• ಲೇಖಕರು Ramachandra M
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಫಲಿತಾಂಶ 2023: ಸ್ಥೂಲ ಮಾಹಿತಿ

img-icon

2023ರ ದ್ವಿತೀಯ ಪಿಯುಸಿ ಫಲಿತಾಂಶ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದು, 2023ರ ಜೂನ್ ತಿಂಗಳಲ್ಲಿ ಫಲಿತಾಂಶ ಪ್ರಕಟ ಮಾಡಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲೇ ಫಲಿತಾಂಶವನ್ನು ಪ್ರಕಟಿಸುತ್ತದೆ. 2022- 23ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು 2023ರ ಏಪ್ರಿಲ್‌ನಿಂದ ಮೇ ತನಕ ನಡೆಯಲಿವೆ. ಬಳಿಕ ಮೌಲ್ಯಮಾಪನ ಕಾರ್ಯ ನಡೆದು ಜೂನ್ ತಿಂಗಳ ಮಧ್ಯಭಾಗದಲ್ಲಿ ಫಲಿತಾಂಶ ಹೊರಬೀಳಲಿದೆ.

2022ರಲ್ಲಿ ಏಪ್ರಿಲ್ 22 ರಿಂದ ಮೇ 18ರ ತನಕ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 1,076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 81 ಕೇಂದ್ರಗಳಲ್ಲಿ ಒಟ್ಟಾರೆ 17,691 ಮಂದಿ ಮೌಲ್ಯಮಾಪಕರಿಂದ ಮೌಲ್ಯಮಾಪನ ನಡೆದಿತ್ತು. ಜೂನ್ 18ರಂದು ಫಲಿತಾಂಶ ಪ್ರಕಟಗೊಂಡಿತ್ತು. 

2023ರ ದ್ವಿತೀಯ ಪಿಯುಸಿ ಫಲಿತಾಂಶದ ನಿಖರ ದಿನಾಂಕವು ಪರೀಕ್ಷೆ ಮುಕ್ತಾಯಗೊಂಡ ಬಳಿಕ ಘೋಷಿಸಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಮೇ ತಿಂಗಳ ಕೊನೆ ವಾರದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಫಲಿತಾಂಶದ ದಿನಾಂಕವನ್ನು ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಲೇಖನದಲ್ಲಿ ನೀವು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023ಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಲಿದ್ದೀರಿ.

2023 ರ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ: ಒಂದು ನೋಟ

ಇನ್ನಷ್ಟು ವಿವರಗಳನ್ನು ನೋಡುವ ಮುನ್ನ, 2023ರ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕದ ಮೇಲೆ ಒಂದು ನೋಟ ಬೀರೋಣ: 

ಮಂಡಳಿ ಹೆಸರುಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ
ಪರೀಕ್ಷೆ ಹೆಸರುದ್ವಿತೀಯ ಪಿಯುಸಿ ಪರೀಕ್ಷೆ 2023
ವಿಭಾಗಗಳ ಹೆಸರುಕಲೆ, ವಾಣಿಜ್ಯ ಮತ್ತು ವಿಜ್ಞಾನ
ಶೈಕ್ಷಣಿಕ ವರ್ಷ2022-23
ಪರೀಕ್ಷೆ ವಿಧವಾರ್ಷಿಕ ಪರೀಕ್ಷೆ
ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕಏಪ್ರಿಲ್ – ಮೇ 2023 (ಅಧಿಕೃತ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕು)
ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕಜೂನ್ 2023 (ಅಧಿಕೃತ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕು)
ಮಂಡಳಿಯ ಅಧಿಕೃತ ವೆಬ್‌ಸೈಟ್ಲಿಂಕ್
ಫಲಿತಾಂಶದ ಅಧಿಕೃತ ವೆಬ್‌ಸೈಟ್ಲಿಂಕ್

2023ರ ದ್ವಿತೀಯ ಪಿಯುಸಿ ಫಲಿತಾಂಶ ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

2023ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಹಂತ 1: ಕರ್ನಾಟಕ ಪರೀಕ್ಷಾ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್
  • ಹಂತ 2: ಮುಖಪುಟದಲ್ಲಿ, “ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಣೆ” ಎಂದು ಬರೆದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ಹಾಗೆ ಕ್ಲಿಕ್ ಮಾಡಿದಾಗ ನಿರ್ದೇಶಿತಗೊಂಡ ಪುಟದಲ್ಲಿ ನಿಮ್ಮ “ನೋಂದಣಿ ಸಂಖ್ಯೆ”  ನಮೂದಿಸಿ.
  • ಹಂತ 4: ಕೆಳಗಡೆ “ಸೆಲೆಕ್ಟ್ ಸಬ್ಜೆಕ್ಟ್” ಕಾಣಿಸುತ್ತದೆ, ಅಲ್ಲಿ ನಿಮ್ಮ ವಿಭಾಗ(ವಿಜ್ಞಾನ/ಕಲೆ/ವಾಣಿಜ್ಯ)ವನ್ನು ಆಯ್ಕೆ ಮಾಡಿ.
  • ಹಂತ 5: “ಸಬ್‌ಮಿಟ್” ಬಟನ್ ಕ್ಲಿಕ್ ಮಾಡಿ. 
  • ಹಂತ 6: ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ 2023 ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
  • ಹಂತ 7: ಭವಿಷ್ಯದ ಪರಾಮರ್ಶನಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಸೇವ್ ಮಾಡಿ.

