
ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ವೇಳಾಪಟ್ಟಿ 2023: ಪರೀಕ್ಷೆ ದಿನಾಂಕ
August 12, 2022ಪಿಯುಸಿ ವಿದ್ಯಾರ್ಥಿಗಳಿಗೆ ಟಾಪ್ 10 ಆಯ್ಕೆಗಳು: ದ್ವಿತೀಯ ಪಿಯುಸಿಯು ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಣಾಯಕವಾದ ಘಟ್ಟವಾಗಿದೆ. ಇಲ್ಲಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ಪ್ರವೇಶಿಸುತ್ತಾರೆ. ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳನ್ನು ಕಾಡುವ ಪ್ರಶ್ನೆ ಎಂದರೆ ಮುಂದೇನು ಮಾಡಬೇಕು ಎಂಬುದಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ, ಫಾರ್ಮಸಿ, ಆರ್ಕಿಟೆಕ್ಚರ್ ಸೇರಿದಂತೆ ಹಲವಾರು ಕ್ಷೇತ್ರಗಳು ಅವರ ಮುಂದಿದ್ದರೂ ಯಾವುದನ್ನು ಆಯ್ಕೆ ಮಾಡಬೇಕು, ಅದನ್ನು ಆಯ್ಕೆ ಮಾಡುವುದರಿಂದ ಭವಿಷ್ಯದಲ್ಲಿ ಏನೆಲ್ಲಾ ಅವಕಾಶಗಳು ಇವೆ ಎಂಬುದು ಅವರನ್ನು ಇನ್ನಷ್ಟು ಕಾಡುತ್ತದೆ. ಸೂಕ್ತ ಮಾರ್ಗದರ್ಶನ, ಸಲಹೆ ಇಲ್ಲದಿದ್ದರೆ ಅವರ ಆಯ್ಕೆ ದಿಕ್ಕು ತಪ್ಪುತ್ತದೆ.
ಬಹಳಷ್ಟು ಕ್ಷೇತ್ರಗಳಿಗೆ ಪ್ರವೇಶಿಸಬೇಕಾದರೆ ದ್ವಿತೀಯ ಪಿಯುಸಿ ಎಂಬುದು ಹೆಬ್ಬಾಗಿಲಿದ್ದಂತೆ. ಆದರೆ ಯಾವ ಕೋರ್ಸ್‌ಗೆ ಸೇರಿದರೆ ಉತ್ತಮ, ಏನೆಲ್ಲಾ ಕೋರ್ಸ್‌ಗಳಿವೆ, ವಿಭಿನ್ನವಾರುವಂತಹ ಆಯ್ಕೆಗಳೇನು ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ವಿಜ್ಞಾನ ವಿಭಾಗ (PCMB) ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ದ್ವಿತೀಯ ಪಿಯುಸಿ ವಿಜ್ಞಾನದ (PCMB) ನಂತರ ವೃತ್ತಿಯಾಗಿ ಯಾವುದನ್ನು ಆರಿಸಿಕೊಳ್ಳುವುದು ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಕಾಡುವ ಅತಿ ದೊಡ್ಡ ಪ್ರಶ್ನೆಯಾಗಿದೆ. ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳ ಪೋಷಕರು ಸಹ ಈ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ನಿಜ ಹೇಳಬೇಕು ಎಂದರೆ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೂರಾರು ಆಯ್ಕೆಗಳು ಅವರ ಮುಂದಿವೆ. ಆದರೆ ಉತ್ತಮ ಭವಿಷ್ಯಕ್ಕಾಗಿ ಯಾವುದನ್ನು ಆಯ್ಕೆ ಮಾಡಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಹೈರಾಣಾಗಿಸುತ್ತದೆ.
ಈ ಲೇಖನದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನದ ನಂತರ ಟಾಪ್ 10 ವೃತ್ತಿಪರ ಕೋರ್ಸ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ಇದು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಂತರ ಉತ್ತಮ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿ.
