
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ಕರ್ನಾಟಕ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ (PUE)ಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ವರ್ಷ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಅಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆ 2023ರ ಮಾದರಿ ಪ್ರಶ್ನೆ ಪತ್ರಿಕೆಯನ್ನೂ ಸಹ ಪರೀಕ್ಷೆಗೂ ಮುನ್ನ ಬಿಡುಗಡೆ ಮಾಡಲಿದೆ. ಈಗಾಗಲೇ 2021-22ನೇ ಶೈಕ್ಷಣಿಕ ಸಾಲಿನ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಇತಿಹಾಸ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಭೂಗೋಳ ಮತ್ತು ವ್ಯವಹಾರ ಅಧ್ಯಯನ ಸೇರಿದಂತೆ ಇತರ ವಿಷಯಗಳ ಮಾದರಿ ಪ್ರಶ್ನೆಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆ 2023 ಅನ್ನು ಏಪ್ರಿಲ್‌ನಿಂದ ಮೇ ರವರೆಗೆ ನಡೆಸಲಿದ್ದು, ಫಲಿತಾಂಶವನ್ನು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ಸಿದ್ಧತೆಗಾಗಿ ಮಂಡಳಿ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಭ್ಯಾಸ ಮಾಡಬೇಕು. ಪ್ರತಿ ವಿಷಯದ ಇತ್ತೀಚಿನ ಪರೀಕ್ಷೆಯ ಮಾದರಿ ಮತ್ತು ಮಾರ್ಕಿಂಗ್ ಯೋಜನೆಯನ್ನು ಅರ್ಥಮಾಡಿಕೊಳ್ಳಲು ಇದು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಈ ಲೇಖನದಲ್ಲಿ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ವಿವರಿಸಲಾಗಿದೆ.
ಕರ್ನಾಟಕ ಸರ್ಕಾರ (ಪಿಯುಇ) ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್ 1 ನೇ ವಾರದಿಂದ ಮೇ ಕೊನೆಯ ವಾರದವರೆಗೆ ನಡೆಸುತ್ತದೆ. ಭಾಷೆಗಳು, ವಾಣಿಜ್ಯ, ವಿಜ್ಞಾನ ವಿಷಯವಾರು, ವಿದ್ಯಾರ್ಥಿಗಳು ಇಲಾಖೆಯ ವೆಬ್‌ಸೈಟ್ ಲಿಂಕ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
2023ರ ಕರ್ನಾಟಕ ದ್ವಿತೀಯ ಪಿಯುಸಿ / 2ನೇ ಪಿಯುಸಿ ಪರೀಕ್ಷೆಯ ಕುರಿತು ಕೆಲವು ಪ್ರಮುಖವಾದ ಮಾಹಿತಿಯನ್ನು ನೀವು ಕೆಳಗೆ ಕಾಣಬಹುದು. ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2023ರ ಹೆಚ್ಚುವರಿ ವಿವರಗಳಿಗಾಗಿ, ಕೆಳಗಿನ ಕೋಷ್ಟಕವನ್ನು ನೋಡಿ.
ಶಿಕ್ಷಣ ಮಂಡಳಿಯ ಹೆಸರು | ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ |
---|---|
ಪರೀಕ್ಷೆಯ ಹೆಸರು | ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023 |
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ | ಏಪ್ರಿಲ್, 2023 (ದಿನಾಂಕ ಇನ್ನೂ ನಿಗದಿಯಾಗಿಲ್ಲ) |
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯ | ಮೇ, 2023 (ದಿನಾಂಕ ಇನ್ನೂ ನಿಗದಿಯಾಗಿಲ್ಲ) |
ಮಾದರಿ ಪತ್ರಿಕೆ | ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ |
ಅಧಿಕೃತ ವೆಬ್‌ಸೈಟ್ | ಲಿಂಕ್ |
ವಿದ್ಯಾರ್ಥಿಗಳು ಕರ್ನಾಟಕ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಕೆಳಗೆ ಪಟ್ಟಿ ಮಾಡಲಾದ ಹಂತಗಳನ್ನು ಅನುಸರಿಸಬಹುದು:
ಹೊಸ ಪಠ್ಯಕ್ರಮದ ಆಧಾರದ ಮೇಲೆ, ನೀವು ಕರ್ನಾಟಕ ಬೋರ್ಡ್ 2nd PUC ಮಾಡೆಲ್ ಪೇಪರ್ 2022ಅನ್ನು ಅಧ್ಯಯನದ ಉದ್ದೇಶಕ್ಕಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೆಳಗಿನ ವಿಭಾಗಗಳು 2022ರ ಎಲ್ಲಾ ವಿಷಯಗಳಿಗೆ KSEEB 2nd PUC ಮಾದರಿ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿವೆ.