2023ರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಎಸ್‌ಎಂಎಸ್ ಮೂಲಕ ಪರಿಶೀಲಿಸುವುದು ಹೇಗೆ? 

ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಅಭ್ಯರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಎಸ್‌ಎಂ‌ಎಸ್ ಮೂಲಕವೂ ಪರಿಶೀಲಿಸಬಹುದು. ಎಸ್‌ಎಂಎಸ್‌ ಮೂಲಕ 2023 ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  •  ಹಂತ 1: ನಿಮ್ಮ ಮೊಬೈಲ್ ಫೋನ್‌‍ನಲ್ಲಿ ಎಸ್ಎಂಎಸ್ ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಹಂತ 2: ಈಗ, “KAR12<Registration Number>” ಎಂಬುದಾಗಿ ಟೈಪ್ ಮಾಡಿ (Registration Number ಇರುವಲ್ಲಿ ಅದರ ಬದಲು ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ).
  • ಹಂತ 3: ಆ ಮೆಸೇಜ್ ಅನ್ನು 56263 ಗೆ ಕಳುಹಿಸಿ.
  • ಹಂತ 4: ನಿಮ್ಮ ಮೊಬೈಲ್ ಫೋನ್‌ಗೆ 2023ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೂಡಲೇ ಸ್ವೀಕರಿಸುತ್ತೀರಿ. 

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಮೂದಿಸಲಾಗುವ ವಿವರಗಳು

ಈ ಕೆಳಗಿನ ವಿವರಗಳನ್ನು 2023 ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಮೂದಿಸಲಾಗುತ್ತದೆ:  

  • ಅಭ್ಯರ್ಥಿಯ ಹೆಸರು
  • ರೋಲ್ ನಂಬರ್
  • ತಂದೆಯ ಹೆಸರು
  • ವಿಭಾಗ
  • ಕನಿಷ್ಠ ಅಂಕಗಳು
  • ಥಿಯರಿ ಪರೀಕ್ಷೆಯಲ್ಲಿ ಪಡೆದ ಅಂಕಗಳು
  • ಪ್ರ್ಯಾಕ್ಟಿಕಲ್‌ ಪರೀಕ್ಷೆಯಲ್ಲಿ ಪಡೆದ ಅಂಕಗಳು
  • ಒಟ್ಟು ಅಂಕಗಳು
  • ಪಡೆದ ಗ್ರೇಡ್
  • ಫಲಿತಾಂಶ ಸ್ಥಾನಮಾನ

2023ರ ದ್ವಿತೀಯ ಪಿಯುಸಿ ಫಲಿತಾಂಶ ಮರುಮೌಲ್ಯಮಾಪನಕ್ಕೆ ಅರ್ಜಿ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದ ಬಗ್ಗೆ ತೃಪ್ತಿಯಾಗದ ಅಭ್ಯರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಅಥವಾ ಪೂರಕ ಪರೀಕ್ಷೆಯನ್ನು ಬರೆಯಬಹುದು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಪರಿಶೀಲಿಸಿಕೊಳ್ಳಬಹುದು. ಆ ವೇಳೆ ಮೌಲ್ಯಮಾಪನದ ಬಗ್ಗೆ ಆಕ್ಷೇಪವಿದ್ದರೆ, ಅಭ್ಯರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

