರಳವಾಗಿ ಪರಿಶೀಲಿಸಿ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಪದೇ ಪದೇ ಕೇಳಲಾಗುವ ವಿಷಯಗಳ ಪಟ್ಟಿಯನ್ನು ಮಾಡಿ. ಕೊನೆಯ ಕ್ಷಣದಲ್ಲಿ ಪುನರವಲೋಕನ ಮಾಡಲು ಟಿಪ್ಪಣಿಗಳನ್ನು ಮಾಡಿಕೊಳ್ಳುವುದು ತುಂಬಾ ಉಪಯುಕ್ತವಾಗಿದೆ.

ದೀರ್ಘ ಉತ್ತರಗಳನ್ನು ಬರೆದು ಕಲಿಯಿರಿ

ಸುದೀರ್ಘ ಉತ್ತರಗಳು/ಟಾಪಿಕ್‍ಗಳನ್ನು ಅಧ್ಯಯನ ಮಾಡುವಾಗ, ವಿದ್ಯಾರ್ಥಿಗಳಿಗೆ ಸ್ವಲ್ಪ ಭಯ, ಆತಂಕ ಇದ್ದೇ ಇರುತ್ತದೆ. ಆದ್ದರಿಂದ, ಮುಂಚಿತವಾಗಿ ದೀರ್ಘ ವಿವರಣೆಗಳನ್ನು ಓದುವ ತಂತ್ರವನ್ನು ಮಾಡಿ. ಕಲಿಯಲು, ಅವುಗಳನ್ನು ಸಣ್ಣ ಭಾಗಗಳಾಗಿ ವಿಭಜಿಸಿ ಅಥವಾ ಬರೆಯಿರಿ. ಇದು ದೀರ್ಘಕಾಲದವರೆಗೆ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನಿಮ್ಮ ಮೆದುಳಿಗೆ ಸಹಾಯ ಮಾಡುತ್ತದೆ.

ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ

ಹೆಚ್ಚು ಗಂಟೆಗಳ ಕಾಲ ಕುಳಿತು ಅಧ್ಯಯನ ಮಾಡಬೇಡಿ ಏಕೆಂದರೆ ಇದು ನಿಮ್ಮ ಏಕಾಗ್ರತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಯೋಜಿತ ಮತ್ತು ಸರಿಯಾದ ವಿರಾಮಗಳನ್ನು ತೆಗೆದುಕೊಳ್ಳುವುದು ಜ್ಞಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಿಮಗೆ ಸೂಕ್ತವಾದ ಅಧ್ಯಯನ ದಿನಚರಿಯನ್ನು ತಯಾರಿಸಿ. ಇದು ನೀವು ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. 

ವೇಳಾಪಟ್ಟಿಯನ್ನು ತಯಾರಿಸಿ, ಅದನ್ನು ಪಾಲಿಸಿ

ನೀವು ಮುಂಜಾನೆ ವೇಳೆ ಅಧ್ಯಯನ ಮಾಡುವವರಾಗಿದ್ದರೆ ಅಥವಾ ನೀವು ರಾತ್ರಿಯಲ್ಲಿ ಅಧ್ಯಯನ ಮಾಡಲು ಬಯಸಿದರೆ ಅದಕ್ಕೆ ತಕ್ಕಂತೆ ನಿಮ್ಮ ಅಧ್ಯಯನ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ವಿಷಯವಾರು ಕಲಿಕೆಯ ಅಭ್ಯಾಸವನ್ನು ಅಭಿವೃದ್ಧಿಪಡಿಸಿ ಮತ್ತು ಎಲ್ಲಾ ವಿಷಯಗಳೊಂದಿಗೆ ಪರಿಚಿತರಾಗಿರಿ.

ಪರೀಕ್ಷೆಯ ತಯಾರಿಯನ್ನು ಪ್ರಾರಂಭಿಸಲು ಸೂಕ್ತವಾದ ಸಮಯವನ್ನು ಆರಿಸಿ

ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಅಧ್ಯಯನ ಮತ್ತು ತಿಳುವಳಿಕೆಯ ಮಟ್ಟವನ್ನು ಹೊಂದಿರುತ್ತಾರೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ಸಿದ್ಧತೆಗಳನ್ನು ಆರಂಭಿಸಿಕೊಳ್ಳಬಹುದು. ಸಮರ್ಥ ತಯಾರಿಗಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿಗಳು ಮತ್ತು ಪಠ್ಯಕ್ರಮದೊಂದಿಗೆ ಪರಿಚಿತರಾಗಿರಿ.