ವಿಜ್ಞಾನ ಎಂಬ ಪದವನ್ನು ವಾಸ್ತವವಾಗಿ ವಿಶಾಲ ಅರ್ಥದಲ್ಲಿ ಬಳಸಲಾಗುತ್ತದೆ ಮತ್ತು ಅದರ ಅಡಿಯಲ್ಲಿ ಎರಡು ವಿಭಾಗಗಳಿವೆ: ಶುದ್ಧ ಸೈದ್ಧಾಂತಿಕ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ. ಮತ್ತೆ ವಿಜ್ಞಾನವನ್ನು ಇನ್ನೂ ಎರಡು ಉಪ ವಿಭಾಗಗಳಾಗಿ ವಿಂಗಡಿಸಬಹುದು ಅವುಗಳೆಂದರೆ: ಗಣಿತ ವಿಭಾಗ ಮತ್ತು ಜೀವಶಾಸ್ತ್ರ ವಿಭಾಗ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಯಾಗಿ ವಿವಿಧ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳು ಲಭ್ಯವಿದೆ. ದ್ವಿತೀಯ ಪಿಯುಸಿ ಬಳಿಕ ವೃತ್ತಿ ಆಯ್ಕೆಗಳನ್ನು ಆರಿಸಿಕೊಳ್ಳುವುದು ಬಹಳ ಭರವಸೆದಾಯಕವಾಗಿರುತ್ತದೆ ಏಕೆಂದರೆ ವಿಜ್ಞಾನದ ವಿದ್ಯಾರ್ಥಿಗಳಿಗೆ ವ್ಯಾಪ್ತಿ ತುಂಬಾ ಹೆಚ್ಚಿರುತ್ತದೆ ಮತ್ತು ಅವರು ತಮ್ಮ ಸಹಜ ಪ್ರತಿಭೆಯೊಂದಿಗೆ ಸೂಕ್ತವಾದ ವೃತ್ತಿಜೀವನದ ಕ್ಷೇತ್ರವನ್ನು ಆರಿಸಿದರೆ ಅವಕಾಶಗಳು ಯಾವಾಗಲೂ ಬಾಗಿಲು ತೆರೆದಿರುತ್ತವೆ.
ವೈದ್ಯಕೀಯದ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳು ಎಂಬಿಬಿಎಸ್ ಅಥವಾ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ ಕೋರ್ಸ್ ಆಯ್ಕೆ ಮಾಡಬಹುದು. ಜೀವಶಾಸ್ತ್ರ ಅಭ್ಯಾಸ ಮಾಡಿರುವವರು, ಆ ವಿಷಯದ ಬಗ್ಗೆ ಆಸಕ್ತಿ ಇರುವವರು ಖಂಡಿತವಾಗಿ ವೈದ್ಯಕೀಯ ಕೋರ್ಸ್‌ನ್ನು ಆಯ್ಕೆ ಮಾಡಬಹುದು. ವೈದ್ಯಕೀಯದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ಇನ್ನೊಂದು ಕ್ಷೇತ್ರವೆಂದರೆ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಮತ್ತು ಬಿಎಎಂಎಸ್ ಅಥವಾ ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ, ಫಿಜಿಶಿಯನ್, ಆಪ್ಟೋಮೆಟ್ರಿಸ್ಟ್, ಡೆಂಟಲ್ ಸರ್ಜನ್, ಫಾರ್ಮಾಸಿಸ್ಟ್, ನರ್ಸಿಂಗ್ ಮತ್ತು ಇನ್ನೂ ಅನೇಕ ಆಯ್ಕೆಗಳಿವೆ.
ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮೆಕ್ಯಾನಿಕಲ್, ಸಿವಿಲ್, ಏರೋನಾಟಿಕಲ್, ಬಯೋ ಮೆಡಿಕಲ್, ಇನ್ಫಾರ್ಮೇಷನ್ ಟೆಕ್ನಾಲಜಿ, ಮೆರೈನ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಮತ್ತು ಇನ್ನೂ ಅನೇಕ ವಿಭಾಗಳು ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಾಟಿಯಾದ ಇನ್ನೊಂದು ಆಯ್ಕೆ ಇಲ್ಲ. ಇಲ್ಲಿ ವಿಫುಲ ಅವಕಾಶಗಳು ವಿದ್ಯಾರ್ಥಿಗಳಿಗೆ ತೆರೆದಿರುತ್ತವೆ.
ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳು:
ನಮ್ಮ ದೇಶ ಕೃಷಿ ಪ್ರಧಾನ ದೇಶ. ಇಲ್ಲಿ ಕೃಷಿಗೆ ಸಂಬಂಧಿಸಿದಂತೆ ನಾನಾ ಕ್ಷೇತ್ರಗಳು, ತಂತ್ರಜ್ಞಾನಗಳು ಇವೆ. ಹೈನುಗಾರಿಕೆ, ಕುಕ್ಕುಟೋದ್ಯಮ ಮತ್ತು ಹಣ್ಣು, ತರಕಾರು ಮತ್ತು ಆಹಾರ ಧಾನ್ಯಗಳಷ್ಟೇ ಅಲ್ಲದೆ ತೋಟಗಾರಿಕೆಯಂತಹ ವಿಸ್ತೃತವಾದ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಧ್ಯಾಪನದಂತಹ ಹಲವಾರು ಆಯ್ಕೆಗಳು ಲಭ್ಯ. ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಕೃಷಿ ವಿಜ್ಞಾನದಲ್ಲಿ ತಮಗಿಷ್ಟವಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು.
ವೈಜ್ಞಾನಿಕ ತತ್ವಗಳನ್ನು ಅನ್ವಯಿಸುವ ಮೂಲಕ ಅಪರಾಧದ ತನಿಖೆಯನ್ನು ಒಳಗೊಂಡಿರುವ ಕ್ಷೇತ್ರ ವಿಧಿ ವಿಜ್ಞಾನ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಪ್ರವೇಶಿಸಬೇಕಾದರೆ ಡಿಪ್ಲೊಮಾ ಅಥವಾ ಡಿಗ್ರಿ ಮಾಡುವ ಅವಕಾಶಗಳಿವೆ.
ಜೈವಿಕ ತಂತ್ರಜ್ಞಾನದ ಕ್ಷೇತ್ರವು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದ ಜೊತೆಗಿನ ಜೀವಶಾಸ್ತ್ರದ ಸಂಯೋಜನೆಯಾಗಿದೆ, ಇದು ಜೀವಕೋಶಗಳಲ್ಲಿ ತಮಗೆ ಬೇಕಾದಂತೆ ಅವುಗಳನ್ನು ಜಾಣ್ಮೆಯಿಂದ ಮಾರ್ಪಡಿಸಿ ಮಾನವ ಕಲ್ಯಾಣಕ್ಕೆ ಉಪಯೋಗಿಸುವಂತಹ ತಂತ್ರಜ್ಞಾನ ಇದು. ವಿವಿಧ ರೋಗಗಳಿಗೆ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಇದು ಸಹಾಯ ಮಾಡುತ್ತದೆ ಮತ್ತು ಮಾನವರು ಮತ್ತು ಇತರ ಜೀವ ರೂಪಗಳಿಗೆ ಬಹಳ ಸಹಾಯಕವಾಗಿದೆ. ಜೈವಿಕ ತಂತ್ರಜ್ಞಾನವನ್ನು ಪರಿಸರ, ಕೃಷಿ, ಔಷಧೀಯ, ಶಕ್ತಿ ಮತ್ತು ರಾಸಾಯನಿಕಗಳಂತಹ ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ದ್ವಿತೀಯ ಪಿಯುಸಿ ಬಳಿಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿಗಳು ಮತ್ತು ಡಿಪ್ಲೋಮಾಗಳು ಲಭ್ಯವಿದೆ.
ಭೂಗರ್ಭಶಾಸ್ತ್ರವು ಭೂಮಿಯನ್ನು ಕುರಿತಾದ ಅಧ್ಯಯನವಾಗಿದೆ ಮತ್ತು ಅದರ ರಚನೆಗೆ ಸಂಬಂಧಿಸಿದ, ಭೂಮಿಯ ಮೇಲೆ ವಾಸಿಸುವ ಜೀವಿಗಳ ಅಧ್ಯಯನ ಸೇರಿದಂತೆ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಸಾಗರವಿಜ್ಞಾನ, ಜಲ ಭೂವಿಜ್ಞಾನ ಮತ್ತು ಜಿಯೋಸ್ಟ್ಯಾಟಿಸ್ಟಿಕ್ಸ್ ಅಧ್ಯಯನವನ್ನು ಸಹ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಅಧ್ಯಯನವು ಪರಿಸರದೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದು. ಕನ್ಸಲ್ಟಿಂಗ್ ಕಂಪನಿಗಳು, ಲಾಭರಹಿತ ಸಂಸ್ಥೆ ಮತ್ತು ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಏಜೆನ್ಸಿಗಳು ಮತ್ತು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಲಹೆಗಾರಾಗಿ ಉದ್ಯೋಗ ಮಾಡಬಹುದು. ದ್ವಿತೀಯ ಪಿಯುಸಿಯಲ್ಲಿ ಭೂಗರ್ಭಶಾಸ್ತ್ರವೂ ಒಂದು ವಿಷಯವಾಗಿ ಇರುವ ಕಾರಣ ವಿದ್ಯಾರ್ಥಿಗಳನ್ನು ಮುಂದಿನ ಶಿಕ್ಷಣಕ್ಕಾಗಿ ಈ ಕೆಳಗೆ ತಿಳಿಸಿದ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.