  • ಹಂತ 1: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್
  • ಹಂತ 2: ಹೋಂ ಪುಟದಲ್ಲಿ, “ಅಪ್ಲಿಕೇಶನ್ ಫಾರ್ ಸ್ಕ್ಯಾನ್ಡ್ ಕಾಪೀಸ್, ರಿ-ಇವಾಲ್ಯುವೇಶನ್” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ‘ಆನ್‌ಲೈನ್ ಅಪ್ಲಿಕೇಶನ್’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 4: ನಂತರ, ‘ಅಪ್ಲಿಕೇಶನ್ ಫಾರ್ ಸ್ಕ್ಯಾನ್ ಕಾಪಿ‘ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 5: ನಿಮ್ಮ ‘ನೋಂದಣಿ ಸಂಖ್ಯೆ’ ನಮೂದಿಸಿ
  • ಹಂತ 6: ನಿಮಗೆ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಯಾಕೆ ಬೇಕಾಗಿದೆ ಎಂಬುದಕ್ಕೆ ಕಾರಣವನ್ನು ನಮೂದಿಸಿ.
  • ಹಂತ 7: ನಿಮ್ಮ ‘ಇಮೇಲ್ ಐಡಿ’ ನಮೂದಿಸಿ.
  • ಹಂತ 8: ‘ಸಬ್‌ಮಿಟ್’ ಮೇಲೆ ಕ್ಲಿಕ್ ಮಾಡಿ.
  • ಹಂತ 9: ಶುಲ್ಕ ಪಾವತಿ ಲಿಂಕ್ ಜನರೇಟ್ ಆಗುತ್ತದೆ. ಶುಲ್ಕ ಪಾವತಿಸಿದ ಬಳಿಕ “ಫೈನಲ್ ಸಬ್‌ಮಿಟ್” ಮೇಲೆ ಕ್ಲಿಕ್ ಮಾಡಿ.
  • ಹಂತ 10: ಕರ್ನಾಟಕ ದ್ವಿತೀಯ ಪಿಯುಸಿ 2023ರ ನಿಮ್ಮ ಉತ್ತರ ಪತ್ರಿಕೆಯ ಬುಕ್‌ಲೆಟ್ ಸ್ವೀಕರಿಸುತ್ತೀರಿ.
  • ಹಂತ 11: ಈಗ ಕರ್ನಾಟಕ ದ್ವಿತೀಯ ಪಿಯುಸಿ 2023ರ ಮರುಮೌಲ್ಯಮಾಪನ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಾಗಿ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ. 

2023ರ ದ್ವಿತೀಯ ಪಿಯುಸಿ ಫಲಿತಾಂಶ ಬಗ್ಗೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

2023ರ ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರ. 1 :2023ರ ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಪ್ರಕಟಗೊಳ್ಳಲಿದೆ?

ಉತ್ತರ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜೂನ್ ಮಧ್ಯಭಾಗದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಿದೆ. ಫಲಿತಾಂಶದ ನಿಖರ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಪ್ರ. 2: ನನ್ನ ದ್ವಿತೀಯ ಪಿಯುಸಿ ಫಲಿತಾಂಶ ಎಲ್ಲಿ ಸಿಗಲಿದೆ?

ಉತ್ತರ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ (ಲಿಂಕ್) ದ್ವಿತೀಯ ಪಿಯುಸಿ ಫಲಿತಾಂಶ 2023 ಅನ್ನು ಪ್ರಕಟಿಸಲಿದೆ. ಅಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಸುಲಭವಾಗಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು. ಅಲ್ಲದೆ, ಮೊಬೈಲ್‌ನಿಂದ KAR12<Registration Number> ಎಂದು ಟೈಪ್ ಮಾಡಿ 56263 ಎಸ್ಎಂಎಸ್ ಕಳುಹಿಸುವ ಮೂಲಕವೂ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಫಲಿತಾಂಶ ಪ್ರಕಟಣೆಯ ದಿನದಂದು ಆಯಾ ಕಾಲೇಜುಗಳ ಸೂಚನಾ ಫಲಕಗಳಲ್ಲೂ ಫಲಿತಾಂಶವನ್ನು ನೋಡಬಹುದು.

ಪ್ರ. 3: ದ್ವಿತೀಯ ಪಿಯುಸಿ ಫಲಿತಾಂಶ 2023 ಪ್ರಕಟಿಸುವ ವೆಬ್‌ಸೈಟ್‌ ಯಾವುದು?

ಉತ್ತರ: ಕರ್ನಾಟಕದ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶಗಳ ಪ್ರಕಟಣೆಗಾಗಿ ಪ್ರತ್ಯೇಕ ಅಧಿಕೃತ ವೆಬ್‌ಸೈಟ್ ಹೊಂದಿದೆ – ಲಿಂಕ್. ಈ ವೆಬ್‌ಸೈಟ್‌ಗೆ ನೀವು ಪ್ರವೇಶಿಸಿದರೆ ಹೋಂ ಪುಟದಲ್ಲೇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಣೆ ಎಂಬುದಾಗಿ ಲಿಂಕ್ ಕಾಣುತ್ತೀರಿ. ಅಲ್ಲಿ ಕ್ಲಿಕ್ ಮಾಡಿದರೆ, ನಿರ್ದೇಶಿತಗೊಳ್ಳುವ ಪುಟದಲ್ಲಿ ಅಭ್ಯರ್ಥಿಯ ನೋಂದಣಿ ಸಂಖ್ಯೆ ನಮೂದಿಸಿ ಸಬ್‌ಮಿಟ್ ಸಲ್ಲಿಸಿದರೆ, ಫಲಿತಾಂಶ ಕಾಣಸಿಗುತ್ತದೆ.