1. ಕನ್ನಡ |
2. ಇಂಗ್ಲಿಷ್ |
3. ಹಿಂದಿ |
4. ಗೃಹ ವಿಜ್ಞಾನ |
5. ತಮಿಳು |
6. ತೆಲುಗು |
7. ಮಲಯಾಳಂ |
8. ಮರಾಠಿ |
9. ಉರ್ದು |
10. ಸಂಸ್ಕೃತ |
11. ಅರೇಬಿಕ್ |
12. ಫ್ರೆಂಚ್ |
13. ಇತಿಹಾಸ |
14. ಅರ್ಥಶಾಸ್ತ್ರ |
15. ಭೂಗೋಳಶಾಸ್ತ್ರ ಇಂಗ್ಲಿಷ್ |
15A. ಭೂಗೋಳಶಾಸ್ತ್ರ ಕನ್ನಡ |
16. ಸಂಗೀತ-ಹಿಂದೂಸ್ತಾನಿ |
17. ವ್ಯವಹಾರಿಕ ಅಧ್ಯಯನ ಇಂಗ್ಲಿಷ್ |
17A. ವ್ಯವಹಾರಿಕ ಅಧ್ಯಯನ ಕನ್ನಡ |
18. ಸಮಾಜಶಾಸ್ತ್ರ (EM) |
19. ರಾಜ್ಯಶಾಸ್ತ್ರ |
20. ಲೆಕ್ಕಶಾಸ್ತ್ರ |
21. ಸಂಖ್ಯಾಶಾಸ್ತ್ರ |
22. ಮನಃಶಾಸ್ತ್ರ |
23. ಮನಃಶಾಸ್ತ್ರ-ಇಂಗ್ಲಿಷ್ |
24. ಭೌತಶಾಸ್ತ್ರ |
25. ರಸಾಯನಶಾಸ್ತ್ರ |
26. ಗಣಿತ |
27. ಜೀವಶಾಸ್ತ್ರ |
27A. ಜೀವಶಾಸ್ತ್ರ-ಕನ್ನಡ |
28. ಭೂಗರ್ಭಶಾಸ್ತ್ರ |
29. ಇಲೆಕ್ಟ್ರಾನಿಕ್ಸ್ |
30. ಗಣಕ-ವಿಜ್ಞಾನ |
31. ಶಿಕ್ಷಣ |
32. ಗೃಹ ವಿಜ್ಞಾನ |
33. ಮೂಲ ಗಣಿತ |
34. ಬ್ಯೂಟಿ ಮತ್ತು ವೆಲ್‌ನೆಸ್ |
35. ಆಟೋಮೋಟಿವ್ |
36. ರೀಟೇಲ್ |
37. ಐಟಿ |
38. ತತ್ವಶಾಸ್ತ್ರ (ಕನ್ನಡ) |
39. ಸಮಾಜಶಾಸ್ತ್ರ (ಕನ್ನಡ) |
40. ಸಂಖ್ಯಾಶಾಸ್ತ್ರ |
41. ತತ್ವಶಾಸ್ತ್ರ (ಇಂಗ್ಲಿಷ್) |
42. ಐಚ್ಛಿಕ ಕನ್ನಡ |
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾವು ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಕೋಶಗಳ ಲಿಂಕ್‌ಗಳನ್ನು ಒದಗಿಸಿದ್ದೇವೆ:
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯ ಪ್ರಯೋಜನಗಳ ಕುರಿತು ನಾವು ಕೆಲವು ತಯಾರಿ ಸಲಹೆಗಳನ್ನು ಪಟ್ಟಿ ಮಾಡಿದ್ದೇವೆ.
ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮ್ಮ ಬರವಣಿಗೆಯ ವೇಗ ಮತ್ತು ನಿಖರತೆಯನ್ನು ಸುಧಾರಿಸಿಕೊಳ್ಳಲು, Embibe ನ ಅಣಕು ಪರೀಕ್ಷೆಗಳನ್ನೂ ತೆಗೆದುಕೊಳ್ಳಿ. ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ 2023ಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ Embibeಗೆ ಟ್ಯೂನ್ ಮಾಡಿ.
ಕರ್ನಾಟಕ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಎದುರಾಗುವ ಕೆಲವು ಪ್ರಶ್ನೆಗಳು ಇಲ್ಲಿವೆ.
ಪ್ರ. 1: ಕರ್ನಾಟಕ ದ್ವಿತೀಯ ಪಿಯುಸಿ 2023 ಪರೀಕ್ಷೆ ಯಾವಾಗ ಪ್ರಾರಂಭವಾಗುತ್ತದೆ?