ಇದು ಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳ ವಿಕಾಸ, ರಚನೆ, ನಡವಳಿಕೆ, ಕಾರ್ಯ ಮತ್ತು ಪರಿಸರದೊಂದಿಗಿನ ಪರಸ್ಪರ ಕ್ರಿಯೆಯ ಅಧ್ಯಯನದೊಂದಿಗೆ ವ್ಯವಹರಿಸುತ್ತದೆ. ಪ್ರಾಣಿಶಾಸ್ತ್ರವು ವೈವಿಧ್ಯಮಯ ಮತ್ತು ವಿಶಾಲವಾದ ಕ್ಷೇತ್ರವಾಗಿದ್ದು, ಇದು ಸಸ್ತನಿಗಳು, ಕೀಟಗಳು, ಪಕ್ಷಿಗಳು, ಉಭಯಚರಗಳು, ಸರೀಸೃಪಗಳು, ಮೀನುಗಳು ಮತ್ತು ಇತರ ಹಲವು ಅಧ್ಯಯನಗಳನ್ನು ಒಳಗೊಂಡಿದೆ. ಪ್ರಾಣಿಶಾಸ್ತ್ರ ಈ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ನಂತರ ಪ್ರಾಣಿಶಾಸ್ತ್ರಜ್ಞ, ಉಪನ್ಯಾಸಕ, ಪಕ್ಷಿಶಾಸ್ತ್ರಜ್ಞ ಮತ್ತು ವನ್ಯಜೀವಿ ತಜ್ಞರಾಗಬಹುದು. ದ್ವಿತೀಯ ಪಿಯುಸಿಯಲ್ಲಿ ಜೀವಶಾಸ್ತ್ರ ಅಧ್ಯಯ ಮಾಡಿದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳು ಈ ಕೆಳಕಂಡಂತಿವೆ.
ಆಹಾರ ತಂತ್ರಜ್ಞರ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಪ್ಯಾಕೇಜ್ ಮಾಡಿದ ಆಹಾರಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ ಮತ್ತು ಆಹಾರ ಪದ್ಧತಿಯಲ್ಲಿನ ಅನೇಕ ಆಧುನಿಕ ಬದಲಾವಣೆಗಳಿಂದಾಗಿ ಅದರ ದೀರ್ಘ ಸಂರಕ್ಷಣೆ, ಸಂಸ್ಕರಣೆ, ಪ್ಯಾಕೇಜ್‌ನಂತಹ ಉತ್ಪದನಾ ಪ್ರಕ್ರಿಯೆಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಪದವಿ ಪಡೆದವರು ಆಹಾರ ಗುಣಮಟ್ಟ ನಿಯಂತ್ರಕ, ಸಂಶೋಧನಾ ಅಧಿಕಾರಿ, ಪ್ಯಾಕೇಜಿಂಗ್ ಮ್ಯಾನೇಜರ್ ಮತ್ತು ಇತರ ಹಲವು ಉದ್ಯೋಗಗಳನ್ನು ಪಡೆಯಬಹುದು. ದ್ವಿತೀಯ ಪಿಯುಸಿಯಲ್ಲಿ ಜೀವಶಾಸ್ತ್ರ ಅಧ್ಯಯ ಮಾಡಿದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳು ಈ ಕೆಳಕಂಡಂತಿವೆ.
