• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಟಾಪರ್‌ಗಳ ಪಟ್ಟಿ

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಟಾಪರ್‌ಗಳ ಪಟ್ಟಿ: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಏಪ್ರಿಲ್/ಮೇ 2022ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂರು ವಿಭಾಗಗಳಲ್ಲಿ ಒಟ್ಟಾರೆ 7 ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ 598 ಅಂಕಗಳೊಂದಿಗೆ ಒಬ್ಬ ವಿದ್ಯಾರ್ಥಿ ಅಗ್ರ ಸ್ಥಾನ ಪಡೆದಿದ್ದರೆ, ಕಲಾ ವಿಭಾಗದಲ್ಲಿ 594 ಅಂಕಗಳೊಂದಿಗೆ ಇಬ್ಬರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊಂದಿಗೆ ನಾಲ್ವರು ವಿದ್ಯಾರ್ಥಿಗಳು ಮೊದಲ ಸ್ಥಾನದಲ್ಲಿದ್ದಾರೆ. 

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಒಟ್ತು 1076 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, 6,83,533 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,22,966 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ದ್ವಿತೀಯ ಪಿಯುಸಿ 2021-22ರ ಟಾಪರ್‌ಗಳ ವಿವರ

ಕಲಾ ವಿಭಾಗ:

ವಿದ್ಯಾರ್ಥಿ ಹೆಸರುಅಂಕಗಳು
ಶ್ವೇತಾ ಬಿ ಬಿ594
ಮಡಿವಾಳರ ಸಹನಾ594
ಸಾನಿಕ ರವಿಶಂಕರ್593
ನಿಂಗಣ್ಣ ಅಗಸರ593
ಶಿವರಾಜ್593
ಜಿ. ಮೌನೇಶ್593
ಹೆಚ್‌. ಸಂತೋಷ592
ಪೂರ್ಣಿಮಾ ಉಜ್ಜೈನಿ591
ಸಮಿರ್591
ಕಾವೇರಿ ಜಗ್ಗಲ್591

ವಾಣಿಜ್ಯ ವಿಭಾಗ:

ವಿದ್ಯಾರ್ಥಿ ಹೆಸರುಅಂಕಗಳು
ನೀಲು ಸಿಂಗ್596
ಆಕಾಶ್‌ ದಾಸ್596
ನೇಹಾ ಬಿ ಆರ್596
ಮನ್ವಾ ವಿನಯ್ ಕೇಜ್ರಿವಾಲ್596
ಹಿತೇಶ್ಎಸ್‌595
ಸಹನಾ ಟಿ ಎಸ್595
ಪವಿತ್ರಾ ಕೆ.595
ಸಮರ್ಥ್ ವಿಶ್ವನಾಥ್ ಜೋಶಿ.595
ಅನೀಶ್ ಮಲ್ಯ595
ಅಚಲ್ ಪ್ರವೀಣ್ ಉಳ್ಳಾಲ595

ವಿಜ್ಞಾನ ವಿಭಾಗ:

ವಿದ್ಯಾರ್ಥಿ ಹೆಸರುಅಂಕಗಳು
ಸಿಮ್ರನ್ ಸೆಶಾ ರಾವ್598
ಸಾಯಿಚಿರಾಗ್ ಬಿ597
ಶ್ರೀಕೃಷ್ಣ ಪಿ ಎಸ್‌597
ಭವ್ಯ ನಾಯಕ್597
ಓಂಕಾರ್ ಪ್ರಭಾ596
ಮೊಹಮ್ಮದ್596
ಯು ಎಸ್ ಅದ್ವೈತ್‌ ಶರ್ಮಾ596
ಗೌರವ್ ಚಂದನ್596
ವಿಜೇತಾ ನಾಗರಾಜ್ ಭಟ್‌596
ಮೇಧಾ ಕೆ ಎಸ್‌596
ಸಹಾನಾ ಭಟ್‌596

ದ್ವಿತೀಯ ಪಿಯುಸಿ 2022ರ ಟಾಪರ್‌ಗಳ ಮನದಾಳದ ಮಾತು

ಸಿಮ್ರಾನ್ ಶೇಷಾ ರಾವ್:

ಫಲಿತಾಂಶ ಅಚ್ಚರಿ ತಂದಿದೆ ಎಂದು ಸಿಮ್ರಾನ್ ಶೇಷಾ ರಾವ್ ಹೇಳಿದ್ದಾರೆ. “ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ, ರಾಜ್ಯಕ್ಕೆ ಟಾಪರ್ ಆಗಿರುವುದು ಆಶ್ಚರ್ಯಕರವಾಗಿದೆ” ಎಂದು ಅವರು ಹೇಳಿದರು. ಸಿಮ್ರಾನ್‌ಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರ್ ಆಗಬೇಕೆಂಬ ಆಸೆ ಇದೆ. ‘ಭರವಸೆ ಕಳೆದುಕೊಳ್ಳಬೇಡಿ’ ಎಂಬ ಉತ್ಸಾಹದ ಮಾತನ್ನೂ ಹೇಳಿದ್ದಾರೆ.

ಶಿವಮೊಗ್ಗ ಡಿವಿಎಸ್ ಶಿಕ್ಷಣ ಸಂಸ್ಥೆಯ ಮನೋಜ್ 589 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಇಡೀ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹಿಂದಿ 98, ಇಂಗ್ಲಿಷ್ 95, ಗಣಿತ 100, ಸಂಖ್ಯಾಶಾಸ್ತ್ರ 100,  ಭೌತಶಾಸ್ತ್ರ 99,  ರಸಾಯನಶಾಸ್ತ್ರ 97. 

ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದ ವಾದಿರಾಜ್ ಮತ್ತು ಉಷಾರಾವ್ ದಂಪತಿ ಪುತ್ರನಾಗಿರುವ ಮನೋಜ್ ಮುಂದೆ ವಿಜ್ಞಾನಿಯಾಗಬೇಕು ಎಂದು ಕನಸು ಕಂಡಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ ಮನೋಜ್ ಈ ರೀತಿ ಹೇಳಿದ್ದಾರೆ. 

ಯಾರೂ ಕಷ್ಟಪಟ್ಟು ಓದಬೇಕಾಗಿಲ್ಲ, ಇಷ್ಟಪಟ್ಟು ಓದಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಅಂಕಗಳು ಚೆನ್ನಾಗಿ ಬಂದಿಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಮುಂದೆಯೂ ಅವಕಾಶಗಳಿರುತ್ತವೆ. ಅಂಕಗಳೇ ಮಾನದಂಡವಲ್ಲ. ದಿನಕ್ಕೆ ಅಷ್ಟೇನು ಹೆಚ್ಚಾಗಿ ಓದುತ್ತಿರಲಿಲ್ಲ, 3-4 ಗಂಟೆ ಓದುತ್ತಿದ್ದೆ. ಕಲಿಕೆಯನ್ನು ಎಂಜಾಯ್ ಮಾಡಿಕೊಂಡು ಓದಿ. ಮಾರ್ಕ್ಸ್ ಬರಬೇಕು ಎಂದು ಸುಮ್ಮನೆ ಓದಲು ಹೋಗಬೇಡಿ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಎಷ್ಟು ಎಂಜಾಯ್ ಮಾಡಿಕೊಂಡು  ಓದುತ್ತೀರೋ ಅಷ್ಟೇ ಒಳ್ಳೇದು. ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದುತ್ತಿರಲಿಲ್ಲ. ರಾತ್ರಿ 11 ಗಂಟೆಗೆ ಮಲಗುತ್ತಿದ್ದೆ. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ, ಕಾಲೇಜಿನಲ್ಲೇ ಓದಿಕೊಂಡಿದ್ದು. ಲೆಕ್ಚರರ್ಸ್ ತುಂಬಾ ಸಪೋರ್ಟೀವ್ ಆಗಿದ್ದರು ಎಂದು ತಮ್ಮ ಯಶಸ್ಸಿನ ಸೂತ್ರವನ್ನು ಹಂಚಿಕೊಂಡಿದ್ದಾರೆ.

ಮಲ್ಲೇಶ್ವರದ ವಿದ್ಯಾಮಂದಿರ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ:

ಪ್ರೇರಣಾ ಅವರು ಒಟ್ಟು 596 ಅಂಕಗಳನ್ನು ಪಡೆದಿದ್ದಾರೆ. ಇಂಗ್ಲಿಷ್-97, ಗಣಿತ-98, ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಜೀವಶಾಸ್ತ್ರ-100 ಅಂಕಗಳನ್ನು ಪಡೆದಿದ್ದಾರೆ.