ಉತ್ತರ: ಕರ್ನಾಟಕ 2nd PUC 2023 ಪರೀಕ್ಷೆಯನ್ನು ಏಪ್ರಿಲ್ – ಮೇ ತಿಂಗಳಿನಲ್ಲಿ ನಿರ್ವಹಿಸಲಾಗುತ್ತದೆ. ವಿದ್ಯಾರ್ಥಿಗಳು ಮಾದರಿ ಪತ್ರಿಕೆಗಳ ಸಹಾಯದಿಂದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ತಮ್ಮ ತಯಾರಿಯನ್ನು ಪ್ರಾರಂಭಿಸಬಹುದು.
ಪ್ರ. 2: 2023ರ ದ್ವಿತೀಯ PUC ಮಾದರಿ ಪ್ರಶ್ನೆಪತ್ರಿಕೆಗಳನ್ನು ನಾನು ಎಲ್ಲಿ ಡೌನ್‌ಲೋಡ್ ಮಾಡಬಹುದು?
ಉತ್ತರ: ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅಥವಾ Embibe (ಮೇಲಿನ ಪುಟ) ಪಿಡಿಎಫ್‌ನಲ್ಲಿ ಉತ್ತರಗಳೊಂದಿಗೆ ಕರ್ನಾಟಕ ರಾಜ್ಯ ಮಂಡಳಿಯ ದ್ವಿತೀಯ ಪಿಯುಸಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಬಹುದು.
ಪ್ರ. 3: ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಿಷ್ಠ ಅಂಕಗಳೇನು?
ಉತ್ತರ: ಪ್ರಥಮ ವರ್ಷ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳು ಮತ್ತು ಒಟ್ಟು 35% ಅಂಕಗಳು ಅತ್ಯಗತ್ಯವಾಗಿರುತ್ತದೆ.
ಪ್ರ. 4: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಸಹಾಯಕವಾಗಿವೆಯೇ?
ಉತ್ತರ: ಹೌದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು PUE 2nd PUC ಪತ್ರಿಕೆಗಳನ್ನು ಬಳಸಿಕೊಳ್ಳಬಹುದು. ಇವು ಪ್ರತಿ ವಿದ್ಯಾರ್ಥಿಯು ಪ್ರಶ್ನೆಪತ್ರಿಕೆಯನ್ನು ಅರ್ಥ ಮಾಡಿಕೊಳ್ಳಲು ಅತ್ಯುತ್ತಮ ಕಲಿಕಾ ಸಾಮಗ್ರಿಗಳಾಗಿವೆ.
ಪ್ರ. 5: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರಶ್ನೆಗಳು ಪ್ರಶ್ನೆಕೋಶದಿಂದ ಬರುತ್ತವೆಯೇ?
ಉತ್ತರ: ಹಿಂದಿನ ವರ್ಷದ ವಿಶ್ಲೇಷಣೆಯ ಪ್ರಕಾರ, ಕೇವಲ 10 ರಿಂದ 35% ಪ್ರಶ್ನೆಗಳನ್ನು ಪ್ರಶ್ನೆಕೋಶದಿಂದ ಪಡೆಯಲಾಗಿದೆ. ಆದ್ದರಿಂದ, ಮಂಡಳಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳು ಸಂಪೂರ್ಣ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು ಮುಖ್ಯವಾಗಿದೆ.
ಪ್ರ. 6: ಕರ್ನಾಟಕ ಮಂಡಳಿಯ ಹಿಂದಿನ ವರ್ಷದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಏಕೆ ಪರಿಹರಿಸಬೇಕು?
ಉತ್ತರ: ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪತ್ರಿಕೆಗಳನ್ನು ಪರಿಹರಿಸುವುದು ಪ್ರಶ್ನೆ ಪತ್ರಿಕೆಯ ಮಟ್ಟ, ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ ಪ್ರಕಾರಗಳು ಮತ್ತು ಅಂಕಗಳ ಯೋಜನೆಯ ಅವಲೋಕನವನ್ನು ನೀಡುತ್ತದೆ.
ಆದಾಗ್ಯೂ, ಹಿಂದಿನ ವರ್ಷದ ಕರ್ನಾಟಕ ಮಂಡಳಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದರೂ ಸಹ, ಅವರು ತಮ್ಮ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ವೆಬ್‌ಸೈಟ್‌ನಿಂದ ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಧ್ಯಯನ ಮಾಡಬೇಕಾಗುತ್ತದೆ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ದ್ವಿತೀಯ ಪಿಯುಸಿ ಮಾದರಿ ಪತ್ರಿಕೆಗಳು 2023” ಒಂದು ಮಾಹಿತಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.