ಈ ಕ್ಷೇತ್ರವು ಸಜೀವಿಗಳ ಅಧ್ಯಯನವಾಗಿದೆ, ಅದು ಜೀವಕೋಶದ ಸಮೂಹ ಆಗಿರಬಹುದು, ಏಕ ಕೋಶವಾಗಿರಬಹುದು ಅಥವಾ ಯಾವುದೇ ಕೋಶವಾಗಿರಬಹುದು, ಇವುಗಳು ಬರಿಗಣ್ಣಿಗೆ ಕಾಣದ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮುಂತಾದವುಗಳ ಅಧ್ಯಯನವಾಗಿದೆ. ವಿವಿಧ ಸೂಕ್ಷ್ಮ ಜೀವವಿಜ್ಞಾನದಲ್ಲಿ ಹಲವು ವಿಧಗಳಿವೆ. ಆದರೆ ವೈದ್ಯಕೀಯ ಸೂಕ್ಷ್ಮ ಜೀವಿ ವಿಜ್ಞಾನವು ಮಾನವನ ಅನಾರೋಗ್ಯದ ಬಗ್ಗೆ ವ್ಯವಹರಿಸುತ್ತದೆ. ಆಹಾರ ಸೂಕ್ಷ್ಮ ಜೀವಿ ವಿಜ್ಞಾನ, ಪರಿಸರ ಸೂಕ್ಷ್ಮ ಜೀವಿ ವಿಜ್ಞಾನ ಮತ್ತು ಪಶುವೈದ್ಯಕೀಯ ಸೂಕ್ಷ್ಮ ಜೀವಿ ವಿಜ್ಞಾನವನ್ನು ಸೂಕ್ಷ್ಮ ಜೀವಿವಿಜ್ಞಾನ ಒಳಗೊಂಡಿದೆ. ಆಸ್ಪತ್ರೆಗಳು, ಪಾನೀಯ ಮತ್ತು ರಾಸಾಯನಿಕ ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳು, ಕೃಷಿ ಮತ್ತು ಆರೋಗ್ಯ ರಕ್ಷಣೆ ಸಂಶೋಧನೆಗಳಲ್ಲಿ ಔಷಧೀಯ, ಆಹಾರ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಲ್ಲಿ, ಮೈಕ್ರೋಬಯಾಲಜಿಸ್ಟ್‌ಗಳಿಗೆ ಸಾಕಷ್ಟು ವೃತ್ತಿ ಅವಕಾಶಗಳು ಮತ್ತು ಉದ್ಯೋಗಗಳಿವೆ. ದ್ವಿತೀಯ ಪಿಯುಸಿಯಲ್ಲಿ ಜೀವಶಾಸ್ತ್ರ ಅಧ್ಯಯ ಮಾಡಿದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳು ಈ ಕೆಳಕಂಡಂತಿವೆ.
ಜವಳಿ ಕೈಗಾರಿಕೆಗಳು, ಬೆಳೆಯುತ್ತಿರುವ ಬೇಡಿಕೆಗಳೊಂದಿಗೆ ಬಹು ಆಯಾಮದ ವಿಸ್ತರಣೆ ಮತ್ತು ಅದರ ವೃತ್ತಿಪರರಿಗೆ ಬೇಡಿಕೆಯು ಆಕಾಶದಷ್ಟು ಅವಕಾಶಗಳನ್ನು ಸೃಷ್ಟಿಸಿದೆ. ಎಂಜಿನಿಯರಿಂಗ್‌ನ ಈ ಶಾಖೆಯಲ್ಲಿ, ಎಲ್ಲಾ ರೀತಿಯ ಜವಳಿ ಬಟ್ಟೆ ಮತ್ತು ನೂಲುಗಳ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ವೈಜ್ಞಾನಿಕ ತತ್ವ ಮತ್ತು ತಂತ್ರಗಳನ್ನು ಬಳಸಲಾಗುತ್ತಿದೆ. ಜವಳಿ ಎಂಜಿನಿಯರಿಂಗ್ ಭೌತಿಕ ಮತ್ತು ರಾಸಾಯನಿಕ ತತ್ವಗಳೊಂದಿಗೆ ವ್ಯವಹರಿಸುತ್ತದೆ, ಅವುಗಳನ್ನು ಜವಳಿ ನೂಲು ರಚನೆಯಲ್ಲಿ ಒಳಗೊಂಡಿರುವ ಪಾಲಿಮರ್ ವರ್ತನೆಯ ವಿಶ್ಲೇಷಣೆಗೆ ಬಳಸಲಾಗುತ್ತಿದೆ. ಉಡುಪು ಮತ್ತು ಜವಳಿ ಪ್ರಕ್ರಿಯೆಗಳು, ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ನೂಲುಗಳ ನಿಯಂತ್ರಣ ಮತ್ತು ವಿನ್ಯಾಸದಲ್ಲಿ ಜವಳಿ ಎಂಜಿನಿಯರಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೈಗಾರಿಕೆಗಳಲ್ಲಿ ಪ್ರೊಸೆಸ್ ಎಂಜಿನಿಯರ್, ಡೆವಲಪ್‌ಮೆಂಟ್ ಎಂಜಿನಿಯರ್, ಮೆಡಿಕಲ್ ಟೆಕ್ಸ್‌ಟೈಲ್ ಎಂಜಿನಿಯರ್, ಸಂಶೋಧಕರು, ಕ್ವಾಲಿಟಿ ಕಂಟ್ರೋಲ್ ಸೂಪರ್‌ವೈಸರ್‌ಗಳು, ಟೆಕ್ನಾಲಜಿಸ್ಟ್, ಆಪರೇಶನ್ ಟ್ರೈನಿ, ಟೆಕ್ನಿಕಲ್ ಸರ್ವೀಸಸ್/ಸೇಲ್ಸ್ ಮ್ಯಾನೇಜರ್ ಇತ್ಯಾದಿಯಾಗಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳ ವಿವರ ಈ ಕೆಳಕಂಡಂತಿದೆ.
ಬೆಳಕಿನ ಸಂಯೋಜನೆ, ರಚನಾತ್ಮಕ ದೃಢತೆ, ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮತ್ತು ಅಗ್ನಿ ಸುರಕ್ಷತೆಯೊಂದಿಗೆ ಕಟ್ಟಡಗಳು, ಸೇತುವೆಗಳು ಮತ್ತು ಇತರ ರಚನೆಗಳ ನಿರ್ಮಾಣದೊಂದಿಗೆ ವಾಸ್ತುಶಿಲ್ಪವು ವ್ಯವಹರಿಸುತ್ತದೆ. ವಾಸ್ತುಶಿಲ್ಪ ಕೆಲಸವು ಕಟ್ಟಡಗಳು ಮತ್ತು ರಚನೆಗಳ ವಿನ್ಯಾಸ ಮತ್ತು ವಿನ್ಯಾಸದ ಯೋಜನೆಗಳನ್ನು ಒದಗಿಸುತ್ತಿದೆ. ವಾಸ್ತುಶಿಲ್ಪವು ಬಹು ಆಯಾಮದ ವೃತ್ತಿಯಾಗಿದ್ದು, ಇದು ಹಲವಾರು ಕಾರ್ಯಗಳನ್ನು ಒಳಗೊಂಡಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಆಕಾಂಕ್ಷಿಗಳಿಗೆ ಇದು ಆಸಕ್ತಿ ಕೆರಳಿಸುತ್ತಿರುವ ವೃತ್ತಿಯಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಕೋರ್ಸ್ ಮುಗಿದ ನಂತರ ಕೇಂದ್ರ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಗಳು, ವಸತಿ ಮತ್ತು ನಗರಾಭಿವೃದ್ಧಿ ಮಂಡಳಿಗಳು, ಪುರಸಭೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾಡಬಹುದಾದ ಕೋರ್ಸ್‌ಗಳ ವಿವರ ಈ ಕೆಳಕಂಡಂತಿದೆ.