ಪ್ರ. 4: ಮೊಬೈಲ್‌ನಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ 2023 ನೋಡಲು ಸಾಧ್ಯವೇ?

ಉತ್ತರ: ಹೌದು. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಅನ್ನು ಮೊಬೈಲ್‌ನಲ್ಲೇ ನೋಡಲು ಸಾಧ್ಯ. ಮೊಬೈಲ್‌ನಿಂದ ಆನ್‌ಲೈನ್‌ಗೆ ಹೋಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. ಅಥವಾ ಕೇವಲ ಎಸ್‌ಎಂಎಸ್ ಕಳುಹಿಸುವ ಮೂಲಕವೂ ಫಲಿತಾಂಶ ಪಡೆಯಬಹುದು. ಮೊಬೈಲ್‌ನ ಎಸ್‌ಎಂಎಸ್ ಆ್ಯಪ್‌ನಲ್ಲಿ KAR12<Registration Number> ಟೈಪ್ ಮಾಡಿ 56263 ಗೆ ಮೆಸೇಜ್ ಕಳುಹಿಸಿದರೆ, ಕ್ಷಣಾರ್ಧದಲ್ಲಿ ನಿಮಗೆ ಫಲಿತಾಂಶ ಲಭ್ಯವಾಗುತ್ತದೆ.

ಪ್ರ. 5: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವು ನನಗೆ ಹೆಸರುವಾರು ದೊರಕುತ್ತದೆಯೇ?

ಉತ್ತರ: ಹೌದು. ಅಧಿಕೃತ ವೆಬ್‌ಸೈಟ್‌ನಿಂದ, ಅಭ್ಯರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಅನ್ನು ಹೆಸರುವಾರು ಪರಿಶೀಲಿಸಲು ಸಾಧ್ಯವಾಗುತ್ತದೆ.

ಪ್ರ. 6: ದ್ವಿತೀಯ ಪಿಯುಸಿ ಫಲಿತಾಂಶದ ಬಳಿಕ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದರೆ, ಈ ಮೊದಲಿನ ಅಂಕಗಳು ಏನಾಗುತ್ತವೆ?

ಉತ್ತರ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಅಭ್ಯರ್ಥಿಯು ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದರೆ, ಮರುಮೌಲ್ಯಮಾಪನದ ಬಳಿಕ ದೊರಕುವ ಪರಿಷ್ಕೃತ ಅಂಕಗಳೇ ಅಂತಿಮವಾಗಿರಲಿವೆ. ಮರುಮೌಲ್ಯಮಾಪನದ ಬಳಿಕ ಅಂಕಗಳು ಕಡಿಮೆಯಾಗಿವೆ ಎಂಬ ಕಾರಣವೊಡ್ಡಿ ಈ ಮೊದಲಿನ ಅಂಕಗಳನ್ನು ಮರುಪಡೆಯಲು ಅಭ್ಯರ್ಥಿಗೆ ಅವಕಾಶವಿರುವುದಿಲ್ಲ.

ಪ್ರ. 6: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಬಳಿಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದರೆ ಸಾಕೇ?

ಉತ್ತರ: ಇಲ್ಲ, ಅನುತ್ತೀರ್ಣಗೊಂಡ ಅಭ್ಯರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯದೆ, ಮುಂಚಿತವಾಗಿಯೇ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರ. 7: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ 2023 ಯಾವಾಗ ಪ್ರಕಟವಾಗುತ್ತದೆ?

ಉತ್ತರ: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಜುಲೈ/ ಆಗಸ್ಟ್‌‌ನಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಅಪ್ಡೇಟ್‌ಗಳಿಗಾಗಿ Embibe ನೋಡುತ್ತಿರಿ.

ಈಗ ದ್ವಿತೀಯ ಪಿಯುಸಿ ಫಲಿತಾಂಶ 2023 ರ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ಕರ್ನಾಟಕ ಸಿಇಟಿ ಪರೀಕ್ಷೆಗಳು 2023 ಅನ್ನು ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ಉಚಿತ ಕೆಸಿಇಟಿ ಅಣಕು ಟೆಸ್ಟ್‌ಗಳು ಅನ್ನು ತೆಗೆದುಕೊಳ್ಳಬಹುದು. ಅಣಕು ಟೆಸ್ಟ್‌ ತೆಗೆದುಕೊಳ್ಳುವುದರಿಂದ ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.

ಜತೆಗೆ, JEE, NEET ನಂತಹ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಕೂಡಾ Embibe ನಲ್ಲಿ ಉಚಿತ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಅಣಕು ಟೆಸ್ಟ್‌ಗಳು ತೆಗೆದುಕೊಳ್ಳಬಹುದು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಫಲಿತಾಂಶ 2023 ರ ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಫಲಿತಾಂಶ 2023” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