ಸಮಯ ನಿರ್ವಹಣೆ

ನಿಮ್ಮ ಪರೀಕ್ಷಾ ಸಿದ್ಧತೆಯಲ್ಲಿ ಯಾವ ವಿಷಯಗಳಿಗೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ನಿರ್ಣಯಿಸುವುದು ಇಲ್ಲಿ ಬಹಳ ಮುಖ್ಯ. ಪರೀಕ್ಷೆಯ ತಯಾರಿಯಲ್ಲಿ ಪ್ರತಿದಿನ ಪ್ರತಿಯೊಂದು ವಿಷಯಕ್ಕೂ ಸಮಾನ ಸಮಯವನ್ನು ನೀಡಿ. ಇದು ಬೇಸರವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಪಠ್ಯಕ್ರಮವನ್ನು ಯೋಜಿತ ಸಮಯಕ್ಕೆ ಮತ್ತು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಎಲ್ಲಾ ವಿಷಯಗಳ ಅಧ್ಯಯನಕ್ಕೆ ಸಮಯವನ್ನು ನಿಗದಿಪಡಿಸಲು ಮರೆಯಬೇಡಿ.

ಗುಂಪು ಅಧ್ಯಯನ ಮಾಡಿ

ಕೆಲವೊಮ್ಮೆ ನಾವು ಪುಸ್ತಕದಲ್ಲಿ ಹಲವು ಬಾರಿ ಓದಿದರೂ ಅರ್ಥವಾಗದ ಟಾಪಿಕ್‌ಗಳು, ಸ್ನೇಹಿತರೊಂದಿಗೆ ಚರ್ಚಿಸಿದಾಘ ಅಥವಾ ಗುಂಪು ಅಧ್ಯಯನ(ಗ್ರೂಪ್‌ ಸ್ಟಡಿ)ಗಳಿಂದ ಸುಲಭವಾಗಿ ಮನದಟ್ಟಾಗುತ್ತವೆ. ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರೂ ಒಂದೊಂದು ಅಂಶಗಳನ್ನು ವಿವರಿಸುವುದರಿಂದ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ಹಿಂದಿನ ವರ್ಷಗಳ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ

ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದು ಪರೀಕ್ಷಾ ಸಿದ್ಧತೆಯ ಸಂದರ್ಭದಲ್ಲಿ ಬಹಳ ಮುಖ್ಯ. ಈ ಮೂಲಕ ನೀವು ಪೂರ್ಣಗೊಳಿಸಿದ ಪ್ರತಿಯೊಂದು ವಿಷಯವನ್ನು ಅಭ್ಯಾಸ ಮಾಡಬಹುದು. ನೀವೇ ಸಮಯ ನಿಗದಿಪಡಿಸಿಕೊಳ್ಳಿ ಮತ್ತು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಪ್ರಯತ್ನಿಸಿ. ಈ ಅಭ್ಯಾಸದಿಂದಾಗಿ ನಿಮಗೆ ಮುಖ್ಯ ಪರೀಕ್ಷೆಯಲ್ಲಿ ಉತ್ತರಗಳ ಪರಿಷ್ಕರಣೆಗೂ ಸಮಯ ಉಳಿಯುತ್ತದೆ.

ಪಾಠಗಳು ಮತ್ತು ಟಾಪಿಕ್‌ಗಳನ್ನು ಅರ್ಥಮಾಡಿಕೊಂಡು ಕಲಿಯಿರಿ

ವಿದ್ಯಾರ್ಥಿಗಳು ಯಾವುದೇ ಪರಿಕಲ್ಪನೆಯನ್ನು ಅಥವಾ ಟಾಪಿಕ್‌ ಅನ್ನು ಬಾಯಿಪಾಠ ಮಾಡವುದು ಸರಿಯಾದ ಅಧ್ಯಯನ ಕ್ರಮವಲ್ಲ. ಹಾಗಾಗಿ, ಪರಿಕಲ್ಪನೆಗಳನ್ನು ಗ್ರಹಿಸಲು ಪ್ರಯತ್ನಿಸಿ. ಅರ್ಥವಾಗದಿದ್ದಲ್ಲಿ ಉಪನ್ಯಾಸಕರ ಬಳಿ ಮತ್ತೊಮ್ಮೆ ವಿವರಿಸಲು ಮನವಿ ಮಾಡಿ. ಇದು ಸೂಕ್ತ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತದೆ.

ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಠ್ಯಪುಸ್ತಕಗಳನ್ನೇ ಓದಿ

ಕೊನೆಯದಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಒದಗಿಸಿದ ಪಠ್ಯ ಪುಸ್ತಕಗಳನ್ನೇ ಅಧ್ಯಯನಕ್ಕಾಗಿ ಬಳಸಿ. ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲಾ ಪ್ರಶ್ನೆಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕಗಳಿಂದಲೇ ಕೇಳಲಾಗುತ್ತದೆ ಎಂಬುದನ್ನು ನೆನಪಿಡಿ. ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪಠ್ಯಪುಸ್ತಕಗಳೇ ಅತ್ಯುತ್ತಮ ಆಕರಳಾಗಿವೆ. ಆದ್ದರಿಂದ ಅವುಗಳನ್ನು ಪೂರ್ಣ ಅಧ್ಯಯನ ಅತಿ ಮುಖ್ಯ.

ಸ್ವಯಂ ಮೌಲ್ಯಮಾಪನದಲ್ಲಿ ತೊಡಗಿಸಿಕೊಳ್ಳಿ

ಸ್ವಯಂ ಮೌಲ್ಯಮಾಪನವು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವುದರಿಂದ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ವಿಷಯ ಮತ್ತು ಅಧ್ಯಾಯದಲ್ಲಿ ಅಭ್ಯಾಸ ಮಾಡಲು ಮತ್ತು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಛಿಸಿದಲ್ಲಿ  Embibeನ ಮುಖಪುಟದಲ್ಲಿರುವ ಸರ್ಚ್‌ ಬಾಕ್ಸ್‌ನಲ್ಲಿ ನೀವು ಅಭ್ಯಾಸ ಮಾಡಲು ಬಯಸುವ ವಿಷಯ/ಅಧ್ಯಾಯದ ಹೆಸರನ್ನು ಟೈಪ್ ಮಾಡುವ ಮೂಲಕ ನಿಮ್ಮ ಅಭ್ಯಾಸ ಅಥವಾ ಪರೀಕ್ಷೆಯನ್ನು ನೀವು ಪ್ರಾರಂಭಿಸಬಹುದು.

ದ್ವಿತೀಯ ಪಿಯುಸಿ 2023 ಪರೀಕ್ಷೆಯ ಸಿದ್ಧತೆಗೆ ಸಂಬಂಧಿಸಿದಂತೆ FAQಗಳು

ಪ್ರ. 1. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಲು ಯಾವ ರೀತಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು?

ಉತ್ತರ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ತಯಾರಿ ಸಲಹೆಗಳು:

  • ಸರಿಯಾದ ವೇಳಾಪಟ್ಟಿಯನ್ನು ಅನುಸರಿಸಿ. ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳಿ, ಸಂತುಲಿತ ಆಹಾರ ಸೇವಿಸಿ,  ಅಧ್ಯಯನ ಪ್ರಾರಂಭಿಸಿ. 
  • ನಿಮ್ಮ ಆಹಾರ ಇತಮಿತವಾಗಿರಲಿ. ನಿಮ್ಮ ಮೆದುಳನ್ನು ಆದಷ್ಟು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಿ  ಮತ್ತು ಅನಗತ್ಯ  ಆಲೋಚನೆಗಳಿಂದ ಹೊರೆಯನ್ನು ಹೆಚ್ಚು ಮಾಡಿಕೊಳ್ಳಬೇಡಿ.
  • ಆಟ ಮತ್ತು ಅಧ್ಯಯನದೊಂದಿಗೆ ನಿಮ್ಮ ದಿನವನ್ನು ಉತ್ತಮ ರೀತಿಯಲ್ಲಿ ಯೋಜಿಸಿಕೊಳ್ಳಿ.
  • ಮಾದರಿ ಪತ್ರಿಕೆಗಳನ್ನು ಪರಿಹರಿಸಿ.
  • ವಿಶ್ರಾಂತಿ ಪಡೆಯುವ ಕಲೆಯನ್ನು ಅಭ್ಯಾಸ ಮಾಡಿ.