ಮಾಹಿತಿ ತಂತ್ರಜ್ಞಾನವು ಸದಾ ಹಸಿರಾಗಿರುವಂತಹ ವೃತ್ತಿಜೀವನವಾಗಿದೆ, ಇದು ಉತ್ತಮ ವೃತ್ತಿಜೀವನದಿಂದಾಗಿ ಬಹಳಷ್ಟು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ ಮತ್ತು TCS, Wipro, Infosys ಮತ್ತು ಇತರ ಹಲವಾರು ಪ್ರತಿಷ್ಠಿತ ಕಂಪನಿಗಳಿಂದ ಆಕರ್ಷಕ ವೇತನದ ಪ್ರಯೋಜನಗಳನ್ನು ನೀಡುತ್ತದೆ. ಮಾಹಿತಿ ತಂತ್ರಜ್ಞಾನ (ಐಟಿ) ಎನ್ನುವುದು ದೂರಸಂಪರ್ಕ ಮತ್ತು ಕಂಪ್ಯೂಟರ್ ಉಪಕರಣಗಳನ್ನು ಕಲೆಹಾಕಲು, ನಿಯಂತ್ರಿಸಲು, ಸಂಗ್ರಹಿಸಲು, ಮಾಹಿತಿಯನ್ನು ಮರುಪಡೆಯಲು ಮತ್ತು ಪ್ರಕ್ರಿಯೆಗೊಳಿಸಿದ ನಂತರ, ಡೇಟಾವನ್ನು ರವಾನಿಸಲು ಮತ್ತು ಕುಶಲತೆಯಿಂದ ಬಳಸುವುದನ್ನು ಒಳಗೊಂಡಿದೆ. ಐಟಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳನ್ನು ಒಳಗೊಂಡಿದೆ. ಪ್ರಸ್ತುತ ಕ್ರಾಂತಿಯನ್ನು ಕೆಲವೊಮ್ಮೆ ಮಾಹಿತಿ ತಂತ್ರಜ್ಞಾನ ಯುಗ ಎಂದು ಪರಿಗಣಿಸಲಾಗುತ್ತದೆ. ಗುಣಮಟ್ಟದ ವಿಶ್ಲೇಷಕರು, ಪಿಎಚ್‌ಪಿ ಡೆವಲಪರ್, ಪ್ರೋಗ್ರಾಮರ್‌ಗಳು, ಐಟಿ ಸ್ಪೆಷಲಿಸ್ಟ್, ಸಾಫ್ಟ್‌ವೇರ್ ಡೆವಲಪರ್, ಟೆಕ್ನಾಲಜಿ ಇಂಜಿನಿಯರ್, ಗ್ರಾಫಿಕ್ ಡಿಸೈನರ್ ಮತ್ತು ಇತರರಾಗಿ ಐಟಿಯಲ್ಲಿ ತರಬೇತಿ ಪಡೆದ ನಂತರ ಸಾಕಷ್ಟು ಅವಕಾಶಗಳಿವೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾಡಬಹುದುದಾದ ಕಂಪ್ಯೂಟರ್‌ನಲ್ಲಿ ನಾಲ್ಕು ರೀತಿಯ ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳಿವೆ.
ಪ್ರ. 1: ಪಿಯುಸಿ ನಂತರ ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಅವಕಾಶಗಳಿವೆಯೇ?
ಉತ್ತರ: ಹೌದು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಸಹ ಒಂದು. ವೈದ್ಯಕೀಯ, ಕೃಷಿ, ರಾಸಾಯನಿಕ ಮುಂತಾದ ಕ್ಷೇತ್ರಗಳಲ್ಲಿ ಈ ಕೋರ್ಸ್‌ನಲ್ಲಿ ಪದವಿ ಪಡೆದವರಿಗೆ ಹೇರಳ ಅವಕಾಶಗಳುಂಟು. ಹಲವಾರು ವಿಶ್ವವಿದ್ಯಾಲಯಗಳು ನಾಲ್ಕು ವರ್ಷದ ಬಿ.ಟೆಕ್ ಪದವಿ ಶಿಕ್ಷಣ ನೀಡುತ್ತಿವೆ.
ಪ್ರ. 2: ಸ್ಟೆಮ್ ಸೆಲ್ ಮತ್ತು ಟಿಶ್ಯೂ ಇಂಜಿನಿಯರಿಂಗ್‌ನಲ್ಲಿ ಪದವಿ ಮಾಡಬಹುದೇ?
ಉತ್ತರ: ಹೊಸ ರೀತಿಯ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರ ಇದಾಗಿದೆ. ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ವೇಗವಾಗಿ ದಾಪುಗಾಲಿಡುತ್ತಿರುವ ವಿಭಾಗ ಇದಾಗಿದೆ. ಪಿಯುಸಿಯಲ್ಲಿ ಜೀವಶಾಸ್ತ್ರ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಬಿ.ಟೆಕ್ ಪದವಿ ಲಭ್ಯವಿದೆ.
ಪ್ರ. 3: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಶೀನ್ ಲರ್ನಿಂಗ್ ಬಗ್ಗೆ ತಿಳಿಸಿ?