ಅಂದಂದಿನ ಪಠ್ಯವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಹಾಗಾಗಿ ನಾನು ರ್‍ಯಾಂಕ್ ಬರಲು ಸಾಧ್ಯವಾಯಿತು. ಅದು ಬಿಟ್ಟರೆ ಪಠ್ಯಪುಸ್ತಕಗಳ ಮೇಲೆ ಹೆಚ್ಚಾಗಿ ಗಮನಹರಿಸುತ್ತಿದ್ದೆ. ಟ್ಯೂಷನ್‌ಗೆ ನಾನು ಥಿಯರಿ ಸಬ್ಜೆಕ್ಟ್‌ಗೆ ಎಲ್ಲೂ ಹೋಗಲಿಲ್ಲ. NEET ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಖಾಸಗಿ ಕೋಚಿಂಗ್ ಪಡೆಯುತ್ತಿದ್ದೆ ಎಂದಿದ್ದಾರೆ. 

ದಿನಕ್ಕೆ ಇಂತಿಷ್ಟೇ ಗಂಟೆಗಳು ಎಂದು ಓದುತ್ತಿರಲಿಲ್ಲ. ಅಂದಿನ ಪಠ್ಯವನ್ನು ಅಂದೇ ಮುಗಿಸುತ್ತಿದ್ದೆ. ಗಣಿತದಲ್ಲಿ ಒಂದು ಅಂಕ ಕಡಿಮೆ ಬಂದಿದೆ. ಅದು ಹೇಗಾಯ್ತು ಅಂತ ಗೊತ್ತಿಲ್ಲ. ಇಂಗ್ಲಿಷ್‌ನಲ್ಲೂ ನಾನು ಯಾವುದೇ ಮಿಸ್ಟೇಕ್ ಮಾಡಿರಲಿಲ್ಲ. ಬಹುಶಃ ಯಾವುದಾದರೂ ಸಿಲ್ಲಿ ಮಿಸ್ಟೇಕ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಮ್ಮೊಮ್ಮೆ ರಾತ್ರಿ ನಾನು ಎಷ್ಟೊತ್ತು ಎದ್ದಿರುತ್ತಿದ್ದೆನೋ ಅಷ್ಟೂ ವೇಳೆ ನನ್ನ ಅಮ್ಮ ಸಹ ಎದ್ದಿರುತ್ತಿದ್ದರು. ಕಾಲೇಜಿಗೆ ಅಪ್ಪ ಬಿಡುತ್ತಿದ್ದರು. ಹಾಗಾಗಿ ಒಂದಷ್ಟು ಆಯಾಸ ಆಗುವುದು ತಪ್ಪುತ್ತಿತ್ತು. ವೈದ್ಯೆ ಆಗಬೇಕು ಎಂದು ನಾನು ಕನಸು ಕಂಡಿದ್ದೇನೆ ಎನ್ನುವ ಅವರು, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರೆ ಖಿನ್ನರಾಗಬೇಡಿ. ಅದೇ ಜೀವನ ಅಲ್ಲ. ಇನ್ನೂ ಬೇಕಾದಷ್ಟು ಅವಕಾಶಗಳಿರುತ್ತವೆ. ಮತ್ತೊಮ್ಮೆ ಪರೀಕ್ಷೆ ಬರೆದು ಪಾಸು ಮಾಡಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ.  

ದ್ವಿತೀಯ ಪಿಯುಸಿ 2021-22ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ ಮತ್ತು ತೇರ್ಗಡೆಯಾದವರ ವಿವರ

ಹೊಸಬರು:

ವಿದ್ಯಾರ್ಥಿಗಳ ವಿಧ
(ಮಾದರಿ)
ಏಪ್ರಿಲ್/ಮೇ 2022 ಶೇಕಡಾ ಫಲಿತಾಂಶ
ಹಾಜರಾದವರು ತೇರ್ಗಡೆಯಾದವರು
ಹೊಸಬರು 5,99,764 4,02,697 61.14
ಪುನರಾವರ್ತಿತ 61,838 14,403 23.29
ಖಾಸಗಿ ಅಭ್ಯರ್ಥಿಗಳು 21,931 5,866 26.75
ಒಟ್ಟು 6,83,533 4,22,966 61.88

ಈ ಬಾರಿ ಒಟ್ಟು 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಒಟ್ಟು 4,22,966 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಶೇಕಡಾ ಫಲಿತಾಂಶ 61.88. 

2021-22ರ ಸಂಯೋಜನೆವಾರು ಫಲಿತಾಂಶ

ಕಲೆ:

ಹಾಜರಾದವರು-2,27,929

ಉತ್ತೀರ್ಣರಾದವರು-1,11,032 

ಶೇಕಡಾ ಫಲಿತಾಂಶ- 48.71

ವಾಣಿಜ್ಯ:

ಹಾಜರಾದವರು-2,45,350

ಉತ್ತೀರ್ಣರಾದವರು-1,59,409

ಶೇಕಡಾ ಫಲಿತಾಂಶ- 64.97 

ವಿಜ್ಞಾನ:

ಹಾಜರಾದವರು-2,10,284

ಉತ್ತೀರ್ಣರಾದವರು1,52,525

ಶೇಕಡಾ ಫಲಿತಾಂಶ- 72.53 

ವಿಷಯವಾರು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

ಕನ್ನಡ 563
ಇಂಗ್ಲೀಷ್ 2
ಹಿಂದಿ 124
ಭೂಗೋಳಶಾಸ್ತ್ರ 587
ವ್ಯವಹಾರ ಅಧ್ಯಯನ 2,837
ಸಮಾಜಶಾಸ್ತ್ರ 85
ರಾಜ್ಯಶಾಸ್ತ್ರ 80
ಲೆಕ್ಕಶಾಸ್ತ್ರ 3,460
ಭೂಗರ್ಭಶಾಸ್ತ್ರ 5
ಸಂಖ್ಯಾಶಾಸ್ತ್ರ 2,266
ಮನಃಶಾಸ್ತ್ರ 81
ಭೌತಶಾಸ್ತ್ರ 36
ರಸಾಯನಶಾಸ್ತ್ರ 2,917
ಗಣಿತಶಾಸ್ತ್ರ 14,210
ಜೀವಶಾಸ್ತ್ರ 2,106
ಎಲೆಕ್ಟ್ರಾನಿಕ್ಸ್ 236
ಗಣಕ ವಿಜ್ಞಾನ 4,868
ಶಿಕ್ಷಣ 658

ವಿಷಯವಾರು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿರುವ ವಿವರ:

ವಿಷಯ ಒಟ್ಟು ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳು
563 ಲೆಕ್ಕಶಾಸ್ತ್ರ
ಇಂಗ್ಲಿಷ್ 2 ಭೂಗರ್ಭಶಾಸ್ತ್ರ 5
ಹಿಂದಿ 124 ಸಂಖ್ಯಾಶಾಸ್ತ್ರ 2266
ಮಲಯಾಳಂ 4 ಮನಃಶಾಸ್ತ್ರ 81
ಉರ್ದು 4 ಭೌತಶಾಸ್ತ್ರ 36
ಸಂಸ್ಕೃತ 1119 ರಸಾಯನಶಾಸ್ತ್ರ 2917
ಫ್ರೆಂಚ್ 32 ಗಣಿತಶಾಸ್ತ್ರ 14210
ಐಚ್ಛಕ ಕನ್ನಡ 18 ಜೀವಶಾಸ್ತ್ರ 2106
ಇತಿಹಾಸ 166 ಎಲೆಕ್ಟ್ರಾನಿಕ್ಸ್ 236
ಅರ್ಥಶಾಸ್ತ್ರ 1472 ಗಣಕ ವಿಜ್ಞಾನ 4868
ತರ್ಕಶಾಸ್ತ್ರ 26 ಶಿಕ್ಷಣ 658
ಭೂಗೋಳಶಾಸ್ತ್ರ 587 ಬೇಸಿಕ್ ಮ್ಯಾಥ್ಸ್ 401
ಹಿಂದೂಸ್ಥಾನಿ ಸಂಗೀತ 3 ಮಾಹಿತಿ ತಂತ್ರಜ್ಞಾನ 17
ವ್ಯವಹಾರ ಅಧ್ಯಯನ 2837 ಆಟೋಮೊಬೈಲ್ 20
ಸಮಾಜಶಾಸ್ತ್ರ 85 ಗೃಹ ವಿಜ್ಞಾನ 12
ರಾಜ್ಯಶಾಸ್ತ್ರ 80

ಮಾಧ್ಯಮವಾರು ಫಲಿತಾಂಶ:

ಮಾಧ್ಯಮಹಾಜರಾದವರುತೇರ್ಗಡೆಯಾದವರುಶೇಕಡಾವಾರು
ಕನ್ನಡ2,98,1021,53,16451.38
ಇಂಗ್ಲೀಷ್3,85,4612,69,80269.99