ಪ್ರ. 2. ನೇಮಕಾತಿಗಳಲ್ಲಿ ದ್ವಿತೀಯ ಪಿಯುಸಿ ಅಂಕಗಳು ಮುಖ್ಯವೇ?

ಉತ್ತರ: ಉದ್ಯೋಗದ ಸಮಯದಲ್ಲಿ ನಿಮ್ಮ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಂಕಗಳು ಸಂದರ್ಶನಕ್ಕೆ ಅರ್ಹತೆ ಪಡೆಯಲು ಕಂಪನಿಗಳು ನಿಗದಿಪಡಿಸಿದ ಅಂಕಗಳು ನಿರ್ದಿಷ್ಟ ಕಂಪನಿಗಳಿಗೆ ಮಾತ್ರ ನಿಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ. ಉದ್ಯೋಗ ಅಥವಾ ಅವಕಾಶ ಪಡೆಯುವುದು ನಿಮ್ಮ ಸ್ನಾತಕೋತ್ತರ ಅಧ್ಯಯನದ ಸಮಯದಲ್ಲಿ ನೀವು ಗಳಿಸುವ ಕೌಶಲ್ಯಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. 

ಪ್ರ. 3. ದ್ವಿತೀಯ ಪಿಯುಸಿಯನ್ನು ಪುನರಾವರ್ತಿಸುವುದು ಉತ್ತಮ ಆಯ್ಕೆಯೇ?

ಉತ್ತರ: ಸೈದ್ಧಾಂತಿಕವಾಗಿ, ಹೌದು! ನೀವು ಅದೇ ಅಥವಾ ಬೇರೆ ಬೋರ್ಡ್‌ನಲ್ಲಿ 12 ನೇ ಪರೀಕ್ಷೆಗಳಿಗೆ ಮತ್ತೆ ಕಾಣಿಸಿಕೊಳ್ಳಬಹುದು ಮತ್ತು ನಿಮ್ಮ ಶೇಕಡಾವನ್ನು ಸುಧಾರಿಸಬಹುದು. ನಿಮ್ಮ ಶೇಕಡಾವಾರು ಪ್ರಮಾಣವನ್ನು ಸುಧಾರಿಸುವುದು ಒಂದೇ ಮಾನದಂಡವಾಗಿದ್ದರೆ, ನಿಮ್ಮ ಆಯ್ಕೆಯ ಪದವಿ ಕೋರ್ಸ್‌ಗೆ ದಾಖಲಾಗುವುದನ್ನು ಮತ್ತು NIOS ನಿಂದ 12 ನೇ ತರಗತಿಯನ್ನು ಪುನರಾವರ್ತಿಸುವುದನ್ನು ಸಹ ನೀವು ಪರಿಗಣಿಸಬಹುದು.

ಪ್ರ. 4. ದ್ವಿತೀಯ ಪಿಯುಸಿಗೆ ಉತ್ತಮ ಅಧ್ಯಯನ ದಿನಚರಿ ಯಾವುದು?

ಉತ್ತರ: ವಿದ್ಯಾರ್ಥಿಗಳು ಈ ಪುಟದಲ್ಲಿ ಒದಗಿಸಲಾದ ಅಧ್ಯಯನ ವೇಳಾಪಟ್ಟಿಯನ್ನು ಅನುಸರಿಸಬಹುದು ಮತ್ತು ನೀವು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ.

ಪ್ರ. 5. ದಿನಕ್ಕೆ ಎಷ್ಟು ಗಂಟೆ ನಿದ್ದೆ ಅಗತ್ಯ?

ಉತ್ತರ: ನಿಮ್ಮ ಮನಸ್ಸು ಹಗುರವಾಗಿರಬೇಕು ಎಂದರೆ, ಪ್ರತಿ ದಿನ ಏಕಾಗ್ರತೆಯಿಂದ ಓದಬೇಕು ಎಂದರೂ, ನಿತ್ಯ ಕನಿಷ್ಠ 6 ಗಂಟೆಗಳ ನಿದ್ದೆ ಅಗತ್ಯ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಇದರಿಂದ ಆಲಸ್ಯ, ದಣಿವು ಹೆಚ್ಚಾಗಿ ಪರೀಕ್ಷೆಗಳನ್ನು ಎದುರಿಸುವುದು ಕಷ್ಟಕರವಾಗುತ್ತದೆ. 

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ಸಿದ್ಧತಾ ಸಲಹೆಗಳು ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ ಸಿದ್ಧತಾ ಸಲಹೆಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