ಉತ್ತರ: ಇದು ಈಗೀಗ ಸಾಕಷ್ಟು ವೇಗವಾಗಿ ವಿಸ್ತರಿಸುತ್ತಿರುವ ಕ್ಷೇತ್ರ. ಇದನ್ನು ಸಂಕ್ಷಿಪ್ತವಾಗಿ ಎಐ ಅಂಡ್ ಎಂಎಲ್ (AI & ML) ಎಂದು ಕರೆಯುತ್ತಾರೆ. ರೋಬೋಟಿಕ್ ತಂತ್ರಜ್ಞಾನದಿಂದ ಹಿಡಿದು ಕೃಷಿ ಕ್ಷೇತ್ರಗಳವರೆಗೆ ಈ ತಂತ್ರಜ್ಞಾನದ ವ್ಯಾಪ್ತಿ ಇದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ಬಿ.ಟೆಕ್ ಪದವಿ ಕೋರ್ಸ್‌ಗಳು ಲಭ್ಯವಿದೆ.
ಪ್ರ. 4: ಡೇಟಾ ಸೈನ್ಸ್ ಪದವಿ ಪಡೆದವರಿಗೆ ಅವಕಾಶಗಳು ಹೇಗಿವೆ?
ಉತ್ತರ: ಸಾಂಪ್ರದಾಯಿಕವಾಗಿ ಸ್ಟಾಟಿಸ್ಟಿಕ್ಸ್ ಎಂಬ ವಿಷಯದ ಆಧಾರವಾಗಿ ಈ ಕೋರ್ಸನ್ನು ಆಧುನಿಕ ಬದಲಾವಣೆಗಳಿಗೆ ತಕ್ಕಂತೆ ಮಾರ್ಪಡಿಸಲಾಗಿದೆ. ಈ ವಿಷಯದಲ್ಲಿ ಪದವಿ, ಡಿಪ್ಲೊಮಾ, ಪಿಜಿ ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಪಿಎಚ್‍ಡಿ ಸಹ ಮಾಡಬಹುದು. ಬಿಗ್ ಡೇಟಾ ಅನಲಿಸಿಸ್ ಎಂಬ ಹೆಸರಿನ ಕೋರ್ಸ್‌ಗಳು ಲಭ್ಯ. ಮೂರು ವರ್ಷದ ಬಿ.ಎಸ್.ಸಿ, ನಾಲ್ಕು ವರ್ಷಗಳ ಬಿ.ಟೆಕ್ ಪದವಿಗಳು ಲಭ್ಯ. ಈ ಕೋರ್ಸ್ ಮಾಡಿದವರಿಗೆ ಡೇಟಾ ಸೈಂಟಿಸ್ಟ್ ಎಂಬ ಹುದ್ದೆಗಳು ಲಭ್ಯ.
ಪ್ರ. 5: ಫಿನ್‌ಟೆಕ್ (Fintech) ಎಂದರೇನು? ಈ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಬಗ್ಗೆ ತಿಳಿಸಿ?
ಉತ್ತರ: Finance ಮತ್ತು Technology ಎಂಬ ಎರಡು ಪದಗಳನ್ನು ಸೇರಿಸಿ Fintech ಎಂಬ ಹೊಸ ಕ್ಷೇತ್ರ ಈಗ ಆಸಕ್ತರನ್ನು ಸೆಳೆಯುತ್ತಿದೆ. ಇದು ಆಧುನಿಕ ಬ್ಯಾಂಕಿಂಗ್ ಕ್ಷೇತ್ರದ ಮುಂದುವರೆದ ಭಾಗ ಎನ್ನಬಹುದು. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಬೆಂಬಲಿಸಲು ಅಥವಾ ಸಕ್ರಿಯಗೊಳಿಸಲು ಬಳಸುವ ಕಂಪ್ಯೂಟರ್ ಪ್ರೋಗ್ರಾಂಗಳು ಮತ್ತು ಇತರ ತಂತ್ರಜ್ಞಾನ ಇಲ್ಲಿ ಬಳಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ಎಪಿಐ, ಬ್ಲಾಕ್‌ಚೈನ್ ತಂತ್ರಜ್ಞಾನ, ಬಿಗ್ ಡಾಟಾ ಎಐ/ಎಂಎಲ್ ಕೋರ್ಸ್‌ಗಳು ಲಭ್ಯ.
ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. ʻʼಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ಬಳಿಕ ಟಾಪ್ 10 ಕೋರ್ಸ್‌ಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ನೀಡುತ್ತಿರಿ.