ಸಂಯೋಜನೆವಾರು ಫಲಿತಾಂಶ:

ಕಲಾ ವಿಭಾಗ: 1,11,032

ವಾಣಿಜ್ಯ ವಿಭಾಗ: 1,59,409

ವಿಜ್ಞಾನ ವಿಭಾಗ: 1,52,525

ಶ್ರೇಣಿವಾರು ಫಲಿತಾಂಶ:

ಉನ್ನತ ಶ್ರೇಣಿಯಲ್ಲಿ (ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದವರು) ಪಾಸಾದವರ ಸಂಖ್ಯೆ : 91,106

ಪ್ರಥಮ ದರ್ಜೆಯಲ್ಲಿ (ಶೇ.85 ಕ್ಕಿಂತ ಕಡಿಮೆ ಹಾಗೂ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದವರು) ಪಾಸಾದವರ ಸಂಖ್ಯೆ: 2,14,115

ದ್ವಿತೀಯ ದರ್ಜೆಯಲ್ಲಿ (ಶೇ.60 ಕ್ಕಿಂತ ಕಡಿಮೆ ಹಾಗೂ ಶೇ.50 ಕ್ಕಿಂತ ಹೆಚ್ಚು ಅಂಕ ಪಡೆದವರು) ಪಾಸಾದವರ ಸಂಖ್ಯೆ: 68,444

ತೃತೀಯ ದರ್ಜೆಯಲ್ಲಿ (ಶೇ.50 ಕ್ಕಿಂತ ಕಡಿಮೆ ಅಂಕ ಪಡೆದವರು) ಪಾಸಾದವರ ಸಂಖ್ಯೆ : 49,301

ಜಿಲ್ಲೆಗಳ ಶೇಕಡಾವಾರು ಫಲಿತಾಂಶ: (ಹೊಸಬರು ಮಾತ್ರ)

ಕ್ರಮ ಸಂಖ್ಯೆಜಿಲ್ಲೆಏಪ್ರಿಲ್/ಮೇ 2022-ಶೇಕಡಮಾರ್ಚ್ -2020-ಶೇಕಡ
1ದಕ್ಷಿಣ ಕನ್ನಡ88.0290.71
2ಉಡುಪಿ86.3 3890.71
3ವಿಜಯಪುರ77.1454.22
4ಬೆಂಗಳೂರು ದಕ್ಷಿಣ76.2477.56
5ಉತ್ತರ ಕನ್ನಡ74.3380.97
6ಕೊಡಗು73.2281.53
7ಬೆಂಗಳೂರು ಉತ್ತರ72.0175.54
8ಶಿವಮೊಗ್ಗ70.1472.19
9ಚಿಕ್ಕಮಗಳೂರು69.4279.11
10ಬಾಗಲಕೋಟೆ68.6974.59
11ಚಿಕ್ಕೋಡಿ68.0063.88
12ಬೆಂಗಳೂರು ಗ್ರಾಮಾಂತರ67.8669.02
13ಹಾಸನ67.2870.18
14ಹಾವೇರಿ66.6468.0
15ಧಾರವಾಡ65.6667.31
16ಚಿಕ್ಕಬಳ್ಳಾಪುರ64.4973.74
17ಮೈಸೂರು64.4567.98
18ಚಾಮರಾಜನಗರ63.0269.29
19ದಾವಣಗೆರೆ62.7264.09
20ಕೊಪ್ಪಳ62.0460.90
21ಬೀದರ್60.7864.61
22ಗದಗ60.6363.00
23ಯಾದಗಿರಿ60.5958.38
24ಕೋಲಾರ60.4167.42
25ರಾಮನಗರ60.2260.96
26ಬೆಳಗಾವಿ59.8859.70
27ಕಲಬುರಗಿ59.1758.27
28ತುಮಕೂರು58.9062.26
29ಮಂಡ್ಯ58.7763.82
30ರಾಯಚೂರು57.9356.22
31ಬಳ್ಳಾರಿ55.4862.02
32ಚಿತ್ರದುರ್ಗ49.3156.80

ಶೇಕಡ ನೂರು ಫಲಿತಾಂಶ ಪಡೆದ ಕಾಲೇಜುಗಳು:

ಕ್ರಮ ಸಂಖ್ಯೆ ಕಾಲೇಜುವಾರು ಶೇಕಡ 100 ಫಲಿತಾಂಶ
1 ಸರ್ಕಾರಿ ಪದವಿ ಪೂರ್ವ ಕಾಲೇಜು 4
2 ಅನುದಾನಿತ ಪದವಿ ಪೂರ್ವ ಕಾಲೇಜು 2
3 ಅನುದಾನ ರಹಿತ ಪದವಿ ಪೂರ್ವ ಕಾಲೇಜು 50
ಒಟ್ಟು 56

ವಿವಿಧ ಬಗೆಯ ಕಾಲೇಜುಗಳ ಒಟ್ಟಾರೆ ಫಲಿತಾಂಶ ವಿವರ:

ಕಾಲೇಜುವಾರುಹಾಜರಾದವರುತೇರ್ಗಡೆಯಾದವರುಶೇಕಡವಾರು
ಸರ್ಕಾರಿ ಪದವಿ ಪೂರ್ವ ಕಾಲೇಜು1,63,76486,52652.84
ಅನುದಾನಿತ ಪದವಿ ಪೂರ್ವ ಕಾಲೇಜುI,04,09964,59562.05
ಅನುದಾನ ರಹಿತ ಪದವಿ ಪೂರ್ವ ಕಾಲೇಜು2,76,7012,11.67276.50
ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜು2,263I,26155.72
ವಿಭಜಿತ ಪದವಿ ಪೂರ್ವ ಕಾಲೇಜು52,96738.64372.96
ಒಟ್ಟು5,99,7944,02,69767.13

ದ್ವಿತೀಯ ಪಿಯುಸಿ ಟಾಪರ್‌ಗಳಿಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ದ್ವಿತೀಯ ಪಿಯುಸಿ ಗಣಿತಶಾಸ್ತ್ರದಲ್ಲಿ (2022ನೇ ಸಾಲಿನಲ್ಲಿ) ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಉತ್ತರ: 2022ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ 14,210.

ಪ್ರ. 2:  ದ್ವಿತೀಯ ಪಿಯುಸಿ ಫಲಿತಾಂಶವನ್ನು ಎಲ್ಲಿ ಪಡೆಯಬಹುದು?

ಉತ್ತರ: ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ವೆಬ್‌ಸೈಟ್: ಲಿಂಕ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಪ್ರ. 3: ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಯಾರು?

ಉತ್ತರ: ವಿಜ್ಞಾನ ವಿಭಾಗದಲ್ಲಿ 2022ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಸಿಮ್ರಾನ್ ಸೇಶಾ ರಾವ್ ಒಟ್ಟು 598 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 

ಪ್ರ. 4: ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಯಾರು?

ಉತ್ತರ: ಕಲಾ ವಿಭಾಗದಲ್ಲಿ 2022ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶ್ವೇತಾ ಭೀಮಾಶಂಕರ್ ಬೈರಗೊಂಡ ಹಾಗೂ ಮಡಿವಾಳರ ಸಹನಾ ಇಬ್ಬರೂ ಒಟ್ಟು 594 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. 

ಪ್ರ. 5: ವಾಣಿಜ್ಯ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಉತ್ತರ: ವಾಣಿಜ್ಯ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು 596 ಅಂಕ ಪಡೆದು ಮೊದಲ ರ್‍ಯಾಂಕ್ ಬಂದಿದ್ದಾರೆ. 

ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ 2021-22ರ ಟಾಪರ್‌ಗಳು ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಯೋಜಿಸುತ್ತಿರುವ ಅಭ್ಯರ್ಥಿಗಳು Embibe ನಲ್ಲಿ ದ್ವಿತೀಯ ಪಿಯು ತರಗತಿ ಲರ್ನ್ ನೋಡಿ. ನಿಮ್ಮ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾದ 3D ವಿಡಿಯೋಗಳನ್ನು ನೋಡುತ್ತಾ ಪಠ್ಯಗಳನ್ನು ಕಲಿಯಿರಿ. ಬಳಿಕ ಅಣಕು ಟೆಸ್ಟ್‌ ತೆಗೆದುಕೊಂಡು ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸಿಕೊಳ್ಳಿ. ವಾಸ್ತವಿಕ ಪರೀಕ್ಷೆಗಿಂತ ಮುನ್ನ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳುವುದು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯುವುದರ ಮೊದಲ ಹೆಜ್ಜೆಯಾಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಟಾಪರ್‌ಗಳ ಪಟ್ಟಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